ಜೂನ್ 17ರಂದು ಸಂಜೆ 5:30 ಅಸುಪಾಸಿನ ಸಮಯ ವಿಜಯನಗರದ ಎರಡನೇ ತಿರುವಿನಲ್ಲೊಂದು ಯಾರ ಅರಿವಿಗೆ ಬಾರದೆ ಹತ್ಯೆಯೊಂದು ನೆಡೆದುಹೋಗಿತ್ತು ..! ಆಕೆಯ ಹೇಸರು ಕಮಲಮ್ಮ. ಸ್ನೇಹಜೀವಿಯಾಗಿದ್ದ ಕಮಲಮ್ಮ ಸ್ಥಳೀಯರ ಪ್ರೀತಿಗೆ ಪಾತ್ರರಾಗಿದ್ದರು. ನಿತ್ಯ ಭಜನೆ. ಯೋಗಾಸನ ಅಂತ ತಮ್ಮ ನಿತ್ಯ ಜೀವನವನ್ನು ಸ್ನೇಹಿತರ ಜೋತೆ ಕಳಿಯುತ್ತಿದ್ದರು. ಒಟ್ಟಿನಲ್ಲಿ ಹೇಳಬೇಕೆಂದರೆ ಉತ್ತಮ ಗೃಹಿಣಿ ಇಂತಹ ಮಹಿಳೆಗೆ ಇಂತಹಾ ಸಾವು ಬರಬಾರದಿತ್ತು. ಈಕೆಯ ಪತಿ ಹೊಸದುರ್ಗದ ನೀರಾವರಿ ಇಲಾಖೆಯಲ್ಲಿ ಎಕ್ಸಿಕ್ಯುಟಿವ್ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ಮಲ್ಲಿಕಾರ್ಜುನಯ್ಯ ನವರು. ಇವರದು ಸುಂದರ ಕುಟುಂಬ ಎಕ್ಸಿಕ್ಯುಟಿವ್ ಇಂಜಿನಿಯರ್ ಅಂದಮೇಲೆ ಕೇಳಬೇಕಾ..! ಅದರಲ್ಲೂ ನೀರಾವರಿ ಇಲಾಖೆಯಲ್ಲಿ. ಇವರು ಕರ್ತವ್ಯ ನಿರ್ವಹಿಸಿರುವ ಕಡೆ ಎಲ್ಲಾ ನೀರಿಗಿಂತ ಕೆಸರು ಮೆತ್ತಿಕೊಂಡಿದ್ದೆ ಜಾಸ್ತಿಯಂತೆ ? ಇನ್ನೂ ಇವರು ತಮ್ಮ ಸ್ವಂತ ಕಾರಿಗೆ ಚಾಲಕನೊಬ್ಬನನ್ನು ನೇಮಿಸಿ ಕೊಂಡಿದ್ದರಂತೆ. ಅವನೇ ಕಮಲಮ್ಮ ನವರ ಹತ್ಯೆಯ A1 ಆರೋಪಿ ಹನುಮಂತ ನಿತ್ಯ ಇವನ ಜೊತೆಯಲ್ಲೇ ಕಾರಿನಲ್ಲಿ ಶಿವಮೊಗ್ಗದಿಂದ ಹೊಸದುರ್ಗಕ್ಕೆ ಹೋಗಿ ಬರುತ್ತಿದ್ದರಂತೆ ಇಂಜಿನಿಯರ್ ಸಾಹೇಬರು.? ಸಾಕಷ್ಟು ದಿನಗಳಿಂದ ಸಾಹೇಬರ ಜೋತೆಗೆ ಕೆಲಸ ಮಾಡಿಕೊಂಡಿದ್ದ ಇತನಿಗೆ ಅವರ ಸಾಕಷ್ಟು ವಿಷಯ ಕೂಡಾ ಹಂತಕ ಹನುಮಂತನಿಗೆ ತಿಳಿದಿರಲು ಸಾಧ್ಯವಿರಬಹುದು ? ಸಾಹೇಬರ ಬಳಿ ಹಣವಿದ್ದ ಕಾರಣಕ್ಕೆ ಹಣದಾಸೆಗೆ ಬಿದ್ದಿರಲು ಬಹುದು ಹನುಮಂತ ನಾಯ್ಕ ? ಕೆಲವರ ಹತ್ತಿರ ಹಣತರಲು ಇವನೇ ಹೋಗುತ್ತಿದ್ದನಾ ಎನ್ನುವ ಆನುಮಾನಕೂಡ ಈಗ ಎಲ್ಲರನ್ನೂ ಕಾಡುತ್ತಿದೆ. ಇದಕ್ಕೆ ಪುಷ್ಟಿ ಎನ್ನುವಂತೆ ಇವರ ಮನೆಯಿಂದ ದರೋಡೆಮಾಡಿದ ಹಣ ಕೂಡ ನಾನು ಹೇಳಿದ್ದಕ್ಕೆ ನನ್ನ ಸ್ನೇಹಿತರ ಹತ್ತಿರದಿಂದ ಇವನೆ ಮನೆಗೆ ತಂದು ಕೊಟ್ಟಿದ್ದನೆಂದು ಮಲ್ಲಿಕಾರ್ಜುನ್ ಅವರೆ ಹೇಳಿದ್ದಾರೆ. ಸಾಹೇಬರ ಎಲ್ಲಾ ವಿಷಯದ ಅರಿವಿದ್ದ ಮನುಮಂತ ನಾಯ್ಕ ಹೇಗಾದರು ಅಯ್ತು ಹಣ ಕಿಳಬೇಕೆಂದು ಮೊದಲೇ ಫಿಕ್ಸ್ ಆಗಿರಲು ಸಾಧ್ಯ.? ಈ ಕಾರಣದಿಂದಲೇ ಸಾಹೇಬರು ಗೋವಾದಕಡಲಕಿನಾರೆಯ ವಿಕ್ಷಣೆಗೆ ಗೋವಾಕ್ಕೆ ತೆರಳಿದರೆ ಚಾಲಕ ಸ್ಕೆಚ್ ಹಾಕಿ ಅವರ ಮನೆ ತಲುಪಿದ್ದ ಹಂತಕ ಹನುಮಂತ..!! ಕಾರಣ ಸಾಹೇಬರ ಮನೆಯಲ್ಲಿ ಹಣವಿರುವ ಕಾರಣಕ್ಕೆ.! ಆದರೆ ಲಕ್ಷ ಲಕ್ಷ ಹಣ ಎಲ್ಲಿಂದ ಬಂತು ಎಂದು ಕೇಳಿದ ಪೋಲಿಸರ ಪ್ರಶ್ನೆಗೆ ಸಾಹೇಬರು ಮಗನ ಎಮ್ ಡಿ ಓದಿಗಾಗಿ ಹಣ ಕಟ್ಟಲು ಸ್ನೇಹಿತ ಬಳಿ ಸಾಲ ಮಾಡಿದ್ದೆ ಎಂದು ಹೇಳಿದ್ದಾರೆ.!! ಸ್ನೇಹಿತ ಬಳಿ ಸಾಲಮಾಡಿ ಅಷ್ಟೊಂದು ಹಣ ಪಡೆದಿದ್ದು ಮಾತ್ರ ಯಕ್ಷಪಶ್ನೆಯಾಗಿ ಕಾಡುತ್ತಿದೆ. ಮತ್ತು ಅಷ್ಟೊಂದು ಹಣ ಮನೆಯಲ್ಲಿಡಲು ಕಾರಣ ದೇವರಿಗೆ ಮಾತ್ರ ಗೊತ್ತು. ಇದನ್ನು ನಂಬಲು ಸಾಧ್ಯವೆ? ಪಾಪ ಹತ್ಯೆಯಾದ ಕಮಲಮ್ಮನ ಗಂಡ ಸಾಲಮಾಡಿ ಬದುಕುವ ಸ್ಥಿತಿ ಎದುರಾಗಿದ್ದು ಮಾತ್ರ ದುರಂತವೆ ಹೌದು.! ತಮ್ಮ ವೃತ್ತಿಬದುಕಿನಲ್ಲಿ ಇಂಜಿನಿಯರ್ ಆಗಿ ಕರ್ತವ್ಯ ನಿರ್ವಹಿಸಿದ ಮಲ್ಲಿಕಾರ್ಜುನಯ್ಯ ಈಗಾಗಲೇ ಸರಿಸುಮಾರು 59 ವರ್ಷ ಸುಮಾರು ಹನ್ನೊಂದು ತಿಂಗಳು ವೃತ್ತಿ ಬದುಕಿನಲ್ಲಿ ಕಳೆದಿರಬಹುದು ಇನ್ನೇನು ಒಂದು ತಿಂಗಳು ಉರುಳಿದರೆ ನಿವೃತ್ತಿಯಾಗುತ್ತಾರಂತೆ? ರಾಜ್ಯದ ಹಲವು ಇಲಾಖೆಯಲ್ಲಿ ಒಳ್ಳೆಯ ಹುದ್ದೆಯನ್ನೆ ಅಲಂಕರಿಸಿದ್ದ ಸಾಹೇಬರು ಮಗನ ಓದಿಗಾಗಿ ಸಾಲ ಮಾಡಿದ್ದು ಮಾತ್ರ ನಿಗೂಢವಾಗಿದೆ. ಅಥವಾ ಮಡದಿ ಹತ್ಯೆಯಾಗಿದ್ದು ಇಷ್ಟೊಂದು ಹಣ ಮನೆಯಲ್ಲಿ ಇಟ್ಟಿದ್ದು ಯಾಕೆ ಎನ್ನುವ ಪ್ರಶ್ನೆ ಎದುರಾದರೆ ತಾವೆ ತೊಂದರೆ ಎದುರಾಗುವ ದೃಷ್ಟಿಯಿಂದ ಸಾಲ ಮಾಡಿರುವುದಾಗಿ ಹೇಳಿದ್ದಾರೆ ಎನ್ನುವುದನ್ನು ಇಲ್ಲಿ ಯೋಚಿಸ ಬೇಕಾಗಿದೆ..! ಆದರೆ ಯಾರೂ ಒಬ್ಬ ಕಾರುಚಾಲಕನ ಕೈಯಲ್ಲಿ ( ಇವತ್ತಿನ ದಿನ ಮಕ್ಕಳು ಸಂಭಂಧಿಗಳ ಕೈಯಲ್ಲೆ ಇಷ್ಟೊಂದು ಹಣ ಕೊಡುವುದಿಲ್ಲ ) ಇಷ್ಟೊಂದು ಹಣ ತೆಗೆದುಕೊಂಡು ಒಯ್ದು ಮನೆಗೆ ಕೊಡಲು ಹೇಳಿದ್ದು ಮಾತ್ರ ಒಬ್ಬ ಜವಬ್ದಾರಿ ಇರುವ ಯಾವುದೇ ವ್ಯಕ್ತಿ ಈ ರೀತಿ ಮಾಡುವುದು ಸರಿಯಲ್ಲ ಎನ್ನುವುದು ಇಲ್ಲಿ ಉದ್ಭವಿಸುವ ಪ್ರಶ್ನೆಯಾಗಿದೆ. ಮನೆಯಲ್ಲಿ ಹಣವಿದ್ದ ಕಾರಣಕ್ಕೆ ಅಮಾಯಕ ಮಹಿಳೆ ಕಮಲಮ್ಮನ ಹತ್ಯೆಯಾಗಿದೆ ಪತಿ ಮಾಡಿದ ಒಂದು ತಪ್ಪು ( ಚಾಲಕನ ಕೈಯಲ್ಲಿ ಅಷ್ಟೊಂದು ಹಣ ಮನೆಗೆ ಕಳಿಸಿಕೊಟ್ಟಿದ್ದು ) ಇನ್ನಷ್ಟು ದಿನ ಜೊತೆಯಲ್ಲಿ ಬಾಳಿ ಬದುಕಬೇಕಾಗಿದ್ದ ಮಡದಿಯನ್ನೆ ಬಲಿಪಡೆಯುವಂತೆ ಮಾಡಿದ್ದು ಮಾತ್ರ ದುರಂತವೆ ಹೌದು. ಇಲ್ಲಿ ಇಂಜಿನಿಯರ್ ಕೂಡ ತಪ್ಪಿತಸ್ಥರೆ ಕಾರಣ ಲಕ್ಷಾಂತರ ರೂಪಾಯಿ ಹಣವನ್ನು ಕಾರು ಚಾಲಕನ ಕೈಯಲ್ಲಿ ಮನೆಗೆ ಕಳಿಸಿಕೊಟ್ಟಿದ್ದು…..
35 ಲಕ್ಷ ಹಣಕ್ಕಾಗಿ ಕೊಲೆ ಮಾಡಿದ ಕಾರು ಚಾಲಕ ?
ಕಮಲಮ್ಮ ಕೊಲೆಯಾದ ಮಹಿಳೆ
ಅಂದು ನೆಡೆದದ್ದಾದರು ಏನು.?
