“ಎಂಥದ್ದು ಇಲ್ಲ ಡೋಲೋ 650 ಮಾತ್ರೆ ಬಿಸಿ ರಾಗಿ ಹಿಟ್ಟು.. ಕರೊನಾ ಬಂದವರಿಗೆ ಅದೇ. ಹೇಳ್ಬಿಟ್ಟು ಬರ್ತದಾ ಸಾರ್.. ಹೋದ ವರ್ಸ್ ಎಲ್ಲ ಆಂಟಿಯರಿಗೆ ಬಂತು.. ಈ ವರ್ಸ್ ಹೈಕ್ಳಿಗೆ, ಹುಡುಗ್ರಿಗೆ ಬಂತು, ಆಮೇಲೆ ಹೊಟ್ಟೆಯೊಳಗಿರೋ ಕೂಸಿಗೆ ಬರುತ್ತೆ.. ಹೀಗೆ ತಮ್ಮ ಡೈಲಾಗ್ ಮೂಲಕವೇ ಸುದ್ದಿಯಾದವರು ಶಶಿರೇಖಾ
ಡೋಲೊ 650 ಖ್ಯಾತಿಯ ಶಶಿರೇಖಾ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ.!!
News.Ashwasurya.in
ಚಂದನವನದ ವಿಶೇಷ ಸುದ್ದಿ: ಕೊರೊನಾ ಸಂಧರ್ಭದಲ್ಲಿ ಪ್ರತಿಯೊಬ್ಬರ ಮನಸ್ಸು ಮುಟ್ಟಿದ ಡೋಲೋ 650 ಮಾತ್ರೆ, ಬಿಸಿ ರಾಗಿಮುದ್ದೆ ಎಂಬ ಡೈಲಾಗ್ ತುಂಬಾನೆ ಫೇಮಸ್ ಆಗಿತ್ತು. ಅದರಲ್ಲೂ ಕೊರೊನ ಸಂಕಷ್ಟದ ನಡುವೆಯು ಈ ಡೈಲಾಗ್ ಎಲ್ಲಾ ಕಡೆ ಸದ್ದು ಮಾಡಿತ್ತು. ಇದೀಗ ಈ ಡೈಲಾಗ್ ಖ್ಯಾತಿಯ ಡೋಲೋ 650 ಶಶಿರೇಖಾ ಚಂದನವನಕ್ಕೆ ಕಾಲಿಡುವ ಬಗ್ಗೆ ಸುದ್ದಿ ಹರಿದಾಡಿದೆ. ಕನ್ನಡ ಚಿತ್ರದರಂಗದ ಹಿರೋಯಿನ್ ಆಗಿದ್ದಾರೆ.!!
ಶಶಿರೇಖಾ ತನ್ನ ಡೈಲಾಗ್ ಗೆ ಅವಾರ್ಡ್ ಪಡೆದ ಕ್ಷಣ
ಡೋಲೋ 650 ಮಾತ್ರೆ, ಬಿಸಿ ರಾಗಿ ಮುದ್ದೆ ಮಾತ್ರ…ಎಂಬ ಡೈಲಾಗ್ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿ ಲಕ್ಷಾಂತರ ಜನ ಇದನ್ನು ಕೇಳಿ ವಿಡಿಯೋ ನೋಡಿ ಒಳಗೊಳಗೆ ಸಂತೋಷ ಪಟ್ಟಿದ್ದರು ಆ ಮಟ್ಟಕ್ಕೆ ಅ ಡೈಲಾಗ್ ಸದ್ದು ಮಾಡಿತ್ತು ಇನ್ನೂ ಕೇಲವರು ಆಕೆಯ ಡೈಲಾಗ್ ಅನ್ನೆ ದುರುಪಯೋಗ ಪಡಿಸಿಕೊಂಡು ತಿರುಚಿ ವ್ಯಂಗ್ಯ ಮಾಡಿದ್ದರು ಅದರು ಅ ಹುಡುಗಿ ಬೇಜಾರಾಗದೆ ಎಲ್ಲವನ್ನೂ ಪ್ರೀತಿಯಿಂದಲೆ ಸ್ವೀಕರಿಸಿದ್ದಳು.
