ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿಗಳ ಪತ್ರಿಕಾಗೋಷ್ಠಿ ; ಎಸ್ ಪಿ ದಿನೇಶ್ ಮತ್ತು ರಂಗಸ್ವಾಮಿ ಗೌಡ

.ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಆಕಾಂಕ್ಷಿಗಳ ಜಂಟಿ ಪತ್ರಿಕಾಗೋಷ್ಠಿ ; ಎಸ್ ಪಿ ದಿನೇಶ್ ಮತ್ತು ರಂಗಸ್ವಾಮಿ ಗೌಡ

ASHWASURYA/SHIVAMOGGA

✍️ ಸುಧೀರ್ ವಿಧಾತ

ಎಸ್.ಪಿ.ದಿನೇಶ್, ಉಪಾಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಸಮಿತಿ, ನೈರುತ್ಯ ಪದವೀಧರರ ಕ್ಷೇತ್ರದ ಕಾಂಗ್ರೆಸ್ ಆಕಾಂಕ್ಷಿ ಮತ್ತೊಬ್ಬ ನೈರುತ್ಯ ಪದವೀಧರರ ಕ್ಷೇತ್ರದ ಟಿಕೆಟ್ ಆಕಾಂಕ್ಷಿ ರಂಗಸ್ವಾಮಿ ಗೌಡ

ಅಶ್ವಸೂರ್ಯ/ಶಿವಮೊಗ್ಗ; ನೈರುತ್ಯ ಪದವೀಧರ ಕ್ಷೇತ್ರದ ಕಾಂಗ್ರೆಸ್ ಟಿಕೇಟ್ ಘೋಷಣೆಯಾಗಿದೆ. ಕೆಪಿಸಿಸಿ ಅಧ್ಯಕ್ಷರಿಗೆ ಮನವಿ ಮಾಡಿದ್ದೇನೆ. ಪಕ್ಷದ ಅಭ್ಯರ್ಥಿ ಬದಲಾಯಿಸಬೇಕು. ಹೆಸರನ್ನು ಮರು ಪರಿಶೀಲಿಸಬೇಕು.
ನನ್ನ ಓಟು ಈಶ್ವರಪ್ಪನವರಿಗೆ ಅಂತ ಘೋಷಿಸಿರೋ ವ್ಯಕ್ತಿಗೆ ನೈರುತ್ಯ ಪದವೀಧರರ ಕ್ಷೇತ್ರದ ಕಾಂಗ್ರಸ್ ಟಿಕೇಟ್.! ಈಶ್ವರಪ್ಪ ನಮಗೆ ಎದುರಾಳಿಯಲ್ಲ. ಬಿಜೆಪಿ ಎದುರಾಳಿ ಎಂದು ಕಿಚಾಯಿಸಿ ಈಶ್ವರಪ್ಪ ಸ್ಪರ್ಧೆ ಮಾಡುವಂತಾಯಿತು ಪ್ರಚೋದಿತ ಹೇಳಿಕೆಯಿಂದ.

ಕೆಪಿಸಿಸಿ ಅಧ್ಯಕ್ಷರ ಗಮನಕ್ಕೇ ಬಾರದೇ ಟಿಕೇಟ್ ಘೋಷಣೆಯಾಗಿದೆ. ಆದೇಶ ಪ್ರತಿ ಕೂಡ ಅವರು ಗಮನಿಸಿರಲಿಲ್ಲ. ಅದನ್ನು ತೋರಿಸಿದ್ದೇನೆ, ಮತ್ತೊಮ್ಮೆ ಟಿಕೆಟ್ ಆಕಾಂಕ್ಷಿಯಾಗಿ ಸುಮಾರು 30 ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ನೋಂದಣಿ ಮಾಡಿಸಿದ್ದೇವೆ ನಾನು ಮತ್ತು ರಂಗಸ್ವಾಮಿ ಗೌಡರು ಸೇರಿ.
ಒಂದೇ ಒಂದು ಜಿಲ್ಲೆಗೆ ಒಂದೇ ಒಂದು ಅರ್ಜಿ ಕಳಿಸಿಲ್ಲ ಆದರೂ ಠೇವಣಿ ಕಳೆದುಕೊಂಡ ವ್ಯಕ್ತಿಗೆ ಟಿಕೇಟ್ ಆಶ್ಚರ್ಯಕರ.! ಕಳೆದ ಬಾರಿ ಸಿದ್ದರಾಮಯ್ಯರಿಗೆ ಜೈಲಿಗೆ ಕಳಿಸ್ತೀನಿ ಅಂತ ತೊಡೆ ತಟ್ಟಿದ ವ್ಯಕ್ತಿ. ಗೋಡ್ಸೆ ಪ್ರಿಯ ವ್ಯಕ್ತಿಯ ಪರವಾಗಿ ಹೇಗೆ ಮತ ಕೇಳೋದು.?