ಮಲ್ಲಿಕಾರ್ಜುನ ಚಿತ್ರದುರ್ಗ ಜಿಲ್ಲೆಯ ಹೊಸದುರ್ಗದಲ್ಲಿ ನೀರಾವರಿ ಇಲಾಖೆಯಲ್ಲಿ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ನಿತ್ಯ ಶಿವಮೊಗ್ಗದಿಂದ ಹೊಸದುರ್ಗಕ್ಕೆ ಕಾರಿನಲ್ಲಿ ಓಡಾಟ ನಡೆಸುತ್ತಿದ್ದರು. ಕಾರನ್ನು ಹನುಮಂತ ನಾಯ್ಕ ಚಾಲನೆ ಮಾಡುತ್ತಿದ್ದನು. ಮಲ್ಲಿಕಾರ್ಜುನ ಅವರ ಪುತ್ರ ಬೆಂಗಳೂರಿನಲ್ಲಿ ಎಂಬಿಬಿಎಸ್ ಮುಗಿಸಿದ್ದು ಎಂ.ಡಿಗೆ ಸೇರ್ಪಡೆಯಾಗಲು ಸಿದ್ಧತೆ ನಡೆಸಿದ್ದರು. ಮಗನ ಎಂಡಿ ಕೋರ್ಸಿಗೆ ಶುಲ್ಕ ಕಟ್ಟಲು ಸ್ನೇಹಿತರಿಂದ ₹35 ಲಕ್ಷ ಸಾಲ ಪಡೆದಿದ್ದರಂತೆ ಮಲ್ಲಿಕಾರ್ಜುನ ಅದನ್ನು ತಮ್ಮ ಚಾಲಕ ಹನುಮಂತನಾಯ್ಕ ಮೂಲಕ ಮನೆಯಲ್ಲಿ ತರಿಸಿಟ್ಟಿದ್ದರಂತೆ. ಕೊಲೆ ನಡೆದ ಮುನ್ನಾ ದಿನ ಮಲ್ಲಿಕಾರ್ಜುನ ಅವರು ಸ್ನೇಹಿತರೊಂದಿಗೆ ಗೋವಾಕ್ಕೆ ತೆರಳಿದ್ದರು. ಈ ಸಂದರ್ಭ ನೋಡಿಕೊಂಡ ಹನುಮಂತನಾಯ್ಕ ತನ್ನ ಸೋದರನಿಗೆ ಅಪಘಾತವಾಗಿದೆ. ಆತನ ಚಿಕಿತ್ಸೆಗೆ ಎರಡು ಸಾವಿರ ಹಣ ಬೇಕು ಎಂದು ಜೂ.16ರ ರಾತ್ರಿ ಮಲ್ಲಿಕಾರ್ಜುನ ಅವರ ಮನೆಗೆ ತೆರಳಿ ಕಮಲಮ್ಮನವರ ಬಳಿ ಹಣ ಕೇಳಿದ್ದ. ಆದರೆ ಕಮಲಮ್ಮ ಹಣ ನೀಡದೆ ಮರು ದಿನ ಬರುವಂತೆ ಹೇಳಿದ್ದರು. ಮರು ದಿನ ತೆರಳಿ ಕೊಲೆ ಮಾಡಿದ್ದಾರೆ ಎಂದು ಎಸ್ಪಿ ತಿಳಿಸಿದರು.
