ನೇಣಿಗೆ ಶರಣಾದ ಮಿಥುನ್ ಶೆಟ್ಟಿ
ಮಿಥುನ್ ಶೆಟ್ಟಿ ಎನ್ನುವ ಯುವಕ ನೇಣು ಬಿಗಿದುಕೊಂಡು ತೀರ್ಥಹಳ್ಳಿ ತಾಲ್ಲೂಕಿನ ಕಟ್ಟೆಹಕ್ಲು ಗ್ರಾಮದ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಕಾರಣವೇನೆಂದು ಹುಡುಕ ಹೊರಟರೆ ಕ್ರಿಕೆಟ್ ಬೆಟ್ಟಿಂಗ್ ದಂಧೆಯ ಹಸಿ ಹಸಿ ಕಥೆಗಳು ಕೇಳಿ ಬರುತ್ತಿದೆ….
ತುಂಗೆಯ ತಟದಲ್ಲಿರುವ
ಈ ಹಾದಿಯಲ್ಲಿ ತೀರ್ಥಹಳ್ಳಿ ತಾಲೂಕಿನ ಶೇಡ್ಗಾರ್ ಗ್ರಾಮಪಂಚಾಯಿತಿ ವ್ಯಾಪ್ತಿಯ ಕಟ್ಟೆಹಕ್ಲುವಿನ 22 ವರ್ಷದ ಯುವಕ ಮಿಥುನ್ ಶೆಟ್ಟಿ ನೇಣಿಗೆ ಕೊರಳೊಡ್ಡಿ ಸಾವನ್ನಪ್ಪಿದ್ದಾನೆ. ಕಟ್ಟೆಹಕ್ಲು ಗ್ರಾಮದ ಸಂಜೀವ್ ಶೆಟ್ಟರ ಮಗ ಮಿಥುನ್ ಶೆಟ್ಟಿ ಇವರದು ಸಭ್ಯಸ್ಥರ ಕುಟುಂಬ. ಮಿಥುನ್ ಕೂಡ ಒಳ್ಳೆಯ ಹುಡುಗನೆ ಹಾವಾಡಿಗನ ಪುಂಗಿಯ ನಾದಕ್ಕೆ ಮನಸೋತು ಕ್ರಿಕೆಟ್ ಬೆಟ್ಟಿಂಗ್ ದಂಧೆಗೆ ಬಲಿಯಾಗಿ ಹೋದನೆಂದು ಸ್ಥಳೀಯರೆ ಹೇಳುತ್ತಿದ್ದಾರೆ. ಸಣ್ಣದೊಂದು ಮೊಬೈಲ್ ಅಂಗಡಿ ತೆರೆದು ವ್ಯವಹಾರಕ್ಕೆ ಕೂತ ಅಮಾಯಕ ಹುಡುಗನಿಗೆ ಹಣಗೆರಿಯಿಯ ಬಡ್ಡಿ ದಂಧೆಕೋರನೊಬ್ಬ ಒಂದು ಲಕ್ಷ ಕೊಟ್ಟು ಸರಿಯಾದ ಸಮಯಕ್ಕೆ ಕೊಡಲಾಗದ ಕಾರಣಕ್ಕೆ ಲಕ್ಷಕ್ಕಿಂತ ಅಧಿಕ ಬಡ್ಡಿ ತಿಂದಿಯು ಎರಡು ಲಕ್ಷ ಕೊಡುವಂತೆ ಬೆನ್ನು ಬಿದ್ದಿದ್ದನಂತೆ ನೀನು ಕೊಡದೇ ಇದ್ದರೆ ನಿಮ್ಮ ಮನೆಗೆ ಬಂದು ತಂದೆ ತಾಯಿಯವರ ಬಳಿ ಹೇಳುವುದಾಗಿ ಹೇದರಿಸಿದ್ದನಂತೆ..!
