ಶಿವಮೊಗ್ಗ, ಜುಲೈ 05: ಮಳೆ ಇಲ್ಲದೆ ಸೊರಗಿ ಕುಳಿತಿದ್ದ ತುಂಗೆ ಕುದುರೆಮುಖ ಕಳಸ ಮತ್ತು ಶೃಂಗೇರಿಗಳಲ್ಲಿ ಎಡಬಿಡದೆ ಸುರಿಯುತ್ತಿರುವ ಮಳೆಯಿಂದಾಗಿ ಮೈದುಂಬಿ ಹರಿಯುತ್ತಿದ್ದಾಳೆ ಹೆಚ್ಚಾದ ಒಳಹರಿವಿನ ಕಾರಣ ತುಂಗಾ ಡ್ಯಾಂ ಪೂರ್ಣ ಮಟ್ಟಕ್ಕೆ ನೀರು ಸಂಗ್ರಹವಾಗಿದ್ದು ಅಪಾಯ ಮಟ್ಟವನ್ನು ಮೀರಿ ಹರಿಯಲು ಕೆಲವು ಅಡಿಗಳು ಬಾಕಿ ಇದೆ.ತಡವಾದರು ಮುಂಗಾರು ಪ್ರಾರಂಭವಾಗಿ ಬಿಟ್ಟು ಬಿಡದೆ ಮಳೆ ಸುರಿಯುತ್ತಿರುವ ಹಿನ್ನಲೆಯಲ್ಲಿ ಡ್ಯಾಂ ಪೂರ್ಣ ಮಟ್ಟಕ್ಕೆ ತುಂಬಿದೆ. ಇನ್ನೂ ಜಲಾನಯನ ಪ್ರದೇಶದಲ್ಲಿ ಹೆಚ್ಚಿನ ಮಳೆಯಾದರೆ ಒಳಹರಿವು ಹೆಚ್ಚಾಗಿ ನೀರು ಹರಿದು ಬಂದಲ್ಲಿ ಯಾವ ಕ್ಷಣದಲ್ಲಾದರೂ ಡ್ಯಾಮ್ ನೀರನ್ನು ನದಿಗೆ ಬಿಡುವ ಸಂಭವವಿದೆ.
ಆದ್ದರಿಂದ ತುಂಗಾ ನದಿಯ ಪಾತ್ರದಲ್ಲಿ ಬರುವ ಗ್ರಾಮ ಪ್ರದೇಶದ ಗ್ರಾಮಸ್ಥರು ನದಿಪಾತ್ರದಲ್ಲಿ ಹಾಗೂ ತಗ್ಗು ಪ್ರದೇಶಗಳಲ್ಲಿ ಯಾವುದೇ ಚಟುವಟಿಕೆಗಳನ್ನು ಮಾಡಬಾರದು ಹಾಗೂ ದನಕರುಗಳನ್ನು, ಪ್ರಾಣಿಗಳನ್ನು ಮೇಯಲು ಬಿಡುವುದು ಮಾಡದೇ ಸುರಕ್ಷಿತ ಸ್ಥಳಗಳಿಗೆ ತೆರಳುವಂತೆ ಮುನ್ನೆಚ್ಚರಿಕೆ ವಹಿಸಲು ತುಂಗಾ ಮೇಲ್ದಂಡೆ ಯೋಜನೆಯ ಕಾರ್ಯಪಾಲಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Voice of common man in words