ಶೋಭಾ ಕರಂದ್ಲಾಜೆ ವಿರುದ್ಧದ ಕೆಐಎಡಿಬಿ ಹಗರಣ ಮುನ್ನಲೆಗೆ, ವಿಚಾರಣೆಗೆ ಸಚಿವೆ ಗೈರು.!
ಶಿವಮೊಗ್ಗ; ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ಚಿಕ್ಕಮಗಳೂರು- ಉಡುಪಿ ಕ್ಷೇತ್ರದ ಹಾಲಿ ಸಂಸದೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಮ್ಮ ವಿರುದ್ಧದ ಕೆಐಎಡಿಬಿ ಮತ್ತು ಹಣ ವರ್ಗಾವಣೆ ಪ್ರಕರಣ ಮುನ್ನಲೆಗೆ ಬಂದಿದೆ. ಲೋಕಸಭಾ ಚುನಾವಣೆಗೆ ಇನ್ನೇನು ಕೆಲವೇ ದಿನಗಳು ಬಾಕಿ ಇರುವಾಗಲೇ ಚಿಕ್ಕಮಗಳೂರು – ಉಡುಪಿ ಕ್ಷೇತ್ರದ ಹಾಲಿ ಸಂಸದೆ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ತಮ್ಮ ವಿರುದ್ಧದ ಕೆಐಎಡಿಬಿ ಮತ್ತು ಹಣ ವರ್ಗಾವಣೆ ಪ್ರಕರಣ ಮುನ್ನಲೆಗೆ ಬಂದಿದೆ. ಇಡಿ ಪ್ರಕರಣದ ವಿಚಾರಣೆಗೆ ಶೋಭಾ ಕರಂದ್ಲಾಜೆ ಗೈರು ಹಾಜರಾಗಿದ್ದಾರೆ.
ಕೆಐಎಡಿಬಿ (ಕರ್ನಾಟಕ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ) ಹಗರಣದಲ್ಲಿ ಅಕ್ರಮ ಹಣ ವರ್ಗಾವಣೆ ಪ್ರಕರಣ ಶೋಭಾ ಮೇಲಿದ್ದು, ಇವರಲ್ಲದೆ ಮಾಜಿ ಸಚಿವ ಕಟ್ಟಾ ಸುಬ್ರಹ್ಮಣ್ಯ ನಾಯ್ಡು ಸೇರಿ 24 ಮಂದಿ ವಿರುದ್ಧದ ಕೇಸ್ ಇದೆ.
ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಈ ಹಗರಣದ ಬಗ್ಗೆ ವಿಚಾರಣೆ ನಡೆಯುತ್ತಿದ್ದು ಈಗ ವಿಚಾರಣೆಗೆ ಶೋಭಾ ಕರಂದ್ಲಾಜೆ ಗೈರಾಗಿದ್ದು, ವಿಚಾರಣೆಗೆ ಹಾಜರಾತಿ ವಿನಾಯಿತಿ ಕೋರಿ ಅರ್ಜಿ ಸಲ್ಲಿಸಲಾಗಿದೆ. ಇಡಿ ಪರ ವಕೀಲರು ಗೈರು ಹಿನ್ನಲೆ ವಿಚಾರಣೆಯನ್ನು ಏಪ್ರಿಲ್ 3ಕ್ಕೆ ಕೋರ್ಟ್ ಮುಂದೂಡಿದೆ.
