ಬೆಂಗಳೂರಿನ ಬಿಡದಿಯ ತನ್ನ ಆಶ್ರಯದಲ್ಲಿ ಹೊರಿಯಂತೆ ಹೊಂಕರಿಸಿದ ನಿತ್ಯಾನಂದ ಸ್ವಯಂ ಘೋಷಿತ ದೇವ ಮಾನವ. ಇವನ ಬಗ್ಗೆ ಯಾರಿಗೆ ಗೊತ್ತಿಲ್ಲ. ರಾಷ್ಟ್ರಮಟ್ಟದಲ್ಲಿ ಸುದ್ದಿಯಾಗಿದ್ದ ನಟಿಯೊಬ್ಬಳ ಜೋತೆಗಿನ ಪಲ್ಲಂಗದ ವಿಡಿಯೋ ರಾತ್ರಿ ಬೆಳಗಾಗುವುದರೊಳಗೆ ವೈರಲ್ ಆಗಿತ್ತು…!!
ಅತ್ಯಾಚಾರ ಆರೋಪದಿಂದ ದೇಶ ಬಿಟ್ಟು ತೋಲಗಿದ ಮೇಲೆ ಸ್ವಯಂಘೋಷಿತ ದೇವಮಾನವ ನಿತ್ಯಾನಂದ ಕೈಲಾಸ ಎಂಬ ದೇಶವನ್ನು ನಿರ್ಮಾಣಮಾಡಿಕೊಂಡಿರುವ ವಿಚಾರ ಎಲ್ಲರಿಗೂ ಗೊತ್ತಿರುವ ವಿಷಯವೆ. ಇದೀಗ ಈ ದೇಶಕ್ಕೆ ಪ್ರಧಾನಿಯಾಗಿ ಒಬ್ಬರನ್ನು ನೇಮಕ ಮಾಡಿ ಮತ್ತೆ ಸುದ್ದಿಯಾಗಿದ್ದಾನೆ ನಿತ್ಯಾನಂದ..!! ಈತ ಪ್ರಧಾನವಾಗಿ ನೇಮಕ ಮಾಡಿದ್ದು ಬೇರೆಯಾರನ್ನೊ ಅಲ್ಲ ಅಂದು ಬೆಂಗಳೂರಿನ ಬಿಡದಿಯ ನಿತ್ಯಾನಂದನ ಆಶ್ರಯದಲ್ಲಿ ಬೆಡ್ ರೂಮಿನಲ್ಲಿ ಇವನ ( ನಿತ್ಯಾನಂದನ ) ಜೋತೆಗೆ ಕಾಣಿಸಿಕೊಂಡಿದ್ದ ನಟಿ ರಂಜಿತಾ..!! ರಂಜಿತಾಳನ್ನು ಪ್ರಧಾನಿ ಆಗಿ ಘೋಷಿಸಿಕೊಂಡಿದ್ದಾನೆ ಎಂದು ಹೇಳಲಾಗುತ್ತಿದೆ.
ಭಾರತ ಬಿಟ್ಟು ಪಲಾಯನ ಮಾಡಿರುವ ನಿತ್ಯಾನಂದ ಈಕ್ವೆಡಾರ್ನ ಕರಾವಳಿಯಲ್ಲಿ ದ್ವೀಪವೊಂದನ್ನು ಖರೀದಿಸಿ ತನ್ನದೇ ಆದ ದೇಶವಾಗಿ ನಿರ್ಮಿಸಿಕೊಂಡು ತನ್ನ ಶಿಷ್ಯ ಬಳಗದ ಜೊತೆಗೆ ವಾಸಿಸುತ್ತಿದ್ದಾನಂತೆ…!