ತೀರ್ಥಹಳ್ಳಿ ಸುಂದರ ಪರಿಸರವುಳ್ಳ ಪಟ್ಟಣ. ಸಭ್ಯಸ್ಥರ ಊರೆಂದೆ ಹೆಸರುವಾಸಿಯಾಗಿದ್ದ ತೀರ್ಥಹಳ್ಳಿ ಪಟ್ಟಣ ಯಾಕೊ ಇತ್ತೀಚೆಗೆ ಅಕ್ರಮಗಳ ತಾಣವಾಗುತ್ತಿದೆ. ಒಂದು ಕಡೆ ಮರಳು ಲೂಟಿಕೋರರಂತು ರಾತ್ರಿ ಹಗಲೆನ್ನದೆ ತೀರ್ಥಹಳ್ಳಿ ತಾಲ್ಲೂಕಿನಾದ್ಯಾಂತ ಬಿಡುಬಿಟ್ಟಿದ್ದಾರೆ. ಇನ್ನೂ ಕುರುವಳ್ಳಿಯ ಅಕ್ರಮ ಕಲ್ಲುಗಣಿಗಾರಿಕೆಯ ದಂಧೆ ಮತ್ತು ಕ್ಷಣ ಕ್ಷಣಕ್ಕೂ ಅಬ್ಬರಿಸುವ ಸ್ಫೋಟಕಗಳ ಸದ್ದು ತಣ್ಣಗೆ ಹರಿಯುವ ತುಂಗೆಯ ಒಡಲನ್ನೆ ಕಂಪಿಸುವಂತೆ ಮಾಡಿದೆ. ಇನ್ನೂ ಕ್ರಿಕೆಟ್ ಬೆಟ್ಟಿಂಗ್ ದಂಧೆಯಂತು ಹಾವಾಡಿಗನೊಬ್ಬನ ಕೈಯಲ್ಲಿ ವಿಷ ಕಾರುತ್ತಿದೆ ಇದರ ಸುಳಿಗೆ ಸಿಲುಕಿದ ಯುವಕರಂತು ದಿಕ್ಕು ಕಾಣದೆ ಸಾವಿನಂಚಿಗೆ ಬಂದು ನಿಂತಿದ್ದಾರೆ. ಈ ಹಾದಿಯಲ್ಲಿ ನೇಣಿಗೆ ಕೊರಳೊಡ್ಡಿ ಸಾವಿಗೆ ಶರಣಾದ ಮಿಥುನ್ ಶೆಟ್ಟಿ ಕೂಡ ಒಬ್ಬ..! ಇನ್ನೂ ಗಾಂಜಾ ಕಿಕ್ಕು ತೀರ್ಥಹಳ್ಳಿ ಪಟ್ಟಣವನ್ನೆ ಮತ್ತೇರಿಸಿ ಬಿಟ್ಟಿದೆ. ಮಟ್ಕಾ ಮಾರಿ ಮನೆ ಅಂಗಳವನ್ನೆ ಪ್ರವೇಶಿಸಿ ಬಿಟ್ಟಿದೆ. ಇಸ್ಪೀಟು ಎಲೆಗಳ ಕಲರವ ತಾಲೂಕಿನಾದ್ಯಂತ ಸದ್ದು ಮಾಡುತ್ತಿದೆ. ಒಟ್ಟಿನಲ್ಲಿ ಪರಶುರಾಮನ ಪುಣ್ಯಸ್ಥಳ ಅಕ್ರಮಗಳ ಜಾತ್ರೆಯಲ್ಲಿ ಮಿಂದೆದ್ದು ಹೋಗಿದೆ.
ಕಳೆದ ಎರಡು ದಿನದಹಿಂದೆ ಮನೆಯ ಹತ್ತಿರ ಹೋಗಿ ಗಲಾಟೆಮಾಡಿದ್ದನೆಂಬ ಮಾತು ಕೇಳಿ ಬರುತ್ತಿದೆ. ಈ ಕಾರಣದಿಂದಲೇ ಮನನೊಂದ ಮಿಥುನ್ ಹೆತ್ತವರಿಗೆ ಗೊತ್ತಾಯಿತಲ್ಲ ಎಂದು ಮಾನಕ್ಕೆ ಹೆದರಿ ನೇಣಿನ ಕುಣಿಕೆಗೆ ಕೊರಳೊಡ್ಡಿ ಉಸಿರು ಚೆಲ್ಲಿದ್ದಾನೆ. ಸ್ಥಳೀಯರೆ ಮಿಥುನ್ ಸಾವಿಗೆ ಕ್ರಿಕೆಟ್ ಬೆಟ್ಟಿಂಗ್ನ ಸಾಲವೇ ಆತ್ಮಹತ್ಯೆಗೆ ಕಾರಣ ಎನ್ನುತ್ತಿದ್ದಾರೆ. ಪೊಲೀಸರು ಅಸ್ವಾಭಾವಿಕ ಸಾವೆಂದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನೂ ಕ್ರಿಕೆಟ್ ಬೆಟ್ಟಿಂಗ್ ದಂಧೆ ಜೋರಾಗಿಯೇ ಸದ್ದು ಮಾಡುತ್ತಿದ್ದು, ಈ ಬಗ್ಗೆ ಪೊಲೀಸ್ ಇಲಾಖೆ ಮೌನವಾಗಿದೆ.ಇನ್ನೂ ಮೀಟರ್ ಬಡ್ಡಿ ಮಾಫಿಯಾಕ್ಕೆ ಯುವ ಸಮೂಹ ತಮಗೆ ಅರಿವಿಲ್ಲದೆ ಬಲಿಯಾಗುತ್ತಿದ್ದಾರೆ.
