ರಾಜಧಾನಿಯಲ್ಲೊಂದು ವಿಚಿತ್ರ ಘಟನೆ ; ಹೆಂಡತಿಯ ಟಾರ್ಚರ್ ತಾಳಲಾರದೆ ಗಂಡ ಆತ್ಮಹತ್ಯೆ.!! ಸಾಯುವ ಮುನ್ನ ಗೋಡೆಯ ಮೇಲೆ ಬರೆದಿದ್ದ ಕೋನೆಯ ಸಾಲು.!!
ASHWASURYA/SHIVAMOGGA
✍️ ಸುಧೀರ್ ವಿಧಾತ
ಅಶ್ವಸೂರ್ಯ/ಶಿವಮೊಗ್ಗ; ಸಾಯುವ ಮುನ್ನ ಗೋಡೆಯ ಮೇಲೆ ತನ್ನ ಸಾವಿಗೆ ಪತ್ನಿ ಹಾಗೂ ಆಕೆಯ ಕುಟುಂಬಸ್ಥರೇ ಕಾರಣ ಎಂದು ಸಾಯುವ ಮುನ್ನ ಡೆತ್ ನೋಟ್ ಬರೆದಿದ್ದಾರೆ. ಮೃತ ಸೈಯದ್ ಅಕ್ಮಲ್ ಅನ್ಸರ್ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಟೆಕ್ಕಿಯಾಗಿದ್ದರು.ಅದರೂ ಅವರಿಗೆ ಮನೆಯಲ್ಲಿ ನೆಮ್ಮದಿ ಇರಲಿಲ್ಲ ಹೆಂಡತಿ ಮತ್ತು ಆಕೆಯ ಕುಟುಂಬಸ್ಥರು ಹಣಕ್ಕಾಗಿ ಬೇಡಿಕೆ ಇಟ್ಟು ಕಿರುಕುಳ ನೀಡುತ್ತಿದ್ದಂತೆ.!
ಗೋಡೆ ಮೇಲಿತ್ತು ಸಾಯುವ ಮುನ್ನ ಬರೆದ ಸಾಲುಗಳು ( ಡೆತ್ ನೋಟ್) :
ಬೆಂಗಳೂರು ನಗರದ ಪ್ರತಿಷ್ಠಿತ ಕಂಪನಿಯೊಂದರಲ್ಲಿ ಟೆಕ್ಕಿಯಾಗಿದ್ದ ವ್ಯಕ್ತಿ ಹೆಂಡತಿಯ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆಗೆ ಶರಣಾಗಿದ್ದಾನೆ. ಸಾಯುವ ಮುನ್ನ ಗೋಡೆಯ ಮೇಲೆ ತನ್ನ ಸಾವಿಗೆ ಪತ್ನಿ ಹಾಗೂ ಆಕೆಯ ಕುಟುಂಬಸ್ಥರೇ ಕಾರಣ ಎಂದು ಬರೆದಿದ್ದಾನೆ..! ಮೃತ ಸೈಯದ್ ಅಕ್ಮಲ್ ಅನ್ಸರ್ ಪ್ರತಿಷ್ಠಿತ ಕಂಪನಿಯಲ್ಲಿ ಟೆಕ್ಕಿಯಾಗಿದ್ದರು. ಕೈ ತುಂಬ ಸಂಬಳ ಕೂಡ ಬರುತ್ತಿತ್ತು. ಆದರೆ ಮದುವೆ ಬಳಿಕ ವೈವಾಹಿಕ ಜೀವನದಲ್ಲಿ ನೆಮ್ಮದಿ ಇರಲಿಲ್ಲ.ಮದೆವೆಯಾದ ಮಡದಿ ಹೆಸರಿಗಷ್ಟೇ ಹೆಂಡತಿಯಾಗಿದ್ದಳು.! ಅದೇ ನೋವು ಆತನನ್ನ ಇನ್ನಿಲ್ಲದಂತೆ ಕಾಡ ತೊಡಗಿತ್ತು.
ದಂಪತಿಗಳ ಮಧ್ಯೆ ಅನುಮಾನದ ಭೂತ ಆಗಾಗ ನರ್ತನ ಮಾಡುತ್ತಿತ್ತು.!
ಅಕ್ಮಲ್ ಅನ್ಸರ್ ಏಳು ವರ್ಷದ ಹಿಂದೆ ಕುತೇಜ ಕುಬ್ರಾ ಅವರನ್ನು ವಿವಾಹವಾಗಿದ್ದರು. ಮೊದಮೊದಲು ಚೆನ್ನಾಗಿಯೇ ಇದ್ದ ಸಂಸರಾದಲ್ಲಿ ದಂಪತಿಗಳಿಗೆ ಇಬ್ಬರು ಮುದ್ದಾದ ಮಕ್ಕಳು ಕೂಡ ಇದ್ದರು. ಆದರೆ ಅದೇನಾಯ್ತೋ ಏನೋ ಇದ್ದಕ್ಕಿದ್ದಂತೆ ಒಬ್ಬರಿಗೊಬ್ಬರ ಮೇಲೆ ಅನುಮಾನ ಶುರುವಾಗಿದೆ. ಅದೇ ಅನುಮಾನ ಪತಿಯನ್ನು ಸಾವಿನ ಅಂಚಿಗೆ ತಂದು ನಿಲ್ಲಿಸಿದೆ! ಎನ್ನಲಾಗುತ್ತಿದೆ.
