ಆರಂಭವಾಯಿತು ಟೆನ್ನಿಸ್ ಬಾಲ್ ಕ್ರಿಕೆಟ್ ಪ್ರೇಮಿಗಳು ಕಾದು ಕುಳಿತಿದ್ದ ರೇಣು ಗೌಡ ಮತ್ತು ತಂಡದವರ ಸಾರಥ್ಯದ ಪ್ರತಿಷ್ಠಿತ ಪಂದ್ಯಾವಳಿ ” ಫ್ರೆಂಡ್ಸ್ ಟ್ರೋಫಿ” 2024
ASHWASURYA SHIVAMOGGA
SUDHIR VIDHATA
ಅಶ್ವಸೂರ್ಯ/ಶಿವಮೊಗ್ಗ: ಕರ್ನಾಟಕದಲ್ಲಿ ಮನೆ ಮಾತಾಗಿರುವ ಟೆನ್ನಿಸ್ ಬಾಲ್ ಕ್ರಿಕೆಟಿನ ಶ್ರೇಷ್ಠ ತಂಡಗಳಲ್ಲಿ ಒಂದಾದ ಫ್ರೆಂಡ್ಸ್ ಬೆಂಗಳೂರು ತಂಡ ರಾಷ್ಟ್ರದಂತ ಪ್ರತಿಷ್ಠಿತ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಅಲಂಕರಿಸುವುದರ ಜೋತೆಗೆ ಅಂತರಾಷ್ಟ್ರೀಯ ಪಂದ್ಯಾವಳಿಯನ್ನು ಆಯೋಜಿಸಿ ಇನ್ನಷ್ಟು ಎತ್ತರಕ್ಕೆ ಬೆಳೆದು ನಿಂತಿದೆ ರೇಣುಗೌಡರು ಮತ್ತು ಅವರ ತಂಡದ ಸತತ ಪರಿಶ್ರಮದಿಂದ ಇಂದು ಕರ್ನಾಟಕದಲ್ಲಿ ಅಂತರರಾಷ್ಟ್ರೀಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಕ್ರಿಕೆಟ್ ಪ್ರೇಮಿಗಳು ವಿಕ್ಷಿಸುವಂತಾಗಿದೆ.
ಉದ್ಯಾನ ನಗರಿ ಬೆಂಗಳೂರಿನ ಪಿಣ್ಯಾ ಎರಡನೆ ಹಂತದಲ್ಲಿ ರೇಣುಗೌಡರ ಸಾರಥ್ಯದಲ್ಲಿ ನಿಮ್ಮಿಸಲಾಗಿರುವ ಸುಂದರ ಕ್ರೀಡಾಂಗಣದಲ್ಲಿ ಕಳೆದ ಬಾರಿ ಅಂತರಾಷ್ಟ್ರೀಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಯನ್ನು ಏರ್ಪಡಿಸಲಾಗಿತ್ತು ಹೊರ ರಾಷ್ಟ್ರದ ಶ್ರೀಲಂಕಾ ಮತ್ತು ದೇಶದ ಪ್ರತಿಷ್ಠಿತ ತಂಡಗಳ ಜೋತೆಗೆ ಕರುನಾಡಿನ ನೆಚ್ಚಿನ ತಂಡಗಳು ಭಾಗವಹಿಸಿದ್ದವು. ಈ ಒಂದು ಪಂದ್ಯಾವಳಿ ಏಣಿಕೆಗೂ ಮಿರಿ ಯಶಸ್ಸನ್ನು ಕಂಡು ಅಂತರಾಷ್ಟ್ರೀಯ ಮಟ್ಟದಲ್ಲಿ ಈ ಪಂದ್ಯಾವಳಿಯ ಪ್ರಾಯೋಜಕರಾದ ರೇಣುಗೌಡರ ಸಾರಥ್ಯದ ಬೆಂಗಳೂರು ಫ್ರೆಂಡ್ಸ್ ಸ್ಪೋರ್ಟ್ಸ್ & ಕಲ್ಬರಲ್ಅ ಸೋಸಿಯೇಷನ್ ಹೆಸರು ಮಾಡಿದ್ದರು. ಲಕ್ಷಾಂತರ ಕ್ರಿಕೆಟ್ ಪ್ರೇಮಿಗಳು ಈ ಪಂದ್ಯಾವಳಿಯನ್ನು ವೀಕ್ಷಿಸಿ ಪುನೀತರಾಗಿದ್ದರು. ಪ್ರತಿ ವಿಭಾಗದಲ್ಲೂ ಆ ಮಟ್ಟದ ಶ್ರೇಷ್ಠತೆಯನ್ನು ಹೊಂದಿತ್ತು ಪಂದ್ಯಾವಳಿ..!