ಸ್ನೇಹಿತರ ಜೊತೆ ಚರ್ಚಿಸಿ ತೀರ್ಮಾನ.. ಇಂಜಿನಿಯರ್ ತಮ್ಮ ಮನೆಯಲ್ಲಿ ಹಣ ಇಟ್ಟಿರುವ ವಿಚಾರವನ್ನು ಸ್ನೇಹಿತರ ಜೊತೆಗೆ ಚರ್ಚಿಸಿದ್ದ ಆರೋಪಿ ಹನುಮಂತನಾಯ್ಕ ಕಮಲಮ್ಮನನ್ನು ಕೊಲೆ ಮಾಡಿ ಹಣ ದೋಚಲು ನಿರ್ಧರಿಸಿದ್ದಾನೆ. ಜೂನ್ 17ರಂದು ಆಹಾರ ಪೂರೈಕೆ ಸಂಸ್ಥೆಯ ಚಿಹ್ನೆ ಇರುವ ಟೀ ಶರ್ಟ್ ಖರೀದಿಸಿ ಮೂರು ಜನ ಸ್ನೇಹಿತರೊಂದಿಗೆ ಕಮಲಮ್ಮ ಅವರ ಮನೆಗೆ ತೆರಳಿ ಹಣ ಕೇಳಿದ್ದಾನೆ. ಆದರೆ ಕಮಲಮ್ಮ ಹಣ ನೀಡಲು ನಿರಾಕರಿಸಿದ್ದಾರೆ. ಪುನಃ ಕುಡಿಯಲು ನೀರು ಕೇಳಿದ್ದು ಕಮಲಮ್ಮ ನೀರು ತರಲು ಅಡುಗೆ ಮನೆಗೆ ಹೋಗುತ್ತಿದ್ದಂತೆ ಆರೋಪಿ ಅಪ್ಪುನಾಯ್ಕ ಹಿಂದಿನಿಂದ ಹೋಗಿ ಬಟ್ಟೆಯಿಂದ ಬಾಯಿ ಒತ್ತಿ ಹಿಡಿದಿದ್ದಾನೆ. ಕಮಲಮ್ಮ ಪ್ರತಿರೋಧ ವ್ಯಕ್ತಪಡಿಸಿದ್ದರಿಂದ ತೆಂಗಿನ ಕಾಯಿ ಸಿಪ್ಪೆ ಸುಲಿಯುವ ಕಬ್ಬಿಣದ ರಾಡಿನಿಂದ ಕುತ್ತಿಗೆಗೆ ಹೊಡೆದಿದ್ದಾನೆ. ನಂತರ ಮೂವರು ಸೇರಿ ಉಸಿರುಗಟ್ಟಿಸಿ ಆಕೆಯನ್ನು ಸಾಯಿಸಿದ್ದಾರೆ. ಬಳಿಕ ಕಪಾಟಿನಲ್ಲಿಟ್ಟಿದ್ದ ಹಣ ದೋಚಿ ಎಲ್ಲರೂ ಪರಾರಿಯಾಗಿದ್ದಾರೆ ಎಂದು ಎಸ್ಪಿ ತಿಳಿಸಿದರು.
ಪೋಲಿಸರ ಕಾರ್ಯಚರಣೆ
ಅದೇನೇ ಇರಲಿ ಇಲ್ಲಿ ಪೋಲಿಸರ ಕಾರ್ಯದಕ್ಷತೆಯನ್ನು ಮೆಚ್ಚಲೆಬೇಕು ಕಮಲಮ್ಮ ಕೊಲೆ ಪ್ರಕರಣ ದಾಖಲಿಸಿಕೊಂಡ ತುಂಗಾ ನಗರ ಪೋಲಿಸರು ಸ್ಥಳ ಪರಿಶೀಲಿಸಿ ಸಾಕಷ್ಟು ಮಾಹಿತಿಯನ್ನು ಕಲೆಹಾಕಿ ತನಿಖೆ ಆರಂಭಿಸಿ ಹಂತಕರ ಬೆನ್ನಿಗೆ ಬಿದ್ದ ಪೋಲಿಸರ ತಂಡ ಕೊನೆಗೂ ಹಂತಕರ ಜಾಡು ಹಿಡಿದು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ದಕ್ಷ ಎಸ್ಪಿ ಜಿ . ಕೆ.ಮಿಥುನ್ ಕುಮಾರ್ ಮತ್ತು ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿಲ್ ಕುಮಾರ್ ಭೂಮರೆಡ್ಡಿ, ಡಿವೈಎಸ್ಪಿ ಬಾಲರಾಜು, ತುಂಗಾನಗರ ಪೊಲೀಸ್ ಠಾಣೆ ಇನ್‌ಸ್ಪೆಕ್ಟರ್ ಬಿ. ಮಂಜುನಾಥ್, ಪಿಎಸ್‌ಐ ಕುಮಾರ್ ಕುರಗುಂದ, ರಘುವೀರ್, ಸಿಬ್ಬಂದಿಗಳಾದ ಕಿರಣ್, ರಾಜು, ಅರುಣ್ ಕುಮಾರ್, ಅಶೋಕ್, ಮೋಹನ್, ಕೇಶವ್ ಕುಮಾರ್, ಕಾಂತರಾಜ್, ನಾಗಪ್ಪ, ಹರೀಶ್ ನಾಯ್ಕ್ ರಿದ್ದ ಪೋಲಿಸರ ತಂಡ ಹಂತಕರನ್ನು ಹೆಡೆಮುರಿ ಕಟ್ಟುವಲ್ಲಿ ಯಶಸ್ವಿಯಾಗಿದ್ದಾರೆ
