ಉಡುಪಿ :ಆತ್ಮಹತ್ಯೆಗೆ ಶರಣಾದ ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ವ್ಯವಸ್ಥಾಪಕಿ ಆಶಾ.!

ಉಡುಪಿ :ಆತ್ಮಹತ್ಯೆಗೆ ಶರಣಾದ ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ವ್ಯವಸ್ಥಾಪಕಿ ಆಶಾ.!!

ASHWASURYA/SHIVAMOGGA

✍️ SUDHIR VIDHATA

ಅಶ್ವಸೂರ್ಯ/ಶಿವಮೊಗ್ಗ : ಉಡುಪಿ ಜಿಲ್ಲೆಯ ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಪ್ರಭಾರ ವ್ಯವಸ್ಥಾಪಕಿಯೊಬ್ಬರು ಆತ್ಮಹತ್ಯೆಗೆ ಶರಣಾಗಿದಗದಾರೆ.ಸುಮಾರು 52 ವರ್ಷ ವಯಸ್ಸಿನ ಆಶಾ ಎಸ್, ಈ ಬದುಕು ಸಾಕು ಎಂದು ನೇಣಿನ ಕುಣಿಕೆಗೆ ಕೊರಳೋಡ್ಡಿ ಸಾವಿನಮನೆ ಸೇರಿದ್ದಾರೆ.!?, ಆಶಾ ಬುಧವಾರ ಮನೆಯಲ್ಲಿ ನೇಣು ಬಿಗಿದು ಆತ್ಮಹತ್ಯೆಗೆ ಶರಣಾಗಿದ್ದಾರೆ.

