ನೂತನ ಸೂಡ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹೆಚ್ ಎಸ್ ಸುಂದರೇಶ್

ನೂತನ ಸೂಡ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಹೆಚ್ ಎಸ್ ಸುಂದರೇಶ್

ನನ್ನ ಪಕ್ಷನಿಷ್ಠೆಯನ್ನು ಗಮನಿಸಿ‌ದ ನಮ್ಮ ಕಾಂಗ್ರೆಸ್ ಸರ್ಕಾರ ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನನ್ನಾಗಿ ಜವಬ್ದಾರಿ ನೀಡಿದೆ ಈ ಸ್ಥಾನಕ್ಕೆ ಚುತಿಬಾರದ ರೀತಿಯಲ್ಲಿ ಕೆಲಸ ಮಾಡುತ್ತೇನೆ. ನನಗೆ ಮುಖ್ಯಮಂತ್ರಿಗಳು ಮತ್ತು ಉಪ ಮುಖ್ಯಮಂತ್ರಿಗಳು ಈ ಜವಬ್ದಾರಿ ನೀಡಿರುವುದು ಸಂತೋಷ ತಂದಿದೆ ಎಂದು ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ದಿ ಪ್ರಾಧಿಕಾರದ ನೂತನ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಹೇಳಿದರು.
ಅವರಿಂದು ಅಧಿಕಾರ ಸ್ವೀಕರಿಸಿ ಅಪಾರ ಅಭಿಮಾನಿಗಳ ಹಾಗೂ ಮುಖಂಡರಿಂದ ಗೌರವ ಸ್ವೀಕರಿಸಿ ಪತ್ರಕರ್ತ ಮಿತ್ರರೊಂದಿಗೆ ಮಾತನಾಡುತ್ತ ಹೇಳಿದರು

