ಪುತ್ತೂರು, ಅಕ್ಷಯ್‌ ಕಲ್ಲೇಗ ಕೊಲೆ ಪ್ರಕರಣ: ಆರೋಪಿತನೊಬ್ಬನ ಸಹೋದರನ ಹತ್ಯೆಗೆ ಸ್ಕೆಚ್.!? ನಾಲ್ವರ ಬಂಧನ

ಪುತ್ತೂರು, ಅಕ್ಷಯ್‌ ಕಲ್ಲೇಗ ಕೊಲೆ ಪ್ರಕರಣ: ಆರೋಪಿತನೊಬ್ಬನ ಸಹೋದರನ ಹತ್ಯೆಗೆ ಸ್ಕೆಚ್.!?

ಪುತ್ತೂರು: ನಗರದ ಹೊರ ವಲಯದ ಮುಕ್ರಂಪಾಡಿ ಜಂಕ್ಷನ್‌ನಲ್ಲಿ ಕಳೆದ ಸೋಮವಾರ ( ಫೆ. 19ರಂದು) ತಡರಾತ್ರಿ ಅನುಮಾನಾಸ್ಪದವಾಗಿ ನಿಂತಿದ್ದ ಕಾರನ್ನು ತಪಾಸಣೆ ಮಾಡಿದ ಪೋಲಿಸರಿಗೆ ತಲವಾರುಗಳು ಪತ್ತೆಯಾಗಿದ್ದವು. ಪ್ರಕರಣಕ್ಕೆ ಸಂಬಂಧಿಸಿದಂತೆ ಪೋಲಿಸರು ನಾಲ್ವರನ್ನು ಬಂಧಿಸಿದ್ದರು.ಬಂಧಿತರ ಕಾರಲಿದ್ದ ಹತಾರಗಳಿಗೆ ಕಾರಣವೇನೆಂದು ಎಂದು ಆರೋಪಿಗಳನ್ನು ತೀವ್ರ ವಿಚಾರಣೆಗೆ ಒಳಪಡಿಸಿದಾಗ ಕಳೆದ ನಾಲ್ಕು ತಿಂಗಳ ಹಿಂದೆ ಬರ್ಬರವಾಗಿ ಕೊಲೆಯಾದ ಅಕ್ಷಯ್‌ ಕಲ್ಲೇಗ ಪ್ರಕರಣದ ಆರೋಪಿಯೋರ್ವನ ಸಹೋದರನನ್ನು ಹತ್ಯೆಮಾಡಲು ಈ ನಾಲ್ವರ ಟೀಮ್ ಲಾಂಗುಗಳ ಸಮೇತ ರೇಡಿಯಾಗಿದ್ದರು.! ಎನ್ನುವುದು ಆರೋಪಿತರ ಹೇಳಿಕೆಯಿಂದ ಬಯಲಾಗಿದೆ.
ಕಿಶೋರ್‌ ಪೂಜಾರಿ ಕಲ್ಲಡ್ಕ, ಮನೋಜ್‌, ಆಶಿಕ್‌ ಮತ್ತು ಸನತ್‌ ಕುಮಾರ್‌ ಬಂಧಿತರು. ಈ ಪೈಕಿ ಕಿಶೋರ್‌ ಪೂಜಾರಿಯು ಕೊಲೆ ಪ್ರಕರಣವೊಂದರಲ್ಲಿ ಜೈಲಿನಲಿದ್ದು, ಕೆಲವು ದಿನಗಳ ಹಿಂದೆಯಷ್ಟೇ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ. ಆರೋಪಿಗಳು ಕೊಲೆ ಮಾಡುವ ಉದ್ದೇಶ  ದಿಂದ ಕಾರಿನಲ್ಲಿ ತಲವಾರು ತೆಗೆದುಕೊಂಡು ಬಂದಿದ್ದರು ಎಂಬ ಅಂಶ ಪೊಲೀಸರ ತನಿಖೆಯಿಂದ ತಿಳಿದು ಬಂದಿದೆ.
ಕಬಕ ಗ್ರಾಮದ ಕಲ್ಲೇಗ ನಿವಾಸಿ, ಕಲ್ಲೇಗ ಟೈಗರ್ಸ್‌ ಎಂಬ ತುಳುನಾಡಿನ ಪ್ರಸಿದ್ಧ ಹುಲಿ ವೇಷ ಕುಣಿತ ತಂಡದ ನಾಯಕ ಅಕ್ಷಯ್‌ ಕಲ್ಲೇಗ(26) ಸಣ್ಣ ವಿಷಯಕ್ಕೆ ಅವನನ್ನು 2023ರ ನ.6ರಂದು ತಡರಾತ್ರಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಈ ಪ್ರಕರಣದಲ್ಲಿ ನಾಲ್ವರು ಆರೋಪಿಗಳನ್ನು ಬಂಧಿಸಲಾಗಿತ್ತು. ಆರೋಪಿಗಳ ಪೈಕಿ ಒಬ್ಬನ ಸಹೋದರನನ್ನು ಹತ್ಯೆಮಾಡಿ ಮುಗಿಸಲು ಕಿಶೋರ್‌ ಪೂಜಾರಿ ಗ್ಯಾಂಗ್‌ ಸಂಚು ರೂಪಿಸಿತ್ತು ಎನ್ನಲಾಗಿದೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.
ಈ ಹತ್ಯೆಗೆ ಸಂಚುರೂಪಿಸಿದ
ಕಿಶೋರ್‌ ಪೂಜಾರಿ ಮತ್ತು ತಂಡ 2022ರಲ್ಲಿ ಪೆರ್ಲಂಪಾಡಿ ಬಳಿ ಕೊಲೆಯಾದ ಚರಣ್‌ರಾಜ್‌ ರೈ ಹತ್ಯೆ ಪ್ರಕರಣದ ಪ್ರಮುಖ ಆರೋಪಿಯಾಗಿದ್ದರೆ.! ಕೊಳ್ತಿಗೆ ಗ್ರಾಮದ ಪೆರ್ಲಂಪಾಡಿಯಲ್ಲಿ 2022 ಜೂ.4ರಂದು ಚರಣ್‌ರಾಜ್‌ ರೈ ಎಂಬವರನ್ನು ಕೊಲೆ ಮಾಡಲಾಗಿತ್ತು. ಹಿಂಜಾವೇ ಕಾರ್ಯದರ್ಶಿ ಕಾರ್ತಿಕ್‌ ಸುವರ್ಣ ಮೇರ್ಲ ಹತ್ಯೆಗೆ ಪ್ರತೀಕಾರವಾಗಿ ಈ ಕೊಲೆ ನಡೆದಿದ್ದು ಈ ಪ್ರಕರಣದ ಪ್ರಮುಖ ಸೂತ್ರಧಾರಿ ಕಿಶೋರ್‌ ಪೂಜಾರಿ ಕಲ್ಲಡ್ಕ ಆಗಿದ್ದ. ಈ ಪ್ರಕರಣದಲ್ಲಿ ಈತ ಜೈಲಿನಲ್ಲಿದ್ದು ಜಾಮೀನಿನಲ್ಲಿ ಬಿಡುಗಡೆಗೊಂಡಿದ್ದ.

ಹಿಂದೂ ಮುಖಂಡನಿಗೂ ಬೆದರಿಕೆ?

ಕಿಶೋರ್‌ ಪೂಜಾರಿ ಸಹಿತ ಆರೋಪಿಗಳು ಸೋಮವಾರ ಪುತ್ತೂರಿನ ಹಿಂದೂ ಸಂಘಟನೆಯ ಪ್ರಮುಖ ಮುಖಂಡ ನಿಗೂ ಕ್ಷುಲ್ಲಕ ವಿಚಾರಕ್ಕೆ ಸಂಬಂಧಿಸಿ ಬೆದರಿಕೆ ಒಡ್ಡಿರುವುದಾಗಿಯು ಸುದ್ದಿ ಹಬ್ಬಿದೆ. ಆದರೆ ಪೊಲೀಸ್‌ ಮೂಲಗಳು ಇದನ್ನು ದೃಢಪಡಿಸಿಲ್ಲ.

Flashback

ಅಂದು ನಡೆದದ್ದುಏನು?

ಪ್ರತಿಷ್ಠಿತ ಹುಲಿವೇಷ ತಂಡಗಳಲ್ಲಿ ಒಂದಾದ ಪುತ್ತೂರಿನ ಕಲ್ಲೇಗ ಟೈಗರ್ಸ್ ತಂಡದ ನಾಯಕನನ್ನು ಹಂತಕರು ಲಾಂಗು ಮಚ್ಚುಗಳಿಂದ ಮನಬಂದಂತೆ ಕೊಚ್ಚಿ ಬರ್ಬರವಾಗಿ ಹತ್ಯೆ ಮಾಡಿದ್ದರು ಈ ಘಟನೆಯೊಂದು ಕಳೆದ ನಾಲ್ಕು ತಿಂಗಳ ಹಿಂದೆ ಪುತ್ತೂರಿನಲ್ಲಿ ನೆಡೆದಿತ್ತು.