ಈಗ ಮತ್ತೆ ಅ ಒಂದು ಸಂಭ್ರಮ ಅದೇ ನೆಲದಲ್ಲಿ ಪೀಣ್ಯ ಎರಡನೇ ಹಂತದ ಶ್ರೀ ರಾಮ ದೇವಸ್ಥಾನದ ಎದುರಿನ ಕ್ರೀಡಾಂಗಣದಲ್ಲಿ ರಾಜ್ಯ ರಾಷ್ಟ್ರ ಮತ್ತು ಅಂತರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಆಹ್ವಾನಿತ ಹದಿನಾರು ತಂಡಗಳು ಈ ಅಂತರಾಷ್ಟ್ರೀಯ ಮಟ್ಟದ ಪ್ರತಿಷ್ಠಿತ ಟ್ರೋಫಿಯನ್ನು ಗೆಲ್ಲಲು ಈಗಾಗಲೇ ಸೇಣಸಾಟ ಆರಂಭಿಸಿವೆ. ರಾಜ್ಯದಂತ ಈ ಟೂರ್ನಿಯ ವೀಕ್ಷಣೆಗೆ ದೌಡಾಯಿಸುವ ಕ್ರಿಕೆಟ್ ಪ್ರೇಮಿಗಳು ನಾಲ್ಕು ದಿನಗಳ ಕಾಲ ಹದಿನಾರು ತಂಡಗಳು ಪ್ರಶಸ್ತಿಗಾಗಿ ತಮ್ಮ ಸಾಮರ್ಥ್ಯವನ್ನು ಪ್ರದರ್ಶಿಸುವ ತಂಡಗಳ, ಆಟಗಾರ ಆಟವನ್ನು ಸವಿಯಲು ಈಗಾಗಲೇ ಪೀಣ್ಯಾದ ಕ್ರೀಡಾಂಗಣದಲ್ಲಿ ನೆರೆದಿದ್ದಾರೆ, ಈ ಒಂದು ಅಂತರಾಷ್ಟ್ರೀಯ ಮಟ್ಟದ ಪಂದ್ಯಾವಳಿ ಇಂದಿನಿಂದ 2024, ಮಾರ್ಚ್ 21,22,23 ಮತ್ತು 24 ರ ವರೆಗೆ ಹೊನಲು ಬೆಳಕಿನಲ್ಲಿ ನೆಡೆಯಲಿದೆ.ಪ್ರತಿ ಪಂದ್ಯವನ್ನು ನೆರ ಪ್ರಸಾರದಲ್ಲಿ ಕ್ರಿಕೆಟ್ ಪ್ರೇಮಿಗಳು ವೀಕ್ಷಿಸ ಬಹುದಾಗಿದ್ದು ಒಟ್ಟಿನಲ್ಲಿ ಮತ್ತೆ ಮರುಕಳಿಸಿದೆ ಅದ್ದೂರಿಯಾದ ಕ್ರಿಕೆಟ್ ಹಬ್ಬ.