ಶಿವಮೊಗ್ಗ: ಬಹುದಿನಗಳ ನಿರೀಕ್ಷೆಯಂತೆ 44 ಮಂದಿ ಕಾಂಗ್ರೆಸ್ ಕಾರ್ಯಕರ್ತರಿಗೆ ನಿಗಮ ಮಂಡಳಿಯ ಅಧ್ಯಕ್ಷ ಸ್ಥಾನವನ್ನು ನೀಡಿದೆ. ಕಾಂಗ್ರೆಸ್ ಪಾರ್ಟಿಯ ಹೈಕಮಾಂಡ್ ಕಳೆದ ಗುರುವಾರ (ಫೆ,29 ರಂದು) ಪಟ್ಟಿ ಬಿಡುಗಡೆಮಾಡಿತ್ತು ಈ ಪಟ್ಟಿಯಲ್ಲಿ ಕರ್ನಾಟಕ ಕಾಂಗ್ರೆಸ್ ಪಾರ್ಟಿಯ ಕಟ್ಟಾಳು ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸಂಘಟನಾ ಚತುರ ಕಾಂಗ್ರೆಸ್ ಪಾರ್ಟಿಯೊಂದಿಗೆ ಕಳೆದ 35 ವರ್ಷದಿಂದ ಪಕ್ಷ ನಿಷ್ಠೆಯ ಜೋತೆಗೆ ಕಳೆದ ಐದು ವರ್ಷದಿಂದ ಶಿವಮೊಗ್ಗ ಜಿಲ್ಲಾ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಬಿಜೆಪಿಯ ಭದ್ರ ಕೋಟೆಯಾಗಿ ಹೋಗಿದ್ದ ಶಿವಮೊಗ್ಗ ಜಿಲ್ಲೆ ಬಿಜೆಪಿಯ ಪ್ರಬಲ ನಾಯಕರ ಎದುರು ಕಾಂಗ್ರೆಸ್ ನೆಲಕಚ್ಚಿ ಹೋಗಿತ್ತು. ಈ ಸಂಧರ್ಭದಲ್ಲಿ ಪಕ್ಷದ ಅಧ್ಯಕ್ಷರಾಗಿ ಕಾಂಗ್ರೆಸ್ ಪಕ್ಷವನ್ನು ಜಿಲ್ಲೆಯ ಉದ್ದಗಲಕ್ಕೂ ಮತ್ತೆ ಪಕ್ಷ ಸಂಘಟನೆಮಾಡಿ ಪಕ್ಷ ಬಿಟ್ಟು ಹೊದವರನ್ನು ಮತ್ತೆ ಪಕ್ಷಕ್ಕೆ ಕರೆತಂದು ಪ್ರತಿಸ್ಪರ್ಧಿ ಪಕ್ಷದ ವಿರುದ್ಧ ಬಿಜೆಪಿಯ ಪ್ರಬಲ ನಾಯಕರ ಎದುರು ತೊಡೆತಟ್ಟಿ ನಿಂತ ಹೆಚ್ ಎಸ್ ಸುಂದರೇಶ್ ಪಕ್ಷವನ್ನು ಮತ್ತೆ ಪುಟಿದೇಳುವಂತೆ ಮಾಡುವಲ್ಲಿ ಯಶಸ್ವಿಯಾದರು.ಕಳೆದ ಐದುವರ್ಷದ ಹಿಂದೆ ಬಣಗುಡುತ್ತಿದ್ದ ಕಾಂಗ್ರೆಸ್ ಭವನ ಇಂದು ರಾತ್ರಿ ಹಗಲೆನ್ನದೆ ಕಾರ್ಯಕರ್ತರಿಂದ ತುಂಬಿ ತುಳುಕುವಂತೆ ಮಾಡಿದ್ದಾರೆ. ಕಾಂಗ್ರೆಸ್ ನಿಂದ ದೂರ ಸರಿದಿದ್ದ ಮಹಿಳಾ ಕಾರ್ಯಕರ್ತರು ಇಂದು ಹೆಚ್ಚಿನ ಸಂಖ್ಯೆಯಲ್ಲಿ ಕಾಂಗ್ರೆಸ್ ಪಕ್ಷದಲ್ಲಿ ಕಣ್ಣಗೆ ಕಾಣುತ್ತಿದ್ದಾರೆ.ಯಾವುದೇ ಜಾತಿ ಮತವಿರಲಿ ಇಲ್ಲಿ ಎಲ್ಲರೂ ಒಂದೆ ಎನ್ನುವ ನಿಟ್ಟಿನಲ್ಲಿ ಕೆಲಸಮಾಡುವಂತೆ ಮಾಡಿದ್ದಾರೆ ಹೆಚ್ ಎಸ್ ಸುಂದರೇಶ್. ಜಿಲ್ಲೆಯಲ್ಲಿ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಏಳು ಸ್ಥಾನಗಳ ಪೈಕಿ ಮೂರು ಕ್ಷೇತ್ರವನ್ನು ಗೆದ್ದು ಪರಾಜಿತ ಗೊಂಡ ಕೇಲವು‌ ಕ್ಷೇತ್ರದಲ್ಲಿ ಅಲ್ಪ ಮತಗಳ ಅಂತರದಲ್ಲಿ ಸೋಲಿನ ಕಹಿ ಅನುಭವಿಸಬೇಕಾಯಿತು.ಸೋಲುಂಡ ಕ್ಷೇತ್ರದಲ್ಲಿ ಕಾಂಗ್ರೆಸ್ ಪಾರ್ಟಿ ಟಿಕೆಟ್ ನೀಡುವಲ್ಲಿ ಎಡವಟ್ಟು ಮಾಡಿಕೊಂಡಿದ್ದು ಕಾರಣವಾಗಿತ್ತು. ಶಿವಮೊಗ್ಗ ಜಿಲ್ಲೆಯಲ್ಲಿಯ ಕಾಂಗ್ರೆಸ್ ಬೆಳವಣಿಗೆಯನ್ನು ಗಮನಿಸಿದ ಹೈಕಮಾಂಡ್ ಅಧ್ಯಕ್ಷರಾದ ಹೆಚ್ ಎಸ್ ಸುಂದರೇಶ್ ಅವರನ್ನು ಕೊಂಡಾಡಿದ್ದರು.

ಇವರ ಪಕ್ಷ ನಿಷ್ಠೆಗೆ ವಿಧಾನಸಭಾ ಅಥವಾ ಲೋಕಸಭಾ ಚುನಾವಣೆಯ ಟಿಕೆಟ್ ನೀಡ ಬೇಕಿತ್ತು ಸಾಕಷ್ಟುಬಾರಿ ಚುನಾವಣೆಗೆ ಸ್ಫರ್ಧಿಸುವುದಕ್ಕೆ ಅವಕಾಶ ಸಿಗದೆ ವಂಚಿತರಾದರು. ಸುಂದರೇಶ್ ಪಕ್ಷದ ವಿರುದ್ಧ ತಿರುಗಿಬಿಳದೆ ಮತ್ತೆ ಪಕ್ಷ ಸಂಘಟನೆಗೆ ಮುಂದಾದರು ತಮ್ಮ ಅಧ್ಯಕ್ಷ ಸ್ಥಾನದ ಜವಾಬ್ದಾರಿಯನ್ನು ಪ್ರಮಾಣಿಕವಾಗಿ ನಿಭಾಯಿಸಿಕೊಂಡು ಹೊದರು. ಈ ಕಾರಣದಿಂದಲೇ ಸುಂದರೇಶ್ ಅವರ ಕಾಂಗ್ರೆಸ್ ಪಕ್ಷದ ಪ್ರಾಮಾಣಿಕ ಸೇವೆಯನ್ನು ಗಮನಿಸಿದ ಹೈಕಮಾಂಡ್ ಶಿವಮೊಗ್ಗ – ಭದ್ರಾವತಿ ನಗರಾಭಿವೃದ್ಧಿ ಪ್ರಾಧಿಕಾರದ ನೂತನ ಅಧ್ಯಕ್ಷನ್ನಾಗಿ ನೆಮಿಸಿದೆ.

