ಕೇಂದ್ರ ಗೃಹ ಸಚಿವ ಅಮಿತ್ ಶಾ
ಈಶ್ವರಪ್ಪನವರ ಬಹಿರಂಗ ಮಾತುಗಳಿಗೆ ಗರಂ ಆಗಿರೋ ಅಮಿತ್ ಶಾ.!!
ASHWASURYA/SHIVAMOGGA
✍️ ಸುಧೀರ್ ವಿಧಾತ
ಅಶ್ವಸೂರ್ಯ/ಶಿವಮೊಗ್ಗ; ಕಣದಿಂದ ಹಿಂದಕ್ಕೆ ಸರಿಯುವುದಿಲ್ಲ ಸರಿಯ ಬೇಕೆಂದರೆ ಬಿಜೆಪಿಯ ರಾಜ್ಯಾಧ್ಯಕ್ಷರನ್ನು ಬದಲಾಯಿಸಬೇಕು ಎಂಬ ಹೇಳಿಕೆಗೆ ಅಮಿತ್ ಶಾ ಸಿಟ್ಟಾದ್ರಾ .?
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಕಳೆದೇರಡು ದಿನಗಳ ಹಿಂದೆ ಬೆಂಗಳೂರಿಗೆ ಬಂದಾಗ ಬಿಜೆಪಿ ನಾಯಕ ಕೆ.ಎಸ್. ಈಶ್ವರಪ್ಪ ಅವರನ್ನು ದೆಹಲಿಗೆ ಬುಧವಾರ ಬರುವಂತೆ ಹೇಳಿದ್ದರು. ಈಶ್ವರಪ್ಪ ಖುಷಿಯಿಂದಲೆ ಶಾ ಬೇಟಿಗಾಗಿ ದೆಹಲಿ ವಿಮಾನ ಏರಿ ಹೋಗಿದ್ದರು.!ಆದರೆ ದೆಹಲಿ ತಲುಪಿದ ಈಶ್ವರಪ್ಪ ನವರಿಗೆ ಅಮಿತ್ ಶಾ ಭೇಟಿಗೆ ಅವಕಾಶವನ್ನೇ ಕೊಡದೇ ವಾಪಸ್ ಕಳುಹಿಸಿದ್ದಾರೆ.! ಕರೆದು ಈಶ್ವರಪ್ಪ ನವರನ್ನು ಮಾತನಾಡಿಸದೆ ವಾಪಸು ಕಳುಹಿಸಲು ಏನು ಕಾರಣ.? ಎಂಬ ಚರ್ಚೆ ಬಿಜೆಪಿಯಲ್ಲಿ ಗುಸು ಗುಸು ಚರ್ಚೆ ನಡೆದಿದೆ.
ಶಾ ದೆಹಲಿಗೆ ಬರುವಂತೆ ತಿಳಿಸಿದ ಬೆನ್ನಿಗೆ ಅಂದು ರಾತ್ರಿ 8ಗಂಟೆ ಸುಮಾರಿಗೆ ಈಶ್ವರಪ್ಪ ದೆಹಲಿ ತಲುಪಿ ಅಮಿತ್ ಶಾ ಮನೆಗೆ ಕರೆ ಮಾಡಿದ್ದರಂತೆ. ಆದರೆ ಅ ಕಡೆಯಿಂದ ಭೇಟಿಯ ಅಗತ್ಯವಿಲ್ಲ ಎಂದು ಸಂದೇಶ ಬಂದಿದ್ದರಿಂದ ಮನದಾಳದಲ್ಲಿ ನೋವಿದ್ದರು ತೋರ್ಪಡಿಸಿಕೊಳ್ಳದೆ ಈಶ್ವರಪ್ಪ ವಾಪಸ್ ಆಗಿದ್ದರು.
ಶಾ ಅವರ ಬೇಸರ ಮತ್ತು ಕೋಪಕ್ಕೆ ಮುಖ್ಯ ಕಾರಣ ತಾವು ದೆಹಲಿಗೆ ಬಂದು ಭೇಟಿ ಮಾಡಲು ತಿಳಿಸಿದ ವಿಚಾರವನ್ನು ಮರುಕ್ಷಣವೇ ಪತ್ರಿಕಾಗೋಷ್ಠಿ ನಡೆಸಿ ಬಹಿರಂಗ ಮಾಡಿದ್ದು ಅಲ್ಲದೇ, ಯಾವುದೇ ಕಾರಣಕ್ಕೂ ಕಣದಿಂದ ಹಿಂದಕ್ಕೆ ಸರಿಯುವುದಿಲ್ಲ ಎಂಬ ಹೇಳಿಕೆ ನೀಡಿದ್ದು ಎಂದು ಬಿಜೆಪಿ ಮೂಲಗಳು ತಿಳಿಸಿವೆ.
