ಕೈಗೆ ಸಿಗದ ಅಮಿತ್ ಶಾ.! ಬರಿಗೈಯಲ್ಲಿ ವಾಪಸಾದ ಕೆ ಎಸ್ ಈಶ್ವರಪ್ಪ.! ಬಂಡಾಯ ಸ್ಪರ್ಧೆ ನಿಶ್ಚಿತ

ಮಾಜಿ ಉಪ ಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ

ಕೈಗೆ ಸಿಗದ ಅಮಿತ್ ಶಾ.! ಬರಿಗೈಯಲ್ಲಿ ವಾಪಸಾದ ಕೆ ಎಸ್ ಈಶ್ವರಪ್ಪ.! ಬಂಡಾಯ ಸ್ಪರ್ಧೆ ನಿಶ್ಚಿತ

ASHWASURYA/SHIVAMOGGA

✍️ ಸುಧೀರ್ ವಿಧಾತ

ನವದೆಹಲಿ: ಕೇಂದ್ರ ಸಚಿವ ಅಮಿತ್ ಶಾ ಅವರ ಕರೆಗೆ ಓಗೊಟ್ಟು ದೆಹಲಿಗೆ ಹಾರಿದ್ದ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರಿಗೆ ನಿರಾಸೆಯಾಗಿದೆ.
ದೆಹಲಿಗೆ ಈಶ್ವರಪ್ಪ ಅವರನ್ನು ಕರೆಸಿಕೊಂಡು ಅಮಿತ್ ಶಾ ಭೇಟಿಯಾಗದೆ. ಗೃಹ ಕಛೇರಿಯಿಂದ ಭೇಟಿ ಸಾಧ್ಯತೆ ಅಸಾಧ್ಯ ಎನ್ನುವ ಮಾಹಿತಿ ರವಾನಿಸಿದ್ದಾರೆ. ಈಶ್ವರಪ್ಪ ಅವರಿಗೆ ನಿರಾಸೆಯಾಗಿದೆ.ಅದರಲ್ಲೂ ದೆಹಲಿ ತಲುಪಿದ ನಂತರ ಭೇಟಿ ಕಾರ್ಯಕ್ರಮ ರದ್ದಾಗಿದೆ ಎಂದು ಅಮಿತ್ ಶಾ ಅವರ ಕಚೇರಿಯಿಂದ ಮಾಹಿತಿ ಬಂದಿರುವ ಕಾರಣಕ್ಕೆ ಈಶ್ವರಪ್ಪ ನವರ ಬಂಡಾಯದ ಬಾವುಟ ಮತ್ತೆ‌ ಶಿವಮೊಗ್ಗ ಕ್ಷೇತ್ರದಲ್ಲಿ ಹಾರಲಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಈಶ್ವರಪ್ಪ, ಇನ್ನೂ ಯಾರನ್ನು ಭೇಟಿಯಾಗುವುದಿಲ್ಲ. ಶಿವಮೊಗ್ಗದಲ್ಲಿ ನನ್ನ ಸ್ಪರ್ಧೆ ಖಚಿತ ಎಂದು ಹೇಳಿದ್ದಾರೆ.