ಕಮಲಮ್ಮನ ಹತ್ಯೆಗೆ ಸಂಭಂಧಿಸಿದಂತೆ ಕಾರು ಚಾಲಕ ಸೇರಿ ಆರು ಮಂದಿಯ ಬಂಧನ
ಶಿವಮೊಗ್ಗದಲ್ಲಿ ಶುಕ್ರವಾರ ಎಸ್ಪಿ ಜಿ.ಕೆ. ಮಿಥುನ್ ಕುಮಾರ್ ಪತ್ರಿಕಾಗೋಷ್ಠಿಯಲ್ಲಿ ಪ್ರಕರಣದ ವಿವರ ನೀಡಿದರು. ಕಮಲಮ್ಮ ಅವರನ್ನು ಕೊಲೆ ಮಾಡಿದ್ದ ನಂತರ ಅವರ ಮನೆಯಿಂದ ಕಳವು ಮಾಡಿದ್ದ ಒಟ್ಟು 35 ಲಕ್ಷ ಹಣದಲ್ಲಿ 33,74,800 ನಗದು ಆರೋಪಿಗಳಿಂದ ವಶಪಡಿಸಿಕೊಳ್ಳಲಾಗಿದೆ. ಕೃತ್ಯಕ್ಕೆ ಬಳಸಿದ್ದ ಆಯುಧ, ಒಂದು ಟಾಟಾ ಇಂಡಿಕಾ ಕಾರು, ಏಳು ಮೊಬೈಲ್ ಫೋನ್, ಮೂರು ದ್ವಿಚಕ್ರ ವಾಹನ ಸೇರಿದಂತೆ ಒಟ್ಟು ಮೌಲ್ಯ 41,14,800 ನಗದು ಮತ್ತು ವಸ್ತುಗಳನ್ನು ವಶಕ್ಕೆ ಪಡೆಯಲಾಗಿದೆ ಎಂದು ಎಸ್ಪಿ ಮಾಹಿತಿ ನೀಡಿದರು. ಇಂಜಿನಿಯರ್ ಮಲ್ಲಿಕಾರ್ಜುನ ಅವರ ಖಾಸಗಿ ಕಾರಿನ ಚಾಲಕನಾಗಿ ಕೆಲಸ ಮಾಡುತ್ತಿದ್ದ ಹುಣಸೋಡು ತಾಂಡಾದ ಹನುಮಂತನಾಯ್ಕ(22), ಗುಂಡಪ್ಪ ಶೆಡ್ ನಿವಾಸಿ ಪ್ರದೀಪ್ ವಿ.ಯಾನೆ ಮೊದಲಿಯಾರ್ (21), ಸತೀಶ್ ವಿ.(26), ಅನುಪಿನಕಟ್ಟೆ ತಾಂಡಾದ ಅಪ್ಪುನಾಯ್ಕ ಸಿ. ಯಾನೆ ಅಪ್ಪು(21), ರಾಜು ವೈ. ಯಾನೆ ತೀತಾ(24), ಸಿ. ಪ್ರಭುನಾಯ್ಕ್ (26) ಬಂಧಿತ ಆರೋಪಿಗಳು. ಕೃತ್ಯಕ್ಕೆ ಕಾರು ನೀಡಿದ್ದ ಕೌಶಿಕ್ ಎಂಬ ಏಳನೇ ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದರು.
ಕಮಲಮ್ಮನವರನ್ನು ಹತ್ಯೆಮಾಡಿ ಹಣ ದೊಚಿದ ಬಳಿಕ ಎಲ್ಲರೂ ತಲೆಮರೆಸಿಕೊಂಡಿದ್ದರು. ಆರೋಪಿಗಳೆಲ್ಲರೂ ಸ್ಥಳೀಯ ನಿವಾಸಿಗಳಾಗಿದ್ದು, ಕೂಲಿ ಹಾಗೂ ಗಾರೆ ಕೆಲಸ ಮಾಡುತ್ತಿದ್ದರು. ತುಂಗಾ ನಗರ ಪೊಲೀಸರು ಮತ್ತು ಅಧಿಕಾರಿಗಳ ತನಿಖಾ ತಂಡ ಎಲ್ಲಾ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದೇವೆ ಎಂದು ಹೇಳಿದರು.