ಒಟ್ಟಿನಲ್ಲಿ ಸುಂದರ ಬದುಕು ಕಟ್ಟಿಕೊಳ್ಳಬೇಕಿದ್ದ ಯುವಕನೊಬ್ಬ ಹೆತ್ತವರನ್ನು ಮರೆತು ಸಾವಿನಂಚಿಗೆ ಸರಿದಿದ್ದಾನೆಂದರೆ ಎಂತವರ ಮನಸ್ಸು ಒಂದೊಮ್ಮೆ ಮರಗುತ್ತದೆ. ಕ್ರಿಕೆಟ್ ಬೆಟ್ಟಿಂಗ್ ಸುಳಿಗೆ ಸಿಲುಕಿರುವ ಅದೆಷ್ಟೋ ಯುವಕರ ಸ್ಥೀತಿಯು ಮಿಥುನ್ ಶೆಟ್ಟಿಯ ಸ್ಥಿತಿಯಾಗಿದೆ. ಇನ್ನೂ ಸರಿಯಾಗಿ ಯಾವುದಾದರೊಂದು ಕೆಲಸದಲ್ಲಿ ಕಾಲುರುವ ಮೊದಲೆ ಸಾಲದ ಬಾದೆಯಲ್ಲಿ ಕುಸಿದು ಹೋಗಿದ್ದಾರೆ.
ಒಟ್ಟಿನಲ್ಲಿ ಮುದ್ದಾದ ಮಗ ಅದರಲ್ಲೂ ಸಂಸಾರದ ಜವಬ್ದಾರಿ ಹೋರಬೇಕಾಗಿದ್ದ ಮಗನನ್ನು ಕಳೆದುಕೊಂಡು ದಿಕ್ಕೆ ಕಾಣದಂತೆ ಕೈಕಟ್ಟಿ ಕೂಳಿತಿದೆ.
ತೀರ್ಥಹಳ್ಳಿಯ ದಕ್ಷ ಪೋಲಿಸ್ ಅಧಿಕಾರಿಗಳು ಮೊದಲು ಮೀಟರ್ ಬಡ್ಡಿ ಮಾಫಿಯಾಯಕ್ಕೆ ಕಡಿವಾಣ ಹಾಕಬೇಕು. ಕ್ರಿಕೆಟ್ ಬೆಟ್ಟಿಂಗ್ ದಂಧೆಯನ್ನು ಬೇರು ಸಮೇತ ಕಿತ್ತು ಹಾಕಬೇಕು.
ನಮ್ಮ ಅಶ್ವ ಸೂರ್ಯ ವಾರಪತ್ರಿಕೆಯಲ್ಲಿ ಹಣಗೆರಿಯ ಬಡ್ಡಿದಂಧೆ ಕೋರನ ವಿವರವಾದ ವರದಿ ಮತ್ತು ಆತನ ಬಡ್ಡಿಯ ಹಣದ ಸುಳಿಗೆ ಸಿಲುಕಿ ಸಾವಿಗೆ ಶರಣಾದವರು ಮತ್ತು ಸಾವಿನಂಚಿಗೆ ಬಂದು ನಿಂತವರ ಗತಿ ಏನು.!? ನಿರೀಕ್ಷಿಸಿ….?
ಸುಧೀರ್ ವಿಧಾತ, ಶಿವಮೊಗ್ಗ