ಪ್ರಾಮಾಣಿಕವಾಗಿ ಪಕ್ಷ ವಹಿಸಿಕೊಟ್ಟ ಜವಾಬ್ದಾರಿಯನ್ನು ಕಷ್ಟಕಾಲದಲ್ಲೂ ನಿಭಾಯಿಸಿದ್ದೇನೆ ; ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್ ಎಸ್ ಸುಂದರೇಶ್
ASHWASURYA/SHIVAMOGGA
ಸುಧೀರ್ ವಿಧಾತ
ಅಶ್ವಸೂರ್ಯ/ಶಿವಮೊಗ್ಗ; ಐದೂವರೆ ವರ್ಷಗಳ ಕಾಲ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಜಿಲ್ಲಾಧ್ಯಕ್ಷನಾಗಿ ಅದು ಜಿಲ್ಲೆಯಲ್ಲಿ ಕೇವಲ ಓರ್ವ ಶಾಸಕರಿದ್ದಾಗ ಜಿಲ್ಲಾ ಅಧ್ಯಕ್ಷನಾಗಿ ಪಕ್ಷಕ್ಕಾಗಿ ಪಕ್ಷದ ಸಂಘಟನೆಗಾಗಿ ಪ್ರಾಮಾಣಿಕವಾಗಿ ಪಕ್ಷ ವಹಿಸಿಕೊಟ್ಟ ಜವಾಬ್ದಾರಿಯನ್ನು ಕಷ್ಟಕಾಲದಲ್ಲೂ ನಿಭಾಯಿಸಿದ್ದೇನೆ. ಅದರಲ್ಲೂ ಕರೋನಾದಂತಹ ಕೆಟ್ಟ ಕಾಲದಲ್ಲೂ, ಪ್ರವಾಹದ ಸಂದರ್ಭದಲ್ಲೂ ಸ್ವಂತ ಹಣದಿಂದ ಪಕ್ಷಕ್ಕಾಗಿ ಪಕ್ಷ ಸಂಘಟನೆಗೆ ಕಾರ್ಯಕರ್ತರನ್ನು ಜೊತೆಯಲ್ಲಿ ಕೆಲಸ ಮಾಡಿದ್ದೇನೆ.
ಹರ್ಷ ಪ್ರಕರಣ ಸೇರಿದಂತೆ ಬಿಜೆಪಿಯ ಆಡಳಿತ ಸಮಯದಲ್ಲಿ ಸರ್ಕಾರದ ವಿರುದ್ಧ ನಿರಂತರ ಹೋರಾಟಗಳನ್ನು ನನ್ನ ಅವಧಿಯಲ್ಲಿ ಮಾಡಿದ್ದೇನೆ. ನಾನು ಐದು ವರ್ಷ ನಾಲ್ಕು ತಿಂಗಳು ಪಕ್ಷದ ಅಧ್ಯಕ್ಷನಾಗಿ ಕರ್ತವ್ಯ ನಿರ್ವಹಿಸಿದ್ದೇನೆ ಜೋತೆಗೆ ನನಗೆ ಸೂಡ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ವಹಿಸಿದೆ ಈ ಹಿನ್ನಲೆಯಲ್ಲಿ ನಾನೆ ಹೈಕಮಾಂಡ್ ಗೆ ಮನವಿಯನ್ನು ಮಾಡಿ ಹೊಸ ಜಿಲ್ಲಾಧ್ಯಕ್ಷರನ್ನು ನೇಮಿಸುವುದಕ್ಕೆ ಹೇಳಿದ್ದು ನನ್ನ ಮನವಿಯಂತೆ ಬದಲಾವಣೆ ಮಾಡಿದ್ದಾರೆ ಸಂತೋಷವೆ.
ನಾನು ಶಿವಮೊಗ್ಗ ಜಿಲ್ಲಾಧ್ಯಕ್ಷನಾದ ಅವಧಿಯಲ್ಲಿ ಮಾಧ್ಯಮಗಳು ಕೈ ಹಿಡಿದು ಸಹಕರಿಸಿದ್ದಕ್ಕೆ ನನ್ನ ಅನಂತ ಅನಂತ ಧನ್ಯವಾದಗಳು.
