ಗುಡುಗಿದ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ,ಈ ಬಾರಿ ಗೆಲುವು ಗೀತಾ ಶಿವರಾಜಕುಮಾರ್ ಅವರದೇ

ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ

ಗುಡುಗಿದ ಸಾಗರ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ,ಈ ಬಾರಿ ಗೆಲುವು ಗೀತಾ ಶಿವರಾಜಕುಮಾರ್ ಅವರದೇ

ASHWASURYA/SHIVAMOGGA

✍️ ಸುಧೀರ್ ವಿಧಾತ

ಅಶ್ವಸೂರ್ಯ/ಶಿವಮೊಗ್ಗ, ಏ,05; ಶಿವಮೊಗ್ಗದ ಶಾಹಿ ಗಾರ್ಮೆಂಟ್ಸ್ ಕಾರ್ಖಾನೆಗೆ ಕಾನೂನುಬಾಹಿರವಾಗಿ ನೀಡಿರುವ 240 ಎಕರೆ ಜಮೀನಿನನಲ್ಲಿ 230 ಎಕರೆ ಜಮೀನನ್ನು ಕೂಡಲೇ ವಾಪಸ್ ಪಡೆಯಬೇಕು…ಇಲ್ಲದಿದ್ದರೆ ಉಗ್ರ ಹೋರಾಟ ಮಾಡಿ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡುವೆ ಎಂದು ಸಾಗರ ವಿಧಾನಸಭಾ ಕ್ಷೇತ್ರದ ಶಾಸಕ ಬೇಳೂರು ಗೋಪಾಲಕೃಷ್ಣ ಗುಡುಗಿದರು…

ನಮ್ಮ ಪಕ್ಷದ ಲೋಕಸಭಾ ಅಭ್ಯರ್ಥಿ ಗೀತಾ ಶಿವರಾಜಕುಮಾರ್ ಈ ಬಾರಿಯ ಚುನಾವಣೆಯಲ್ಲಿ ಅತ್ಯಧಿಕ ಮತಗಳ ಅಂತರದಲ್ಲಿ ಗೆದ್ದೇ ಗೆಲ್ತಾರೆ,ಎಲ್ಲಾ ವಾತಾವರಣ ನಮ್ಮ ಪರವಾಗಿದೆ ನಮ್ಮ ಯಶಸ್ವಯಾದ ಐದು ಗ್ಯಾರಂಟಿಗಳು ನಮ್ಮ ಶಕ್ತಿ ಯಾಗಿದೆ ರಾಮೇಶ್ವರಂ ಕೆಫೆಗೆ ಬಾಂಬಿಟ್ಟವರು ಯಾರೇ ಇರಲಿ ಅಂತರವನ್ನು ಗುಂಡಿಟ್ಟು ಕೊಲ್ಲಬೇಕು.!? ಜಾತಿ,ಪಕ್ಷ ನೋಡಲೇ ಬೇಡಿ- ಗುಂಡಿಡಿ…!

