ಕೋರ್ಟ್ನಿಂದ ತಡೆಯಾಜ್ಞೆ ತಂದ ಕಾಂತೇಶ್: ಕಾರಣ ಕೇಳಿದ್ದಕ್ಕೆ ಕೆ ಎಸ್ ಈಶ್ವರಪ್ಪ ಹೇಳಿದ್ದೇನು.?
ಚುನಾವಣಾ ಪ್ರಚಾರಕ್ಕೆ ಅಡ್ಡಿಪಡಿಸಿದ್ದಕ್ಕೆ ಸಿಡಿದೆದ್ದ ಈಶ್ವರಪ್ಪ. ಯಡಿಯೂರಪ್ಪ ಕುಟುಂಬದ ವಿರುದ್ಧ ವಾಗ್ದಾಳಿ.!
ಶಿಕಾರಿಪುರದಲ್ಲಿ ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಕಚೇರಿಯ ಬಾಗಿಲಲ್ಲಿ ವಾಮಾಚಾರ.!!
ASHWASURYA/SHIVAMOGGA
✍️ ಸುಧೀರ್ ವಿಧಾತ
ಅಶ್ವಸೂರ್ಯ/ಶಿವಮೊಗ್ಗ: ಪಕ್ಷೇತರ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ ಅವರ ಶಿಕಾರಿಪುರದ ಚುನಾವಣಾ ಕಚೇರಿಯ ಬಾಗಿಲಲ್ಲಿ ಯಾರೋ ವಾಮಾಚಾರ ಮಾಡಿರುವುದು ಬೆಳಕಿಗೆ ಬಂದಿದೆ.!
ಈ ಕುರಿತು ವಾಟ್ಸ್ ಆಪ್ ಮುಖಾಂತರ ಆಕ್ರೋಶ ಹೊರಹಾಕಿರುವ ಈಶ್ವರಪ್ಪ ಅವರು, ‘ಶಿಕಾರಿಪುರದ ಹೆಸರಾಂತ ಮಾಂತ್ರಿಕರು, ತಮ್ಮ ಕುಟುಂಬವನ್ನು ರಾಜಕೀಯವಾಗಿ ಬೆಳೆಯಲು ಬಿಡದ ಕಾರಣ ಕ್ಕೆ ಈ ರೀತಿಯ ವಾಮಚಾರ ಮಾಡಿದ್ದಾರೆ. ಇವರಿಗೆ ಈಶ್ವರಪ್ಪರ ಕುಟುಂಬ ಯಾವ ಲೆಕ್ಕ ಎಂದು ಹೇಳಿದ್ದಾರೆ.
ನಂತರ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದ ಈಶ್ವರಪ್ಪ ಅವರು ಸೋಲಿನ ಭಯದಿಂದ ಅಪ್ಪ-ಮಕ್ಕಳು ರಾಷ್ಟ್ರ ಭಕ್ತರ ಚುನಾವಣಾ ಕಛೇರಿಗೆ ವಾಮಾಚಾರ ಮಾಡಿದ್ದಾರೆ. ಜನ ತಿರಸ್ಕಾರ ಮಾಡಿರುವುದು ಅಪ್ಪಮಕ್ಕಳ ಗಮನಕ್ಕೆ ಬಂದಿದೆ. ಹೀಗಾಗಿ ಈ ರೀತಿಯ ಕೃತ್ಯ ಮಾಡಲು ಮುಂದಾಗಿದ್ದಾರೆ. ದೇವರು-ಧರ್ಮ ನನ್ನ ಬೆಂಬಲಕ್ಕೆ ಇದೆ. ವಾಮಾಚಾರ ಮಾಡುವ ಯಡಿಯೂರಪ್ಪ ವಿರುದ್ದ ಕಾರ್ಯಕರ್ತರು ಕೆಲಸ ಮಾಡುತ್ತಾರೆ. ನೂರಕ್ಕೆ ನೂರು ಗೆಲ್ಲುತ್ತೇನೆ ಎಂದರು
ಕೋರ್ಟ್ನಿಂದ ತಡೆಯಾಜ್ಞೆ ತಂದ ಕಾಂತೇಶ್: ಕಾರಣ ಕೇಳಿದ್ದಕ್ಕೆ ಕೆ ಎಸ್ ಈಶ್ವರಪ್ಪ ಹೇಳಿದ್ದೇನು?
ಅಶ್ವಸೂರ್ಯ/ಶಿವಮೊಗ್ಗ:
ಸಂಸದ ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣದ ಬೆನ್ನಲ್ಲೇ ಕೆಎಸ್ ಈಶ್ವರಪ್ಪ ನವರ ಪುತ್ರ ಕಾಂತೇಶ್ಗೂ ಕೂಡ ಅಶ್ಲೀಲ ಸಿಡಿಯ ಭೀತಿ ಶುರುವಾಗಿದೆ. ನಿನ್ನೆ ಮಾಧ್ಯಮಗಳಿಗೆ ನಿರ್ಬಂಧ ಕೋರಿ ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಿದ್ದರು.
