ಡಮ್ಮಿ ಕಮ್ಮಿ ಅನ್ನುವವರಿಗೆಲ್ಲ ಮುಂದಿನ ದಿನಗಳಲ್ಲಿ ಉತ್ತರ ಸಿಗೊತ್ತೆ.ಗೀತಾ ಶಿವರಾಜಕುಮಾರ್ ಗೆಲುವು‌ ನಿಶ್ಚಿತ; ಸಚಿವ ಮಧು ಬಂಗಾರಪ್ಪ

ಡಮ್ಮಿ ಕಮ್ಮಿ ಅನ್ನುವವರಿಗೆಲ್ಲ ಮುಂದಿನ ದಿನಗಳಲ್ಲಿ ಉತ್ತರ ಸಿಗೊತ್ತೆ.ಗೀತಾ ಶಿವರಾಜಕುಮಾರ್ ಗೆಲುವು‌ ನಿಶ್ಚಿತ; ಸಚಿವ ಮಧು ಬಂಗಾರಪ್ಪ

ಅಶ್ವಸೂರ್ಯ/ಶಿವಮೊಗ್ಗ,ಏ.04: ಬಿ.ವೈ.ರಾಘವೇಂದ್ರ ಅವರಿಗೆ ಸುಳ್ಳಿನ ಸರದಾರ ಎನ್ನುವ ಬಿರುದು ಕೊಡಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ವ್ಯಂಗ್ಯವಾಗಿ ಹೇಳಿದ್ದಾರೆ.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಶರಾವತಿ ಸಂತ್ರಸ್ತರ ಸಮಸ್ಯೆಯನ್ನು ಬಿ.ವೈ.ರಾಘವೇಂದ್ರ ಅವರು 4 ಬಾರಿ ಸಂಸದರಾದರು ಸಹ ಏನೂ ಮಾಡಲು ಆಗಿಲ್ಲ ಶರಾವತಿ ಸಂತ್ರಸ್ತರ ಸಮಸ್ಯೆ ಬಗೆಹರಿಸದೆ ಇನ್ನೂ ಹಾಗೆಯೇ ಇದೆ, ಈಗ ಸುಳ್ಳು ಹೇಳಿಕೊಂಡು ತಿರುಗುತ್ತಿದ್ದಾರೆ. ಸುಳ್ಳಿನ ಸರದಾರರಾಗಿರುವ ಅವರಿಗೆ ಪ್ರಶಸ್ತಿ ನೀಡಬೇಕಾಗಿದೆ ಎಂದು ಟೀಕಿಸಿದರು.
ರೈತರ ಪಂಪ್‌ಸೆಟ್‌ಗೆ ಉಚಿತ ವಿದ್ಯುತ್ ನೀಡಿದವರು, ಬಿ.ಎಸ್.ಯಡಿಯೂರಪ್ಪನವರು ಎಂದು ರಾಘವೇಂದ್ರ ಹೇಳುತ್ತಾರೆ. ಆದರೆ ಅವರಿಗೆ ಗೊತ್ತಿರಲಿ ಮುಖ್ಯಮಂತ್ರಿಯಾಗಿದ್ದಾಗ ಬಂಗಾರಪ್ಪನವರು ರೈತರಿಗೆ ಉಚಿತ ವಿದ್ಯುತ್ ನೀಡಿದವರು. ಅವರು ಮತಯಾಚನೆಯ ಸಂದರ್ಭದಲ್ಲಿ ಬಿಜೆಪಿ ಕಾರ್ಯಕರ್ತರ ಎದುರು ಈ ಮಾತು ಹೇಳಲಿ ಎಂದರು, ಈ ಕಾರಣಕ್ಕಾಗಿಯೇ ಇವರು ಅತ್ಯಂತ ಸುಳ್ಳುಗಾರ ಎಂದರು.
ಬಿ.ಎಸ್.ಯಡಿಯೂರಪ್ಪನವರನ್ನು ಬೀದಿಗೆ ತಂದವರು ನಾವಲ್ಲ ಅವರದೇ ಪಕ್ಷದವರು.ಯಾರನ್ನೊ ನೆಲಕ್ಕೆ ನೂಕಿ ಮೇಲೆ ಬರುವುದು ನನ್ನ ಸಂಸ್ಕೃತಿ ಅಲ್ಲ, ಅದು ರಾಘವೇಂದ್ರ ಅವರದು ಎಂದರು.


