ರಾಜ್ಯಕ್ಕೆ 4ನೇ ಮತ್ತು 8ನೇ ರಾಂಕ್ ಪಡೆದು ಶೇ.100 ಕ್ಕೆ ನೂರರಷ್ಟು ಫಲಿತಾಂಶದೊಂದಿಗೆ ಮತ್ತೊಮ್ಮೆ ದ್ವೀತಿಯ ಪಿಯುಸಿ ಫಲಿತಾಂಶದಲ್ಲಿ ಶತಕ ಬಾರಿಸಿದ ಸಹ್ಯಾದ್ರಿ ಸಂಯುಕ್ತ ಪದವಿಪೂರ್ವ ಕಾಲೇಜ್

ದ್ವಿತೀಯ ಪಿ.ಯು.ಸಿ. ಫಲಿತಾಂಶದಲ್ಲಿ ರಾಜ್ಯಕ್ಕೆ 4ನೇ ಮತ್ತು 8ನೇ ರಾಂಕ್ ಪಡೆದು ಶೇ.100 ಕ್ಕೆ ನೂರರಷ್ಟು ಫಲಿತಾಂಶದೊಂದಿಗೆ ತಾಲ್ಲೂಕಿನಲ್ಲಿಯೇ ಮತ್ತೊಮ್ಮೆ ಮೇಲುಗೈ ಸಾಧಿಸಿದ ಸಹ್ಯಾದ್ರಿ ಸಂಯುಕ್ತ ಪದವಿ ಪೂರ್ವಕಾಲೇಜು, ತೀರ್ಥಹಳ್ಳಿ

ASHWASURYA/SHIVAMOGGA

SUDHIR VIDHATA

ಅಶ್ವಸೂರ್ಯ/ತೀರ್ಥಹಳ್ಳಿ; 2023-24ನೇ ಶೈಕ್ಷಣಿಕ ಸಾಲಿನ ದ್ವಿತೀಯ ಪಿ.ಯು.ಸಿ ವಾರ್ಷಿಕ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು ಶಿವಮೊಗ್ಗ ಜಿಲ್ಲೆಯ ಸುಂದರ ತಾಣ ತೀರ್ಥಹಳ್ಳಿ ಪಟ್ಟಣದ ಹೃದಯ ಭಾಗದಲ್ಲಿರುವ ಪ್ರತಿಷ್ಠಿತ ಸಹ್ಯಾದ್ರಿ ಸಂಯುಕ್ತ ಪದವಿ ಪೂರ್ವ ಕಾಲೇಜು, ವಾಣಿಜ್ಯ ಹಾಗೂ ವಿಜ್ಞಾನ ಎರಡೂ ವಿಭಾಗದಲ್ಲಿಯೂ ಶೇಕಡಾ 100% ಫಲಿತಾಂಶ ಪಡೆದು ಮತ್ತೊಮ್ಮೆ ಶಾಲೆಯ ಪ್ರಾಚಾರ್ಯರು ಮತ್ತು ಉಪನ್ಯಾಸಕರತ್ತ ತಾಲ್ಲೂಕಿನ ಪ್ರತಿಯೊಬ್ಬ ವಿಧ್ಯಾರ್ಥಿ ವಿಧ್ಯಾರ್ಥಿನಿಯರ ಪೋಷಕರು ತಿರುಗಿ ನೋಡುವಂತೆ ಮಾಡಿದೆ.

