ಡಮ್ಮಿ ಬಂಡಾಯ ಅಭ್ಯರ್ಥಿ ಕೆ.ಎಸ್ ಈಶ್ವರಪ್ಪ , ಇದು ಬಿಜೆಪಿಯ ಕುತಂತ್ರ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಗೀತಾ ಶಿವರಾಜ್‌ ಕುಮಾರ್ ಗೆಲುವು ನಿಶ್ಚಿತ : ಆಯನೂರು ಮಂಜುನಾಥ್

ಡಮ್ಮಿ ಬಂಡಾಯ ಅಭ್ಯರ್ಥಿ ಕೆ.ಎಸ್.ಈಶ್ವರಪ್ಪ, ಇದು ಬಿಜೆಪಿಯ ಕುತಂತ್ರ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಗೀತಾ ಶಿವರಾಜ್‌ಕುಮಾರ್ ಗೆಲುವು ನಿಶ್ಚಿತ : ಆಯನೂರು ಮಂಜುನಾಥ್

ಶಿವಮೊಗ್ಗ :ಶಿವಮೊಗ್ಗ ಕ್ಷೇತ್ರದಲ್ಲಿ ಇಂದಿನಿಂದ ಕಾಂಗ್ರೆಸ್ ಅಭ್ಯರ್ಥಿ ಶ್ರೀಮತಿ ಗೀತಾ ಶಿವರಾಜ್‌ಕುಮಾರ್ ಪ್ರಚಾರ ಕಾರ್ಯಕ್ರಮವನ್ನು ಆರಂಭಿಸಲಿದ್ದಾರೆ.ಇವರೊಂದಿಗೆ ಹಲವಾರು ನಾಯಕರುಗಳು ಜೋತೆಗಿದ್ದು ಸಹೋದರಿ ಗೀತಾ ಅವರ ಗೆಲುವಿಗಾಗಿ ಪ್ರಚಾರದಲ್ಲಿ ಹೆಜ್ಜೆಹಾಕಲಿದ್ದಾರೆ ಎಂದು ಕಾಂಗ್ರೆಸ್ ಪಕ್ಷದ ನೈರುತ್ಯ ಪದವಿದರ ಕ್ಷೇತ್ರದ ಅಭ್ಯರ್ಥಿ ಆಯನೂರು ಮಂಜುನಾಥ್ ತಿಳಿಸಿದರು.


ಅವರು ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಾ ದೀನದಲಿತರ ಧಿಮಂತ ನಾಯಕರಾದ ಎಸ್.ಬಂಗಾರಪ್ಪನವರ ಮಗಳು ಗೀತಾ ಶಿವರಾಜ್‌ಕುಮಾರ್ ಅಪ್ಪನ ಸೋಲಿನ ಸೇಡನ್ನು ತೀರಿಸಿಕೊಳ್ಳುವ ನಿಟ್ಟಿನಲ್ಲಿ ಈ ಬಾರಿ ಕಾಂಗ್ರೆಸ್‌ ಪಕ್ಷದಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿದ್ದಾರೆ.ಈ ಬಾರಿಯ ಚುನಾವಣೆಯಲ್ಲಿ ಇವರು ಅಚ್ಚರಿ ಫಲಿತಾಂಶದೊಂದಿಗೆ ಗೆಲುವು ಸಾಧಿಸುವುದು ನಿಶ್ಚಿತ ಎಂದರು.

ಬಿಜೆಪಿಯಲ್ಲಿ ಕುತಂತ್ರ ರಾಜಕಾರಣ ಮಾಡುವ ದೃಷ್ಟಿಯಿಂದ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಡಮ್ಮಿ ಅಭ್ಯರ್ಥಿಯಾಗಿ ಕೆ.ಎಸ್.ಈಶ್ವರಪ್ಪನವರನ್ನು ಚುನಾವಣೆ ಕಣದಲ್ಲಿರಿಸಿದ್ದಾರೆ ಇದೊಂದು ನಾಟಕವಷ್ಟೆ ಇವರು ಹುಸಿ ಬಂಡಾಯದ ಬಾವುಟ ಹಾರಿಸಿದ್ದಾರೆ ಹೊರತು ಬೇರೆನು ಅಲ್ಲ ಎಂದರು.
ಬಿಜೆಪಿ ಕೆ.ಎಸ್,ಈಶ್ವರಪ್ಪನವರನ್ನು ಹಿಂದೂಳಿದ ನಾಯಕ ಎನ್ನುವಂತೆ ಬಿಂಬಿಸಿ ಮತ ಒಡೆಯುವ ಯತ್ನ ಮಾಡುತ್ತಿದ್ದಾರೆ ಮೇಲ್ನೋಟಕ್ಕೆ ಬಿ.ಎಸ್.ಯಡಿಯೂರಪ್ಪನವರನ್ನು ಬಾಯಿಗೆ ಬಂದಂತೆ ಬೈಯುವುದು ಇದರಿಂದ ಮೇಲ್ಜಾತಿಯ ಮತಗಳನ್ನು ಸೆಳೆಯುವ ಹುನ್ನಾರವನ್ನು ಬಿಜೆಪಿ ತಂತ್ರಗಾರಿಕೆಯಾಗಿದೆ ಈ ಕಾರಣಕ್ಕೆ ಈಶ್ವರಪ್ಪ ಬಂಡಾಯ ಅಭ್ಯರ್ಥಿ ಎಂದು ಬಿಂಬಿಸಿಕೊಂಡು ಚುನಾವಣೆಗೆ ಇಳಿದಿದ್ದಾರೆ ಅಷ್ಟೇ.!