ಏನಿದು ಪ್ರಕರಣ:
ಕೆಐಎಡಿಬಿ ಹಗರಣಕ್ಕೆ ಸಂಬಂಧಿಸಿದಂತೆ ಇಟಾಸ್ಕಾ ಕಂಪನಿಯಿಂದ ಕಟ್ಟಾ ಸುಬ್ರಮಣ್ಯ ನಾಯ್ಡು ಪಡೆದ ಲಂಚದಲ್ಲಿ ಸಚಿವೆ ಶೋಭಾ ಕರಂದ್ಲಾಜೆಗೂ
ಪಾಲು ಸಿಕ್ಕಿದೆ ಎನ್ನಲಾಗಿದ್ದು, ಇಟಾಸ್ಕಾದಿಂದ ಬಂದಿದ್ದ 87 ಕೋಟಿ ರೂ ಕಿಕ್ ಬ್ಯಾಕ್ ನಲ್ಲಿ 47 ಕೋಟಿ ರೂ. ಶೋಭಾ ಅವರಿಗೆ ಸಂದಿದೆ ಎಂದು ಇಡಿ ಪತ್ತೆ ಮಾಡಿತ್ತು. ಇದಕ್ಕೆ ಪುರಾವೆ ಎಂಬಂತೆ ಶೋಭಾ ಅವರ ಅಕೌಂಟ್ಗೆ 70 ಲಕ್ಷ ರೂ ವರ್ಗಾವಣೆ ಆಗಿತ್ತು. ನಂತರ ಮಾಧ್ಯಮದಲ್ಲಿ ಹಗರಣದ ವರದಿ ಬಹಿರಂಗವಾಗುತ್ತಿದ್ದಂತೆಯೇ ಶೋಭಾ ತಾನು ಪಡೆದ ಹಣ ‘ಸಾಲ’ವೆಂದು ತೋರಿಸಲು ತನ್ನ ಅಕೌಂಟಿನಿಂದ ಅಷ್ಟು ಮೊತ್ತ ಮೈನಸ್ ಆಗಿರುವಂತೆ ವ್ಯವಹಾರ ನಡೆಸಿರುವುದು ಬೆಳಕಿಗೆ ಬಂದಿತ್ತು.
ಜಿವಿ ಇನ್ಫ್ರಾಸ್ಟ್ರಕ್ಚರ್ ಕಂಪೆನಿಗೆ ಶೋಭಾರಿಂದ ಹಣ ಮರುಪಾವತಿಯಾಗಿರುವ ದಾಖಲೆಗಳನ್ನು ಅಧಿಕಾರಗಳು ಪಡೆದುಕೊಂಡಿದ್ದರು. ಅಲ್ಲಿಂದ ಮುಂದೆ ಈ ಹಣ ಕಟ್ಟಾಗೆ ಮರಳಿ ಪಾವತಿಯಾಗಿದೆ. ಇದನ್ನು ಕಟ್ಟಾಗೆ ಶೋಭಾ ಮರಳಿಸಿದ ಹಣ ಎನ್ನಲು ಸಾಧ್ಯವೇ ಎನ್ನುವ ಬಗ್ಗೆ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.
2011ರ ಈ ಪ್ರಕರಣದಲ್ಲಿ ಕೆಐಎಡಿಬಿ ಭೂಹಗರಣಕ್ಕೆ ಸಂಬಂಧಪಟ್ಟಂತೆ ಕಟ್ಟಾಸುಬ್ರಹ್ಮಣ್ಯ ನಾಯ್ಡು ಸಚಿವ ಸ್ಥಾನವನ್ನು ಕಳೆದುಕೊಂಡು, ಜೈಲುಪಾಲಾಗಿದ್ದರು. ಕಟ್ಟಾ ಅವರ ಮಗ ಜಗದೀಶ್ ಕಟ್ಟಾ, ಇಟಾಸ್ಕಾ ಕಂಪನಿ ಎಂಡಿ ಸೇರಿದಂತೆ ಒಟ್ಟು 24 ಮಂದಿ ಪ್ರಕರಣದ ಪ್ರಮುಖರಾಗಿದ್ದರು. ಕೋರ್ಟ್ ನಲ್ಲಿ ನಿಧಾನಗತಿಯ ವಿಚಾರಣೆ ನಡೆಯುತ್ತಿದ್ದು, ಈಗಾಗಲೇ ಈ ಪ್ರಕರಣಕ್ಕೆ 10 ವರ್ಷ ದಾಟಿದೆ.
ಮುಂದೇನು ಎನ್ನುವುದು ಮಾತ್ರ ಯಕ್ಷ ಪ್ರಶ್ನೆಯಾಗಿದೆ.,?