ಕಳೆದಬಾರಿಯ(2023) ಪಂದ್ಯಾವಳಿಯನ್ನು ವಿಕ್ಷೀಸಲು ನೆರೆದಿದ್ದ ಜನಸ್ತೋಮ
ಈ ಪಂದ್ಯಾವಳಿಯನ್ನು ಆಯೋಜಿಸಿರುವ
ಬೆಂಗಳೂರು ಫ್ರೆಂಡ್ಸ್ ಸ್ಪೋರ್ಟ್ಸ್ & ಕಲ್ಬರಲ್
ಅಸೋಸಿಯೇಷನ್ ಸಕಲ ರೀತಿಯ ಸಿದ್ಧತೆಯನ್ನು ಮಾಡಿಕೊಂಡಿದ್ದಾರೆ ಈಗಾಗಲೇ ಶ್ರೀಲಂಕಾದ ಎರಡು ತಂಡಗಳು ಬೆಂಗಳೂರಿಗೆ ಬಂದಿಳಿದಿದಿವೆ ರಾಜ್ಯ ಮತ್ತು ರಾಷ್ಟ್ರಮಟ್ಟದ ಇನ್ನೂಳಿದ ಎಲ್ಲಾ ತಂಡಗಳು ಈಗಾಗಲೇ ಪಂದ್ಯಾವಳಿಯಲ್ಲಿ ಭಾಗವಹಿಸಲು ಬೆಂಗಳೂರನ್ನು ತಲುಪಿವೆ.
ಇದು ರಾಜ್ಯ ಟೆನಿಸ್ ಕ್ರಿಕೆಟ್ ಇತಿಹಾಸದಲ್ಲಿ ಮಹತ್ವದ ಕ್ಷಣವಾಗಿದೆ. ಕ್ರಿಕೆಟ್‌ನಲ್ಲಿ ಅತಿ ದೊಡ್ಡ ಬಹುಮಾನವನ್ನು ಈ ಟೂರ್ನಮೆಂಟ್ ಹೊಂದಿದೆ. ಪ್ರಥಮ
ಬಹುಮಾನ: ₹ 5,05,000/- ಮತ್ತು ದ್ವಿತೀಯ ಬಹುಮಾನ: ₹ 2,50,000/- ಜೊತೆಗೆ ಆಕರ್ಷಕ ಕಪ್ ಅನ್ನು ನೀಡಲಾಗುವುದು ನೀಡಲಾಗುವುದು.ಸರಣಿಯ ಶ್ರೇಷ್ಠ ಮತ್ತು ಉತ್ತಮ ಬ್ಯಾಟ್ಸ್ ಮನ್,ಉತ್ತಮ ಬೌಲರ್, ಇನ್ನೂಳಿದ ಹಲವು ಪ್ರಶಸ್ತಿಗಳು ಈ ಪಂದ್ಯಾವಳಿಯಲ್ಲಿ ಇದೆ ಹದಿನಾರು ತಂಡಗಳು ಬಹುಮಾನಕ್ಕಾಗಿ ಈ ಪಂದ್ಯಾವಳಿಯಲ್ಲಿ ಸ್ಪರ್ಧಿಸಿವೆ.
ಪಂದ್ಯಾವಳಿಯಲ್ಲಿ ಆಡಲು ಬೆಂಗಳೂರಿಗೆ ಬಂದಿಳಿದಿರುವ ಎರಡು ಶ್ರೀಲಂಕಾ ತಂಡಗಳು
ಫ್ರೆಂಡ್ಸ್ ಬೆಂಗಳೂರು ಸಂಸ್ಥೆ ಕಳೆದ ಬಾರಿ
ನಡೆಸಿದ ಅಂತರಾಷ್ಟ್ರೀಯ ಮಟ್ಟದ ಕ್ರಿಕೆಟ್
ಪಂದ್ಯಾಟದಲ್ಲಿ ಉಚಿತ ಪ್ರವೇಶಾತಿಯೊಂದಿಗೆ,
49 ತಂಡಗಳಿಗೆ ಅವಕಾಶ ಕಲ್ಪಿಸಿದ್ದರು, ಈ ಬಾರಿ ಈ ಋತುವಿನಲ್ಲಿ ರಾಜ್ಯ ಹಾಗೂ ರಾಷ್ಟ್ರೀಯ ಮಟ್ಟದಲ್ಲಿ ಹೆಚ್ಚು ಪಂದ್ಯಗಳನ್ನಾಡುವ ಪ್ರತಿಷ್ಠಿತ
16 ತಂಡಗಳಿಗೆ ಮಾತ್ರ ಅವಕಾಶ ನೀಡಿದ್ದಾರೆ. ಕರ್ನಾಟಕ ರಾಜ್ಯ ಟೆನ್ನಿಸ್ ಕ್ರಿಕೆಟ್ ಪಂದ್ಯಾವಳಿಯಲ್ಲಿ
” ಫ್ರೆಂಡ್ಸ್ ಕಪ್ ” ಪಂದ್ಯಾವಳಿಯನ್ನು
ಅತ್ಯಂತ ಪ್ರತಿಷ್ಠಿತ ಟೂರ್ನಮೆಂಟ್ ಈ ಪಂದ್ಯಾವಳಿಯ ಕಪ್ ಗೆಲ್ಲುವುದು ಪ್ರತಿಯೊಂದು ತಂಡದ ಹೆಮ್ಮೆಯಾಗಿದೆ.