ಮೆರವಣಿಗೆಯಲ್ಲಿ ಕಾಂಗ್ರೆಸ್ ಪಕ್ಷದ ಮಹಿಳಾ ಕಾರ್ಯಕರ್ತರು ನೃತ್ಯ ಮಾಡುವ ಮೂಲಕ ಶುಭ ಕರಿದರು

ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್ ಎಸ್ ಸುಂದರೇಶ್ ಅವರನ್ನು ಸರ್ಕಾರ ನೇಮಕಗೊಳಿಸಿ ಆದೇಶ ಹೊರಡಿಸಿದ ಬೆನ್ನಲ್ಲೆ ಇಂದು ನಗರದ ಸಹ್ಯಾದ್ರಿ ಕಾಲೇಜ್ ವೃತ್ತದಿಂದ ಬೃಹತ್ ರ್ಯಾಲಿ ಜೊತೆಗೆ ಸಾವಿರಾರು ಮಂದಿ ಕಾರ್ಯಕರ್ತರು ಅಭಿಮಾನಿಗಳು ರಸ್ತೆ ಉದ್ದಕ್ಕೂ ಜಮಾಯಿಸಿದ್ದರು. ನೂತನ ಸೂಡಾ ಅಧ್ಯಕ್ಷರು ಬೃಹತ್ ಮೆರವಣಿಗೆಯ ಮೂಲಕ ಕಾಂಗ್ರೆಸ್ ಕಛೇರಿ ಬಂದು ನಂತರ ಅಲ್ಲಿಂದ ಕುವೆಂಪು ರಸ್ತೆ ಮತ್ತು ಜೈಲ್ ರಸ್ತೆ ಮಾರ್ಗವಾಗಿ ಸೂಡಾ ಕಚೇರಿಗೆ ಹೋಗಿ ಅಧಿಕಾರ ಸ್ವೀಕರಿಸಿದರು.

ಹಾರ ತುರಾಯಿಗಳ ಜೊತೆಗೆ ಮೈಸೂರು ಪುಟಗಳನ್ನು ತೊಡಿಸಿ ಹಿತೈಷಿಗಳು, ಅಭಿಮಾನಿಗಳು ಹಾಗೂ ಪಕ್ಷದ ಮುಖಂಡರು ನೂತನ ಸೂಡ ಅಧ್ಯಕ್ಷರನ್ನು ಅಭಿನಂದಿಸಿದರು.ಪ್ರಮುಖರಲ್ಲಿ ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಮಲೆನಾಡು ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಆರ್ ಎಮ್ ಮಂಜುನಾಥ್ ಗೌಡ, ಕಾಂಗ್ರೆಸ್ ಮುಖಂಡರಾದ ಎಮ್ ಶ್ರೀಕಾಂತ್, ಜಿಪಂ ಮಾಜಿ ಅಧ್ಯಕ್ಷರಾದ ಬಲ್ಕಿಷ್ ಭಾನು, ಡಾ.ಶ್ರೀನಿವಾಸ್, ಶಿವಮೊಗ್ಗ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಿ ಜು ಪಾಶ, ಜಿ ಪದ್ಮನಾಭ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕಲಿಮ್ ಪಾಶ, ಎಸ್ ಟಿ ಚಂದ್ರಶೇಖರ್ ಹಾಗೂ ಸಾವಿರಾರು ಕಾರ್ಯಕರ್ತರು ನೂತನ ಅಧ್ಯಕ್ಷರನ್ನು ಅಭಿನಂದಿಸಿದರು

Leave a Reply

Your email address will not be published. Required fields are marked *

Optimized by Optimole
error: Content is protected !!