ಚುನಾವಣೆ ಮಾಡಿ ಅದು ಬಿಟ್ಟು ಬಿಎಸ್‌ವೈ ಕುಟುಂಬದ ತೇಜೋವಧೆ ಮಾಡುವುದು ಸರಿಯಲ್ಲ.!

ಶಿವಮೊಗ್ಗ ಕ್ಷೇತ್ರದ ಬಿಜೆಪಿ ಪಕ್ಷದ ಅಭ್ಯರ್ಥಿ ಬಿ ವೈ ರಾಘವೇಂದ್ರ

ಚುನಾವಣೆ ಮಾಡಿ ಅದು ಬಿಟ್ಟು ಬಿಎಸ್‌ವೈ ಕುಟುಂಬದ ತೇಜೋವಧೆ ಮಾಡುವುದು ಸರಿಯಲ್ಲ.!

ASHWASURYA/SHIVAMOGGA

SUDHIR VIDHATA

ಅಶ್ವಸೂರ್ಯ/ಶಿವಮೊಗ್ಗ: ಈ ಬಾರಿ ಚುನಾವಣೆ ನಡೆಯುತ್ತಿ ರುವುದು ಅಭಿವೃದ್ಧಿ ವರ್ಸಸ್‌ ಧಿಕಾರಕ್ಕಾಗಿ. ವೈಯಕ್ತಿಕವಾಗಿ ನಾಯಕರನ್ನು ನಿಂದಿಸುವ ಕೆಲಸ ಆಗುತ್ತಿದೆ.ಈ ಚುನಾವಣೆಯಲ್ಲಿ ಎಲ್ಲದಕ್ಕೂ ನಮ್ಮ ವಿರೋಧಿಗಳಿಗೂ ಉತ್ತರ ಕೊಡುತ್ತೇವೆ ಎಂದು ಬಿಜೆಪಿ ಅಭ್ಯರ್ಥಿ ಬಿ.ವೈ. ರಾಘವೇಂದ್ರ ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಯಡಿಯೂರಪ್ಪ ಕುಟುಂಬವನ್ನು ಗುರಿಯಾಗಿ ಇಟ್ಟುಕೊಂಡು ತಮ್ಮ ಮನಸ್ಸಿಗೆ ಬಂದಹಾಗೆ ಮಾತನಾಡಿತ್ತಿರುವುದು ನಮಗೆನು ಹೊಸದಲ್ಲ. ಶರಾವತಿ ಸಂತ್ರಸ್ತರ ಸಮಸ್ಯೆ ಕಾಂಗ್ರೆಸ್ಸಿನ ಪಾಪದ ಕೂಸು. ಕಾಂಗ್ರೆಸ್‌ ತಾವು ಮಾಡಿದ ಪಾಪದ ಕೆಲಸವನ್ನು ತಾವೇ ತೋಳೆದು ಪವಿತ್ರರಾಗಬೇಕು ಬಿಜೆಪಿಯ ಜಿಲ್ಲಾ ಮುಖಂಡರು ಎಲ್ಲರೂ ಸೇರಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇವೆ. ಈ ಚುನಾವಣೆ ಮುಗಿದ ನಂತರ ಶರಾವತಿ ಸಂತ್ರಸ್ತರಿಗೆ ನ್ಯಾಯ ಕೊಡಿಸುವ ಕೆಲಸ ಖಂಡಿತ ಮಾಡುತ್ತೇನೆ ಎಂದರು. ವಿಐಎಸ್‌ಎಲ್‌ ಕಾರ್ಖಾನೆಯನ್ನು ಶಾಶ್ವತವಾಗಿ ಬಾಗಿಲು ಹಾಕಲು ಬಿಟ್ಟಿಲ್ಲ. ಪ್ರತಿಷ್ಠಿತ ಎಂಪಿಎಂ ಕಾರ್ಖಾನೆಗೆ ಕೊನೆ ಮೊಳೆ ಹೊಡೆದಿದ್ದು ಕಾಂಗ್ರೆಸ್‌ ಪಕ್ಷ ,ಈ ವಿಚಾರದಲ್ಲಿ ಕಾಂಗ್ರೆಸ್‌ನವರಿಗೆ ನಾಚಿಕೆ ಆಗಬೇಕು ಎಂದರು.

ಶಾಹಿ ಗಾರ್ಮೆಂಟ್ಸ್‌ ನೀಡಿದ ಜಮೀನಿಗೆ ಸಂಬಂಧಿಸಿದಂತೆ ಬೇಳೂರು ಗೋಪಾಲಕೃಷ್ಣ ಅವರು ತನಿಖೆ ಮಾಡುವಂತೆ ಒತ್ತಾಯಿಸಿದ್ದಾರಲ್ಲ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ಯಾವುದನ್ನು ಬೇಕಾದರೂ ತನಿಖೆ ಮಾಡಿಕೊಳ್ಳಲಿ. ಬೇಡ ಎಂದರೂ ಯಾವುದೇ ತನಿಖೆಗೆ ನಾನು ಸಿದ್ಧ ಎಂದರು.
ಉದ್ಯಮಿಗಳು ಬರುವುದು ಅವರಿಗೆ ಇಷ್ಟ ಇಲ್ಲ, ವಿಮಾನ ನಿಲ್ದಾಣದ ಬಗ್ಗೆಯೂ ತನಿಖೆ ಮಾಡಿಸುತ್ತೇವೆ ಎಂದಿದ್ದಾರೆ. ಒಳ್ಳೆಯ ವಿಮಾನ ನಿಲ್ದಾಣವಾಗಬೇಕಾದರೆ ಹೆಚ್ಚು ಜಾಗ ಬೇಕಾಗುತ್ತದೆ. ಮುಂದಿನ 50 ವರ್ಷವನ್ನು ಗಮನದಲ್ಲಿಟ್ಟುಕೊಂಡು ಅಭಿವೃದ್ಧಿ ಮಾಡುತ್ತೇವೆ. ಹಾಗೆಯೇ ಕಳೆದ 10 ವರ್ಷಗಳಲ್ಲಿ ಅಡಕೆಯ ಬೆಲೆ ಕಡಿಮೆಯಾಗದಂತೆ ನೋಡಿಕೊಂಡಿದ್ದೇವೆ ಎಂದರು. ಗೋಷ್ಠಿಯಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷ ಟಿ.ಡಿ.ಮೇಘರಾಜ್‌, ಶಾಸಕರಾದ ಎಸ್‌.ಎನ್‌. ಚನ್ನಬಸಪ್ಪ, ಡಿ.ಎಸ್‌. ಅರುಣ್‌, ಎಸ್‌.ರುದ್ರೇಗೌಡ, ಪ್ರಮುಖರಾದ ಆರ್‌.ಕೆ. ಸಿದ್ದರಾಮಣ್ಣ, ಜ್ಞಾನೇಶ್ವರ್‌, ಮೋಹನ್‌ ರೆಡ್ಡಿ, ಮಾಲತೇಶ್‌, ನಾಗರಾಜ್‌ ಪ್ರಭು, ಅಣ್ಣಪ್ಪ ಮುಂತಾದವರು ಉಪಸ್ಥಿತಿತರಿದ್ದರು.

Leave a Reply

Your email address will not be published. Required fields are marked *

Optimized by Optimole
error: Content is protected !!