ಮಾರ್ಚ್ 21,22,23 ಮತ್ತು 24 ರಂದು ನೆಡೆಯುವ ಹೊನಲು ಬೆಳಕಿನ ಈ ಪಂದ್ಯಾವಳಿಯು
ಶ್ರೀರಾಮ ದೇವಸ್ಥಾನದ ಎದುರಿನ ಪೀಣ್ಯ
ಎರಡನೇ ಹಂತದ ಕ್ರೀಡಾಂಗಣದಲ್ಲಿ
ಅಂತರಾಷ್ಟ್ರೀಯ ಮಟ್ಟದ ಟೆನಿಸ್
ಬಾಲ್ ಕ್ರಿಕೆಟ್ ಟೂರ್ನಮೆಂಟ್
ಆಯೋಜನೆಗೊಂಡಿದ್ದು 16 ಬಲಿಷ್ಠ ತಂಡಗಳು ಈ ಟೂರ್ನಿಯಲ್ಲಿ ಸೆಣಸಾಡಲಿವೆ.
ಕರ್ನಾಟಕದ ಹತ್ತು ಹೆಸರಾಂತ ತಂಡಗಳ ಜೋತೆಗೆ ಹೊರರಾಜ್ಯದ ನಾಲ್ಕು ತಂಡಗಳು ಮತ್ತು
ಹೊರದೇಶದ ಎರಡು ತಂಡಗಳು ಈ
ಪ್ರತಿಷ್ಠಿತ ಟೂರ್ನಿಯಲ್ಲಿ ಪಾಲ್ಗೊಳ್ಳಲಿವೆ. A,B,C,D ಎಂದು ನಾಲ್ಕು ಗ್ರೂಪ್ ಗಳನ್ನಾಗಿ ವಿಂಗಡಿಸಲಾಗಿದೆ ಒಂದೊಂದು ಗ್ರೂಪಿನಲ್ಲಿ ನಾಲ್ಕು ತಂಡಗಳಿವೆ ಹದಿನಾರು ತಂಡಗಳ ನಾಲ್ಕು ಗ್ರೂಪ್ ಗಳನ್ನು ಈ ರೀತಿಯಲ್ಲಿ ಟೈಸ್ ಹಾಕಲಾಗಿದೆ
ಪೂಲ್ A
Kumhali 11, ಚತ್ತೀಸ್ ಘಡ್ ಇಜಾನ್ ಸ್ಪೋರ್ಟ್ಸ್, ಉಡುಪಿ ಮೈಟಿ ಬೆಂಗಳೂರು ಸೂಪರ್ ಫ್ಯಾಷನ್, ಶ್ರೀಲಂಕಾ
ಪೂಲ್ B
ರಿಯಲ್ ಫೈಟರ್ಸ್, ಮಲ್ಪೆ ಜೈಹಿಂದ್, ಶಿವಮೊಗ್ಗ
ದಾಸರಹಳ್ಳಿ
ವೀನಸ್, ಶ್ರೀಲಂಕಾ
ಪೂಲ್ C
ಸೃಷ್ಟಿ, ಬೆಂಗಳೂರು
ಯುನೈಟೆಡ್ ಜಾಗ್ವಾರ್, ಸುರತ್ಕಲ್
ನ್ಯಾಶ್, ಬೆಂಗಳೂರು
ಚೆನ್ನೈ 11
ಪೂಲ್ D
ಜೈಕರ್ನಾಟಕ ಬೆಂಗಳೂರು
108 ಲೈವ್ ಬಾಲಾಜಿ ಚತ್ತೀಸ್ ಘಡ್
ಜಾನ್ಸನ್ ಕುಂದಾಪುರ
ದಾವಣಗೆರೆ 11