ನಿತ್ಯಾನಂದ ತನ್ನ ದೇಶಕ್ಕೆ ಯುನೈಟೆಟ್ ಸ್ಟೇಟ್ಸ್ ಆಫ್ ಕೈಲಾಸ (ಕೈಲಾಸ ದೇಶ) ಎಂದು ನಾಮಕರಣ ಮಾಡಿಕೊಂಡಿದ್ದನೆ. ಅಲ್ಲಿ ಪ್ರತ್ಯೇಕ ಕರೆನ್ಸಿ, ಪ್ರತ್ಯೇಕ ಆಡಳಿತವನ್ನು ಸ್ಥಾಪಿಸಿಕೊಂಡಿರುವುದಾಗಿ ವರದಿ ಆಗಿತ್ತು. ಇದೀಗ ಕೈಲಾಸ ದೇಶ ಮತ್ತೆ ಸುದ್ದಿಯಲ್ಲಿದೆ. ಆ ದೇಶಕ್ಕೆ ತನ್ನ ಪ್ರಿಯ ಶಿಷ್ಯೆ ಮಾಜಿ ನಟಿ ರಂಜಿತಾಳನ್ನು ಪ್ರಧಾನಿಯಾಗಿ ಘೋಷಿಸಿಸುರುವಾಗಿ ತಮಿಳು ಪತ್ರಿಕೆಗಳಲ್ಲಿ ವರದಿಯಾಗಿದೆ. ನಿತ್ಯಾನಂದ ವೆಬ್ಸೈಟ್ನಲ್ಲಿ ಇದನ್ನು ಹೇಳಿದ್ದಾನೆ ಎನ್ನಲಾಗುತ್ತಿದೆ. ಆದರೆ ಈ ಬಗ್ಗೆ ಇನ್ನೂ ಖಚಿತವಾದ ಮಾಹಿತಿ ಲಭ್ಯವಾಗಿಲ್ಲ.
ನಿತ್ಯಾನಂದ ವೆಬ್ಸೈಟ್ನಲ್ಲಿ ರಂಜಿತಾ ಫೋಟೊ ಕೆಳಗೆ ಆಕೆಯ ಹೆಸರನ್ನು ಬದಲಾಯಿಸಿ ‘ನಿತ್ಯಾನಂದಮಯಿ’ ಎಂಬ ಹೆಸರನ್ನು ಹಾಕಿ. ಅದರ ಕೆಳಭಾಗದಲ್ಲಿ ಹಿಂದುಗಳಿಗಾಗಿ ಸ್ವಾಮಿ ನಿರ್ಮಿಸಿದ ಕೈಲಾಸ ದೇಶದ ಪ್ರಧಾನಿಯಾಗಿ “ನಿತ್ಯಾನಂದಮಯಿ” ಅವರನ್ನು ನೆಮಕಮಾಡಲಾಗಿದೆ ಎಂದು ಹೇಳಿಕೊಂಡಿದ್ದಾನೆ. ಇತ್ತೀಚೆಗೆ ವಿಶ್ವಸಂಸ್ಥೆಯ ಸಭೆಯಲ್ಲಿ ಕೈಲಾಸ ರಾಷ್ಟ್ರದ ಪ್ರತಿನಿಧಿಗಳು ಭಾಗವಹಿಸಿದ್ದರು. ಆ ಹಿನ್ನೆಲೆಯಲ್ಲಿ ನಟಿ ರಂಜಿತಾ ಕೂಡ ಕೈಲಾಸ ದೇಶದ ಪ್ರಧಾನಿಯಾಗಿ ವಿಶ್ವಸಂಸ್ಥೆಯ ಸಭೆಗೆ ಹಾಜರಾದರು ಯಾವುದೇ ಅಚ್ಚರಿ ಇಲ್ಲ ಎನ್ನುವ ಮಾತುಗಳು ಕೇಳಿಬರುತ್ತಿದೆ
2019ರಲ್ಲಿ ಬೆಂಗಳೂರಿನ ಬಿಡದಿ ಇನ್ನೂ ಕೇಲವು ಇವನದೆ ಆಶ್ರಯದಲ್ಲಿ ಇವನ ನಾನಾ ಅವತಾರಗಳನ್ನು ಕಂಡು ಜನ ರೋಸಿ ಹೊಗಿದ್ದರು. ಇನ್ನೇನು ಪೋಲಿಸರು ನನ್ನನ್ನು ಬಂಧಿಸಿ ಜೈಲಿಗಟ್ಟಬಹುದೆನ್ನುವ ಹಿನ್ನಲೆಯಲ್ಲಿ ದೇಶವನ್ನೇ ಬಿಟ್ಟು ಪರಾರಿಯಾಗಿದ್ದ..!
