ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ದ್ರೋಹ ಬಗೆಯುತ್ತಿದೆ. ರಾಜಕೀಯ ದ್ವೇಷವನ್ನೇ ಸಾಧಿಸುತ್ತಿದೆ ; ಅಯನೂರು ಮಂಜುನಾಥ್
ತಂದೆಯನ್ನೇ ವನವಾಸಕ್ಕೆ ಕಳಿಸಿದ ರಾಮಭಕ್ತರು ನಮ್ಮಲ್ಲಿದ್ದಾರೆ ಯಡಿಯೂರಪ್ಪ ಪುತ್ರರನ್ನು ಕುಟುಕಿದ ಆಯನೂರು ಮಂಜುನಾಥ್
ASHWASURYA/SHIVAMOGGA
✍️ ಸುಧೀರ್ ವಿಧಾತ
ಅಶ್ವಸೂರ್ಯ/ಶಿವಮೊಗ್ಗ; ದಿನಾಂಕ,13ರಂದು ನೆಡೆದ ಪತ್ರಿಕಾ ಗೋಷ್ಠಿಯಲ್ಲಿ ಕೆಪಿಸಿಸಿ ವಕ್ತಾರರಾದ ಅಯನೂರು ಮಂಜುನಾಥ್ ಅವರು ಮಾಜಿ ಮುಖ್ಯಮಂತ್ರಿ ಬಿ ಎಸ್ ವೈ ಅವರ ಮಕ್ಕಳ ವಿರುದ್ಧ ತಂದೆಯನ್ನೇ ವನವಾಸಕ್ಕೆ ಕಳಿಸಿದ ರಾಮಭಕ್ತರು ನಮ್ಮಲ್ಲಿದ್ದಾರೆ ಎಂದು ಬಿ.ವೈ.ರಾಘವೇಂದ್ರ, ಬಿ.ವೈ.ವಿಜಯೇಂದ್ರ ಅವರ ಹೆಸರು ಹೇಳದೆ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
ಅವರು ಪತ್ರಿಕಾಗೋಷ್ಟಿಯಲ್ಲಿ ಮಾತನಾಡಿ, ಶ್ರೀರಾಮ ಎಲ್ಲರ ದೇವರು ಆತ ಎಲ್ಲರನ್ನು ಕಾಪಾಡುತ್ತಾನೆ. ರಾಮನ ಭಕ್ತರೆಂದು ಹೇಳಿಕೊಳ್ಳುವ ಕೆಲವರು ಶ್ರೀರಾಮನನ್ನೇ ದೂರವಿಡುತ್ತಾರೆ. ಆ ಶ್ರೀರಾಮ ತಂದೆ ದಶರಥನ ಮಾತಿಗಾಗಿ ವನವಾಸ ಮಾಡಿದರು. ಆದರೆ ಈ ರಾಮಭಕ್ತರು ದಶರಥನನ್ನೇ (ಬಿಎಸ್ ವೈ) ವನವಾಸಕ್ಕೆ ಕಳುಹಿಸಿದ್ದಾರೆ ಇದು ವಿಪರ್ಯಾಸ ಎಂದರು. ಎಲ್ಲಾ ಹಿಂದುಗಳು ಶ್ರೀರಾಮನ ಭಕ್ತರೆ ಆಗಿದ್ದಾರೆ. ಆತನನ್ನು ಬೀದಿಗೆ ತಂದು ಚುನಾವಣೆಗೆ ಬಳಸಿಕೊಳ್ಳುವ ಅಗತ್ಯವೇ ಇಲ್ಲ. ಬಿಜೆಪಿಯವರು ಶ್ರೀರಾಮನಿಗಾಗಿ ಆಯೋಧ್ಯೆಯಲ್ಲಿ ಮಂದಿರ ಕಟ್ಟಿದ್ದೇವೆ ಎನ್ನುತ್ತಾರೆ. ಆದರೆ ಆ ಮಂದಿರ ಕಟ್ಟಲು ಈ ದೇಶದ ಕೋಟ್ಯಾಂತರ ಜನರು ಹಣ ಕೊಟ್ಟಿದ್ದಾರೆ.ಇಟ್ಟಿಗೆ ಕೊಟ್ಟಿದ್ದಾರೆ ಅದು ಬಿಜೆಪಿಯವರು ಕಟ್ಟಿದ್ದಲ್ಲ, ಭಕ್ತರು ಕೊಟ್ಟ ಹಣದಲ್ಲಿ ರಾಮ ಮಂದಿರ ಕಟ್ಟಿರೋದು ಎಂದರು.
