ಐಪಿಎಲ್ ಬೆಟ್ಟಿಂಗ್ ಚಟಕ್ಕೆ ಬಿದ್ದ ಪತಿ! ಒಂದೂವರೆ ಕೋಟಿ ಸಾಲ.! ಸಾಲ ಕೊಟ್ಟವರ ಕಿರುಕುಳಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ..!?

ಐಪಿಎಲ್ ಬೆಟ್ಟಿಂಗ್ ಚಟಕ್ಕೆ ಬಿದ್ದ ಪತಿ! ಒಂದೂವರೆ ಕೋಟಿ ಸಾಲ.! ಸಾಲ ಕೊಟ್ಟವರ ಕಿರುಕುಳಕ್ಕೆ ಬೇಸತ್ತು ಪತ್ನಿ ಆತ್ಮಹತ್ಯೆ..!?

ಅಶ್ವಸೂರ್ಯ/ಶಿವಮೊಗ್ಗ ; ಐಪಿಎಲ್ ಬೆಟ್ಟಿಂಗ್ ನಲ್ಲಿ ಪತಿ ಒಂದೂವರೆ ಕೋಟಿ ರೂಪಾಯಿ ಕಳೆದು ಕೊಂಡು ಸಾಲದ ಸುಳಿಗೆ ಸಿಲುಕಿದ್ದಾನೆ.ಸಾಲ ಕೊಟ್ಟವರ ನಿತ್ಯ ಕಿರುಕುಳಕ್ಕೆ ಮನನೊಂದು ಮಹಿಳೆಯೊಬ್ಬರು ಆತ್ಮಹತ್ಯೆಗೆ ಶರಣಾಗಿದ್ದಾರೆ.!

ಕೋಟೆ ನಾಡು ಚಿತ್ರದುರ್ಗದ ನಿವಾಸಿ ದರ್ಶನ್ ಬಾಬುಗೆ ಐಪಿಎಲ್ ಬೆಟ್ಟಿಂಗ್ ಆಡುವ ಚಟ ಅದಕ್ಕಾ ಕೋಟಿ ಗಟ್ಟಲೆ ಸಾಲಮಾಡಿಕೊಂಡಿದ್ದನಂತೆ.!? ಅವರ ಪತ್ನಿ ರಂಜಿತಾ (23) ಪತಿಗೆ ಹಣ ಕೊಟ್ಟವರ ಕಿರುಕುಳ ತಾಳಲಾರದೆ ಮನೆಯೊಳಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ.

ರಂಜಿತಾ ಅವರ ಪತಿ ದರ್ಶನ್ ಬಾಬುಗೆ ಒಳ್ಳೆಯ ಕೆಲಸವೆ ಇತ್ತು ಹೊಸದುರ್ಗದ ನೀರಾವರಿ ಇಲಾಖೆಯಲ್ಲಿ ಸಹಾಯಕ ಎಂಜಿನಿಯರ್ ಆಗಿದ್ದ ದರ್ಶನ್ 2021 ರಿಂದ ಐಪಿಎಲ್ ಬೆಟ್ಟಿಂಗ್‌ನ ಸುಳಿಗೆ ಸಿಲುಕಿದ್ದ.! ಬೆಟ್ಟಿಂಗ್ ಚಟಕ್ಕಾಗಿ ಹಲವರಿಂದ ಲಕ್ಷಾಂತರ ರೂಪಾಯಿ ಹಣವನ್ನು ಸಾಲ ಪಡೆದಿದ್ದನಂತೆ.!? ಈತನಿಗೆ ಅದೃಷ್ಟವೂ ಬೆನ್ನಿಗಿರಲಿಲ್ಲ ಬೆಟ್ಟಿಂಗ್ ನಲ್ಲಿ ಸೋತು ಸುಣ್ಣವಾಗಿದ್ದ.ಎಲ್ಲವನ್ನೂ ಕಳೆದುಕೊಂಡು ಕುಳಿತಿದ್ದ.ಐಪಿಎಲ್ ಮತ್ತು ಕ್ರಿಕೆಟ್ ಪಂದ್ಯಾವಳಿಗಳ ಸೋಲು ಗೆಲುವಿನ ಲೆಕ್ಕಾಚಾರದಲ್ಲಿ ಬೆಟ್ಟಿಂಗ್ ಆಡಿದ ಭೂಪ ಎಲ್ಲವನ್ನೂ ಕಳೆದುಕೊಂಡು ಸುಮಾರು ಒಂದು ಕೋಟಿ ರೂಪಾಯಿ ಸಾಲ ಮಾಡಿಕೊಂಡಿದ್ದನಂತೆ.!?
ಇದರಿಂದ ಕುಟುಂಬದ ಆರ್ಥಿಕ ಸ್ಥಿತಿ ನೆಲಕಚ್ಚಿದೆ. ಸಾಲ ಮಾಡಿದ ಹಣವನ್ನು ಮರುಪಾವತಿಸಲು ಸಾಧ್ಯವಾಗದೆ ಗಂಡನಿಗೆ ಸಾಲಗಾರರು ನೀಡುವ ಕಿರುಕುಳಕ್ಕೆ ಬೆಸತ್ತು ರಂಜಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಮತ್ತು ಸಾಲಗಾರರು ನಿತ್ಯ ಕುಟುಂಬಕ್ಕೆ ಕಿರುಕುಳ ನೀಡಿದ್ದಾರೆ ಎಂದು ಆಕೆಯ ಹೆತ್ತವರು ತಿಳಿಸಿದ್ದಾರೆ.
ಸಾಲಗಾರರ ನಿರಂತರ ಕಿರುಕುಳವೇ ಮಗಳ ಆತ್ಮಹತ್ಯೆಗೆ ಕಾರಣ ಎಂದು ರಂಜಿತಾ ತಂದೆ ವೆಂಕಟೇಶ್ ಪೊಲೀಸರಿಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ದರ್ಶನ್ ಮತ್ತು ರಂಜಿತಾ 2020 ರಲ್ಲಿ ವಿವಾಹವಾದರು. ದಂಪತಿಗೆ ಎರಡು ವರ್ಷದ ಮಗನಿದ್ದಾನೆ. ಎಲ್ಲಾ ಇದ್ದು ಪುಗಸ್ಸಟ್ಟೆ ಹಣದ ಬೆನ್ನಿಗೆ ಬಿದ್ದು ಮುದ್ದಾದ ಮಡದಿಯನ್ನೆ ಕಳೆದುಕೊಂಡಿದ್ದಾನೆ ದರ್ಶನ್

Leave a Reply

Your email address will not be published. Required fields are marked *

Optimized by Optimole
error: Content is protected !!