ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪಕ್ಷದ ನೂತನ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಆರ್.ಪ್ರಸನ್ನ ಕುಮಾರ್
ASHWASURYA/SHIVAMOGGA
✍️ ಸುಧೀರ್ ವಿಧಾತ
ಪಕ್ಷ ಕಟ್ಟಲು ಅವಕಾಶ ಮಾಡಿಕೊಟ್ಟ ಕೆಪಿಸಿಸಿ ಅಧ್ಯಕ್ಷರು, ಮುಖ್ಯಮಂತ್ರಿಗಳು ಮತ್ತು ಎಐಸಿಸಿ ಅಧ್ಯಕ್ಷರಿಗೆ ಅಭಿನಂದನೆಗಳು
ಅಶ್ವಸೂರ್ಯ/ಶಿವಮೊಗ್ಗ; ಈ ಹಿಂದೆ ಕೂಡ ಹತ್ತು ವರ್ಷ ಅಧ್ಯಕ್ಷನಾಗಿದ್ದೆ. ಎಲ್ಲರ ಒಗ್ಗಟ್ಟಿನಿಂದ ಜಿಲ್ಲಾ ಕಾಂಗ್ರೆಸ್ ಪಕ್ಷದ ರಥವನ್ನು ಮುಂದಕ್ಕೆ ಒಯ್ಯಬೇಕಿದೆ. ಜಿಲ್ಲಾ ಮಂತ್ರಿಗಳು ಸೇರಿದಂತೆ ಜಿಲ್ಲೆಯ ಶಾಸಕರ ಮತ್ತು ಪಕ್ಷದ ಹಿರಿಯ ಕಿರಿಯ ನಾಯಕರ ಜೋತೆಗೆ ಪ್ರತಿಯೊಬ್ಬ ಕಾರ್ಯಕರ್ತರ ಸಹಕಾರ ಬೇಕು.
ಬಿಜೆಪಿ ಆಡಳಿತದ ಕೇಂದ್ರ ಸರ್ಕಾರ ಕಳೆದ ಹತ್ತುವರ್ಷದಿಂದ ಪ್ರಧಾನಿ ಮೋದಿ ಬರೀ ಸುಳ್ಳನ್ನು ಹೇಳಿಕೊಂಡು ಬಂದಿದ್ದಾರೆ. ಮತದಾರರಿಗೆ ದಾರಿ ತಪ್ಪಿಸಲಾಗುತ್ತಿದೆ. ಜನ ಅರ್ಥ ಮಾಡಿಕೊಳ್ಳಬೇಕು. ಗೀತಾ ಶಿವರಾಜ್ ಕುಮಾರ್ ಅವರನ್ನು ಗೆಲ್ಲಿಸುವಲ್ಲಿ ಹಗಲರುಳು ಕೆಲಸ ಮಾಡೋಣ. ಎಲ್ಲರ ಶ್ರಮದಿಂದ ನಮ್ಮ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯನ್ನು ಗೆಲ್ಲಿಸೋಣ
ಪ್ರತಿಯೊಬ್ಬ ಮತದಾರರ ಬಳಿಗೆ ಹೋಗೋಣ. “ನನ್ನ ಬೂತು ನನ್ನ ಜವಾಬ್ದಾರಿ” ಅಡಿ ಬರಹದಲ್ಲಿ ರಾಹುಲ್ ಗಾಂಧಿಯವರ ಘೋಷವಾಕ್ಯದಂತೆ ಕೆಲಸ ಮಾಡೋಣ. ಬಿಜೆಪಿಯ ಕರ್ಮಕಾಂಡಗಳನ್ನು ಮತದಾರರ ಮುಂದಿಟ್ಟು ಹೇಳೋಣ. ಪಕ್ಷ ಸಂಘಟನೆ ಮಾಡೋಣ. ದೇಶದ ಚುನಾವಣೆ ಇದು. ದೇಶ ಉಳಿಸಿಕೊಳ್ಳಲು ಹೋರಾಡೋಣ. ನಮಗೆ ಅಭ್ಯರ್ಥಿ ಮುಖ್ಯವಲ್ಲ. ನಾವೇ ಅಭ್ಯರ್ಥಿ. ನಮ್ಮ ಬೂತು ನಾವು ಕಾಪೋಡಿಕೊಂಡು ಅಭ್ಯರ್ಥಿಯನ್ನು ಗೆಲ್ಲಿಸೋಣ ಎಂದು ನೂತನ ಅಧ್ಯಕ್ಷರಾದ ಆರ್ ಪ್ರಸನ್ನಕುಮಾರ್ ಹೇಳಿದರು.
