ಹೆತ್ತವರು ಕೆಲಸಕ್ಕೆ ಹೋಗು ಎಂದಿದ್ದಕ್ಕೆ ಯುವಕ ಆತ್ಮಹತ್ಯೆಗೆ ಶರಣು…
news.ashwasurya.in
ಶಿವಮೊಗ್ಗ: ಮನೆಯಲ್ಲಿ ಕೆಲಸಕ್ಕೆ ಹೋಗು ಎಂದಿದ್ದಕ್ಕೆ ಮನನೊಂದು ಯುವಕನೋರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಭದ್ರಾವತಿ ತಾಲೂಕಿನ ಹಳೆ ಕೋಡಿಹಳ್ಳಿಯಲ್ಲಿ ನಡೆದಿದೆ.
ಸಾಗರ್ (21) ಆತ್ಮಹತ್ಯೆ ಮಾಡಿಕೊಂಡ ಯುವಕ. ವಯಸ್ಸಿಗೆ ಬಂದ ಮಗ ಮನೆಯಲ್ಲಿಯೇ ಇದ್ದರೆ ಯಾವುದೇ ಮನೆಯಲ್ಲಿ ಸಹಜವಾಗಿ ಹೇಳುವುದು ಕೆಲಸಕ್ಕೆ ಹೋಗು ಎಂದು. ಭದ್ರಾವತಿಯ ಸಾಗರ್ ಎನ್ನುವ ಯುವಕನಿಗೀ ಮನೆಯವರು ಕೆಲಸಕ್ಕೆ ಹೋಗು ಎಂದು ಹೇಳಿದ್ದಾರೆ ಆದರೆ ಆತ ಆದೆ ದೊಡ್ಡ ವಿಷಯ ಎಬಂತೆ ಮನನೊಂದು ಫೆಬ್ರವರಿ 19ರಂದು ಜ್ಯೂಸಿಗೆ ಇಲಿಪಾಷಾಣ ಬೆರಸಿಕೊಂಡು ಕುಡಿದು ಆತ್ಮಹತ್ಯೆಗೆ ಯತ್ನಿಸಿದ್ದ
ವಿಷಯ ತಿಳಿದ ಮನೆಯವರು ಕೂಡಲೇ ಅವನನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದರು ಆದರೆ ಚಿಕಿತ್ಸೆ ಫಲಕಾರಿಯಾಗದ ಹಿನ್ನೆಲೆಯಲ್ಲಿ ಯುವಕ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.