ಅಯಾನೂರು ಕಾಡಿನಲ್ಲಿ ಪೋಲಿಸರ ಗನ್ ಮೊರೆತ..! ಕ್ರಿಮಿನಲ್ ಸೈಫುಲ್ಲಾ ಖಾನ್ ಕಾಲಿಗೆ ಗುಂಡೆಟು..ಈತ ರೌಡಿ ಪೌಝಾನ್ ಸಹಚರ

ಇತ್ತೀಚೆಗೆ ಶಿವಮೊಗ್ಗದ ಪೋಲಿಸರು ಪಾತಕಿಗಳ ನಡು ಮುರಿಯಲು ಮುಂದಾಗಿದ್ದಾರೆ.ನಿತ್ಯ ಒಂದಲ್ಲ ಒಂದು ಕ್ರೈಮ್ ನೆಡೆಸಿ ಪಾತಕಜಗತ್ತು ತಣ್ಣಗೆ ಮಲಗಿದ್ದರು ಪೋಲಿಸರು ಮಾತ್ರ ಪಾತಕಿಗಳ ಬೆನ್ನಿಗೆ ಬಿದ್ದಿದ್ದಾರೆ ಅದರಲ್ಲೂ ತಮ್ಮ ಸೊಂಟದಲ್ಲಿರುವ ಗನ್ನಿಗೆ ಕೆಲಸ ಕೊಡುತ್ತಿದ್ದರೆ. ಅದರೆ ಪೋಲಿಸರ ಗನ್ ಎಷ್ಟೇ ಮೊರೆದರು ಮಲೆನಾಡಿನಲ್ಲಿ ಪಾತಕ ಜಗತ್ತು ಮಾತ್ರ ಆಕ್ಟೀವ್ ಆಗಿದೆ. ಹೇಳಬೇಕೆಂದರೆ ಕ್ರೈಮ್ ರೇಂಜ್ ಮುಗಿಲು ಮುಟ್ಟಿದೆ ಅದರಲ್ಲೂ ಶಿವಮೊಗ್ಗದಲ್ಲಿ ಗಾಂಜಾ ಡ್ರಗ್ಸ್ ದಂಧೆ ಬೇರು ಬಿಟ್ಟರೆ ಇನ್ನಿತರ ದಂಧೆಗಳು ತಲೆ ಎತ್ತಿನಿಂತಿವೆ. ಅದರಲ್ಲೂ ಗಾಂಜಾ ಹೊಡೆಯುವ ಸಾಕಷ್ಟು ಕ್ರಿಮಿಗಳು ಪಾತಕಮಾಡಲು ಸಜ್ಜಾಗಿ ನಿಂತಿರುತ್ತವೆ. ಅದರಲ್ಲೂ ಟ್ರಾಫಿಕ್ ನಲ್ಲಂತೂ ಗಾಂಜಾ ಮತ್ತಿನಲ್ಲಿ ಮೂರು ಮೂರು ಜನ ಬೈಕ್ ನಲ್ಲಿ ಸವಾರಿಮಾಡುವುದರ ಜೋತೆಗೆ ರಸ್ತೆಯಲ್ಲಿ ಹೋಗುವ ಸಾರ್ವಜನಿಕರಿಗೆ ತೊಂದರೆ ಕೊಡುತ್ತಿದ್ದಾರೆ. ಆ ಮಟ್ಟದಲ್ಲಿ ಕ್ರಿಮನಲ್ ಗಳು ಸಂಚಾರಿ ಪೊಲೀಸರ ಬಯವಿಲ್ಲದೆ ಎಗರಾಡುತ್ತಿದ್ದಾರೆ….