ಈ ಬಾರಿಯ ಚುನಾವಣೆ ಜಿದ್ದಾಜಿದ್ದಿನ ಚುನಾವಣೆಯಾಗಿದೆ. ನೂರಕ್ಕೆ ನೂರು ಗೀತಾ ಶಿವರಾಜಕುಮಾರ್ ಗೆಲ್ಲೋದು ಖಚಿತ.
ಕೆಜೆಪಿಗೆ ಹೋಗಿಲ್ಲ ಎಂಬ ಒಂದೇ ಕಾರಣಕ್ಕೆ ಈಶ್ವರಪ್ಪರನ್ನು ದೂರ ಇಡಲಾಗಿದೆ. ಹಿಂದುತ್ವದ ಬಿಜೆಪಿ ಕಟ್ಟಾ ಅಭಿಮಾನಿ ಈಶ್ವರಪ್ಪ ಈಗ ಅಪ್ಪ ಮಕ್ಕಳಿಂದ ಮಾತೃ ಪಕ್ಷದಿಂದ ದೂರ ಉಳಿಯುವಂತಾಗಿದೆ.
ಮಧು ಬಂಗಾರಪ್ಪ ನೇತೃತ್ವದಲ್ಲಿ ಚುನಾವಣೆ ನಡೆಯುತ್ತಿದೆ. ಬೈಂದೂರಿನಲ್ಲೂ ಅತ್ಯಂತ ಹೆಚ್ಚಿನ ಬೆಂಬಲ ನಮ್ಮ ಪಕ್ಷಕ್ಕೆ ಪಕ್ಷದ ಅಭ್ಯರ್ಥಿಗೆ ಸಿಕ್ಕಿದೆ. ಹಿಂದೆ ಬೈಂದೂರು ಕ್ಷೇತ್ರದಲ್ಲಿ ರಾಘವೇಂದ್ರ 75 ಸಾವಿರ ಮತಗಳ ಲೀಡ್ ಪಡೆದಿದ್ದರು. ಈಗ ಕಾಂಗ್ರೆಸ್ ಅದಕ್ಕಿಂತ ಹೆಚ್ಚಿಗೆ ಲೀಡ್ ಪಡೆಯಲಿದೆ ಎಂದರು.
ಅಧಿಕಾರದ ಅವಧಿಯಲ್ಲಿ ಅಪ್ಪ ಮಕ್ಕಳು ಆಸ್ತಿ ಮಾಡಿದ್ದೇ ಸಾಧನೆ. 18 ವರ್ಷವಾದರೂ ಹೈವೇ ಸಂಪೂರ್ಣ ಆಗಿಲ್ಲ‌. ತಮ್ಮ ಮಾಲೀಕತ್ವದ ಕಾಲೇಜಿಗೆ ಬಂದು ಹೋಗಲಷ್ಟೇ ಹೈವೇ ಮಾಡಿಸಿಕೊಂಡಿದ್ದಾರೆ. ಬಸ್ ನಿಲ್ದಾಣಗಳ ನಿರ್ಮಾಣ ಬಿಟ್ಟರೆ ಮತ್ತೇನಾಗಿದೆ. ವಿಮಾನ ನಿಲ್ದಾಣ ನಿರ್ಮಾಣ ಮಾಡಿದ್ದು ಬಿಟ್ಟರೆ ಅದರ ಅಕ್ಕಪಕ್ಕದಲ್ಲೇ ಬೇನಾಮಿ ಆಸ್ತಿ ಮಾಡಿದ್ದಾರೆ.
ಸಾಯಿ ಗಾರ್ಮೆಂಟ್ಸ್ ಗೆ 240 ಎಕರೆ ಜಾಗ ನೀಡುವಲ್ಲಿ ಸಂಸದರ ಕೈವಾಡವಿದೆ. ಬೇನಾಮಿ ಶಂಕೆ ಇಲ್ಲೂ ಇದೆ.