ಈ ವಿಚಾರವಾಗಿ ಜಿಲ್ಲೆಯ ಬೈಂದೂರಿನಲ್ಲಿ ಪಕ್ಷೇತರ ಅಭ್ಯರ್ಥಿ ಕೆಎಸ್ ಈಶ್ವರಪ್ಪ ಮಾಧ್ಯಮದವರೊಂದಿಗೆ ಮಾತನಾಡಿದ್ದು, ಹೇಗಾದರೂ ಮಾಡಿ ನಮ್ಮನ್ನು ಹಿಂದೆ ಸರಿಸಬೇಕೆಂಬ ಪ್ರಯತ್ನ ನಡೀತಿದೆ.ಹೇಗಾದರುಮಾಡಿ ನಮಗೆ ಅಪಮಾನ ಮಾಡಬೇಕು ಎಂಬ ಕುತಂತ್ರ ನಡೆಯುತ್ತಿದೆ. ಕುತಂತ್ರ ರಾಜಕಾರಣಕ್ಕೆ ನಾವು ಹೇಗೆ ಉತ್ತರ ಕೊಡಬೇಕು? ಇದೇ ಕಾರಣಕ್ಕೆ ತಡೆಯಾಜ್ಞೆ ತಂದಿದ್ದೇವೆ, ಅದು ಬಿಟ್ಟು ಬೇರೇನೂ ಇಲ್ಲ ಎಂದು ಹೇಳಿದ್ದಾರೆ.
ಪ್ರಜ್ವಲ್ ರೇವಣ್ಣ ಅಶ್ಲೀಲ ವಿಡಿಯೋ ಪ್ರಕರಣ ವಿಚಾರವಾಗಿ ಮಾತನಾಡಿದ್ದು, ಅದು ದರಿದ್ರ ಸಬ್ಜೆಕ್ಟ್ ನಾವ್ಯಾಕೆ ಮಾತನಾಡೋಣ. ಪ್ರಜ್ವಲ್ ಪ್ರಕರಣದ ಬಗ್ಗೆ ಮಾತನಾಡಿದರೆ ಬಾಯಲ್ಲಿ ಹುಳ ಬೀಳುತ್ತೆ. ದೇಶಾದ್ಯಂತ ಜನ ಛೀ.. ಥೂ ಅಂತಿದ್ದಾರೆ ಎಂದು ಕಿಡಿಕಾರಿದ್ದಾರೆ. ಪ್ರಕರಣದ ಬೆನ್ನಲ್ಲೇ ಕೆಎಸ್ ಈಶ್ವರಪ್ಪ ಪುತ್ರ ಕಾಂತೇಶ್ಗೂ ಕೂಡ ಅಶ್ಲೀಲ ಸಿಡಿ ಭೀತಿ ಶುರುವಾಗಿತ್ತು. ನಿನ್ನೆ ನಮ್ಮ ವಿರುದ್ಧ ವರದಿಮಾಡದಂತೆ ಮಾಧ್ಯಮಗಳಿಗೆ ನಿರ್ಬಂಧ ಕೋರಿ ನ್ಯಾಯಾಲಕ್ಕೆ ಅರ್ಜಿ ಸಲ್ಲಿಸಿದ್ದರು.
ಚುನಾವಣಾ ಪ್ರಚಾರಕ್ಕೆ ಅಡ್ಡಿಪಡಿಸಿದ್ದಕ್ಕೆ ಸಿಡಿದೆದ್ದ ಈಶ್ವರಪ್ಪ. ಯಡಿಯೂರಪ್ಪ ಕುಟುಂಬದ ವಿರುದ್ಧ ವಾಗ್ದಾಳಿ.!
ಅಶ್ವಸೂರ್ಯ/ ಶಿರಾಳಕೊಪ್ಪ: ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಕೆ.ಎಸ್. ಈಶ್ವರಪ್ಪ ಚುನಾವಣಾ ಪ್ರಚಾರಕ್ಕೆ ಅಧಿಕಾರಿಗಳು ಅಡ್ಡಿಪಡಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಶಿಕಾರಿಪುರ ತಾಲೂಕಿನ ಶಿರಾಳಕೊಪ್ಪದಲ್ಲಿ ಈ ಘಟನೆ ನಡೆದಿದೆ. ಮೈಲಾರ ಲಿಂಗೇಶ್ವರ ದೇವಸ್ಥಾನದ ಆವರಣದಲ್ಲಿ ಪ್ರಚಾರ ಸಭೆ ಆಯೋಜಿಸಲಾಗಿತ್ತು. ಚುನಾವಣೆ ಪ್ರಚಾರಕ್ಕೆ ಈಶ್ವರಪ್ಪ ಬೆಂಬಲಿಗರು ಅನುಮತಿ ಕೂಡ ಪಡೆದುಕೊಂಡಿದ್ದರಂತೆ.
ಪ್ರಚಾರಕ್ಕಾಗಿ ವೇದಿಕೆ, ಮೈಕ್, ಕುರ್ಚಿಗಳನ್ನು ಆಯೋಜಕರು ಹಾಕಿದ್ದರು. ಅಂತಿಮ ಕ್ಷಣದಲ್ಲಿ ಚುನಾವಣಾ ಅಧಿಕಾರಿಗಳು ಅನುಮತಿ ನಿರಾಕರಿಸಿದ್ದಾರೆ. ಚುನಾವಣಾ ಅಧಿಕಾರಿಯ ವಿರುದ್ಧ ಪಕ್ಷೇತರ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ ಗುಡುಗಿದ್ದಾರೆ. ರಸ್ತೆ ಬದಿಯಲ್ಲೇ ನಿಂತು ಈಶ್ವರಪ್ಪ ಪ್ರಚಾರ ಭಾಷಣ ಮಾಡಿ ಮತಯಾಚನೆ ಮಾಡಿದ್ದಾರೆ.ತಮ್ಮ ಭಾಷಣದ ಉದ್ದಕ್ಕೂ ಯಡಿಯೂರಪ್ಪ ಕುಟುಂಬದ ವಿರುದ್ಧ ವಾಗ್ದಾಳಿ ಮಾಡಿದ್ದಾರೆ.