ಜಿಲ್ಲೆಯಲ್ಲಿ ಅಕ್ರಮ ಮರಳು ದಂಧೆ ಅಕ್ರಮ ಕಲ್ಲು ಕ್ವಾರಿಗಳು ಎಗ್ಗಿಲ್ಲದೆ ನೆಡೆಯುತ್ತಿದೆ ಇನ್ನಿತರ ದಂಧೆಗಳ ಜೋತೆಗೆ ನಕಲಿ‌ ಪದಾರ್ಥಗಳ ಭರಾಟೆ ಗಾಂಧಿ ಬಜಾರ್ ಅನ್ನೆ ಬಾಯಿಮುಚ್ಚಿ ಕೂರುವಂತೆ ಮಾಡಿದೆ.ಕಣ್ಮರೆಯಾಗಿದ್ದ ನಕಲಿ ಲಿಕ್ಕರ್ ( ಥರ್ಡ್ಸ್ ದಂಧೆ ) ಕೂಡ ಮಾರ್ಕೆಟಿಗೆ ಲಗ್ಗೆ ಇಟ್ಟಿದೆ ಒಟ್ಟಿನಲ್ಲಿ ಶಿವಮೊಗ್ಗ ನಕಲಿ ವ್ಯವಹಾರಗಳ ಕೇಂದ್ರ ಬಿಂದುವಾದರೆ ಈ ಎಲ್ಲಾ ದಂಧೆಗಳ ಮೇಲು ರೌಡಿಗಳು ಹಿಡಿತಸಾಧಿಸಲು ಮುಂದಾಗಿದ್ದಾರೆ.

ದಕ್ಷ ಪೋಲಿಸ್ ವರಿಷ್ಠ ಅಧಿಕಾರಿ ಜಿ.ಕೆ. ಮಿಥುನ್ ಕುಮಾರ್ ಮತ್ತು ಅನಿಲ್ ಕುಮಾರ್ ಭೂಮರೆಡ್ಡಿ. ಡಿವೈಎಸ್ಫಿ ಬಾಲರಾಜ್ ಪಾತಕಿಗಳಿಗೆ ಖಡಕ್ ಸಂದೇಶವನ್ನು ರವಾನಿಸುತ್ತಿದ್ದರು ಪುಡಿ ರೌಡಿಗಳು ಮಾತ್ರ ಪಾತಕಲೋಕದಲ್ಲಿ ತಮ್ಮ ನಿಚಕೃತ್ಯವನ್ನು ಮುಂದುವರೆಸಿಕೊಂಡು ಹೋಗುತ್ತಿದ್ದಾರೆ
ಈ ಹಾದಿಯಲ್ಲಿ ಶಿವಮೊಗ್ಗದಲ್ಲಿ ರೌಡಿಶೀಟರ್ ಒಬ್ಬನ ಕಾಲಿಗೆ ಪೊಲೀಸರು ಗುಂಡುತೂರಿಸಿದ್ದಾರೆ..! ಪಾತಕಿಗಳಿಗೆ ಎಷ್ಟೇ ಖಡಕ್ ಮೆಸೇಜ್ ರವಾನಿಸಿದರು ಅವರ ಆಟಗಳಿಗೆ ಬ್ರೇಕ್ ಬಿದ್ದಿಲ್ಲ.

ರೌಡಿಶೀಟರ್ ಸೈಫುಲ್ಲಾ ಖಾನ್ ಅಲಿಯಾಸ್ ಸೈಫು ಕಾಲಿಗೆ ಪೊಲೀಸರ ಗುಂಡು ತೂರಿಸಿದ್ದಾರೆ . ಕಾಲಿಗೆ ಗುಂಡೇಟು ಹೊಡೆಯುತ್ತಿದ್ದಂತೆ ಸೈಫು ಕುಸಿದು ಬಿದ್ದಿದ್ದಾನೆ ತಕ್ಷಣ  ಪೊಲೀಸರು ಆತನನ್ನು ಬಂಧಿಸಿ ಆಸ್ಪತ್ರೆಗೆ ದಾಖಲಿಸಿದ್ದಾರೆ.

ಈ ಘಟನೆ ನೆಡದದ್ದು ಶಿವಮೊಗ್ಗ ತಾಲೂಕಿನ ಅಯಾನೂರು ಸರಹದ್ದಿನ ದೊಡ್ಡದಾನವಂದಿ ಅರಣ್ಯದಲ್ಲಿ..! ದೊಡ್ಡದಾನವಂದಿ ಗ್ರಾಮದಲ್ಲಿ ಪ್ರಕರಣವೊಂದರ ಸಲುವಾಗಿ ಬೇಕಾಗಿದ್ದ ಸೈಫು ಅಲ್ಲಿರುವುದನ್ನು ಖಾತ್ರಿ ಮಾಡಿಕೊಂಡು ಅರೇಸ್ಟ್ ಮಾಡಲು ತೆರಳಿದ್ದ ವೇಳೆ ಮೊದಲೇ ಹೇಳಿ ಕೇಳಿ ಕೆಟ್ಟ ಕ್ರಿಮಿ ಸೈಫು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾನೆ. ತಡೆಯಲು ಹೋದ ಪೊಲೀಸ್ ಸಿಬ್ಬಂದಿ ನಾಗರಾಜ್ ಮೇಲೆ ಹಲ್ಲೆ ಮಾಡಿ ಸೈಫು  ಪರಾರಿಯಾಗಲು ಯತ್ನಿಸಿದ್ದಾನೆ.