ನಿನ್ನನ್ನು ಅಭ್ಯರ್ಥಿ ಮಾಡುವ ಜವಾಬ್ದಾರಿ ನಂದು ಎಂದು ಕೆಪಿಸಿಸಿ ಅಧ್ಯಕ್ಷರು ಬಹಳ ಬಾರಿ ಹೇಳಿದ್ದಕ್ಕೆ ನಾನು ಕ್ಷೇತ್ರದಲ್ಲಿ ಸಾಕಷ್ಟು ಕೆಲಸ ಮಾಡಿದ್ದೇನೆ. ಗುರುತಿನ ಚೀಟಿಗಳನ್ನು ಎಲ್ಲಾ ಮತದಾರರಿಗೂ ಅವರ ವಿಳಾಸಕ್ಕೆ ಕಳುಹಿಸಿ ಕೊಟ್ಟಿದ್ದಾನೆ. ಈಗ ದಿಢೀರ್ ಎಂದು ಅಭ್ಯರ್ಥಿ ಉದ್ಭವದಿಂದ ಗೊಂದಲವಾಗಿದೆ ಇದನ್ನು ಕೆಪಿಸಿಸಿ ಸರಿಪಡಿಸಬೇಕಿದೆ.?

ಕೂಡಲೇ ಅಭ್ಯರ್ಥಿಯನ್ನು ಬದಲಾಯಿಸಬೇಕು. ಬದಲಾವಣೆ ಮಾಡುತ್ತಾರೆ ಅಂತ ವಿಶ್ವಾಸವಿದೆ. ಎಐಸಿಸಿ ಆದೇಶ ಕೆಪಿಸಿಸಿಗೆ ಬಂದಿಲ್ಲ. ಕೆಪಿಸಿಸಿ ಅಧ್ಯಕ್ಷರ ಗಮನಕ್ಕೂ ಬಂದಿಲ್ಲವಂತೆ.! ಅವರನ್ನು ಬದಲಾವಣೆ ಮಾಡಲೇಬೇಕು. ಸಾಮಾನ್ಯ ಕಾರ್ಯಕರ್ತರಿಗೆ ಟಿಕೆಟ್ ಕೊಟ್ಟರೂ ಅವರ ಪರ ಕೆಲಸ ಮಾಡುತ್ತೇವೆ.ಅದರೆ ಕಾಂಗ್ರೆಸ್ ನಾಯಕರ ವಿರುದ್ಧ ಅವಹೇಳನಕಾರಿ ಮಾತನಾಡಿದ್ದಾರೆ. ಈಗ ಕಾಂಗ್ರೆಸ್ ಪರ ಅಭ್ಯರ್ಥಿ.
ಕಾಂಗ್ರೆಸ್ ಸೇರ್ಪಡೆ ಸಂದರ್ಭದಲ್ಲಿಯೂ ನಾನು ವಿರೋಧ ಮಾಡಿದ್ದೇನೆ.


ಘೋಷಣೆ ಆದ ಅಭ್ಯರ್ಥಿ ಬದಲಾವಣೆ ಹಿಂದೆಲ್ಲ ಆಗಿದೆ. ಈಗಿನ ಘೋಷಿತ ಅಭ್ಯರ್ಥಿಯ ಹೆಸರನ್ನು ತಡೆಹಿಡಿಯಬೇಕು.ಪಕ್ಷಕ್ಕಾಗಿ ದುಡಿದ ಕಾಂಗ್ರೆಸ್ ನಿಷ್ಠಾವಂತರಿಗೆ ಟಿಕೆಟ್ ನೀಡಿ ಹೆಸರು ಘೋಷಿಸಬೇಕು ಎಂದರು