ಈಗ ಲೋಕಸಭಾ ಚುನಾವಣೆಯನ್ನು ಎದುರಿಸುತ್ತಿದ್ದೇವೆ ಈಗಾಗಲೇ ಒಂದು ಸುತ್ತಿನ ಪ್ರಚಾರ ಕಾರ್ಯ ಮುಗಿದಿದ್ದು ಎರಡನೇ ಸುತ್ತಿನ ಅಭ್ಯರ್ಥಿ ಪ್ರಚಾರ ನೆಡೆಯುತ್ತಿದೆ. ನಮ್ಮ ಅಭ್ಯರ್ಥಿ ಗೀತಾ ಶಿವರಾಜ್ ಕುಮಾರ್ ಅವರನ್ನು ಗೆಲ್ಲಿಸಲು ಕಾಂಗ್ರೆಸ್ ಪಕ್ಷದ ಪ್ರತಿಯೊಬ್ಬ ನಾಯಕರು ಕಾರ್ಯಕರ್ತರು ಸಾಕಷ್ಟು ಶ್ರಮವಹಿಸಬೇಕಿದೆ. ಈಗಾಗಲೇ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಗೆಲುವಿನ ಕೂಗು ಕೇಳಿಬರುತ್ತಿದೆ. ಕಾಂಗ್ರೆಸ್ ಪಕ್ಷದ ಐದು ಗ್ಯಾರಂಟಿಗಳು ಮನೆಮನೆಗೆ ತಲುಪಿವೆ.
ಮತದಾರರ ಬಳಿ ನಾವು ಕೊಟ್ಟ ಗ್ಯಾರಂಟಿಯನ್ನು ನಮ್ಮ ಸರ್ಕಾರ ಮತದಾರರ ಬಗ್ಗೆ ಕಾಳಜಿ ವಹಿಸಿ ಐದು ಗ್ಯಾರಂಟಿಗಳನ್ನು ಫಲಾನುಭವಿಗಳಿಗೆ ತಲುಪುವಂತೆ ಮಾಡಿ ಇತಿಹಾಸ ನಿರ್ಮಿಸಿದೆ.ರಾಷ್ಟ್ರದ ಪ್ರತಿಯೊಂದು ಆಡಳಿತ ಪಕ್ಷಗಳು ಕರ್ನಾಟಕದ ಸಿದ್ಧರಾಮಯ್ಯ ಮತ್ತು ಡಿ ಕೆ ಶಿವಕುಮಾರ್ ನೆತ್ರುತ್ವದ ಕಾಂಗ್ರೆಸ್ ಪಕ್ಷದ ಆಡಳಿತವನ್ನು ಹುಬ್ಬೆರಿಸಿ ನೋಡುವಂತೆ ಮಾಡಿದ್ದಾರೆ. ಗ್ಯಾರಂಟಿ ಕಾರ್ಡ್ ಗಳನ್ನು ಮನೆ ಮನೆಗೆ ತಲುಪಿಸಿದ್ದೇವೆ. ಈಗ ಲೋಕಸಭಾ ಚುನಾವಣೆಯಲ್ಲಿ ಕೇಂದ್ರದ ಕಾಂಗ್ರೆಸ್ ಪಕ್ಷವು ನಾವು ಗೆದ್ದು ಗದ್ದುಗೆ ಏರಿದರೆ ಜಾರಿಗೆ ತರುತ್ತೇವೆ ಎಂದು ಹೇಳಿರುವ ಗ್ಯಾರಂಟಿಗಳನ್ನು ಮನೆಮನೆಗೆ ತಲುಪಿಸುವ ಕೆಲಸ ಪ್ರತಿಯೊಬ್ಬ ಕಾರ್ಯಕರ್ತರ ಜೋತೆಗೆ ಮಾಡ್ತೇವೆ.
ಈ ಚುನಾವಣೆಯಲ್ಲಿ 25 ಗ್ಯಾರಂಟಿಗಳನ್ನು ಕೇಂದ್ರದ ಹೈ ಕಮಾಂಡ್ ಪ್ರಣಾಳಿಕೆಯಲ್ಲಿ ಘೋಷಿಸಿದೆ. ಮಹಿಳೆ, ಉನ್ನತ ಶಿಕ್ಷಣ, ಆರೋಗ್ಯ ವಿಮೆ, ರೈತರಿಗೆ ಕಾನೂನು ಖಾತ್ರಿ, ಬೆಂಬಲ ಬೆಲೆ, ಜಿಎಸ್ ಟಿ ಎಲ್ಲದಕ್ಕೂ ಹಾಕಲಾಗಿದ್ದು, ಅದನ್ನು ಸಂಪೂರ್ಣ ಬದಲಾವಣೆಯ ಜೋತೆಗೆ ಆದಾಯ ತೆರಿಗೆ ಭರವಸೆ, ಅಂಗನವಾಡಿ, ಪಿಂಚಣಿ ದಾರರಿಗೆ ಹೆಚ್ಚಳದ ಹಣ, ದೌರ್ಜನ್ಯಗಳ ವಿರುದ್ಧ ಆಯೋಗ ರಚನೆ, ಭೋಗಸ್ ಕಂಪನಿಗಳ ವಿರುದ್ಧ ತನಿಖೆ, ಪಿಎಂ ಕೇರ್ ಲೆಕ್ಕಪತ್ರ ತನಿಖೆ, ನೋಟ್ ಅಮಾನ್ಯೀಕರಣದ ವಿರುದ್ಧ, ಪೆಗಾಸಿಸ್ ಸೇರಿದಂತೆ ಹಲವು ಹಗರಣಗಳ ವಿರುದ್ಧ ತನಿಖೆ, ನಗರ ಪ್ರದೇಶದ ನಿರುದ್ಯೋಗಿಗಳಿಗೆ ಉದ್ಯೋಗ ಭರವಸೆ…
25 ಗ್ಯಾರಂಟಿಗಳನ್ನು ಮನೆ ಮನೆಗೆ ತಲುಪಿಸಿ ನಮ್ಮ ಅಭ್ಯರ್ಥಿಯ ಪರವಾಗಿ ಮತ ಯಾಚಿಸಲಾಗುವುದು. ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಸಹಿ ಹಾಕಿದ ಗ್ಯಾರಂಟಿಗಳನ್ನು ವಿತರಿಸಲಾಗುವುದು.