ಕಾಂಗ್ರೆಸ್ ನಿಂದ ಬೈಂದೂರು ಸೇರಿದಂತೆ ತಾಲ್ಲೂಕಿನ ಎಲ್ಲಾ ಕಡೆಯು ಹಠ ತೊಟ್ಟು ಚುನಾವಣೆಯ ಪ್ರಚಾರ ಮಾಡಲಾಗುತ್ತಿದೆ.ಮಾಜಿ ಶಾಸಕರುಗಳಾದ ಸುಕುಮಾರ್ ಶೆಟ್ಟಿ, ಗೋಪಾಲ್ ಪೂಜಾರಿ ಅವರುಗಳು ಅವರ ಬೆಂಬಲಿಗರು ಮತ್ತು ಕಾರ್ಯಕರ್ತರೊಡನೆ ಬೈಂದೂರು ತಾಲೂಕಿನ ಎಲ್ಲೆಡೆ ಬಿಡುವಿಲ್ಲದ ಪ್ರಚಾರಕ್ಕೆ ದುಮುಕಿದ್ದಾರೆ. ಬೈಂದೂರು ಪಟ್ಟಣದಿಂದ ಪ್ರತಿಯೊಂದು ಗ್ರಾಮಬವ್ಯಾಪ್ತಿಯಲ್ಲೂ ಚುನಾವಣೆಯ ಕೆಲಸ ಅದ್ಭುತವಾಗಿ ಮಾಡುತಿದ್ದಾರೆ.

ಮಾಧ್ಯಮದ ಜೊತೆಗೆ ನಾವು ಹೇಳಿದ್ದನ್ನು ಮತದಾರರ ಬಳಿಯೂ ಒಯ್ಯಬೇಕು. ಪಟ್ಟಣದ ಮತ್ತು ಗ್ರಾಮ ಪಂಚಾಯತಿ ವ್ಯಾಪ್ತಿಯಲ್ಲಿ ಸಭೆಗಳು ನಡೆಯುತ್ತಿವೆ. ಗ್ರಾಮೀಣ ಭಾಗದಲ್ಲೂ ಹೆಚ್ಚು ಹೆಚ್ಚು ಯೋಜನೆಯನ್ನು ರೂಪಿಸುತ್ತಿದ್ದೇವೆ ಗೀತಕ್ಕ ಗ್ರಾ.ಪಂ.ಮಟ್ಟದಲ್ಲೂ ಪ್ರಚಾರ ಮಾಡ್ತಿದಾರೆ ಎಂದರು.
ಮತದಾರರ ಬಳಿ ಹೆಚ್ಚು ಹೆಚ್ಚಾಗಿ ಶಿವರಾಜ್ ಕುಮಾರ್ ಓಡಾಡುತ್ತಿದಾರೆ. ಡಮ್ಮಿ ಕಮ್ಮಿ ಅನ್ನುವವರಿಗೆಲ್ಲ ಮುಂದಿನ ದಿನಗಳಲ್ಲಿ ಉತ್ತರ ಸಿಗೊತ್ತೆ. ದೇಶದಲ್ಲೇ ಬದಲಾವಣೆ ಗಾಳಿ ಬೀಸ್ತಿದೆ. ಸೋಷಿಯಲ್ ಮೀಡಿಯಾಗಳ ರೆಸ್ಪಾನ್ಸ್ ನೋಡಿದ್ರೆ ಬಿಜೆಪಿ ಸೋಲುವ ಹಾದಿಯಲ್ಲಿದೆ ಎಂದರು.
ಪ್ರತಿ ಗ್ರಾ.ಪಂ.ಶಿವಮೊಗ್ಗ ನಗರ ಮಟ್ಟದಲ್ಲೂ ಪ್ರಚಾರದ ಕಾರ್ಯ ಮಾಡಲಾಗುತ್ತಿದೆ. ಹೋದಕಡೆಯೆಲ್ಲಾ ವಾತಾವರಣ ಚೆನ್ನಾಗಿದೆ. ಹಠ ಮತ್ತು ಛಲದಿಂದ ಪ್ರಚಾರ ಭರದಿಂದ ಸಾಗುತ್ತಿದೆ ಎಂದರು.