ಬಿಜೆಪಿಯಿಂದ ಮೂರ್ನಾಲ್ಕು ತಿಂಗಳು ಜಾತ್ರೆ ಮಾಡಲು ಬಂದವರಿಗೆ ಟಿಕೇಟ್ ನೀಡಲಾಗಿದೆ. ಜಿಲ್ಲಾಧ್ಯಕ್ಷರು ಟಿಕೇಟ್ ಘೋಷಣೆಯ ನಂತರ ತಮ್ಮ ಜವಾಬ್ದಾರಿ ನಿಭಾಯಿಸಿದ್ದಾರೆ. ನಾನು ಮೂಲ ಕಾಂಗ್ರೆಸ್ ಪಕ್ಷದ ಲಿಂಗಾಯತ. ಆಕಡೆ ಈಕಡೆ ಪಕ್ಷಾಂತರ ಮಾಡುವ ಲಿಂಗಾಯತ ಅಲ್ಲ. ಇದು ಲೋಕಸಭಾ ಚುನಾವಣೆ ಮೇಲೆ ಪರಿಣಾಮವು ಬೀರುವುದಿಲ್ಲ.
ಈಶ್ವರಪ್ಪ ಹಿಂದುಳಿದ ವರ್ಗಕ್ಕೆ ಸೇರಿದವರು. ಈಗ ಅವರನ್ನು ಕಿಚಾಯಿಸಿ ಸ್ಪರ್ಧಿಸುವಂತೆ ಮಾಡಿದ್ದಾರೆ. ಬಿಜೆಪಿಯ ಅಭ್ಯರ್ಥಿಯಾಗಿ ಅವರು ಹಿಂದೆ ಸೋತವರು. ಈಗ ಹಿಂದುಳಿದ ವರ್ಗಗಳ ಮತಗಳ ಮೇಲೆ ಈಶ್ವರಪ್ಪ ಪ್ರಭಾವ ಬೀರಿದರೆ ಕಾಂಗ್ರೆಸ್ ಅಭ್ಯರ್ಥಿಗೆ ತೊಂದರೆಯಾಗಲಿದೆ.


ನಾವು ನೈರುತ್ಯ ಪದವೀಧರರ ಕ್ಷೇತ್ರದಲ್ಲಿ ಕಳೆದ ಏಳು ತಿಂಗಳುಗಳಿಂದ ಶ್ರಮಪಟ್ಟಿದ್ದೇವೆ. ಇದು ಪಕ್ಷ ವಿರೋಧಿ ಚಟುವಟಿಕೆ ಅಲ್ಲ ,ಸಾಕಷ್ಟು ವರ್ಷದಿಂದ ಪಕ್ಷಕ್ಕಾಗಿ ದುಡಿದಿದ್ದೇವೆ ಶ್ರಮಕ್ಕೆ ಪ್ರತಿಫಲವನ್ನು ಹಕ್ಕಿನಿಂದ ಕೇಳುತ್ತಿದ್ದೇವೆ.
ನಮ್ಮನೆ ಯಜಮಾನರಿಗೆ ನಮ್ಮ ನೋವು ಹೇಳಿಕೊಳ್ಳಲು ನಮಗೆ ಹಕ್ಕಿದೆ.ಈಗ ಅಭ್ಯರ್ಥಿ ಅನ್ನಿಸಿಕೊಂಡವರು ನಮ್ಮ ಬಗ್ಗೆ ಹಿಂದೆಲ್ಲ ಏನು ಮಾತಾಡಿದ್ದಾರೆಂದು ಗೊತ್ತಿದೆ. ಟಿಕೆಟ್ ಸಿಗುವ ಅಧಿಕೃತತೆ ಸಿಕ್ಕಿ ಬೆಣ್ಣೆ ಹಚ್ಚುವ ಕೆಲಸ ಮಾಡುತ್ತಿದ್ದಾರೆ. ಇಂಥವರಿಗೆ ನಾನು ಚುನಾವಣೆ ಮಾಡುವುದಿಲ್ಲ. ಬದಲಾವಣೆ ಸಾಧ್ಯವಾಗದಿದ್ದರೆ ಮುಂದಿನ ನಿರ್ಧಾರ ಮಾಡ್ತೀವಿ. ಈ ಚುನಾವಣೆಯಲ್ಲಿ ನಾವು ಇವರ ಪರ ನಿಲ್ಲುವುದಿಲ್ಲ. ನಮ್ಮ ಪರವಾಗಿ ದುಡಿದವರಿಗೆ ಅನ್ಯಾಯವಾಗಲು ಬಿಡುವುದಿಲ್ಲ. ಈ ಬಗ್ಗೆ ಎಲ್ಲ ನಾಯಕರಿಗೂ ತಿಳಿಸಿದ್ದೇವೆ.