ತಕ್ಷಣವೇ ಜೈನಗರ ಪೋಲಿಸ್ ಠಾಣೆಯ ಪಿಎಸ್ಐ ನವೀನ್ ಗಾಳಿಯಲ್ಲಿ ಗುಂಡು ಹಾರಿಸಿ  ಎಚ್ಚರಿಕೆ ನೀಡಿದ್ದಾರೆ ಆದರೂ ಮತ್ತೆ ಹಲ್ಲೆಗೆ ಮುಂದಾಗಿದ್ದಾನೆ ಆಗ ಪಿಎಸ್ಐ ಕೈಯಲ್ಲಿದ್ದ ರಿವಲ್ವಾರಿನ ಗುಂಡು ನೆರವಾಗಿ ಸೈಫು ಕಾಲನ್ನು ಸಿಳಿದೆ.

ಕೂಡಲೇ ಆತನನ್ನು ಬಂಧಿಸಿ ನೆರವಾಗಿ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ತಂದು ದಾಖಲಿಸಲಾಗಿದೆ.

ಗಾಯಗೊಂಡ ಪೊಲೀಸ್ ಸಿಬ್ಬಂದಿ ನಾಗರಾಜ್ ಅವರಿಗೂ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.
ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ ಎಂದು ತಿಳಿದು ಬಂದಿದೆ

ಕಾಲಿಗೆ ಗುಂಡುಬಿದ್ದ ಆರೋಪಿ ಸೈಫು ಮೇಲೆ ಶಿವಮೊಗ್ಗದ ದೊಡ್ಡಪೇಟೆ ಠಾಣೆಯೊಂದರಲ್ಲೇ ಸುಮಾರು 16 ಪ್ರಕರಣಗಳು ದಾಖಲಾಗಿದೆ. ತುಂಗಾನಗರ ಹಾಗೂ ಜಯನಗರ ಠಾಣೆಯಲ್ಲಿ ತಲಾ ಒಂದು ಕೇಸ್ ದಾಖಲಾಗಿದೆ.
ಜಯನಗರ ಠಾಣೆಯಲ್ಲಿ 307 ಅಡಿಯಲ್ಲಿ ಪ್ರಕರಣ ದಾಖಲಾಗಿದೆಯಂತೆ

ಇಂದು ನೆಡೆದ ಘಟನೆ ಶಿವಮೊಗ್ಗದ ಕುಂಸಿ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ನೆಡೆದಿರುವುದರಿಂದ ಕುಂಸಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.‌

ಒಟ್ಟಿನಲ್ಲಿ ದೊಡ್ಡಪೇಟೆ ಮತ್ತು ಜೈನಗರ ಠಾಣೆಯ ಪೋಲಿಸರ ತಂಡ ಕ್ರಿಮಿನಲ್ ಸೈಫುಲ್ಲಾ ಖಾನ್ ಗೆ ಸರಿಯಾದ ರೀತಿಯಲ್ಲೆ ಉತ್ತರ ಕೊಟ್ಟಿದ್ದಾರೆ. ಈ ಘಟನೆಯೊಂದು ಇನ್ನೂಳಿದ ಕ್ರಿಮಿನಲ್ ಗಳಿಗೆ ಪಾಠವಾಗಬೇಕಿದೆ ಇಲ್ಲವಾದಲ್ಲಿ ಮತ್ತೆ ಪೋಲಿಸರ ಗುಂಡು ಮೊರೆಯಬೇಕಿದೆ…



ಸುಧೀರ್ ವಿಧಾತ, ಶಿವಮೊಗ್ಗ

Leave a Reply

Your email address will not be published. Required fields are marked *

Optimized by Optimole
error: Content is protected !!