13 ವರ್ಷಗಳ ಹಿಂದೆ ಬಿಡದಿ ಬಳಿಯ ಧ್ಯಾನ ಪೀಠದಲ್ಲಿ ನಿತ್ಯಾನಂದ ಮತ್ತು ರಂಜಿತಾ ರಾಸಲೀಲೆ ನಡೆಸಿದ್ದಾರೆ ಎನ್ನಲಾದ ವಿಡಿಯೋ ವೈರಲ್ ಆಗಿತ್ತು. ಈ ವಿಚಾರ ಭಾರಿ ಸುದ್ದು ಮಾಡಿತ್ತು. ಈ ಪ್ರಕರಣ ಇತ್ಯರ್ಥವಾಗದ ಹಂತದಲ್ಲೇ ಆರತಿ ರಾವ್ ಎಂಬುವವರು ನಿತ್ಯಾನಂದ ತಮ್ಮ ಮೇಲೆ ಲೈಂಗಿತ ಅತ್ಯಾಚಾರ ನಡೆಸಿದ್ದಾರೆ ಎಂದು ದೂರು ದಾಖಲಿಸಿದ್ದರು. ನಿತ್ಯಾನಂದ ವಿರುದ್ಧ ವಿವಿಧ ಸೆಕ್ಷನ್ಗಳ ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು. 2019ರಲ್ಲಿ ದೇಶ ಬಿಟ್ಟಿದ್ದ ನಿತ್ಯಾನಂದ, ‘ಕೈಲಾಸ’ ದೇಶ ನಿರ್ಮಿಸಿಕೊಂಡು, ಸಕಲ ವೈಭೋಗಗಳೊಂದಿಗೆ ಬದುಕುತ್ತಿದ್ದಾನೆಂದು ಹೇಳಲಾಗಿದೆ.
ನಿತ್ಯಾನಂದನ “ಕೈಲಾಸ” ದೇಶ ಎಲ್ಲಿದೆ
ಲ್ಯಾಟಿನ್ ಅಮೆರಿಕ ದೇಶವಾದ ಈಕ್ವೆಡಾರ್ನಲ್ಲಿ ನಿತ್ಯಾನಂದ ಖಾಸಗಿ ದ್ವೀಪ ಪ್ರದೇಶವನ್ನು ಖರೀದಿಸಿ ಇದು ನನ್ನ ದೇಶ ಎಂದು ಘೋಷಿಸಿಕೊಂಡಿದ್ದಾನೆ. ಟ್ರಿನಿಡಾಡ್ ಮತ್ತು ಟೊಬ್ಯಾಗೊ ನಗರಗಳಿಂದ ಈ ದ್ವೀಪ ಸಮೀಪದಲ್ಲಿದೆ. ಅಂದರೆ ಅಮೆರಿಕ ದೇಶದ ಕೆಳಭಾಗದಲ್ಲಿ ನಿತ್ಯಾನಂದನ ದೇಶ ಇದೆ. ಈ ದೇಶಕ್ಕೆ ‘ಕೈಲಾಸ’ ಎಂದು ಹೆಸರಿಟ್ಟಿದ್ದಾನೆ. ತನ್ನ ದೇಶಕ್ಕೆ ಪ್ರತ್ಯೇಕ ಧ್ವಜ, ಲಾಂಛನ, ಪ್ರತ್ಯೇಕ ಕರೆನ್ಸಿ ಮತ್ತು ಪ್ರತ್ಯೇಕ ಪಾಸ್ಪೋರ್ಟ್ ಕೂಡ ತಯಾರಿಸಿಕೊಂಡಿದ್ದಾನೆ. ಇದನ್ನು ಹಿಂದೂ ರಾಷ್ಟ್ರವೆಂದು ಆತ ಬಣ್ಣಿಸಿದ್ದಾನೆ. ಅಲ್ಲಿ ನಿತ್ಯಾನಂದ ಹೇಳಿದ್ದೇ ಶಾಸನ. ರಂಜಿತಾ ಹಾಗೂ ಆಕೆಯ ಸಹೋದರಿ ಸೇರಿದಂತೆ ಸಾವಿರಾರು ಜನ ಭಕ್ತರು ಆ ದೇಶದಲ್ಲಿದ್ದಾರೆ.
ರಂಜಿತಾ ಅಲಿಯಾಸ್ ನಿತ್ಯಾನಂದಮಯಿ ಯಾರು?