ಈ ಸಂದರ್ಭದಲ್ಲಿ ಉಪಸ್ಥಿತರಿದ್ದ ಕೆಪಿಸಿಸಿ ನೂತನ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್ ಮಾತನಾಡಿ..
ಚುನಾವಣೆಯ ಸಂದರ್ಭದಲ್ಲಿ ಹೈ ಕಮಾಂಡ್ ತನ್ನದೇ ಆದ ಮಾನದಂಡ ಉಪಯೋಗಿಸಿ ಈ ಬದಲಾವಣೆ ಮಾಡಿದೆ. ಸ್ವಯಂ ಅಧ್ಯಕ್ಷರಾಗಿದ್ದ ಸುಂದರೇಶ್ ರವರೇ ಬೇರೆಯವರಿಗೆ ಬಿಟ್ಟುಕೊಟ್ಟಿದ್ದಾರೆ. ಸಂಘಟನೆಗೆ ಬಲ ತುಂಬಿದ, ಅನುಭವಸ್ಥ ಪ್ರಸನ್ನ ಕುಮಾರ್ ರವರ ಆಯ್ಕೆ ಸೂಕ್ತವಾಗಿದೆ.
ಪ್ರತಿಯೊಬ್ಬ ಕಾರ್ಯಕರ್ತನೂ ಲೋಕಸಭಾ ಚುನಾವಣೆಯ ಜವಾಬ್ದಾರಿ ನಿಭಾಯಿಸಬೇಕು. ಪಂಚ ಗ್ಯಾರಂಟಿಗಳ ಮೂಲಕ ಮನೆ ಮನೆಗೆ ತೆರಳಿ ಮತ ಕೇಳೋಣ. ಕೇಂದ್ರದ ಹತ್ತು ಗ್ಯಾರಂಟಿಗಳನ್ನು ಜಾರಿಗೆ ತರುವ ಭರವಸೆ ರಾಹುಲ್ ಗಾಂಧಿ ನೀಡಿದ್ದಾರೆ ಎಂದು ನೂತನ ಕೆಪಿಸಿಸಿಯ ಪ್ರಧಾನ ಕಾರ್ಯದರ್ಶಿ ಎನ್.ರಮೇಶ್ ಹೇಳಿದರು
ಈ ಸಂಧರ್ಭದಲ್ಲಿ
ಆರ್.ಎಂ.ಮಂಜುನಾಥ ಗೌಡ, ನಾಗರಾಜ ಗೌಡ, ಶ್ರೀನಿವಾಸ ಕರಿಯಣ್ಣ, ಸಿ.ಎಸ್.ಚಂದ್ರಭೂಪಾಲ್, ದೇವೇಂದ್ರಪ್ಪ, ಕಲೀಂ ಪಾಷ, ಶಿವಕುಮಾರ್, ವಿಶ್ವನಾಥ ಕಾಶಿ, ಎಸ್ ಪಿ ದಿನೇಶ್, ಮಧು,ಶಿ ಜು ಪಾಶ,ಜಿ ಪದ್ಮನಾಭ್, ಬಲ್ಕೀಷ್ ಬಾನು ಉಪಸ್ಥಿತರಿದ್ದರು