ಬಂಗಾರಪ್ಪ ಕೊಟ್ಟ ಯೋಜನೆಗಳನ್ನು ಮುಂದಿಟ್ಟುಕೊಂಡು ನಾವೂ ಮತ ಕೇಳುತ್ತಿದ್ದೇವೆ. ಈ ಗೆಲುವಿನ ಜೋತೆಗೆ ಅತ್ಯಧಿಕ ಮತಗಳ ಅಂತರದಿಂದ ಗೆಲುವು ನಮ್ಮದೇ.
ಜೂನ್ 4 ರಿಂದ ಕುಟುಂಬ ರಾಜಕಾರಣವನ್ನು ಕೊನೆಗೊಳಿಸುತ್ತೇವೆ ಅಂತ ಬಿಜೆಪಿಯ ಶಾಸಕ ಯತ್ನಾಳ್ ಹೇಳಿದ್ದಾರೆ. ಈಶ್ವರಪ್ಪ ಕೂಡ ಅದನ್ನೆ ಹೇಳುತ್ತಿದ್ದಾರೆ. ಅಂದರೆ ರಾಘವೇಂದ್ರ ಸೇರಿದಂತೆ ಯಾರೂ ಬಿಜೆಪಿಯಿಂದ ಗೆಲ್ಲೋದಿಲ್ಲ.
ಕಾಂಗ್ರೆಸ್ ಅಧಿಕಾರದಲ್ಲಿದೆ.ನಮ್ಮ ಅಭ್ಯರ್ಥಿ ಗೆಲ್ಲೋದು ಖಚಿತ.ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮೇಲುಗೈ ಸಾಧಿಸುವ ವಾತಾವರಣವಿದೆ. ಮೋದಿ, ಶಾ ಹಿಂದಿನ ಚುನಾವಣೆಯಲ್ಲೂ ಬಂದಿದ್ರು. ಬಂದ ಕಡೆ ಗೆದ್ದಿಲ್ಲ. ಈಗಲೂ ಗೆಲ್ಲೋಲ್ಲ.
ಏತ ನೀರಾವರಿ ಕಾಂಗ್ರೆಸ್ ನೀಡಿದ್ದು. ಸಂಸದರು ಸುಳ್ಳು ಹೇಳ್ತಿದ್ದಾರೆ. ಶಿಕಾರಿಪುರ ಬಿಟ್ಟರೆ ಮತ್ಯಾವ ತಾಲ್ಲೂಕಿನಲ್ಲೂ ಸಾಧನೆ ಆಗಿಲ್ಲ. ಬಸ್ ನಿಲ್ದಾಣಗಳ ಸೃಷ್ಟಿ ಅಷ್ಟೇ. ಅದಕ್ಕೆ ಅವರು ಬಸ್ ಸ್ಟ್ಯಾಂಡ್ ರಾಘು.
ಕಲ್ಲು ಎಸೆದ ಕಡೆ ಯಡಿಯೂರಪ್ಪನವರ ಆಸ್ತಿ ಇದೆ. ಇಡಿ , ಐಟಿ ಕಣ್ಮುಚ್ಚಿ ಕುಳಿತಿದೆ. ಚುನಾವಣಾ ಬಾಂಡ್ ಹೆಸರಲ್ಲಿ ಗೋಮಾಂಸ ಮಾರಾಟಗಾರರಿಂದಲೂ ಹಣ ಪಡೆದಿದ್ದಾರಂತೆ.?
ಸಂಸತ್ ನಲ್ಲಿ ಧ್ವನಿ ಎತ್ತಲೇ ಇಲ್ಲ ನಮ್ಮ ಕ್ಷೇತ್ರದ ಸಂಸದರು. ಪ್ರವಾಹ, ಬರ ಪರಿಹಾರದಲ್ಲಿ ಹಣ ಕೊಡಿಸಲಿಲ್ಲ. ಶರಾವತಿ ಮುಳುಗಡೆ ಸಂತ್ರಸ್ತರ ಮೇಲೆ ಚಪ್ಪಡಿ ಎಳೆದಿದ್ದಾರೆ ಸಂಸದರು, ಬಿಜೆಪಿ ಶಾಸಕರು.
ಕೋಟಾ ಶ್ರೀನಿವಾಸ ಪೂಜಾರಿ ಬಳಿ 62 ಕೋಟಿ ಮೌಲ್ಯದ ಆಸ್ತಿ ಇದೆ. ಅಂತವರು ಗಂಜಿ ಕುಡಿದು ರಾಜಕಾರಣ ಮಾಡ್ತಾರಾ?
ಸ್ವಾಭಿಮಾನ ಎಂದು ಗೆದ್ದಿದ್ರು. ಈಗ ಅದನ್ನೇ ಬಿಟ್ಟು ತಮ್ಮ ರಾಜಕೀಯ ಜೀವನ ಹಾಳು ಮಾಡಿಕೊಂಡ್ರು…