ಅದಕ್ಕೆ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಇದರಿಂದ ಬಿಜೆಪಿ ಅವರಿಗಾಗಲಿ ಬಂಡಾಯ ಈಶ್ವರಪ್ಪ ನವರಿಗಾಗಲಿ ಯಾವುದೇ ಪ್ರಯೋಜನವಾಗಲ್ಲ ಎಂದು ವ್ಯಂಗ್ಯವಾಗಿ ಮಾತನಾಡಿದರು.
1985 ರಲ್ಲಿ ಈಶ್ವರಪ್ಪರನವರನ್ನು ನಾನು ಲಿಂಗಾಯತ ನಾಯಕ ಎಂದು ಸುಳ್ಳು ಹೇಳಿ ಗೆಲುವು ಸಾಧಿಸಲು ಸಹಕರಿಸಿದ್ದೆ. ಅದೇ ತಂತ್ರಗಾರಿಕೆಯನ್ನು ಬಿಜೆಪಿಯ ಕೆಲವು ನಾಯಕರು ಇಂದು ಈಶ್ವರಪ್ಪನವರನ್ನು ಮುಂದಿಟ್ಟುಕೊಂಡು ಹಿಂದೂಳೀದ ನಾಯಕರನ್ನಾಗಿ ಬಿಂಬಿಸುವ ಹುನ್ನಾರ ಮಾಡುತ್ತಿದ್ದಾರೆ ಅಷ್ಟೇ ಎಂದರು.
ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಬಿ.ವೈ.ರಾಘವೇಂದ್ರ ಗೆಲ್ಲಿಸುವ ಹುನ್ನಾರದಿಂದ ಸಿದ್ದರಾಮಯ್ಯನವರ ಜೊತೆ ಸೇರಿಕೊಂಡು ಯಡಿಯೂರಪ್ಪನವರು ಡಮ್ಮಿ ಅಭ್ಯರ್ಥಿಯನ್ನು ಕಣಕ್ಕಿಳಿಸಿದ್ದಾರೆಂದು ಹೇಳುವ ಈಶ್ವರಪ್ಪನವರಿಗೆ ಮುಂದಿನ ದಿನಗಳನ್ನು ಅಚ್ಚರಿ ಫಲಿತಾಂಶದ ಮೂಲಕ ಉತ್ತರ ನೀಡುತ್ತೇವೆ ಎಂದರು.ಆಗ ಅವರೇನು ಹೇಳುತ್ತಾರೆ ನೋಡೊಣ.


ರಾಜಕೀಯ ನಿವೃತ್ತಿ ನಂತರದಲ್ಲಿ ಈಶ್ವರಪ್ಪನವರಿಗೆ ಗಂಡಸ್ತನ ಬಂದಿರುವುದು ಸಂತಸ ತಂದಿದೆ ಇದು ಎಲ್ಲಯವರಗೆ ಮುಂದುವರೆಯುವುದು ಗೊತ್ತಿಲ್ಲ. ಬಿಜೆಪಿಯವರು ನಿಮಗೆ ರಾಜ್ಯಪಾಲರನ್ನಾಗಿ ಮಾಡುತ್ತೇವೆ ಎಂದರೆ ಚುನಾವಣೆಯಿಂದ ಹಿಂದೇ ಸರಿಯುವ ಎಲ್ಲಾ ಸಾಧ್ಯತೆಗಳಿವೆ. ಇದು ಕೇವಲ ಬ್ಲಾಕ್‌ಮೇಲ್ ರಾಜಕಾರಣ, ಬದ್ದತೆ ಇಲ್ಲದ ರಾಜಕಾರಣ, ಇವರು ಹೀಗೆ ಮುಂದುವರೆದರೆ ಇಡಿ.ಐಟಿ ಎಂಬ ಭಯದ ಬಂದೂಕನ್ನು ಬೆನ್ನ ಹಿಂದೆ ಇಟ್ಟು ಭಯ ಹುಟ್ಟಿಸುವ ಕೆಲಸ ಮಾಡುತ್ತಾರೆ ಎಂದು ಕುಟುಕಿದರು.