ತಮಿಳು ನಟಿ ರಂಜಿತಾ ಹಲವು ತೆಲುಗು, ಕನ್ನಡ, ಮಲಯಾಳಂ ಸಿನಿಮಾಗಳಲ್ಲಿ ಕೂಡ ನಟಿಸಿದ್ದಾರೆ. ಹಿರಿಯ ನಟ ಅಶೋಕ್ ಕುಮಾರ್ ಅವರ ಮಗಳು ಈಕೆ. 1992ರಲ್ಲಿ ‘ನಾಡೋಡಿ ತೆಂಡ್ರಲ್’ ಸಿನಿಮಾ ಮೂಲಕ ಚಿತ್ರರಂಗ ಪ್ರವೇಶಿಸಿದ್ದರು. ‘ಪುರುಷೋತ್ತಮ’, ‘ಶೃಂಗಾರ ರಾಜ’, ‘ಅಗ್ನಿ ಐಪಿಎಸ್’ ಹಾಗೂ ‘ಅಜ್ಜು’ ಎನ್ನುವ ಕನ್ನಡ ಸಿನಿಮಾಗಳಲ್ಲಿ ನಟಿಸಿದ್ದಾರೆ. ಆಕೆಯ ಸಿನಿಮಾಗಳನ್ನು ನೋಡಿ ಆಕರ್ಷಣೆಗೆ ಒಳಗಾಗಿ ಆಕೆಯನ್ನು ಪಡೆದು ಕೊಳ್ಳಬೇಕೆಂದು ವಾಗ್ದಾನ ಮಾಡಿದ ನಿತ್ಯಾನಂದ ಕೊನೆಗೂ ಆಕೆಯನ್ನು ಒಲಿಸಿಕೊಂಡು ತನ್ನ ಜೊತೆಯಲ್ಲಿಯೇ ಇಟ್ಟುಕೊಂಡಿದ್ದಾನೆ.
ನಿತ್ಯಾನಂದನ ತೆಕ್ಕೆಯಲ್ಲಿ ರಂಜಿತಾಳ ಸಹೋದರಿ..!!
ಇತ್ತೀಚೆಗೆ ರಂಜಿತಾಳ ತಂದೆ ಹಿರಿಯ ನಟ ಅಶೋಕ್ ಕುಮಾರ್ ಸಂದರ್ಶನವೊಂದರಲ್ಲಿ ಮಾತನಾಡಿದ್ದರು. “ಅಮೆರಿಕಾದಲ್ಲಿದ್ದ ಸಹೋದರಿಯನ್ನು ನೋಡಲು ರಂಜಿತಾ ಹೋಗುತ್ತಿದ್ದಳು. ಅದಾಗಲೇ ನನ್ನ ಮಗಳು ನಿರ್ಮಲಾ ಅಮೆರಿಕಾದಲ್ಲಿ ನಿತ್ಯಾನಂದನ ಆಶ್ರಮಕ್ಕೆ ಭೇಟಿ ನೀಡುತ್ತಿದ್ದಳು. ಆಕೆಯ ಜೊತೆ ರಂಜಿತಾ ಕೂಡ ಹೋಗಲು ಆರಂಭಿಸಿದ್ದಳು. ಇದೇ ರೀತಿ ನಿತ್ಯಾನಂದನ ಆಶ್ರಮಕ್ಕೆ ಹೋಗುತ್ತಿದ್ದಾಗಲೇ ರಂಜಿತಾ ಕೂಡ ಗಂಡನಿಗೆ ಡಿವೋರ್ಸ್ ಕೊಟ್ಟಿದ್ದಳು. ಈ ಡಿವೋರ್ಸ್ಗೆ ನಿತ್ಯಾನಂದ ಕೂಡ ಒಂದು ಅರ್ಥದಲ್ಲಿ ಕಾರಣ ಎಂದು ಹೇಳಬಹುದು. ನನ್ನ ದೊಡ್ಡ ಮಗಳು ನಿರ್ಮಲಾ ಸಹ ಗಂಡನಿಗೆ ಡಿವೋರ್ಸ್ ಕೊಟ್ಟು ಆಶ್ರಮ ಸೇರಿಕೊಂಡಿದ್ದಳು. ನಂತರ ಇಬ್ಬರು ಅಲ್ಲೇ ಇದ್ದಾರೆ” ಎಂದು ಹೇಳಿದ್ದರು.
ಒಟ್ಟಿನಲ್ಲಿ “ಕೈಲಾಸ” ರಾಷ್ಟ್ರದ ದೇವಮಾನವ ನಿತ್ಯಾನಂದ ತನ್ನ ರಾಷ್ಟ್ರಕ್ಕೆ ಪ್ರಧಾನಿಯಾಗಿ ನಿತ್ಯಾನಂದಮಯಿ ( ರಂಜಿತಾ ) ಯನ್ನು ನೇಮಕಮಾಡಿ ಮತ್ತೆ ಸುದ್ದಿಯಾಗಿದ್ದಾನೆ..!!
ಸುಧೀರ್ ವಿಧಾತ, ಶಿವಮೊಗ್ಗ
Voice of common man in words