‘ಯಡಿಯೂರಪ್ಪ ಕುಟುಂಬದ ವಿರುದ್ಧ ಹೋರಾಟ ಮಾಡುತ್ತಿದ್ದು ಇದಕ್ಕೆ ಮೋದಿ ಮತ್ತು ಶಾ ಅವರ ಬೆಂಬಲ ಸಿಗಲಿದೆ. ಬಿ.ವೈ.ವಿಜಯೇಂದ್ರ ಅವರನ್ನು ಅಧ್ಯಕ್ಷ ಸ್ಥಾನದಿಂದ ಇಳಿಸಬೇಕು ಎಂದೂ ಈಶ್ವರಪ್ಪ ಹೇಳಿದ್ದರು. ಈಶ್ವರಪ್ಪ ಅವರನ್ನು ದೆಹಲಿಗೆ ಕರೆಸಿ ಮಾತನಾಡಿ ಸಮಸ್ಯೆ ಇತ್ಯರ್ಥ ಮಾಡಲು ಅಮಿತ್ ಶಾ ಬಯಸಿದ್ದರು. ಆದರೆ, ತಾವು ವಿಶ್ವಾಸದಿಂದ ನೀಡಿದ ಆಹ್ವಾನವನ್ನು ಅತ್ಯಂತ ಲಘುವಾಗಿ ಪರಿಗಣಿಸಿ ಹೇಳಿಕೆ ನೀಡಿದ್ದಾರೆ. ಇದು ಸರಿಯಲ್ಲ, ಇನ್ನೆಂದಿಗೂ ಅವರನ್ನು ಭೇಟಿ ಮಾಡುವುದಿಲ್ಲ’ ಎಂದು ಹೇಳಿದ್ದಾಗಿ ಮೂಲಗಳು ತಿಳಿಸಿವೆ
ದೆಹಲಿಯಿಂದ ವಾಪಸಾದ ಈಶ್ವರಪ್ಪ ಅವರು,‘ಅಮಿತ್ ಶಾ ಅವರು ಸಿಗುವುದಿಲ್ಲ ಎಂದು ಹೇಳಿದ್ದಾರೆ. ಚುನಾವಣೆಯಲ್ಲಿ ನಿಂತು ಯಡಿಯೂರಪ್ಪ ಅವರ ಮಗನನ್ನು ಸೋಲಿಸಲಿ ಎಂಬುದು ಶಾ ಅವರ ಅಪೇಕ್ಷೆ ಇರಬೇಕು’ ಎಂದು ಹೇಳಿಕೆ ನೀಡಿದ್ದರು.
ಒಟ್ಟಿನಲ್ಲಿ ಬಿಜೆಪಿಯ ಹಿರಿಯ ನಾಯಕ, ಹಿಂದುತ್ವವಾದಿ ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪನವರ ಮುಂದಿನ ಕಥೆ ಏನೂ.? ಬಿಜೆಪಿಯ ಬಂಡಾಯ ಅಭ್ಯರ್ಥಿಯಾಗಿ ಸ್ಫರ್ಧೆಮಾಡುತ್ತಾರ.?ಸ್ಫರ್ಧೆಮಾಡಿ ಗೆದ್ದರೆ ಗದ್ದುಗೆ ಬಿದ್ದರೆ ಕಥೆ ಏನು.? ಎನ್ನುವುದು ಮಾತ್ರ ನಿಗೂಢವಾಗಿದೆ..
ಈಶ್ವರಪ್ಪನವರ ಹರಕು ಬಾಯಿಯೆ ಈಶ್ವರಪ್ಪ ನವರನ್ನು ಈ ಹಂತಕ್ಕೆ ತಂದು ನಿಲ್ಲಿಸಿದೆ ಎಂದರೆ ತಪ್ಪಾಗಲಾರದೇನೊ…