SRB ಸ್ಪೋರ್ಟ್ಸ್ ನಲ್ಲಿ ಈ ಪಂದ್ಯಾವಳಿಯ ಎಲ್ಲಾ ಪಂದ್ಯವನ್ನು ನ ಲೈವ್ ಸ್ಟ್ರೀಮ್ ನಲ್ಲಿ ನೋಡಬಹುದಾಗಿದೆ. ಈ ಪ್ರತಿಷ್ಠಿತ ಅಂತರಾಷ್ಟ್ರೀಯ ಪಂದ್ಯಾವಳಿಯಲ್ಲಿ ಯಾವ ತಂಡ ಈ ಬಾರಿ ಫ್ರೆಂಡ್ಸ್ ಟ್ರೋಫಿಗೆ ಮುತ್ತಿಕ್ಕಲಿದೆ ಕಾದು ನೋಡಬೇಕು.
“ಅಳಿವಿನಂಚಿನಲ್ಲಿರುವ ಟೆನಿಸ್ಟಾಲ್ ಕ್ರಿಕೆಟ್ ನಲ್ಲಿ ಕ್ರಾಂತಿಕಾರಿ ಬದಲಾವಣೆ ತರುವುದು ಈ ಪಂದ್ಯಾಟದ ಸದುದ್ದೇಶವಾಗಿದ್ದು,ಕ್ರೀಡಾಭಿಮಾನಿಗಳ ಬೆಂಬಲ ನಿಜಕ್ಕೂ ಅದ್ಭುತ ಎಂದು ಟೂರ್ನಿಯ ಮುಖ್ಯ ರುವಾರಿಗಳು ಆಗಿರುವ ರೇಣು ಗೌಡ ಅವರು ಈ ಪಂದ್ಯಾವಳಿಯ ಕುರಿತು ಹೇಳಿದ್ದಾರೆ,”
4 ದಿನಗಳ ಕಾಲ ಹೊನಲು ಬೆಳಕಿನಲ್ಲಿ ನೆಡೆಯಲಿರುವ ಪ್ರತಿಷ್ಠಿತ ಪಂದ್ಯಾಟದ ನೇರ ಪ್ರಸಾರ SRB ಸ್ಪೋರ್ಟ್ಸ್ ಯೂಟ್ಯೂಬ್ ಲೈವ್ ಚಾನೆಲ್ ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿ ವಿಶ್ವದಗಲದೂದ್ದಕ್ಕೂ ವೀಕ್ಷಿಸ ಬಹುದಾಗಿದೆ.! ,ಸ್ಪೋರ್ಟ್ಸ್ ಕನ್ನಡ ವೆಬೈಟ್ ಮೀಡಿಯಾ ಪಾರ್ಟ್ನರ್ ರೂಪದಲ್ಲಿ ಕಾರ್ಯ ನಿರ್ವಹಿಸಲಿದೆ.
ಅದೇನೇ ಇರಲಿ ರೇಣು ಗೌಡ ಮತ್ತು ತಂಡದ ಸಾರಥ್ಯದಲ್ಲಿ ನೆಡಯುತ್ತಿತುವ ಈ ಅಂತರಾಷ್ಟ್ರೀಯ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ ಅತಿ ಯಶಸ್ಸಿನ ಹಾದಿಯಲ್ಲಿ ಸಾಗಲಿ ಎನ್ನುವುದು ನನ್ನ ಮತ್ತು ನಮ್ಮ ಭಾರತ್ ಕ್ರಿಕೆಟರ್ಸ್ ತಂಡ,ಶಿವಮೊಗ್ಗ ಇವರ ಹಾರೈಕೆಯಾಗಿದೆ….