ರಂಗಸ್ವಾಮಿ ಗೌಡ( ನೈರುತ್ಯ ಪದವೀಧರ ಕ್ಷೇತ್ರದ ಮತ್ತೋರ್ವ ಅಪೇಕ್ಷಿತ);

ಕಾಂಗ್ರೆಸ್ ನಲ್ಲಿ ತೆರೆಮರೆಯಲ್ಲಿದ್ದೇ ಕೆಲಸ ಮಾಡಿಕೊಂಡು ಬಂದೆ. ಕಳೆದ ಐದು ವರ್ಷಗಳಿಂದ ನೈರುತ್ಯ ಚುನಾವಣೆಗೆ ಸಿದ್ಧತೆ ಮಾಡಿದ್ದೆ.
ಇಬ್ಬರೇ ಇದ್ದಿದ್ದು. ಆಯನೂರು ಮಂಜುನಾಥ್ ರವರ ಸೇರ್ಪಡೆ ಸಂದರ್ಭದಲ್ಲಿ ಕೆಪಿಸಿಸಿ ಅಧ್ಯಕ್ಷರು ಸ್ಪಷ್ಟಪಡಿಸಿದ್ದರು.

ನಮ್ಮ ಪಕ್ಷ ನಮ್ಮ ಹಕ್ಕು. ಕಾರ್ಯಕರ್ತರಿಗೆ ಯಾರಿಗಾದರೂ ಕೊಡಿ. ಅವಕಾಶಕ್ಕೋಸ್ಕರ ಬಂದು ಅಭ್ಯರ್ಥಿಗಳಾದವರಿಗೆ ಮಣೆ ಹಾಕುವುದಾದರೆ ನಮಗೇನು ಬೆಲೆ ಏನು ಎಂದು? ಎಲ್ಲದನ್ನೂ ಅನುಭವಿಸಿದ್ದಾರೆ. ಈಗ ಸುಮ್ಮನೆ ಮನೆಗಿರಬಹುದು. ಈಶ್ವರಪ್ಪರಿಗೆ ಓಟು ಹಾಕ್ತೀನಿ ಅಂದೋರಿಗೆ ನಾವು ಓಟು ಕೇಳುವುದು ಹೇಗೆ? ಅಭ್ಯರ್ಥಿ ಆಯ್ಕೆ ಬಗ್ಗೆ ಗೊಂದಲವಿದೆ.ದಿನೇಶ್ ಮತ್ತು ನನಗೆ ಇಬ್ಬರಲ್ಲಿ ಒಬ್ಬರಿಗೆ ಟಿಕೆಟ್ ಕೊಟ್ಟರೂ ಎಲ್ಲರೂ ಒಗ್ಗಟ್ಟಾಗಿ ಕೆಲಸ ಮಾಡ್ತೇವೆ.ದಶಕಗಳಿಂದ ಕೆಲಸ ಮಾಡುತ್ತಿರುವವರನ್ನು ಪರಿಗಣಿಸಿ.
ಕೆಪಿಸಿಸಿ ಅಧ್ಯಕ್ಷರು ಆದೇಶ ಬಂದಿದೆ ಎಂದು ಅಧಿಕೃತ ಮಾಡಿಲ್ಲ ಎಂದರು. ಸುದ್ದಿ ಗೋಷ್ಠಿಯಲ್ಲಿ
ವಿಶ್ವನಾಥ ಕಾಶಿ, ಜ್ಯೋತಿ ಅರಳಪ್ಪ, ಸತೀಶ್, ಕುಮಾರ್ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Optimized by Optimole
error: Content is protected !!