ಮಗನಿಗೆ ಅಮ್ಮ ಫೋನ್ ಕರೆ ಮಾಡಿದ್ದಾರೆ ಮಗನಿಂದ ಉತ್ತರವಿಲ್ಲ.! ಆತನ ಮನೆಗೆ ಹೋಗಿ ನೋಡಿದಾಗ ಮಗ ಶವವಾಗಿ ಪತ್ತೆ.!
ಕಳೆದ ಮಾರ್ಚ್ 12 ರಂದು ಅನ್ಸರ್ ಅಕ್ಮಲ್ ತನ್ನ ತಾಯಿ ಮನೆಗೆ ಹೋಗಿದ್ದರು. ಬೆಳಗ್ಗೆ ತಿಂಡಿ ಮುಗಿಸಿ ಗೋವಿಂದಪುರದ ತನ್ನ ಫ್ಲಾಟ್ ಗೆ ಬಂದಿದ್ದರು. ಪತ್ನಿ ಗಲಾಟೆ ಮಾಡಿಕೊಂಡು ತನ್ನ ತವರು ಮನೆಗೆ ಹೋಗಿದ್ದರಿಂದ ಒಬ್ಬರೆ ಮನೆಯಲ್ಲಿದ್ದರು. ಈ ವೇಳೆ ತಾಯಿ ಮಗನಿಗೆ ಹಲವು ಬಾರಿ ಕರೆ ಮಾಡಿದ್ದಾರೆ. ಆದರೆ ಕಾಲ್ ರಿಸೀವ್ ಮಾಡಿಲ್ಲ. ಮಗನ ಕಚೇರಿಗೆ ಫೋನ್ ಮಾಡಿ ಕೇಳಿದರೂ ಬಂದಿಲ್ಲ ಎಂದಿದ್ದಾರೆ. ಮನೆಗೆ ಹೋಗಿ ನೋಡೋಣ ಎಂದು ಫ್ಲಾಟ್ಗೆ ಬಂದಾಗ ಶಾಕ್ ಆಗಿದೆ. ಅಷ್ಟೋತ್ತಿಗಾಗಲೆ ಮಗ ಫ್ಯಾನಿಗೆ ನೇಣು ಬಿಗಿದುಕೊಂಡು ಸಾವಿಗೆ ಶರಣಾಗಿದ್ದ.! ಸಾಯುವ ಮುನ್ನ ಅಲ್ಲೆ ಗೋಡೆಯ ಮೇಲೆ ತನ್ನ ಸಾವಿಗೆ ಪತ್ನಿ ಹಾಗೂ ಆಕೆಯ ಮನೆಯವರೇ ಕಾರಣ ಎಂದು ಬರೆದಿದ್ದಾನೆ.!?
ಪತ್ನಿ ಕುಬ್ರಾ ಪತಿಯ ಮೇಲೆ ಅನುಮಾನ ಪಡುತ್ತಿದ್ದಳು. ಅನೈತಿಕ ಸಂಬಂಧ ಕೂಡ ಹೊಂದಿದ್ದಳಂತೆ.!? ಇದು ನಿಜವಾ.? ಅದೇ ಕಾರಣಕ್ಕೆ ಪತಿ-ಪತ್ನಿ ಮಧ್ಯೆ ಜಗಳ ನಡೆಯುತಿತ್ತಂತೆ. ಅಲ್ಲದೇ ಪತ್ನಿಯ ಈ ಕೆಲಸಕ್ಕೆ ಆಕೆಯ ಮನೆಯವರು ,ಸಂಬಂಧಿಕರು ಕೂಡ ಸಾಥ್ ನೀಡಿದ್ದರಂತೆ. ವಿಚ್ಛೇದನಕ್ಕೆ ಧಮ್ಕಿ ಹಾಕೋದ್ರ ಜೊತೆಗೆ ಐದು ಕೋಟಿ ಹಣ ಕೊಡ್ಬೇಕು ಎಂದು ಬೆದರಿಕೆ ಹಾಕಿದ್ದರಂತೆ ಹೆಂಡತಿ ಅವರ ಮನೆಯವರು. ಇದರಿಂದ ನೊಂದು ತನ್ನ ಮಗ ಗೋಡೆ ಮೇಲೆ ಡೆತ್ ನೋಟ್ ಬರೆದು ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಅನ್ಸರ್ ತಾಯಿ ಆರೋಪಿಸಿದ್ದಾರೆ.
ಪತಿ ಸತ್ತ ಸುದ್ದಿ ತಿಳಿಯುತ್ತಿದ್ದಂತೆ ಆತನ ಪತ್ನಿ ಮತ್ತು ಆಕೆಯ ಮನೆಯವರು ತಲೆ ಮರೆಸಿಕೊಂಡಿದ್ದಾರೆ. ಆರೋಪಿಗಳ ವಿರುದ್ಧ ಮೃತನ ಸಹೋದರ
ಗೋವಿಂದಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪತ್ನಿ ಕುತೇಜ ಕುಬ್ರಾ, ಮಾವ ಮುನಾವರ್ ಸುಬಾನ್ ಸೇರಿದಂತೆ ಏಳು ಜನರ ಮೇಲೆ ಎಫ್ಐಆರ್ ದಾಖಲಾಗಿದೆ. ಎಫ್ಐಆರ್ ದಾಖಲಾಗ್ತಿದ್ದಂತೆ ಆರೋಪಿಗಳು ಪರಾರಿ ಆಗಿದ್ದು ತಲೆ ಮರೆಸಿಕೊಂಡಿದ್ದಾರೆ. ಆರೋಪಿಗಳ ಪತ್ತೆಗೆ ಪೊಲೀಸರು ಬಲೆ ಬೀಸಿದ್ದಾರೆ.