ರಾಜ್ಯದ ಗ್ಯಾರಂಟಿಗಳಿಂದ ಹೆಣ್ಣುಮಕ್ಕಳು ಎಲ್ಲಾ ಪವಿತ್ರವಾದ ದೇವಸ್ಥಾನಗಳನ್ನು ದರ್ಶನ ಮಾಡುವಂತಾಯಿತು.ಗೃಹಲಕ್ಷ್ಮೀ ಹಣದಿಂದ ಸಾಕಷ್ಟು ಹೆಣ್ಣು ಮಕ್ಕಳಿಗೆ ಅನುಕ್ರಮವಾಗಿದೆ.ಈ ಬಾರಿ ಮೋದಿ ಅಲೆ ಎಲ್ಲಿಯೂ ಇಲ್ಲ. ಬಿಜೆಪಿಯದು ಎಲ್ಲವೂ ಸುಳ್ಳು. ಜನರ ಮೇಲೆ ಲಕ್ಷಾಂತರ ರೂ ಸಾಲ ಹೊರಿಸಲಾಗಿದೆ.
ದಿವಂಗತ ಮಾಜಿ ಮುಖ್ಯಮಂತ್ರಿ ಬಂಗಾರಪ್ಪರ ತಮ್ಮ ಅಧಿಕಾದ ಅವಧಿಯಲ್ಲಿ ಜಾರಿಗೆ ತಂದಿರುವ ಕೆಲಸಗಳನ್ನು, ಮಧು ಬಂಗಾರಪ್ಪರ ಪ್ರಯತ್ನಗಳ ಮೂಲಕ ಗೀತಾ ಶಿವರಾಜ್ ಕುಮಾರ್ ಗೆಲ್ಲಿಸುವುದು ಖಚಿತ.
ಬರಗಾಲದ ಹಣ ಕೇಳುವ ಯೋಗ್ಯತೆ ಈಗಿನ ಸಂಸದರಿಗಿಲ್ಲ. ರಾಘವೇಂದ್ರ ಎರಡು ಲಕ್ಷ ಲೀಡ್ ಅಂತಿದಾರೆ, ಈಶ್ವರಪ್ಪ ಮೂರು ಲಕ್ಷ ಲೀಡ್ ಅಂತಾರೆ. ಆದರೆ, ಗೀತಾ ಶಿವರಾಜ್ ಕುಮಾರ್ ಅತ್ಯಂತ ಅಧಿಕ ಮತಗಳ ಅಂತರದಿಂದ ಗೆಲುವು ಸಾಧಿಸಲಿದ್ದಾರೆ.ಗೆಲುವು ಖಚಿತ
ಈ ಪತ್ರಿಕಾಗೋಷ್ಠಿಯಲ್ಲಿ
ಕಾಂಗ್ರೆಸ್ ವಕ್ತಾರರಾದ ಆಯನೂರು ಮಂಜುನಾಥ್, ಗ್ಯಾರಂಟಿ ಯೋಜನೆಗಳ ಜಿಲ್ಲಾಧ್ಯಕ್ಷ ಚಂದ್ರಭೂಪಾಲ, ಉತ್ತರ ಬ್ಲಾಕ್ ಅಧ್ಯಕ್ಷ ಶಿವಕುಮಾರ್, ದಕ್ಷಿಣ ಬ್ಲಾಕ್ ಅಧ್ಯಕ್ಷ ಕಲೀಂ ಪಾಷ, ಶಾಂತವೀರನಾಯ್ಕ, ಮಧು, ರಮೇಶ್ ಶಂಕರಘಟ್ಟ, ಇಕ್ಕೇರಿ ರಮೇಶ್ ಸೇರಿದಂತೆ ಹಲವರು ಉಪಸ್ಥಿತರಿದ್ದರು