ಗೀತಾ ಶಿವರಾಜ್‌ಕುಮಾರ್ ಅವರು ಅತಿ ಹೆಚ್ಚು ಮತಗಳ ಅಂತರದಿಂದ ಗೆಲುವು ಸಾಧಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಜಿಲ್ಲಾ ಉಸ್ತುವಾರಿ ಮಧುಬಂಗಾರಪ್ಪ ತಿಳಿಸಿದರು.
ದೇಶದಲ್ಲೂ ಬದಲಾವಣೆಯಾಗಲಿದೆ, ಬಿಜೆಪಿ ಬಿಟ್ಟು ಬೇರೆ ಪಕ್ಷಗಳ ಕಡೆ ಮತದಾರ ಒಲವು ತೋರಿಸುತ್ತಿದ್ದಾನೆ. ಕಾಂಗ್ರೆಸ್ ಪಕ್ಷದ ಗ್ಯಾರಂಟಿ ಯೋಜನೆ ಹಾಗೂ ಅಭಿವೃದ್ಧಿ ಕಾರ್ಯಗಳನ್ನಿಟ್ಟುಕೊಂಡು ಮತ ಕೇಳಲು ಖುಷಿಯಾಗುತ್ತಿದೆ ಎಂದರು.
ಅಭ್ಯರ್ಥಿ ಗೀತಾ ಶಿವರಾಜ್‌ಕುಮಾರ್ ವಿರುದ್ಧ ಹಗುರವಾಗಿ ಮಾತನಾಡುವುದನ್ನು ಬಿ.ವೈ.ರಾಘವೇಂದ್ರ ಹಾಗೂ ಕೆ.ಎಸ್.ಈಶ್ವರಪ್ಪ ಮೊದಲು ಬಿಡಬೇಕು ಎಂದರು.
ಏ.15ರಂದು ಗೀತಾ ಶಿವರಾಜ್‌ಕುಮಾರ್ ಅವರು ಶಿವಮೊಗ್ಗ ನಗರದ ರಾಮಣ್ಣ ಶ್ರೇಷ್ಟಿ ಪಾರ್ಕಿನಿಂದ ಜಿಲ್ಲಾಧಿಕಾರಿಗಳ ಕಚೇರಿಯವರೆಗೆ ಮೆರವಣಿಗೆಯ ಮೂಲಕ ಬಂದು ನಾಮಪತ್ರ ಸಲ್ಲಿಸಲಿದ್ದಾರೆ. ಈ ಸಂದರ್ಭದಲ್ಲಿ ನಟ ಶಿವರಾಜ್‌ಕುಮಾರ್, ಮುಖ್ಯಮಂತ್ರಿಗಳು ಅಥವಾ ಉಪ ಮುಖ್ಯಮಂತ್ರಿಗಳು ಹಾಗೂ ಪಕ್ಷದ ಮುಖಂಡರ ಜೋತೆಗೆ ಸಾವಿರಾರು ಮಂದಿ ಕಾರ್ಯಕರ್ತರು ಭಾಗವಹಿಸುವರು ಎಂದರು.ಗೀತಾ ಶಿವರಾಜಕುಮಾರ್ ಅವರ ಅಭ್ಯರ್ಥಿಯ ಡಿಫಾಸಿಟ್ ಹಣವನ್ನು ಗ್ಯಾರಂಟಿ ಫಲಾನುಭವಿ ಮಹಿಳೆಯರು ಭರಿಸಲಿದ್ದಾರೆ ಎಂದರು. ಕ್ಷೇತ್ರದ 8 ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ಗೆ ಹೆಚ್ಚಿನ ಮತ ಬರಲಿದೆ ಎಂದರು.

ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಅವರು ಗ್ಯಾರಂಟಿ ಯೋಜನೆಗಳನ್ನು 420 ಗ್ಯಾರಂಟಿ ಎಂದು ಲೇವಡಿ ಮಾಡಿದ್ದಾರೆ. ಅವರೇ 420 ಆರಗ ಜ್ಞಾನೇಂದ್ರ ಆಗಿದ್ದಾರೆ ಎಂದರು.
ಭಾರತ್ ಅಕ್ಕಿ ಎಲ್ಲಿ ಹೋಯ್ತು? ಸಂಸದರೇ ಹೇಳಿ. ಬಡವರ ಹೊಟ್ಟೆಗೆ ತಲುಪುತ್ತಿರೋದು ಸಿದ್ದರಾಮಯ್ಯನವರ ಅನ್ನಭಾಗ್ಯದ ಅಕ್ಕಿ. ಕಾಂಗ್ರೆಸ್ ಗ್ಯಾರಂಟಿಗಳೇ ಕೊನೆಗೆ ಉಳಿಯುವುದು ಎಂದರು. ಚೇಲಾ ಎಂದು ನಾನು ಬಳಕೆಯೇ ಮಾಡಿಲ್ಲ, ಆದರೆ ನಾನು ಹೇಳಿದ್ದೇನೆ ಎಂದು ರಾಘವೇಂದ್ರ ಹೇಳುತ್ತಿದ್ದಾರೆ. ಅವರಿಗೆ ನಾಚಿಕೆಯಾಗಬೇಕು ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆರ್.ಪ್ರಸನ್ನಕುಮಾರ್, ಎನ್.ರಮೇಶ್, ಜಿ.ಡಿ.ಮಂಜುನಾಥ್, ರಮೇಶ್ ಹೆಗ್ಡೆ, ಶಾಂತವೀರನಾಯ್ಕ್, ಸುರೇಶ್ ಶೆಟ್ಟಿ ಯು.ಶಿವಾನಂದ, ಡಾ. ಶ್ರೀನಿವಾಸ್ ಕರಿಯಣ್ಣ, ಧರ್ಮರಾಜ್, ಎಸ್.ಟಿ.ಹಾಲಪ್ಪ, ಗಿರೀಶ್, ದೇವೀಕುಮಾರ್, ದಿನೇಶ್, ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Optimized by Optimole
error: Content is protected !!