ಸಿದ್ದಾಪುರ ವ್ಯವಸಾಯ ಸೇವಾ ಸಹಕಾರಿ ಸಂಘದ ಪ್ರಭಾರ ವ್ಯವಸ್ಥಾಪಕಿಯಾಗಿದ್ದ ಆಶಾ ಅವರು ಬುಧವಾರ ಬೆಳಗ್ಗೆ ಕರ್ತವ್ಯಕ್ಕೆ ಹಾಜರಾಗಿದ್ದರು ಬಳಿಕ ಮಧ್ಯಾಹ್ನದ ಹೊತ್ತಿಗೆ ಕಚೇರಿಯಿಂದ ಯಾರಿಗೂ ಹೇಳದೆ ನೇರವಾಗಿ ಮನೆಗೆ ಹೋಗಿದ್ದಾರೆ,ತಮ್ಮ ಮನೆಯ ಮಹಡಿಯ ಕೋಣೆಯಲ್ಲಿ ಹಗ್ಗದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ.
ಸಾವಿಗೆ ಕಾರಣವೇನೆಂದು ತಿಳಿಯ ಹೊರಟರೆ ಬ್ಯಾಂಕ್ ಮೂಲಗಳ ಪ್ರಕಾರ ಆಶಾ ಅವರು ತಮ್ಮ ಚಿನ್ನವನ್ನು ಪತಿಯ ಹೆಸರಿನಲ್ಲಿ ಸಂಘದಲ್ಲಿ ಅಡವಿಟ್ಟು ಸಾಲ ಪಡೆದಿದ್ದರಂತೆ. ಚಿನ್ನವನ್ನು ಲಾಕರ್‌ನಲ್ಲಿ ಇಡುವ ಜವಾಬ್ದಾರಿಯನ್ನು ಅವರೇ ನಿಭಾಯಿಸುತ್ತಿದ್ದರಂತೆ.! ಬುಧವಾರ ಅಡಿಟ್‌ ನಡೆಯುವಾಗ ಅವರು ಅಡವಿಟ್ಟ ಚಿನ್ನ ಲಾಕರ್‌ನಲ್ಲಿ ಇಲ್ಲದಿರುವುದನ್ನು ಆಶಾ ಅವರಲ್ಲಿ ವಿಚಾರಿಸಲಾಗಿದೆ. ಚಿನ್ನ ಇಲ್ಲದಿರುವ ವಿಚಾರ ಹೊರಗಡೆಗೆ ಬಂದು ಅವಮಾನವಾಗುತ್ತದೆ ಎಂದು ಹೆದರಿ ಕಚೇರಿಯಲ್ಲಿ ಯಾರಿಗೂ ಹೇಳದೆ ಮನೆಗೆ ತೆರಳಿ ಆತ್ಮಹತ್ಯೆ ಮಾಡಿಕೊಂಡಿರ ಬಹುದು ಎನ್ನುವ ಶಂಕೆ ವ್ಯಕ್ತವಾಗಿದೆ.!
ಆಶಾ ಅವರು ಕಚೇರಿಯಲ್ಲಿ ಇಲ್ಲದಿರುವುದು ಗೊತ್ತಾದ ಬಳಿಕ ಹುಡುಕಾಟ ನಡೆಸಲಾಗಿತ್ತು. ಕೊನೆಯಲ್ಲಿ ಸಿಸಿ ಟಿವಿ ನೋಡಿದಾಗ, ಮನೆಯ ಕಡೆಗೆ ಸ್ಕೂಟಿ ತೆಗೆದುಕೊಂಡು ಹೋಗುತ್ತಿರುವುದು ಗೊತ್ತಾಗಿದೆ. ಕೂಡಲೇ ಮಹೇಶ್‌ ಹಾಗೂ ಸಿಬಂದಿ ಮಂಜುನಾಥ್ ಅವರು ಆಶಾ ಅವರ ಮನೆಗೆ ಬಂದು ನೋಡಿದಾಗ ಅವರು ನೇಣುಬಿಗಿದುಕೊಂಡಿದ್ದರುಆಶಾ ಅವರ ತಾಯಿ ಹೊರಬಂದು ಜೋರಾಗಿ ಬೊಬ್ಬೆ ಹಾಕಿದಾಗ ಸ್ಥಳೀಯರು ಬಂದು ಬಾಗಿಲು ಒಡೆದು ನೇಣಿನ ಕುಣಿಕೆಯಿಂದ ಆಶಾ ಅವರನ್ನು ಕೆಳಗೆ ಇಳಿಸಿ, ಕೂಡಲೇ ಸಿದ್ದಾಪುರ ಸರಕಾರಿ ಆಸ್ಪತ್ರೆಗೆ ತೆಗೆದುಕೊಂಡು ಹೋಗಿದ್ದಾರೆ ಅಲ್ಲಿ ಅವರನ್ನು ಬದುಕಿಸಲು ಸಾಧ್ಯವಿಲ್ಲ ಎಂದ ಕಾರಣಕ್ಕೆ ಕೂಡಲೇ ಅಲ್ಲಿಂದ ಮಣಿಪಾಲ್ ಆಸ್ಪತ್ರೆಗೆ ಕರೆದುಕೊಂಡು ಹೋಗುವಾಗ ದಾರಿ ಮಧ್ಯದಲ್ಲೆ ಸಾವನ್ನಪ್ಪಿದ್ದಾರೆ.
ಆಶಾ ಅವರಿಗೆ ಇಬ್ಬರು ಮಕ್ಕಳು. ಪುತ್ರ ಮದುವೆಯಾಗಿ ಯುಎಸ್‌ಎಯಲ್ಲಿ ಉದ್ಯೋಗದಲ್ಲಿದ್ದಾರೆ. ಪುತ್ರಿ ಉನ್ನತ ವ್ಯಾಸಂಗ ಮಾಡುತ್ತಿದ್ದರು. ಆತ್ಮಹತ್ಯೆಯ ಕೆಲವು ಕ್ಷಣಗಳ ಮೊದಲು ಮಗಳಿಗೆ ಸಾರೀ ಮಗಳೆ ಎಂದು ಮೆಸೇಜ್‌ ಮಾಡಿದ್ದರು ಎಂದು ತಿಳಿದುಬಂದಿದೆ. ಮನೆಗೆ ಬಂದಿದ್ದ ಆಶಾ ಮೊದಲು ತಾಯಿಯ ಹತ್ತಿರ ನೀನು ಊಟ ಮಾಡು. ನನಗೆ ಸೊಸೈಟಿಯ ಕೆಲಸ ಇದೆ. ನಾನು ಮಹಡಿಯ ಮೇಲಿನ ರೂಂನಲ್ಲಿ ಇರುತ್ತೇನೆ. ನನ್ನನ್ನು ಕರೆಯಬೇಡ ಎಂದು ಹೇಳಿದ್ದರಂತೆ.!
ಮಾಡಿದ ಒಂದು ತಪ್ಪು ಮಕ್ಕಳೊಂದಿಗೆ ಬಾಳಿ ಬದುಕ ಬೇಕಾದ ಸಂಧರ್ಭದಲ್ಲಿಯೇ ಅಶಾ ಅವರನ್ನು ಸಾವಿನ ಮನೆಗೆ ತಂದು ನಿಲ್ಲಿಸಿದೆ.! ದೇವರು ಎಲ್ಲಾ ಕೊಟ್ಟರು ದುರಾಸೆಗೆ ಬಿಳುವ ಕೆಲವು ಮಂದಿ ತಮ್ಮ ಕೈಯಾರ ತಮ್ಮ ಬದುಕನ್ನೆ ಅಂತ್ಯ ಮಾಡಿಕೊಳ್ಳುವ ಅದೇಷ್ಟೊ ಘಟನೆಗಳು ನಮ್ಮ ಮುಂದೆ ನೆಡೆಯುತ್ತಿದ್ದರು.ಕೇಲವರು ಮಾತ್ರ ಅದೇ ತಪ್ಪನ್ನು ಮಾಡುತ್ತಲೆ ಇರುತ್ತಾರೆ

Leave a Reply

Your email address will not be published. Required fields are marked *

Optimized by Optimole
error: Content is protected !!