ನನ್ನ ಕ್ಷೇತ್ರ ಸಾಗರದಲ್ಲಿ ಹೈ ಲೀಡ್ ಪಡೆಯುತ್ತೇವೆ ಒಳ್ಳೇ ಹವಾ ಇದೆ. ಗೀತಾ ಶಿವರಾಜಕುಮಾರ್ ಮನೆ ಇಲ್ಲೇ ಇದೆ. ಗೀತಕ್ಕನ ಮನೆಯೂ ಶಿವಮೊಗ್ಗದಲ್ಲೇ ಇದೆ. ಆ ಹರತಾಳು ಹಾಲಪ್ಪನಿಗೆ ನಾಯಿಗಿರೋ ನಿಯತ್ತೂ ಇಲ್ಲ. ಬಂಗಾರಪ್ಪನವರ ಮನೆಯಲ್ಲಿ ದೊಡ್ಡ ನಾಯಿ ಇದ್ರೂ ಹೋಗ್ತಿದ್ದ…ಯಾರ ಮನೆ ಬೆಂಗಳೂರಿನಲ್ಲಿಲ್ಲ…ಎಲ್ಲರ ಮನೆಯು ಇದೆ…
ಇವತ್ತಿನ ಸಮೀಕ್ಷೆ ಪ್ರಕಾರ ನಮ್ಮ ಕಾಂಗ್ರೆಸ್ ಪಕ್ಷ 20 ಕ್ಷೇತ್ರಗಳಿಗಿಂತಲು ಹೇಚ್ಚಿಗೆ ಸ್ಥಾನ ಗೆಲ್ತೀವಿ.ಈಗ ಕರ್ನಾಟಕದಲ್ಲಿ ಮೋದಿ- ಶಾ ಅಲೆ ಇಲ್ಲವೇ ಇಲ್ಲ …
ಶಾಹಿ ಗಾರ್ಮೆಂಟ್ಸ್ ಕಾರ್ಖಾನೆಗೆ 240 ಎಕರೆ ಜಾಗ ನೀಡಿರುವ ಬಹುದೊಡ್ಡ ಹಗರಣ ಬಯಲಾಗಬೇಕು. ಇದರ ಹಿಂದೆ ಪ್ರಭಾವಿಗಳಿದ್ದಾರೆ. ಕೂಡಲೇ 10 ಎಕರೆ ಜಾಗವಷ್ಟೇ ಕೊಟ್ಟು ಉಳಿದ 230 ಎಕರೆ ಜಾಗವನ್ನು ಸರ್ಕಾರ ವಾಪಸ್ ಪಡೆಯಬೇಕು. ಇದಕ್ಕಾಗಿ ಒತ್ತಾಯಿಸಿ ತೀವ್ರ ಹೋರಾಟ ಮಾಡುತ್ತೇನೆ ನಾನು ಇಲ್ಲದಿದ್ದರೆ ಶಾಸಕ ಸ್ಥಾನಕ್ಕೆ ರಾಜಿನಾಮೆ ಕೊಡುವುದು ಖಂಡಿತ ಎಂದರು….
ಬೆಂಗಳೂರಿನ ರಾಮೇಶ್ವರ ಕೆಫೆ ಬಾಂಬ್ ಪ್ರಕರಣದಲ್ಲಿ ಯಾರೇ ಇದ್ದರೂ ಕೂಡಲೇ ಅವರನ್ನು ಗುಂಡು ಹೊಡೆಯಬೇಕು. ಅವರು ಮುಸ್ಲೀಮರೇ ಇರಲಿ, ಹಿಂದೂಗಳೇ ಇರಲಿ, ಕ್ರಿಸ್ತರೇ ಇರಲಿ…ಬಾಂಬ್ ಹಾಕುವ ಪಾಪಿಷ್ಠರನ್ನು ಗುಂಡು ಹೊಡೆದೇ ಬಿಡಬೇಕು ಎಂದು ಇಂದು ಶಿವಮೊಗ್ಗ ನಗರದ ಕಾಂಗ್ರೆಸ್ ಭವನದಲ್ಲಿ ನೆಡೆದ ಪತ್ರಿಕಾ ಗೋಷ್ಠಿಯಲ್ಲಿ ಬೇಳೂರು ಗೋಪಾಲಕೃಷ್ಣ ಗುಡುಗಿದರು…

Leave a Reply

Your email address will not be published. Required fields are marked *

Optimized by Optimole
error: Content is protected !!