ಗೀತಕ್ಕನಾ ಬಗ್ಗೆ ಮನಸ್ಸಿಗೆ ಬಂದಹಾಗೆ ಮಾತಾಡಿದರೆ ಹುಶಾರ್: ಈಶ್ವರಪ್ಪನವರ ವಿರುದ್ಧ ಗುಡುಗಿದ ಸಚಿವ ಮಧು ಬಂಗಾರಪ್ಪ
ASHWASURYA/SHIVAMOGGA
✍️ ಸುಧೀರ್ ವಿಧಾತ
ಅಶ್ವಸೂರ್ಯ/ಶಿವಮೊಗ್ಗ : ಲೋಕ ಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಬಗ್ಗೆ ಮಾಜಿ ಸಚಿವ, ಬಿಜೆಪಿ ಪಕ್ಷದ ಬಂಡಾಯ ಪಕ್ಷೇತರ ಅಭ್ಯರ್ಥಿ ಈಶ್ವರಪ್ಪ ಹಗುರವಾಗಿ ಮಾತನಾಡುವ ಬಗ್ಗೆ ಸಚಿವ ಮಧು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಮಧು ಬಂಗಾರಪ್ಪ, ಗೀತಾ ಶಿವರಾಜ್ ಕುಮಾರ್ ಸಾಮಾನ್ಯರಲ್ಲ.ಗೀತಾ ಬಂಗಾರಪ್ಪರ ಪುತ್ರಿಯಾಗಿದ್ದಾರೆ. ಅವರ ಬಗ್ಗೆ ಮನಸ್ಸಿಗೆ ಬಂದ ಹಾಗೆ ಮಾತಾಡುವುದು ಈಶ್ವರಪ್ಪ ಮೊದಲು ನಿಲ್ಲಿಸಬೇಕು. ಇಲ್ಲವಾದಲ್ಲಿ ಬೇರೆಯದೆ ರೀತಿಯಲ್ಲಿ ಪ್ರತಿಕ್ರಿಯೆ ನೀಡಬೇಕಾಗುತ್ತದೆ ಎಂದು ಸಚಿವ ಮಧು ಬಂಗಾರಪ್ಪ ಎಚ್ಚರಿಸಿದ್ದಾರೆ.
ಪದೇ ಪದೇ ಕಾಂಗ್ರೆಸ್‌ನವರು ನಮ್ಮ ಜೊತೆಯಲ್ಲಿ ಇದ್ದಾರೆ ನನಗೆ ಫೋನ್ ಮಾಡಿದ್ದಾರೆ ಎಂದು ಈಶ್ವರಪ್ಪ ಅವರು ಹೇಳುತ್ತಿದ್ದಾರೆ. ಈಶ್ವರಪ್ಪ ಕೀಳು ಮಟ್ಟದ ರಾಜಕಾರಣಿಯಾಗಿದ್ದಾರೆ. ನೀವು ನಿಜವಾದ ಗಂಡಸೇ ಆಗಿದ್ದರೆ, ನಿಮ್ಮ ಮಗನಿಗೆ ಟಿಕೆಟ್ ಕೊಡಿಸಬೇಕಿತ್ತು. ಅದಾಗದ ನೀವು ನಿಮ್ಮ ಮಗನಿಗೆ ಫೀಡಿಂಗ್ ಬಾಟಲ್ ನೀಡಿ ಕೂರಿಸಿ ಎಂದು ಮಧು ಬಂಗಾರಪ್ಪ ಕಿಡಿಕಾರಿದ್ದಾರೆ.
