ಶಿವಮೊಗ್ಗ; ದ್ವೀತಿಯ ಪಿಯುಸಿ ರ‍್ಯಾಂಕ್ ಪಡೆದವರು,ಶಿಕಾರಿಪುರದ ಕುಮದ್ವತಿ ಪದವಿ ಪೂರ್ವ ಕಾಲೇಜಿನ ವಿಧ್ಯಾರ್ಥಿ ಎಂ ಎಸ್ ಪವನ್ ವಾಣಿಜ್ಯ ವಿಭಾಗದಲ್ಲಿ ಎರಡನೇ ರ‍್ಯಾಂಕ್, ಕಲಾವಿ ಭಾಗದಲ್ಲಿ ಶಿವಮೊಗ್ಗದ ಕೆ.ಸಿ.ಚುಕ್ಕಿ 4ನೇ ರ‍್ಯಾಂಕ್, ವಿಜ್ಞಾನ ವಿಭಾಗದಲ್ಲಿ ಪೇಸ್ ಕಾಲೇಜಿನ ವಿಧ್ಯಾರ್ಥಿ ಸಾತ್ವಿಕ್ ನಾಲ್ಕನೇ ರ‍್ಯಾಂಕ್,
ASHWASURYA/SHIVAMOGGA
✍️ ಸುಧೀರ್ ವಿಧಾತ
ಅಶ್ವಸೂರ್ಯಶಿವಮೊಗ್ಗ: ದ್ವಿತೀಯ ಪಿಯುಸಿ ಪರೀಕ್ಷೆ ಕಲಾ ವಿಭಾಗದಲ್ಲಿ ಇಲ್ಲಿನ ಡಿವಿಎಸ್ ಇಂಡಿಪೆಂಡೆಂಟ್ ಕಾಲೇಜಿನ ವಿದ್ಯಾರ್ಥಿನಿ ಕೆ.ಸಿ.ಚುಕ್ಕಿ 600ಕ್ಕೆ 593 ಅಂಕಗಳಿಸಿ ನಾಲ್ಕನೇ ರ‍್ಯಾಂಕ್ ಪಡೆದಿದ್ದಾರೆ.
ಚುಕ್ಕಿ ಹಿರಿಯ ಪತ್ರಕರ್ತ ಹೊನ್ನಾಳಿ ಚಂದ್ರಶೇಖರ ಹಾಗೂ ವಕೀಲೆ ಪೂರ್ಣಿಮಾ ದಂಪತಿ ಪುತ್ರಿ.
ಚುಕ್ಕಿ ಎಸ್ಸೆಸ್ಸೆಲ್ಸಿಯಲ್ಲಿ 625ಕ್ಕೆ 621 ಅಂಕ ಪಡೆದಿದ್ದು, ದ್ವಿತೀಯ ಪಿಯುಸಿಯಲ್ಲಿ ಕಲಾ ವಿಭಾಗವನ್ನು ಆಯ್ದುಕೊಂಡಿದ್ದರು.
ಮುಂದೆ ಎಲ್‌ಎಲ್‌ಬಿ ಓದಿ, ಯುಪಿಎಸ್‌ಸಿ ಪರೀಕ್ಷೆಗೆ ಸಿದ್ಧತೆ ನಡೆಸುವೆ ಎಂದು ಹೇಳುವ ಚುಕ್ಕಿ ಐಎಎಸ್ ಅಧಿಕಾರಿ ಆಗುವ ಕನಸು ಹೊಂದಿದ್ದಾರೆ.
‘ದಿನಕ್ಕೆ ನಾಲ್ಕು ತಾಸು ಓದುತ್ತಿದ್ದೆ. ರಂಗಕಲೆ, ನೃತ್ಯದಲ್ಲಿ ತೊಡಗಿಕೊಂಡಿರುವುದರಿಂದ ಪರೀಕ್ಷೆಯನ್ನು ಒತ್ತಡ ಮಾಡಿಕೊಳ್ಳದೇ ಸುಲಭವಾಗಿ ತೆಗೆದುಕೊಂಡೆ. ಹೀಗಾಗಿ ರ‍್ಯಾಂಕ್ ಗಳಿಸಲು ಸಾಧ್ಯವಾಯಿತು’ ಎಂದು ಚುಕ್ಕಿ ಪ್ರತಿಕ್ರಿಯಿಸಿದರು.
ಇಂದು ಪ್ರಕಟಗೊಂಡ ದ್ವಿತೀಯ ಪಿಯುಸಿ ಫಲಿತಾಂಶದಲ್ಲಿ ಶಿವಮೊಗ್ಗ ಜಿಲ್ಲೆಯ ಶಿಕಾರಿಪುರ ತಾಲ್ಲೂಕು ಕುಮದ್ವತಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿಯಾದ ಎಂ.ಎಸ್. ಪವನ್ ಅವರು ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ ದ್ವಿತೀಯ ರ‍್ಯಾಂಕ್ ಪಡೆದಿದ್ದಾರೆ.
ವಾಣಿಜ್ಯ ವಿಭಾಗದಲ್ಲಿ ಶಿಕಾರಿಪುರದ ಪವನ್ 596 ಅಂಕ ಗಳಿಸಿದ್ದಾರೆ. ಇವರ ತಂದೆ .ಮಂಜುನಾಥ್ ಕುಮದ್ವತಿ ಬಿ.ಇಡ್ ಕಾಲೇಜಿನಲ್ಲಿ ಸಹಾಯಕ ಗುಮಾಸ್ತರಾಗಿ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ ಅನಿತಾ.ಎಂ.ಎಸ್. ಗೃಹಿಣಿಯಾಗಿದ್ದಾರೆ.
ಇನ್ನೂ ವಿಜ್ಞಾನ ವಿಭಾಗದಲ್ಲಿ ಸಾತ್ವಿಕ್ ಜಿಲ್ಲೆಗೆ ಹೆಮ್ಮೆ ತಂದಿದ್ದಾರೆ. ಪೇಸ್ ಕಾಲೇಜಿನ ವಿದ್ಯಾರ್ಥಿ ಸಾತ್ವಿಕ್ ರಾಜ್ಯಕ್ಕೆ 4 ನೇ ರ‍್ಯಾಂಕ್
ಪಡೆದಿದ್ದು 595 ಅಂಕ ಪಡೆದಿದ್ದಾರೆ. ಇವರು ಯೋಗೇಶ್ ಹಾಗೂ ಅಪರ್ಣಾ ದಂಪತಿಯ ಪುತ್ರರಾಗಿದ್ದಾರೆ.