ಈಶ್ವರಪ್ಪನವರ ಈ ಬಂಡಾಯದ ಹಿಂದೆ ಯಡಿಯೂರಪ್ಪ ವರ್ಚಸ್ಸು ಕಡಿಮೆ ಮಾಡುವುದು ವಿಜೇಂದ್ರನನ್ನು ರಾಜ್ಯಾಧ್ಯಕ್ಷರ ಸ್ಥಾನದಿಂದ ಕೆಳಗಿಳಿಸುವುದು, ಮೊದಲೇ ಹೇಳಿದ್ದೆ ಈಶ್ವರಪ್ಪನವರ ನಾಲಿಗೆ ಹಿಡಿತವಿಲ್ಲ ಬಾಯಿಗೆ ಹೊಲಿಗೆ ಹಾಕಬೇಕು ಎಂದು ಈಗ ಬಿಜೆಪಿಯವರಿಗೆ ಸಂಕಟದ ಪರಿಸ್ಥಿತಿಯನ್ನು ಎದುರಿಸುತ್ತಿದ್ದಾರೆ ಎಂದರು.
ನಾವು ಯಾವಾಗಲು ಎದುರಾಳಿಯನ್ನು ನೋಡಿ ಅಸ್ತ್ರ ಪ್ರಯೋಗ ಮಾಡುತ್ತೇವೆ ಹೊರತು ಎಲ್ಲಾ ಅಸ್ತ್ರಗಳನ್ನು ಎಲ್ಲರಿಗೂ ಪ್ರಯೋಗ ಮಾಡುವುದಿಲ್ಲ, ನನಗೆ ಬಿಜೆಪಿಯ ಕೆಲವು ಕೋರ್ ಕಮಿಟಿಯ ಸದಸ್ಯರೇ ಹೇಳಿದಂತೆ ಇದೆಲ್ಲ ಕೇವಲ ನಾಟಕ, ಮತ್ತೇನು ವಿಶೇಷವಿಲ್ಲ ಎಂದು ಹೇಳಿದ್ದಾರೆಂದರು.
ಕೆ.ಎಸ್.ಈಶ್ವರಪ್ಪನವರು ಬಣ್ಣ ಹಚ್ಚದೆ ನಾಟಕವಾಡುವುದರಲ್ಲಿ ನಿಸ್ಸಿಮರಿದ್ದಾರೆ. ನಾನು ಏನೇ ಮಾತನಾಡಿದರು ಅವರು ಅದಕ್ಕೆ ಉತ್ತರ ನೀಡುವುದಿಲ್ಲ, ಅದು ನನ್ನ ಅವರ ಉತ್ತಮ ಸಂಬಂಧದ ಸಂಕೇತವಾಗಿದೆ ಎಂದರು.
ಈಶ್ವರಪ್ಪ ಹಿಂದುತ್ವದ ಆಧಾರದ ಮೇಲೆ ಮತ ಕೇಳುವುದು ಕಾನೂನು ಬಾಹಿರ, ಇದನ್ನು ಚುನಾವಣೆ ಅಯೋಗ ಗಂಭೀರವಾಗಿ ಪರಿಗಣಿಸಿ ಅವರು ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿದರು.


ಹಾಗೇ ಬಿಜೆಪಿ ಅಭ್ಯರ್ಥಿ ಕೂಡಾ ಎಲ್ಲಾ ಸ್ವಾಮೀಜಿಗಳನ್ನು ಭೇಟಿಮಾಡಿ ಮತಯಾಚನೆ ಮಾಡುತ್ತಿರುವುದು ಕಾನೂನು ಬಾಹಿರ ಇದರ ವಿರುದ್ಧ ಕ್ರಮಕೈಗೊಳ್ಳುವಂತೆ ಸೂಚನೆ ನೀಡಿದರು.
ಕಾನೂನು ಪರಿವೇ ಇಲ್ಲದ ಒಬ್ಬ ವ್ಯಕ್ತಿಯೆಂದರೆ ಕೆ.ಎಸ್.ಈಶ್ವರಪ್ಪ ಇವರನ್ನು ರಾಜ್ಯಪಾಲರನ್ನಾಗಿ ಮಾಡಿದರೇ ಸಂವಿಧಾನಕ್ಕೆ ಯಾವ ನ್ಯಾಯ ದೊರಕಿಸಿ ಕೊಡಬಹುದು ಎನ್ನುವುದೇ ದೊಡ್ಡ ಪ್ರಶ್ನೆಯಾಗಿದೆ ಎಂದರು.
ಶಿವಮೊಗ್ಗ ಲೋಕಸಭಾ ಚುನಾವಣೆಯಲ್ಲಿ ಶ್ರೀಮತಿ ಗೀತಾ ಶಿವರಾಜ್ ಕುಮಾರ್ ಹೆಚ್ಚಿನ ಅಂತರದಲ್ಲಿ ಗೆಲುವು ಸಾಧಿಸುವುದು ನಿಶ್ಚಿತ ಇದರಲ್ಲಿ ಯಾವುದೇ ಸಂದೇಹವಿಲ್ಲ ಎಲ್ಲರು ಒಟ್ಟಾಗಿ ಇವರ ಗೆಲುವಿಗೆ ಶ್ರಮಿಸುತ್ತೇವೆ ಎಂದರು.ಈ
ಸಂದರ್ಭದಲ್ಲಿ ವೈ.ಹೆಚ್.ನಾಗರಾಜ್. ಜಿ.ಡಿ.ಮಂಜುನಾಥ್, ಶಿ.ಜು.ಪಾಶ, ಜಿ.ಪದ್ಮನಾಭ, ನೇತ್ರಾವತಿ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

Optimized by Optimole
error: Content is protected !!