ಗಣೇಶ್ ವಿಜ್ಞಾನ ವಿಭಾಗದಲ್ಲಿ ಗಣೇಶ್ 600 ಕ್ಕೆ 580 ಅಂಕಗಳು

ಇದು ಶಿವಮೊಗ್ಗ ಜಿಲ್ಲೆಯಲ್ಲೆ ಹೆಮ್ಮೆಯ ವಿಷಯವಾಗಿದೆ. ದ್ವೀತಿಯ ಪಿಯುಸಿ ಬರೆಯುವ ಕಾಲೇಜಿನ ಪ್ರತಿಯೊಬ್ಬ ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಮುನ್ನ ಪೂರ್ಣತಯಾರಿ ಮಾಡಿ ಧೈರ್ಯದಿಂದ ಪರೀಕ್ಷೆಯನ್ನು ಎದುರಿಸುವಂತೆ ಮಾಡಿದ ಕೀರ್ತಿ ಕಾಲೇಜಿ ಆಡಳಿತ ಮಂಡಳಿಗೆ ಸಲ್ಲುತ್ತದೆ. ಈ ಬಾರಿ ಇದೆ ತಯಾರಿಯೊಂದಿಗೆ ಸಹ್ಯಾದ್ರಿ ಕಾಲೇಜಿನ ಪರೀಕ್ಷೆ ಬರೆದ 76 ವಿದ್ಯಾರ್ಥಿಗಳಲ್ಲಿ 32 ವಿದ್ಯಾರ್ಥಿಗಳು ಅತ್ಯುನ್ನತ-ದರ್ಜೆ, ಹಾಗೂ 44 ವಿದ್ಯಾರ್ಥಿಗಳು ಪ್ರಥಮ ದರ್ಜೆಯನ್ನು ಪಡೆಯುವುದರೊಂದಿಗೆ ತೀರ್ಥಹಳ್ಳಿ ತಾಲ್ಲೂಕಿನಲ್ಲಿಯೇ ಗುಣಾತ್ಮಕ ಫಲಿತಾಂಶವನ್ನು ಪಡೆದಿರುವುದು ಹೆಮ್ಮೆಯ ವಿಷಯವಾಗಿದೆ.

ಕು| ಪ್ರೀತು ಹೆಚ್.ಎಮ್ 600 ಕ್ಕೆ 593 ಅಂಕಗಳು

ಕು| ಪ್ರೀತು ಹೆಚ್.ಎಮ್ 600 ಕ್ಕೆ 593 ಮತ್ತು ಕು॥ ಸಾನಿಯಾ ಎಸ್. 600 ಕ್ಕೆ 589 ಅಂಕಗಳನ್ನು ಪಡೆಯುವ ಮೂಲಕ ಕ್ರಮವಾಗಿ ರಾಜ್ಯಕ್ಕೆ 4ನೇ ಮತ್ತು 8ನೇ
ರ‍್ಯಾಂಕ್‌ಗಳಿಸಿ ಶಿಕ್ಷಣ ಸಂಸ್ಥೆಗೆ ಹೆಮ್ಮೆಯನ್ನು ತಂದಿರುತ್ತಾರೆ.

ಕು॥ ಸಾನಿಯಾ ಎಸ್. 600 ಕ್ಕೆ 589 ಅಂಕಗಳು

ವಿಜ್ಞಾನ ವಿಭಾಗದಲ್ಲಿ ಗಣೇಶ್ 600 ಕ್ಕೆ 580 ಅಂಕಗಳನ್ನು ಪಡೆಯುವ ಮೂಲಕ ಕಾಲೇಜಿನ ಟಾಪರ್ ಆಗಿ ಹೊರಹೊಮ್ಮಿರುತ್ತಾರೆ. ತನ್ಮೂಲಕ ಶಿವಮೊಗ್ಗ ಜಿಲ್ಲೆಗೆ, ತೀರ್ಥಹಳ್ಳಿ ತಾಲ್ಲೂಕಿಗೆ ಹಾಗೂ ಶಿಕ್ಷಣ ಸಂಸ್ಥೆಗೆ ಮತ್ತು ಪೋಷಕರಿಗೆ ಕೀರ್ತಿಯನ್ನು ತಂದಿರುವ ಈ ರಾಜ್ಯ ಮಟ್ಟದ ಸಾಧಕ ವಿದ್ಯಾರ್ಥಿಗಳನ್ನು ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು, ಪದಾಧಿಕಾರಿಗಳು, ನಿರ್ದೇಶಕರು, ಪ್ರಾಂಶುಪಾಲರು, ಉಪನ್ಯಾಸಕರು ಮತ್ತು ಬೋಧಕೇತರ ವರ್ಗದವರು ಹಾರ್ದಿಕವಾಗಿ ಅಭಿನಂದಿಸಿ ಶುಭಹಾರೈಸಿರುತ್ತಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!