ದೆಹಲಿಗೆ ಹೋಗುವ ಮೊದಲು ಬಿಜೆಪಿ ರಾಜ್ಯಾಧ್ಯಕ್ಷರನ್ನು ಬದಲಾಯಿಸಿದರೆ ಮಾತ್ರ ಸ್ಪರ್ಧೆ ಮಾಡುವುದಿಲ್ಲ ಎಂದು ಹೇಳುವುದಾಗಿ ಈಶ್ವರಪ್ಪ ತಿಳಿಸಿದ್ದರು. ಆದರೆ ಅಮಿತ್ ಶಾ ಭೇಟಿ ಮಾಡಲು ಸಾಧ್ಯವಾಗಿಲ್ಲ.! ದೆಹಲಿಯಲ್ಲಿ ಮಾತನಾಡಿದ ಈಶ್ವರಪ್ಪ ಅಮಿತ್ ಶಾ ಅವರು‌ ಸಿಗದೆ ಇರುವುದನ್ನು ನೋಡಿದರೆ ನನ್ನ ಸ್ಪರ್ಧೆಗೆ ಪರೋಕ್ಷವಾಗಿ ಅಮಿತ್ ಶಾ ಬೆಂಬಲ ನೀಡಿರುವಂತಿದೆ. ಅವರ ಕಚೇರಿಯಿಂದ ಭೇಟಿ ರದ್ದಾಗಿದೆ ಎಂದು ಮಾಹಿತಿ ಬಂದಿದೆ. ಇನ್ನೂ ಶಿವಮೊಗ್ಗದಲ್ಲಿ ನನ್ನ ಸ್ಪರ್ಧೆ ಖಚಿತ ಎಂದು ತಿಳಿಸಿದ್ದಾರೆ.
ಯಡಿಯೂರಪ್ಪನ ಮಗನನ್ನು ಸೋಲಿಸಲು ಅಮಿತ್ ಶಾ ಆಶೀರ್ವಾದ ಮಾಡಿದ್ದಾರೆ.! ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ರೋಚಕ ಹೇಳಿಕೆ ನೀಡಿದ್ದಾರೆ
ಈ ಮೂಲಕ ಲೋಕಸಭಾ ಚುನಾವಣೆಯಲ್ಲಿ ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿಜೆಪಿ ವಿರುದ್ಧ ಬಂಡಾಯದ ಬಾವುಟ ಹಾರಿಸಿ ರಾಜ್ಯ ಮತ್ತು ಕೇಂದ್ರ ಬಿಜೆಪಿ ನಾಯಕರಿಗೆ ತಲೆನೋವಾಗಿ ಪರಿಣಮಿಸಿದ್ದ ಈಶ್ವರಪ್ಪ ಮತ್ತೆ ಈ ರೀತಿಯ ಹೇಳಿಕೆ ನೀಡಿದ್ದಾರೆ.
ಇವತ್ತು ಅಮಿತ್ ಷಾ ಅವರ ಭೇಟಿಯಾಗಿದ್ದರೆ ಸ್ಪರ್ಧೆಯಿಂದ ಹಿಂದೆ ಸರಿಯಲು ಹೇಳುತ್ತಾರೆ ಎನ್ನುವ ಭಯವಿತ್ತು. ಆದರೆ ಅವರ ಭೇಟಿ ಆಗದೆ ಇರುವುದನ್ನು ನೋಡಿದರೆ ಶಿವಮೊಗ್ಗದಲ್ಲಿ ಯಡಿಯೂರಪ್ಪ ಅವರ ಪುತ್ರ ಬಿ.ವೈ.ರಾಘವೇಂದ್ರ ಅವರನ್ನು ಸೋಲಿಸಲು ಅಣಿಯಾಗಿ ಎಂದು ಅವರು ನನ್ನನ್ನು ಆಶೀರ್ವದಿಸಿದಂತಿದೆ.! ಎಂದು ಅವರು ಹೇಳಿದ್ದಾರೆ.
ನಾನು ಪಕ್ಷದ ನಿಷ್ಟಾವಂತ ಕಾರ್ಯಕರ್ತ. ಈ ಹಿಂದೆ ವರಿಷ್ಟರು ಏನು ಹೇಳಿದರೋ ಅದನ್ನೆಲ್ಲ ಮಾಡಿದ್ದೇನೆ. ಈ ಸಲ ಅವರ ಮಾತನ್ನು ಉಲ್ಲಂಘಿಸುವುದು ಹೇಗೆ ಎಂಬ ಚಿಂತೆಯಲ್ಲಿದ್ದೆ. ಆದರೆ ನನ್ನ ಚಿಂತೆಯನ್ನು ಅಮಿತ್ ಶಾ ದೂರ ಮಾಡಿದ್ದಾರೆ. ರಾಘವೇಂದ್ರ ಅವರನ್ನು ಸೋಲಿಸಲು ಆಶೀರ್ವಾದ ಮಾಡಿದ್ದಾರೆ ಎಂಬುದು ನನ್ನ ನಂಬಿಕೆ ಎಂದು ಹೇಳಿದರು.

Leave a Reply

Your email address will not be published. Required fields are marked *

Optimized by Optimole
error: Content is protected !!