ಪೊಲೀಸ್ ಇನ್ಸ್ಪೆಕ್ಟರ್ ಮಂಜುನಾಥ್ ಅರ್ಜುನ ಲಿಂಗಾರೆಡ್ಡಿ
ಎಲ್ಲರಿಗೂ ನಮಸ್ಕಾರ,
ನಾನು ಮಂಜುನಾಥ ಅರ್ಜುನ ಲಿಂಗಾರೆಡ್ಡಿ, ಪೊಲೀಸ್ ಇನ್ಸ್ಪೆಕ್ಟರ್ ಕೋಲಾರದ ಚಿನ್ನದ ಗಣಿ ಪ್ರದೇಶ (KGF). ನಾನು ನನ್ನ ಬಿಡುವಿನ ಅವಧಿಯಲ್ಲಿ “ಸೈಬರ್ ಸುರಕ್ಷಾ ಕ್ಯಾಲೆಂಡರ್-2024” ನ್ನು ಸಿದ್ದಪಡಿಸಿದ್ದೇನೆ. ಈ ಡಿಜಿಟಲ್ ಕ್ಯಾಲೆಂಡರ ಪ್ರತಿಯೊಬ್ಬ ಪೊಲೀಸ್ ಅಧಿಕಾರಿ / ಸಿಬ್ಬಂದಿ ಹಾಗೂ ಸಾರ್ವಜನಿಕರಿಗೂ ತಲುಪಬೇಕು ಎನ್ನುವುದು ನನ್ನ ಉದ್ದೇಶ. ಸೈಬರ್ ಅಪರಾಧಗಳಿಗೆ ಸಂಬಂಧಿಸಿದಂತೆ ಸಾಕಷ್ಟು ವಿಚಾರಗಳನ್ನು ಈ ಕ್ಯಾಲೆಂಡರ್ ಒಳಗೊಂಡಿದೆ. ಪ್ರತಿಯೊಬ್ಬರ ಮೊಬೈಲಿನಲ್ಲಿ ಈ ಡಿಜಿಟಲ್ ಕ್ಯಾಲೆಂಡರ್ ಇರಬೇಕು ಎನ್ನುವುದು ನನ್ನ ಆಶಯ.ದಯವಿಟ್ಟು ಈ ಕ್ಯಾಲೆಂಡರನ್ನು ಎಲ್ಲರಿಗೂ ಶೇರ್ ಮಾಡುವುದರ ಮುಖಾಂತರ ಸೈಬರ್ ಅಪರಾಧಗಳ ಮುಕ್ತ ಸಮಾಜವನ್ನು ನಿರ್ಮಾಣ ಮಾಡೋಣ.ಜೈಹಿಂದ ಜೈ ಕರ್ನಾಟಕ ಮಾತೆ
ಪೋಲಿಸ್ ಇನ್ಸ್ಪೆಕ್ಟರ್ ಮಂಜುನಾಥ್ ಅರ್ಜುನ ಲಿಂಗಾರೆಡ್ಡಿ ಕೈಯಿಂದ ಮೂಡಿಬಂದಿದೆ ಸೈಬರ್ ಕ್ರೈಮ್ ನ ಸಾಕಷ್ಟು ವಿಷಯ ಒಳಗೊಂಡ ವಿನೂತನ ಕ್ಯಾಲೆಂಡರ್.!
ಮಂಜುನಾಥ್ ಅರ್ಜುನ ಲಿಂಗಾರೆಡ್ಡಿ ಪೋಲಿಸ್ ಇಲಾಖೆಯಲ್ಲಿ ಪೋಲಿಸ್ ಇನ್ಸ್ಪೆಕ್ಟರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಸಧ್ಯ ಕೋಲಾರದ ಚಿನ್ನದ ಗಣಿ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಇವರು ಸದಾ ಇಲಾಖೆಗಾಗಿ ಉಪಯೋಗ ಆಗುವಂತಹ ವಿಷಯವನ್ನಿಟ್ಟುಕೊಂಡು ಅ ವಿಷಯವಾಗಿ ಒಳಹೊಕ್ಕು ಅದನ್ನು ಕಾರ್ಯರೂಪಕ್ಕೆ ತಂದು ಹೊರತರುವ ಪ್ರಯತ್ನವನ್ನು ನಿರಂತರವಾಗಿ ಮಾಡುತ್ತಿರುವ ಕ್ರಿಯಾಶೀಲ ವ್ಯಕ್ತಿ ಎಂದರೆ ತಪ್ಪಾಗಲಾರದು. ಇಂತಹ ಸಾಕಷ್ಟು ಕೆಲಸವನ್ನು ಇಲಾಖೆಗಾಗಿ ಮಾಡಿ ಹಿರಿಯ ಅಧಿಕಾರಿಗಳಿಂದ ಪ್ರಶಂಸೆಗೆ ಪಾತ್ರರಾಗಿದ್ದಾರೆ ಮಂಜುನಾಥ್ ಲಿಂಗಾರೆಡ್ಡಿ
ಇದೆ ಹಾದಿಯಲ್ಲಿ ಮುಂದುವರೆದು ಹೆಜ್ಜೆ ಹಾಕಿದ ಇವರು ಇತ್ತೀಚೆಗೆ ಪೋಲಿಸ್ ಇಲಾಖೆಗೆ ಸಿಬ್ಬಂದಿಗಳಿಗೆ ಅದರಲ್ಲೂ ಸಾರ್ವಜನಿಕರಿಗೆ ಉಪಯೋಗ ಆಗುವಂತಹ ಸೈಬರ್ ಕ್ರೈಮ್ ನ ಅಷ್ಟು ಮಾಹಿತಿ ಇರುವಂತಹ ಒಂದು ವಿಷೇಶವಾದ ಕ್ಯಾಲೆಂಡರ್ ಅನ್ನು ಹೊರತಂದಿದ್ದಾರೆ.
ನಿಜಕ್ಕೂ ಇದು ಹೆಮ್ಮೆಯ ವಿಷಯವೆವಾಗಿದೆ.ಪೋಲಿಸ್ ಇಲಾಖೆಯ ಬಿಡುವಿಲ್ಲದ ಕೆಲಸದ ನಡುವೆಯೂ ಇಲಾಖೆಗಾಗಿ ಮತ್ತೊಂದು ರೀತಿಯಲ್ಲಿ ದುಡಿಯುವ ಇವರ ಕಾರ್ಯರೂಪಕ್ಕೆ ಹೆಮ್ಮೆ ಪಡಬೇಕಿದೆ ಈಗ ಇವರು ಶ್ರಮಪಟ್ಟು ಹೊರತಂದಿರುವ ಸೈಬರ್ ಕ್ರೈಮ್ ನ ಅಷ್ಟು ಮಾಹಿತಿ ಇರುವ ವಿನೂತನ ಕ್ಯಾಲೆಂಡರ್ ಇಲಾಖೆ ಅಲ್ಲದೆ ಪ್ರತಿಯೊಬ್ಬ ಸಾರ್ವಜನಿಕರ ಮೊಬೈಲ್ ನಲ್ಲಿ ಇರಬೇಕೆನ್ನುವ ಉದ್ದೇಶದಿಂದ ಪಿಡಿಎಫ್ ಮಾದರಿಯಲ್ಲಿ ಹೊರತಂದಿದ್ದಾರೆ. ನೀವು ಇದರ ಉಪಯೋಗವನ್ನು ಪಡೆಯಿರಿ…..