ನಿಮ್ಮ ಸ್ವಾರ್ಥಕ್ಕಾಗಿ ಹೀಗೆಲ್ಲಾ ಮಾತನಾಡುತ್ತಿದ್ದಿರಾ? ನಿಮಗೆ ಟಿಕೆಟ್ ತೆಗೆದುಕೊಳ್ಳುವ ಯೋಗ್ಯತೆ ಇಲ್ಲ. ನಿಮ್ಮ ಮಗನಿಗೂ ಟಿಕೆಟ್ ಕೊಡಿಸಲು ಆಗಿಲ್ಲ. ಪ್ರೆಸ್ ಮೀಟ್ ಬಿಟ್ಟರೆ ನೀವು ಚುನಾವಣೆಯ ಪ್ರಚಾರ ಮಾಡಿದ್ದಾದರು ಎಲ್ಲಿ ? ಒಂದೇ ಒಂದು ದೊಡ್ಡ ಕಾರ್ಯಕ್ರಮ ಮಾಡಿದ್ದಾರಾ?. ಅನಿವಾರ್ಯವಾಗಿ ನಿಮಗೆ ಏನು ಮಾಡಬೇಕೋ ಅದನ್ನೇ ನಾವು ಮಾಡುತ್ತೇವೆ.ನೀವು ಹಿರಿಯರಿದ್ದಿರಾ ಎಂದು ಬೆಲೆ ನೀಡುತ್ತೇವೆ. ಆದರೆ ನಿಮ್ಮ ನಡವಳಿಕೆಗೆ ನಮ್ಮ ವಿರೋಧವಿದೆ ಎಂದು ಗೀತಾ ಶಿವರಾಜ್ ಕುಮಾರ್ ಸಹೋದರರಾಗಿರುವ ಮಧು ಬಂಗಾರಪ್ಪ ಕಿಡಿಕಾರಿದ್ದಾರೆ.
ನಾನು ಸಚಿವನಾಗುವ ಮೊದಲು ಗೀತಕ್ಕನಾ ಸಹೋದರ ಆಮೇಲೆ ಸಚಿವ ನಮಗೆ ನಮ್ಮದೆ ಅದ ಗೌರವವಿದೆ ಅದೂ ಬಿಟ್ಟು ನನ್ನ ಅಕ್ಕನ ಬಗ್ಗೆ ಯಾರೆ ಮಾತನಾಡಿದರು ನಾನು ಸುಮ್ಮನಿರಲು ಸಾಧ್ಯವಿಲ್ಲ ಎಂದು ಹೇಳಿದರು..
ಇನ್ನೂ ಗೀತಾ ಶಿವರಾಜಕುಮಾರ್ ಅವರ ಚುನಾವಣೆಯ ಪ್ರಚಾರಕ್ಕೆ ಸಂಬಂದಿಸಿದಂತೆ 28 ರಿಂದ ನಗರ, ಪಟ್ಟಣ ಮತ್ತು ಗ್ರಾಮವ್ಯಾಪ್ತಿಯಲ್ಲಿ ರೋಡ್ ಶೋ ಹಮ್ಮಿಕೊಂಡಿದ್ದೇವೆ ಕೆಲವು ಚಿತ್ರನಟರು ಬರುವವರಿದ್ದಾರೆ.ಡಾಲಿ ಧನಂಜಯ್ ಮತ್ತು ದುನಿಯಾ ವಿಜಯ್ ಹಾಗೂ ಇನ್ನಿತರರು ಗೀತಕ್ಕನಾ ಪರವಾಗಿ ಚುನಾವಣೆಯ ಪ್ರಚಾರದಲ್ಲಿ ಜೋತೆಯಾಗಲಿದ್ದಾರೆ.
ಚುನಾವಣೆಯ ಪ್ರಚಾರಕ್ಕೆ ಹೊದಕಡೆ ಎಲ್ಲಾ ನಮ್ಮ ಪರವಾದ ಅಲೆ ಇದೆ ಗೀತಕ್ಕಾ ಮತ್ತು ಶಿವರಾಜಕುಮಾರ್ ಮತ್ತು ನಮ್ಮ ಸ್ಥಳೀಯ ನಾಯಕರು ಹಾಗೂ ಕಾರ್ಯಕರ್ತರು ಈಗಾಗಲೇ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಸರಿ ಸುಮಾರು ನಾಲ್ಕು ಲಕ್ಷಕ್ಕೂ ಅಧಿಕ ಮತದಾರನ್ನು ನೇರವಾಗಿ ಬೇಟಿ ಮಾಡಿದ್ದಾರೆ. ಕ್ಷೇತ್ರದಲ್ಲಿ ಗೀತಕ್ಕನಾ ಪರವಾಗಿ ಮತದಾರರ ಒಲವಿದೆ ಈ ಬಾರಿ ಗೆಲುವು ನಮ್ಮ ಪರವಾಗಿದೆ. ನಮ್ಮ ಸರ್ಕಾರದ ಐದು ಗ್ಯಾರಂಟಿಗಳು ನಮಗೆ ಮತ ಕೇಳಲು ಗೆಲುವಿನ ದಡ ಸೇರಲು ಸಹಕಾರಿಯಾಗಿದೆ ಎಂದರು