ನನ್ನ ತಾಯಿ ದೇಶಕ್ಕಾಗಿ ಮಾಂಗಲ್ಯವನ್ನೇ ತ್ಯಾಗ ಮಾಡಿದ್ದರು: ಮೋದಿ ವಿರುದ್ಧ ಪ್ರಿಯಾಂಕ ಗಾಂಧಿ ವಾಗ್ದಾಳಿ

ನನ್ನ ತಾಯಿ ದೇಶಕ್ಕಾಗಿ ಮಾಂಗಲ್ಯವನ್ನೇ ತ್ಯಾಗ ಮಾಡಿದಳು: ಮೋದಿ ವಿರುದ್ಧ ಪ್ರಿಯಾಂಕ ಗಾಂಧಿ ವಾಗ್ದಾಳಿ

ASHWASURYA/SHIVAMOGGA

✍️ ಸುಧೀರ್ ವಿಧಾತ

ಅಶ್ವಸೂರ್ಯ/ಬೆಂಗಳೂರು: ಇತ್ತೀಚೆಗಷ್ಟೇ ಪ್ರಧಾನಿ ಮೋದಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಹಿಳೆಯರ ಮಾಂಗಲ್ಯಕ್ಕೆ ಕುತ್ತಾಗುಲಿದೆ ಎಂಬ ಹೇಳಿಕೆ ನೀಡಿದ್ದಕ್ಕೆ ಪ್ರಿಯಾಂಕಾ ಗಾಂಧಿ ತಿರುಗೇಟು ನೀಡಿದ್ದಾರೆ.

ರಾಜಸ್ಥಾನದ ಚುನಾವಣೆಯ ಪ್ರಚಾರದ ಸಮಯದಲ್ಲಿ ಪ್ರಧಾನಿ ಮೋದಿ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮ್ಮ ಮಾಂಗಲ್ಯವನ್ನೂ ಕಿತ್ತುಕೊಳ್ಳುತ್ತಾರೆ. ನಿಮ್ಮ ಆಸ್ತಿ, ಚಿನ್ನವನ್ನು ಕಿತ್ತುಕೊಂಡು ಈ ದೇಶದಲ್ಲಿ ಹೆಚ್ಚು ಮಕ್ಕಳಿರುವ ಸಮುದಾಯದವರಿಗೆ ಹಂಚುತ್ತಾರೆದ ಎಂದು ಪರೋಕ್ಷವಾಗಿ ಮುಸ್ಲಿಮರ ಓಲೈಕೆ ಮಾಡುವ ಕಾಂಗ್ರೆಸ್ ಪಕ್ಷದ ವಿರುದ್ಧ ವಾಗ್ದಾಳಿ ಮಾಡಿದ್ದರು.

ಮೋದಿಯ ಈ ಮಾತಿಗೆ ಬೆಂಗಳೂರಿನಲ್ಲಿ ತಿರುಗೇಟು ನೀಡಿದ ಪ್ರಿಯಾಂಕ ಗಾಂಧಿ ನಮ್ಮ ಪ್ರಧಾನಿಗಳು ಎಷ್ಟು ಹಸಿ ಹಸಿ ಸುಳ್ಳು ಹೇಳುತ್ತಾರೆ ಎಂದರೆ ಇತ್ತೀಚೆಗೆ ನಾವು ಮಹಿಳೆಯರ ಮಾಂಗಲ್ಯ ಕಿತ್ತುಕೊಳ್ಳುತ್ತೇವೆ, ಆಸ್ತಿ ಕಿತ್ತುಕೊಳ‍್ಳುತ್ತೇವೆ ಎಂದು ಸುಳ್ಳು ಹೇಳಿದ್ದಾರೆ. ನಾವು 70 ವರ್ಷ ಅಧಿಕಾರದಲ್ಲಿದ್ದೆವು. ಒಮ್ಮೆಯಾದರೂ ಕಾಂಗ್ರೆಸ್ ನಿಮ್ಮ ಮಾಂಗಲ್ಯಕ್ಕೆ ಕೈ ಹಾಕಿದೆಯಾ? ನಿಮ್ಮ ಆಸ್ತಿಯನ್ನು ಕಿತ್ತುಕೊಂಡಿದ್ದೇವಾ? ದೇಶಕ್ಕೆ ಅಗತ್ಯ ಬಂದಾಗ ಇಂದಿರಾ ಗಾಂಧಿಯವರು ತಮ್ಮ ಸ್ವಂತ ಚಿನ್ನವನ್ನು ನೀಡಿದ್ದರು. ನನ್ನ ತಾಯಿ ಇಂದಿರಾಗಾಂಧಿ ಅವರು ದೇಶಕ್ಕಾಗಿ ತಮ್ಮ ಮಾಂಗಲ್ಯವನ್ನೇ ಬಲಿದಾನ ಮಾಡಿದ್ದರು. ಎನು ಅರಿವಿಲ್ಲದೆಯೇ ಏನೇನೋ ಮಾತನಾಡಬಾರದು ಎಂದು ಪ್ರಿಯಾಂಕ ಆಕ್ರೋಶ ಹೊರಹಾಕಿದ್ದಾರೆ.

ಪ್ರಧಾನಿ ಮೋದಿ ನಿಜವಾಗಿಯೂ ಸಮುದಾಯವನ್ನು ಒಡೆಯುವ ಕೆಲಸ ಮಾಡುವವರಲ್ಲ ಎಂದರೆ ಈಗ ಚುನಾವಣೆ ಸಮಯದಲ್ಲಿ ಇಂತಹ ಹೇಳಿಕೆ ನೀಡಿರುವುದು ಯಾಕೆ ಎಂದು ಪ್ರಿಯಾಂಕ ಗಾಂಧಿ ಮೋದಿಗೆ ಪ್ರಶ್ನಿಸಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!