ಸಚಿವ ಚಲುವನಾರಾಯಣ ಸ್ವಾಮಿ
ಅಪ್ಪ ಮಗನಿಗೆ ಮದುವೆ ಮಾಡಲು ಹೋಗಿ ತಾನೆ ಮದುವೆಯಾಗಿದ್ದಾರೆ; ಸಚಿವ ಚಲುವನಾರಾಯಣ ಸ್ವಾಮಿ
ASHWASURYA/SHIVAMOGGA
✍️ SUDHIR VIDHATA
ಅಶ್ವಸೂರ್ಯ/ಶಿವಮೊಗ್ಗ: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸಿಎಸ್ ಪುಟ್ಟರಾಜು ಅಭ್ಯರ್ಥಿ ಎಂದು ಹೇಳಿ ಇದೀಗ ಕುಮಾರಸ್ವಾಮಿಯವರೇ ಅಭ್ಯರ್ಥಿಯಾಗಿದ್ದಾರೆ. ಕೇಳಿದರೆ ಬಿಜೆಪಿಯವರ ಇಚ್ಚೇ ಎಂದು ಹೇಳುತ್ತಿದ್ದಾರೆ.? ಮಗನಿಗೆ ಮದುವೆ ಮಾಡಲು ಹೋಗಿ ಅಪ್ಪನೇ ಮದುವೆ ಆದಂತೆ ಆಗಿದೆ ಈ ಕ್ಷೇತ್ರದ ಘೋಷಿತ ಅಭ್ಯರ್ಥಿಯನ್ನು ನೋಡಿದರೆ.! ಮಂಡ್ಯ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಹೆಚ್ ಡಿ ಕುಮಾರಸ್ವಾಮಿ ಸ್ಪರ್ಧಿಸುವ ವಿಚಾರವಾಗಿ ಸಚಿವ ಚಲುವನಾರಾಯಣ ಸ್ವಾಮಿ ವ್ಯಂಗ್ಯವಾಗಿ ಮಾತನಾಡಿದ್ದಾರೆ.
ಮಂಡ್ಯದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಚಿವ ಚೆಲುವನಾರಾಯಣ ಸ್ವಾಮಿ, ಮೊದಲು ಮಂಡ್ಯ ಕ್ಷೇತ್ರಕ್ಕೆ ಸಿ ಎಸ್ ಪುಟ್ಟರಾಜು ಅಭ್ಯರ್ಥಿ ಎಂದು ಹೇಳಿಕೊಂಡು ತಿರುಗಾಡುತ್ತಿದ್ರು ಇದೀಗ ತಾವೇ ಅಭ್ಯರ್ಥಿ ಆಗಿದ್ದಾರೆ. ಒಳ್ಳೇ ಹುಡುಗಿ ಇದ್ದಾಳೆ ಬೇರೆಯವರಿಗೆ ಯಾಕೆ ಮದುವೆ ಮಾಡಿಸಬೇಕು.!? ನಾನೇ ಮದುವೆ ಆಗ್ತೇನೆ. ಪುಟ್ಟರಾಜು ನಿನಗೆ ಮುಂದೆ ಒಳ್ಳೆ ಹುಡುಗಿ ಹುಡುಕೋಣ ಅಂದಿದ್ದಾರೆ ಎಂದು ಹೇಳುವಾಗ ಸಭೆಯಲ್ಲಿ ನಗುವಿನ ಅಲೆ ಎದ್ದಿದೆ. ಕಳೆದ ಚುನಾವಣೆಯಲ್ಲಿ ಸುಮಲತಾರನ್ನು ಇದೇ ಕುಮಾರಸ್ವಾಮಿ ನಿಂದಿಸಿದ್ದರು. ಈಗ ಸುಮಲತಾ ನನ್ನ ಸಹೋದರಿ ಇದ್ದಂತೆ ಅಕ್ಕ ಇದ್ದಂತೆ ಅನ್ನುತ್ತಿದ್ದಾರೆ. ಕಳೆದ ಚುನಾವಣೆಯಲ್ಲಿ ಈ ಮಾತು ಆಡಬೇಕಿತ್ತು. ಸುಮಲತಾ ನನ್ನ ಸಹೋದರಿ ಅಲ್ವಾ ಅವರೇ ಗೆಲ್ಲಲಿ, ನನ್ನ ಮಗ ಗೆದ್ದರೂ ಒಂದೇ, ಅಕ್ಕ ಸುಮಲತಾ ಗೆದ್ದರೂ ಒಂದೇ ಎಂದಿದ್ರೆ ಪಾಪ ಅಂಬರೀಶ್ ಅವರ ಆತ್ಮಕ್ಕೆ ಶಾಂತಿ ಸಿಗುತ್ತಿತ್ತು. ಆದರೆ ಅಂದು ಬಾಯಿಗೆ ಬಂದಂತೆ ಮಾತಾನಾಡಿದ್ದರು. ವೈಯಕ್ತಿಕ ತೇಜೋವಧೆ ಮಾಡಿದ್ದರು. ಈಗ ಬಿಜೆಪಿ ಜೆಡಿಎಸ್ ಮೈತ್ರಿ ಆದ ಬಳಿಕ ಸುಮಲತಾ ಸಹೋದರಿ ಅಂತಾ ಹೇಳುತ್ತಿದ್ದಾರೆ ಎಂದು ಕುಮಾರಸ್ವಾಮಿ ವಿರುದ್ಧ ತೀವ್ರವಾಗಿ ವಾಗ್ದಾಳಿ ಮಾಡಿದ್ದಾರೆ ಸಚಿವ ಚಲುವ ನಾರಯಣ ಸ್ವಾಮಿ.!