ನಮ್ಮ ಸರ್ಕಾರದ ಯಶಸ್ವಿಯಾಗಿ ಮುಂದುವರೆದು ಹೋಗುತ್ತಿರುವ ಗ್ಯಾರಂಟಿ ಯೋಜನೆಗಳನ್ನು ಸಹಿಸಿಕೊಳ್ಳಲಾಗದ ಬಿಜೆಪಿಯುವರು ಮನಸ್ಸಿಗೆ ಬಂದಂತೆ ಮಾತನಾಡುತ್ತಿದ್ದಾರೆ. ಅವರಿಗೆ ಬಡವರ ಕಷ್ಟಗಳೇ ಗೊತ್ತಿಲ್ಲ ಇವರ ಆಡಳಿತಾವಧಿಯಲ್ಲಿ ಭ್ರಷ್ಟಚಾರ ಮಾಡಿ ಈಗ ನಮ್ಮ ಸರ್ಕಾರದ ಯಶಸ್ಸನ್ನು ಕಂಡು ಎನು ಮಾಡಬೇಕೆಂಬುದು ಗೊತ್ತಾಗದೆ ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಮನಸ್ಸಿಗೆಬಂದಂತೆ ಟೀಕಿಸುತ್ತಿದ್ದಾರೆ. ಅವರು ಏನೇ ತಿಪ್ಪರಲಾಗ ಹಾಕಿದರು ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ನಿಲ್ಲುವುದಿಲ್ಲ.ಇಂತಹ ದುಷ್ಟ ಬುದ್ಧಿಯನ್ನು ಬಿಟ್ಟು ಬಡವರ ಕಷ್ಟಗಳಿಗೆ ಅನುಕೂಲವಾಗುವುದನ್ನು ಬಿಜೆಪಿಯವರು ಗಮನಿಸಬೇಕು ಎಂದರು.
ಧರ್ಮ ಧರ್ಮಗಳ ಬಗ್ಗೆ ವಿಷ ಬೀಜ ಬಿತ್ತಿ ಚುನಾವಣೆಯನ್ನು ಎದುರಿಸುವ ಕಾಲ ಮುಗಿದು ಹೋಗಿದೆ. ಮತ್ತೆದೆ ಅಜೆಂಡಾ ದೊಂದಿಗೆ ಲೋಕಸಭಾ ಚುನಾವಣೆಗೆ ಮುಂದಾಗಿದ್ದಾರೆ ಇದು ಈ ಬಾರಿ ವರ್ಕ್ಔಟ್ ಆಗುವುದಿಲ್ಲ ಅಲ್ಲಿ ಹುಚ್ಚರ ಸಂತೆಯಾಗಿದೆ ಎಂದರು. ಯಾವುದೇ ಅಭಿವೃದ್ದಿ ಮಾಡಿದರು, ಏನಾದರೊಂದು ಹೇಳಿ ಅದನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಾರೆ. ಅಧಿಕಾರ ಕಳೆದುಕೊಂಡು ಹುಚ್ಚರಾಗಿದ್ದಾರೆ ಎಂದು ಟೀಕಿಸಿದರು.
ಬರಲಿರುವ 24ರ ಶನಿವಾರದೊಂದು ನಡೆಯುವ ಗ್ಯಾರಂಟಿಗಳ ಸಮಾವೇಶದಲ್ಲಿ ಶಿವಮೊಗ್ಗ ಜಿಲ್ಲೆಯಿಂದ ಸುಮಾರು 50 ಸಾವಿರಕ್ಕೂ ಹೆಚ್ಚು ಫಲಾನುಭವಿಗಳು ಭಾಗವಹಿಸುವ ನಿರೀಕ್ಷೆಯಿದೆ. ಇದರಲ್ಲಿ ಸುಮಾರು 30 ಸಾವಿರ ಮಹಿಳೆಯರು ಭಾಗವಹಿಸುತ್ತಾರೆ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸೇರಿದಂತೆ ಸಚಿವರುಗಳು, ಶಾಸಕರುಗಳು, ಪಕ್ಷದ ರಾಜಕೀಯ ಮುಖಂಡರು ಮತ್ತು ಅಧಿಕಾರಿಗಳು ಭಾಗವಹಿಸಲಿದ್ದಾರೆ ಎಂದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ಬಾರಿ ಬಜೆಟ್‌ನಲ್ಲಿ ಶಿವಮೊಗ್ಗ ಜಿಲ್ಲೆಗೆ ಅನೇಕ ಕೊಡುಗೆಗಳನ್ನು ನೀಡಿದ್ದಾರೆ. ಬಹುದೊಡ್ಡ ಬಜೆಟ್‌ನ್ನೇ 15ನೇ ಬಾರಿಗೆ ರಾಜ್ಯದಲ್ಲಿ ಮಂಡಿಸಿದ್ದಾರೆ. ಗ್ಯಾರಂಟಿಗಳ ನಡುವೆಯೂ ಮತ್ತೇ ಹೊಸ ಗ್ಯಾರಂಟಿಗಳನ್ನು ಕೂಡ ಸೇರಿಸಿದ್ದಾರೆ. ಇದು ಬಡವರ ಪರವಾದ ಪಕ್ಷವಾಗಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪ್ರಮುಖರಾದ ಆರ್.ಪ್ರಸನ್ನಕುಮಾರ್, ಎಂ. ಶ್ರೀಕಾಂತ್, ಕಲಗೋಡು ರತ್ನಾಕರ್. ಸಿ.ಹೆಚ್.ಚಂದ್ರಭೂಪಾಲ್, ಎಸ್.ಟಿ.ಚಂದ್ರಶೇಖರ್, ಕಲೀಂ ಪಾಶಾ, ಶಿ.ಜು.ಪಾಶ, ಜಿ.ಪದ್ಮನಾಭ್,
ಪಿ.ಎಸ್. ಗಿರೀಶ್ ರಾವ್, ಎಂ.ಪಿ.ದಿನೇಶ್ ಪಾಟೀಲ್, ಚಂದನ, ಅಡ್ಡು,ಎನ್.ಡಿ.ಪ್ರವೀಣ್‌ಕುಮಾರ್ ಉಪಸ್ಥಿತರಿದ್ದರು.