Headlines

Interesting report: ಹೆಂಡತಿಯನ್ನು ಹತ್ಯೆಗೈದು ಅಂತ್ಯಸಂಸ್ಕಾರ ಮಾಡಿ ಜೈಲುಪಾಲಾಗಿದ್ದ ಗಂಡನಿಗೆ ಬಿಗ್‌ಶಾಕ್‌.! ನಾಲ್ಕು ವರ್ಷದ ಬಳಿಕ ಪ್ರಿಯಕರನ ಜೊತೆ ಪತ್ನಿ ಪ್ರತ್ಯಕ್ಷ.!ಹಾಗಾದರೆ ಅಂತ್ಯಸಂಸ್ಕಾರ ಮಾಡಿದ ಮೃತದೇಹ ಯಾರದ್ದು.? ಪೊಲೀಸರ ತಪ್ಪಿನಿಂದ ಶಿಕ್ಷೆ ಅನುಭವಿಸಿದ ಪತಿಗೆ ಪರಿಹಾರವೇನು.?

ಅಶ್ವಸೂರ್ಯ/ಮಡಿಕೇರಿ :ನನ್ನ ಹೆಂಡತಿ ನಾಪತ್ತೆಯಾಗಿದ್ದಾಳೆ ಎಂದು ಪತಿಯಿಂದ ದೂರು.ನಾಟಕೀಯ ಬೆಳವಣಿಗೆಯಲ್ಲಿ ಮೃತ ಪತ್ನಿಯ ಶವಕ್ಕೆ ಪತಿಯಿಂದಲೆ ಅಂತ್ಯಸಂಸ್ಕಾರ.! ಪತ್ನಿಯನ್ನು ಕೊಲೆಗೈದ ಆರೋಪದ ಅಡಿ ಪತಿ ಜೈಲುಪಾಲಗಿದ್ದು ನಂತರ ಜೈಲು ಶಿಕ್ಷೆಯಿಂದ ಹೇಗೋ ಹೊರಬಂದ ನಂತರ ಪತಿಗೆ ನಾಲ್ಕು ವರ್ಷದ ನಂತರ ʼಮೃತ ಪತ್ನಿʼಯನ್ನು ಜೀವಂತವಾಗಿ ನೋಡಿ ಶಾಕ್‌.!
ಇದು ಯಾವುದೋ ಸಿನಿಮಾ ಕಥೆಯಲ್ಲ. ಕೊಡಗಿನ ಕುಶಾಲನಗರ ತಾಲ್ಲೂಕಿನ ಬಸವನಹಳ್ಳಿ ಗ್ರಾಮದಲ್ಲಿ ನಡೆದ ನೈಜ ಘಟನೆ.ಪತಿಯಿಂದ ಹತ್ಯೆಯಾಗಿದ್ದ ಪತ್ನಿ ವರ್ಷದ ಬಳಿಕ ದಿಢೀರ್‌ ಪ್ರತ್ಯಕ್ಷವಾಗುವ ಮೂಲಕ ನಾಪತ್ತೆ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ.
ಪತಿಯಿಂದ ದೂರು.
ಕುಶಾಲನಗರ ತಾಲ್ಲೂಕಿನ ಬಸವನಹಳ್ಳಿ ಗ್ರಾಮದ ಆದಿವಾಸಿ ಜನಾಂಗದ ಸುರೇಶ್‌ ಮಲ್ಲಿಗೆಯ ಸಂಸಾರ ಚೆನ್ನಾಗಿಯೇ ಇತ್ತು. ದಂಪತಿಗೆ ಇಬ್ಬರು ಮಕ್ಕಳು ಕೂಡ ಜನಿಸಿದ್ದರು. ಈ ಮಧ್ಯೆ ಒಂದು ದಿನ ಮಡದಿ ಮಲ್ಲಿಗೆ ಇದ್ದಕ್ಕಿದ್ದಂತೆ ನಾಪತ್ತೆಯಾಗಿದ್ದಳು.! ಸುರೇಶ್‌ ಅವರು ಕುಟುಂಬದ ಸಂಬಂಧಿಕರಲ್ಲಿ ವಿಚಾರಿಸಿದಾಗ ಆಕೆಗೆ ಅಕ್ರಮ ಸಂಬಂಧ ಇರುವುದು ಬೆಳಕಿಗೆ ಬಂದಿದೆ. ದೂರವಾಣಿ ಮೂಲಕ ಸುರೇಶ್‌ ಕರೆ ಮಾಡಿ ತನ್ನೊಂದಿಗೆ ಜೀವನ ಮಾಡದೇ ಇದ್ದರೂ ಪರವಾಗಿಲ್ಲ ತನ್ನ ಮಕ್ಕಳಿಗೆ ತಾಯಿಯಾಗಿ ಇರು ಎಂದು ಪರಿ ಪರಿಯಾಗಿ ಬೇಡಿದರು ಆಕೆ ಮಾತ್ರ ಬರಲು ಒಪ್ಪಲೆ ಇಲ್ಲ ಅಕ್ರಮದ ಗೆಣೆಗಾರನ ಜೋತೆಗೆ ಸಂಸಾರ ಹೂಡಿದ್ದಳು.!