ಆಯೋಧ್ಯೆಯ ಶ್ರೀರಾಮಮಂದಿರಕ್ಕಾಗಿ ಇಡೀ ದೇಶದ ಜನ ಇಟ್ಟಿಗೆ ಕಬ್ಬಿಣ ಕೊಟ್ಟಿದ್ದರು. ಈಗ ಆ ದೇವಾಲಯ ಕಾಂಕ್ರಿಟ್ ಕಲ್ಲಿನಿಂದ ಆಗಿದೆ. ಇಡೀ ದೇಶದಿಂದ ತೆಗೆದುಕೊಂಡು ಹೋಗಿದ್ದ ಇಟ್ಟಿಗೆ, ಕಬ್ಬಿಣ ಎಲ್ಲಿ ಹೋಯಿತು ಎಂದು ಪ್ರಶ್ನೆ ಮಾಡಿದರು.
ಕೇಂದ್ರ ಸರ್ಕಾರ ನಮ್ಮ ರಾಜ್ಯಕ್ಕೆ ದ್ರೋಹ ಬಗೆಯುತ್ತಿದೆ. ರಾಜಕೀಯ ದ್ವೇಷವನ್ನೇ ಸಾಧಿಸುತ್ತಿದೆ. ಬರಗಾಲದ ಇಂತಹ ಸಂದರ್ಭದಲ್ಲಿ ಬಿ.ವೈ.ರಾಘವೇಂದ್ರ ಸೇರಿದಂತೆ ಯಾವ ಸಂಸದರು ಕೇಂದ್ರದಿಂದ ಅನುದಾನವನ್ನು ತರುವ ಪ್ರಯತ್ನವಿರಲಿ ಅದರೆ ಮಾತನಾಡಲಿಲ್ಲ. ಒಂದು ರೀತಿಯಲ್ಲಿ ರಾಜ್ಯದ ಮೇಲೆ ಕೇಂದ್ರದ ದಬ್ಬಾಳಿಕೆ ನಡೆಸುತ್ತಿದೆ ಎಂದರು.ರಾಜ್ಯದ ರೈತರು ಬರಗಾಲದ ಸಂಕಷ್ಟದಲ್ಲಿ
ಇದ್ದರು ನೆರವಾಗದ ಕೇಂದ್ರದ ನಾಯಕರಾದ ಮೋದಿ, ಅಮಿತ್‌ಷಾ ಮುಂತಾದ ಬಿಜೆಪಿಯ ನಾಯಕರು ಯಾವ ಮುಖ ಇಟ್ಟುಕೊಂಡು ರಾಜ್ಯಕ್ಕೆ ಮತ ಕೇಳಲು ಬರುತ್ತಾರೆ. ಒಕ್ಕೂಟ ವ್ಯವಸ್ಥೆಯಲ್ಲಿ ಮೊಟ್ಟ ಮೊದಲ ಬಾರಿಗೆ ರಾಜ್ಯವೊಂದು ನ್ಯಾಯಾಲಯದ ಮೆಟ್ಟಿಲೆರಿರುವುದು ಇದೇ ಪ್ರಥಮವಾಗಿದೆ. ಇದೊಂದು ಪ್ರಜಾಪ್ರಭುತ್ವ ವಿರೋಧಿ ಎಂದರು.
ಇನ್ನೂ ಕೆ ಎಸ್ ಈಶ್ವರಪ್ಪ ನವರು ಇಪ್ಪತ್ತೈದು ಸಾವಿರ ಜನರ ಜೋತೆ ಮೆರವಣಿಗೆಯಲ್ಲಿ ಹೋಗಿ ನಾಮಪತ್ರ ಸಲ್ಲಿಸುತ್ತೇನೆ ಎಂದಿದ್ದರು ಹತ್ತು ಸಾವಿರ ಜನ ಕೂಡ ಇರಲಿಲ್ಲ. ಇವರು ನಾಮಪತ್ರ ವಾಪಸ್ ಪಡೆಯುವ ಸಾಧ್ಯತೆ ಇದೆ.ಇವರನ್ನು MLC ಮಾಡಿ ವಿರೋಧ ಪಕ್ಷದನಾಯಕನನ್ನಾಗಿ ಮಾಡಬಹುದು ಅದಕ್ಕೆ ಈಶ್ವರಪ್ಪ ನವರು ಈ ರೀತಿಯ ದಾಳ ಉರುಳಿಸಿದ್ದಾರೆ. ಅವರು ನಿಂತಿದ್ದೆ ಆದರೆ ನಾನು ಅಂದು ಹೇಳಿದಂತೆ ನನ್ನ ಒಂದು ಮತವನ್ನು ಅವರಿಗೆ ಹಾಕುತ್ತೇನೆ ಎಂದು ಮತ್ತೊಮ್ಮೆ ಈಶ್ವರಪ್ಪನವರನ್ನು ಕೆಣಕಿದ್ದಾರೆ.