ಅಂದು ಹತ್ಯೆಯಾದವನು ಕಲ್ಲೇಗ ಟೈಗರ್ಸ್ ತಂಡದ ನಾಯಕ ಅಕ್ಷಯ್ ಕಲ್ಲೇಗ (26) ನನ್ನು ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ನೆಹರೂ ನಗರ ಜಂಕ್ಷನ್‌ನಲ್ಲಿ ಆತನನ್ನು ಎಲ್ಲೆಂದರಲ್ಲಿ ಅಟ್ಟಾಡಿಸಿಕೊಂಡು ಹೋಗಿ ಕೊಚ್ಚಿ ಕೊಲೆಮಾಡಿದ್ದರು.
.ಅಂದು ಅಕ್ಷಯ್ ಕಲ್ಲೇಗ ಪುತ್ತೂರಿನಲ್ಲಿ ಇರುವುದನ್ನು ಖಾತ್ರಿ ಮಾಡಿಕೊಂಡ ಹಂತಕರ ಗ್ಯಾಂಗ್ ದೀಡಿರ್ ಹತಾರಗಳಿಂದ ದಾಳಿಮಾಡಿದ್ದರು ಅ ಸಮಯದಲ್ಲಿ ಅಕ್ಷಯ್ ಕಲ್ಲೇಗ ಹಂತಕರಿಂದ ತಪ್ಪಿಸಿಕೊಳ್ಳಲು ಎಲ್ಲೆಂದರಲ್ಲಿ ಓಡಿದ್ದ ಅದರೂ ಆತನನ್ನು ಬಿಡಿದ ಹಂತಕರ ಗ್ಯಾಂಗ್‌ ಬೆನ್ನಿಗೆ ಬಿದ್ದು ಓಡಾಡಿಸಿಕೊಂಡು ಆತನನ್ನು ಕೊಂದು ಮುಗಿಸಿದ್ದರು.!

ಅಕ್ಷಯ್ ಕಲ್ಲೇಗನನ್ನು ಹತ್ಯೆಮಾಡಿದ ಹಂತಕರು

ಹತ್ಯೆಯಾದ ಅಕ್ಷಯ್ ಪುತ್ತೂರಿನ ಪ್ರತಿಷ್ಠಿತ ಕಲ್ಲೇಗ ಟೈಗರ್ (ಹುಲಿವೇಷ ತಂಡ) ತಂಡದ ನಾಯಕನಾಗಿದ್ದ ಅಕ್ಷಯ್ ಕಲ್ಲೇಗನನ್ನು ತಲ್ವಾರ್ ನಿಂದ ಕೊಚ್ಚಿ ಕೊಲೆ ಮಾಡಿದ ಬೆನ್ನಲ್ಲೇ ಆರೋಪಿಗಳಾದ ಬನ್ನೂರು ನಿವಾಸಿ ಮನೀಷ್ ಮತ್ತು ಚೇತು ಪೊಲೀಸ್ ಠಾಣೆಗೆ ತೆರಳಿ ತಾವೆ ಶರಣಾಗಿದ್ದರು.

ಕೊಲೆಗೆ ಕಾರಣವೇನು?

ಮೂಲಗಳ ಪ್ರಕಾರ ಎರಡು ದ್ವಿಚಕ್ರ ವಾಹನಗಳ ನಡುವೆ ನಡೆದ ಅಪಘಾತದ ವಿಚಾರದಲ್ಲಿ ಗಲಾಟೆ ಆರಂಭವಾಗಿದ್ದು, ರಾಜಿ ಸಂಧಾನದಲ್ಲಿ ಎರಡು ಸಾವಿರ ರೂಪಾಯಿ ನೀಡುವ ವಿಚಾರದಲ್ಲಿ ಮಾತುಕತೆ ವಿಕೋಪಕ್ಕೆ ಹೋಗಿದೆ. ಮಾತುಕತೆ ವಿಕೋಪಕ್ಕೆ ಹೋಗುತ್ತಿದ್ದಂತೆ ಖಾಸಗಿ ಬಸ್‌ ಚಾಲಕ ಚೇತು ಎಂಬಾತನ ಬೆಂಬಲಿಗನಿಗೆ ಹಾಗೂ ಅಕ್ಷಯ್ ನಡುವೆ ತೀವ್ರ ವಾಗ್ವಾದ ಉಂಟಾಗಿದ್ದು ಕೊನೆಗೆ ಅಕ್ಷಯ್ ಕಲ್ಲೇಗನನ್ನು ಮೂರಕ್ಕೂ ಅಧಿಕ ಮಂದಿಯ ತಂಡ ಅಟ್ಟಾಡಿಸಿಕೊಂಡು ಹೋಗಿ ತಲ್ವಾರಿನಿಂದ ಮನಸೊ ಇಚ್ಚೆ ದಾಳಿ ನಡೆಸಿ ಹತ್ಯೆಮಾಡಿದ್ದರು.
ಅಕ್ಷಯ್‌ನ ಮೃತದೇಹ ಪೆಟ್ರೋಲ್ ಬಂಕ್ ಬಳಿಯ ಪೊದೆಯೊಂದರಲ್ಲಿ ರಕ್ತದ ಮಡುವಿನಲ್ಲಿ ಪತ್ತೆಯಾಗಿತ್ತು.!

Leave a Reply

Your email address will not be published. Required fields are marked *

Optimized by Optimole
error: Content is protected !!