ಮುಂದೆ ನನ್ನ ಮೇಲೆ ಯಾವುದೇ ಆರೋಪ ಬರಬಾರದು ಎಂದು ಸುರೇಶ್‌ ಅವರು 2021 ರಲ್ಲಿ ಕುಶಾಲನಗರ ಠಾಣೆಗೆ ಹೋಗಿ ನನ್ನ ಹೆಂಡತಿ ಕಾಣೆಯಾಗಿದ್ದಾಳೆ ಎಂದು ದೂರು ನೀಡಿ ಪೊಲೀಸರ ಬಳಿ ನಡೆದ ಎಲ್ಲಾ ವಿಚಾರವನ್ನು ತಿಳಿಸಿರುತ್ತಾನೆ. ಹೀಗಾಗಿ ಕುಶಾಲನಗರ ಗ್ರಾಮಾಂತರ ಠಾಣೆಯ ಪೊಲೀಸರು ಕಾಣೆಯಾಗಿದ್ದ ಸುರೇಶ್ ಪತ್ನಿ ಮಲ್ಲಿಗೆಯನ್ನು ಪತ್ತೆ ಹಚ್ಚಲು ತಲೆ ಕೇಡಸಿಕೊಳ್ಳಲಿಲ್ಲ.
ಮಡದಿಯ ಮೃತದೇಹಕ್ಕೆ ಅಂತ್ಯಸಂಸ್ಕಾರ.!?
ಕುಶಾಲನಗರ ಗ್ರಾಮಾಂತರ ಠಾಣೆಯ ಪೊಲೀಸರು 2022 ರಲ್ಲಿ ಸುರೇಶ್ ಗೆ ಕರೆ ಮಾಡಿ ನಿಮ್ಮ ಪತ್ನಿಯ ಶವ ಪತ್ತೆಯಾಗಿದೆ ಎಂದು ಹೇಳಿ ಠಾಣೆಗೆ ಬರಲು ಹೇಳಿದ್ದಾರೆ.! ಈ ವೇಳೆ ಠಾಣೆಗೆ ಬಂದಿದ್ದ ಪಿರಿಯಾಪಟ್ಟಣ ತಾಲ್ಲೂಕಿನ ಬೆಟ್ಟದಪುರದ ಪೊಲೀಸರು ಸುರೇಶ್ ಮತ್ತು ಆತನ ಅತ್ತೆ ಗೌರಿಯನ್ನು ಜೀಪಿನಲ್ಲಿ ಕರೆದುಕೊಂಡು ಹೋಗಿದ್ದಾರೆ.!
ಬೆಟ್ಟದಪುರದಲ್ಲಿ ಸುರೇಶ್‌ ಅವರಿಗೆ ಒಂದು ಅಸ್ಥಿಪಂಜರ ತೋರಿಸಿ,”ಇದು ನಿಮ್ಮ ಪತ್ನಿಯ ಅಸ್ಥಿಪಂಜರ. ಅಂತ್ಯ ಸಂಸ್ಕಾರ ಮಾಡಿ ಎಂದು ಅಲ್ಲೇ ಅರಣ್ಯದಲ್ಲಿ ಶವ ಸಂಸ್ಕಾರ ಮಾಡಿಸಿದ್ದರಂತೆ.!ಎನು ಅರಿಯದ ಮುಗ್ದ ಸುರೇಶ್ ಪೊಲೀಸರು ಹೇಳಿದಂತೆಲ್ಲ ಕೇಳಿದ್ದಾನೆ. ನಂತರ ಪೊಲೀಸರು ಸುರೇಶ್‌ ಅವರೇ ಪತ್ನಿ ಮಲ್ಲಿಗೆಯನ್ನು ನೀವು ಕೊಲೆ ಮಾಡಿದ್ದೀರಾ ಎಂದು ಆರೋಪಿಸಿ ಆತನನ್ನು ಬಂಧಿಸಿ ದೂರು ದಾಖಲಿಸಿಕೊಂಡು ಜೈಲಿಗೆ ಅಟ್ಟಿದ್ದಾರೆ.ಆ ವೇಳೆ ಆತಂಕಕ್ಕೆ ಒಳಗಾದ ಅಮಾಯಕ ಸುರೇಶ್‌ ಅವರು ನಾನು ಪತ್ನಿಯನ್ನು ಕೊಲೆ ಮಾಡಿಲ್ಲ ಸಾರ್ ಎಂದು ಎಷ್ಟೇ ಬೇಡಿಕೊಂಡರೂ ಬೇಜವಬ್ದಾರಿಯುತ ಪೊಲೀಸರು ಮಾತ್ರ ತಮ್ಮ ಖಾಕೀ ದರ್ಪ ತೋರಿಸಿ ನೀನೇ ಕೊಲೆಮಾಡಿರುವುದು ಎಂದು ಹೇಳಿ ದೂರು ದಾಖಲಿಸಿಕೊಂಡು ಬಲವಂತವಾಗಿ ಅಮಾಯಕ ಸುರೇಶ್‌ನನ್ನು ಜೈಲಿಗೆ ಕಳುಹಿಸಿದ್ದರು.
ಜೈಲಿನಿಂದ ರಿಲೀಸ್‌.!
ಎರಡು ವರ್ಷದ ಬಳಿಕ ವಿಧಿ ವಿಜ್ಞಾನ ಪ್ರಯೋಗಾಲಯದಿಂದ ಅಂತ್ಯಸಂಸ್ಕಾರಗೊಂಡ ಮೃತದೇಹದ ಡಿಎನ್‌ಎ ವರದಿ ಬರುತ್ತದೆ.ಆಗ ಮೃತ ವ್ಯಕ್ತಿಯ ಡಿಎನ್‌ಎಗೂ ಮಲ್ಲಿಗೆ ಕುಟುಂಬಕ್ಕೂ ಯಾವುದೇ ಸಾಮ್ಯತೆ ಇಲ್ಲದ ಕಾರಣ ಸುರೇಶ್‌ ಅವರು ಜೈಲಿನಿಂದ ಬಿಡುಗಡೆಯಾಗುತ್ತಾರೆ.
ಓಡಿ ಹೋಗಿದ್ದ ಹೆಂಡತಿ ಪ್ರಿಯತಮನೊಂದಿಗೆ ಸಿಕ್ಕಿಬಿದ್ಲು.!
ನಾಲ್ಕು ವರ್ಷದಿಂದ ನಾಪತ್ತೆಯಾಗಿದ್ದ ಮಲ್ಲಿಗೆ ಏ.1 ರಂದು ಮಡಿಕೇರಿಯ ಹೋಟೆಲಿಗೆ ಪ್ರಿಯಕರನೊಂದಿಗೆ ಬಂದಿದ್ದಾಳೆ. ಈ ವೇಳೆ ಅಲ್ಲಿ ಸುರೇಶ್‌ ಅವರ ಸ್ನೇಹಿತರ ಆಕೆಯ ಫೋಟೋವನ್ನು ತೆಗೆದು ಸುರೇಶ್‌ ಅವರಿಗೆ ಮತ್ತು ಪೊಲೀಸರಿಗೆ ನೀಡಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಅಲರ್ಟ್‌ ಆಗಿ ಮಲ್ಲಿಗೆ ನೆಲೆಸಿರುವ ಜಾಗವವನ್ನು ಪತ್ತೆ ಹಚ್ಚಿ ವಶಕ್ಕೆ ಪಡೆದು ಮೈಸೂರು ನ್ಯಾಯಾಲಯಕ್ಕೆ ಒಪ್ಪಿಸಿದ್ದಾರೆ.
ಹಾಗದರೆ ಸುರೇಶ್ ಕೈಯಿಂದ ಅಂತ್ಯಸಂಸ್ಕಾರ ಮಾಡಿಸಿದ ಮೃತದೇಹ ಯಾರದ್ದು.?
ಹೌದು ಅಂದು ಪೊಲೀಸರು ಸುರೇಶ್‌ನನ್ನು ಕರೆದುಕೊಂಡು ಹೋಗಿ ‌ಅಂತ್ಯ ಸಂಸ್ಕಾರ ಮಾಡಿಸಿದ ಆ ಅಸ್ಥಿಪಂಜರ ಯಾರದ್ದು ಎನ್ನುವುದು ಯಕ್ಷಪ್ರಶ್ನೆಯಾಗಿ ಉಳಿದಿದೆ.? ಯಾವುದೇ ಸಾಕ್ಷ್ಯಗಳು ಇಲ್ಲದೇ ಇದ್ದರೂ ಪೊಲೀಸರು ಉದ್ದೇಶಪೂರ್ವಕವಾಗಿ ಸುರೇಶ್‌ ಅವರನ್ನು ಕೊಲೆ ಪ್ರಕರಣದಲ್ಲಿ ಸಿಲುಕಿಸಿಲು ಕಾರಣವೇನು.?ಪೋಲಿಸರು ತಮ್ಮ ಜವಬ್ದಾರಿಯುತ ಕರ್ತವ್ಯವನ್ನು ಮರೆತು ಅಮಾಯಕನೊಬ್ಬ ಬದುಕಲ್ಲಿ ಈ ರೀತಿಯಾಗಿ ವರ್ತಿಸಲು ಕಾರಣವೇನು.?ಮಾಡದತಪ್ಪಿಗೆ ಶಿಕ್ಷೆ ಅನುಭವಿಸಿದರ ಸುರೇಶ್ ಪರಿಹಾರವೇನು.? ಎಂಬ ಸಾಕಷ್ಟು ಗಂಭೀರ ಪ್ರಶ್ನೆಗಳು ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ.ಎಲ್ಲವನ್ನೂ ಕಾದು ನೋಡಬೇಕಿದೆ….

Leave a Reply

Your email address will not be published. Required fields are marked *

Optimized by Optimole
error: Content is protected !!