ಕೊರೊನಾ ಬಂದವರಿಗೆ ಏನೂ ವಿಶೇಷ ಸವಲತ್ತುಗಳು ಇಲ್ಲ. ಕೇವಲ ಡೋಲೋ 650 ಮಾತ್ರೆ..ಬಿಸಿ ರಾಗಿಮುದ್ದೆ ಅಷ್ಟೆಯಾ ಅನ್ನುವುದನ್ನು ಶಶಿರೇಖಾ ಎನ್ನುವ ಗ್ರಾಮೀಣ ಮಹಿಳೆ ಗ್ರಾಮೀಣ ಭಾಷೆಯಲ್ಲಿ ಹೇಳಿದ ರೀತಿ ಲಕ್ಷಾಂತರ ಮಂದಿಗೆ ಇಷ್ಟವಾಗಿತ್ತು.
ಇದೀಗ ಡೋಲೋ 650 ಖ್ಯಾತಿಯ ಶಶಿರೇಖಾ ಸೌಜನ್ಯ ಎನ್ನುವ ಸಿನಿಮಾದಲ್ಲಿ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ ಚಿತ್ರದಲ್ಲಿ ನಾಯಕ ಯಾರು ಎನ್ನುವುದು ಇನ್ನೂ ತಿಳಿಯ ಬೇಕಿದೆ. ಬಡ ಹುಡುಗಿಯ ಕೈಹಿಡಿಯ ಬಹುದಾ ಚಿತ್ರರಂಗ ಎನ್ನುವುದನ್ನು ಕಾದು ನೋಡಬೇಕಿದೆ. ನಮ್ಮ ತಂಡದಿಂದಲೂ ಶುಭವಾಗಲಿ ಶಶಿರೇಖಾ ಎಂದು ಹಾರೈಸುತ್ತೇವೆ…
ಸೋಷಿಯಲ್ ಮೀಡಿಯಾದಲ್ಲಿ ಗುರುತಿಸಿಕೊಂಡ ಎಷ್ಟೋ ಮಂದಿ ಈಗಾಗಲೇ ಬಣ್ಣದ ಲೋಕಕ್ಕೆ ಕಾಲಿಟ್ಟ ಉದಾಹರಣೆಗಳಿವೆ. ಬೃಂದಾವನ ಸೀರಿಯಲ್ ವರುಣ್ ಸಹ ರೀಲ್ಸ್ ಮೂಲಕವೇ ಚಾನ್ಸ್ ಗಿಟ್ಟಿಸಿಕೊಂಡಂತವರು. ಈಗ ಶಶಿರೇಖಾ ಸರದಿ. ಈಕೆ ನಾಯಕಿಯಾಗಿ ಅಭಿನಯಿಸುವ
ಚಿತ್ರಕ್ಕೆ ” ಸೌಜನ್ಯ ” ಎಂದು
ಹೆಸರಿಡಲಾಗಿದ್ದು ಜೋತೆಗೆ ” ಆರಂಭವಲ್ಲ ಅಂತ್ಯ ” ಎಂಬ ಅಡಿಬರವೂ ಈ ಸಿನಿಮಾಕ್ಕಿದೆ. ಮೈಸೂರಿನ ಪ್ರೆಸ್ ಕ್ಲಬ್‌ನಲ್ಲಿ ಈ ಚಿತ್ರದ ಪೋಸ್ಟರ್ ಬಿಡುಗಡೆ ಮಾಡಿದ್ದಾರೆ.
ಹೆಚ್.ಡಿ ಕೋಟೆ ಮೂಲದ ಚೇತನ್ ದೇವರಾಜ್ ಎಂಬುವವರು ಸೌಜನ್ಯ ಹೆಸರಿನ ಸಿನಿಮಾ ನಿರ್ದೇಶನ ಮಾಡಲಿದ್ದಾರೆ ಎಂದು ತಿಳಿದುಬಂದಿದೆ.
ದೋಸ್ತಿ ಕ್ರಿಯೇಷನ್ಸ್ ಮೂಲಕ ಈ ಸಿನಿಮಾ ನಿರ್ಮಾಣವಾಗುತ್ತಿದ್ದು, ಸಂತ್ರಸ್ತೆ ಸೌಜನ್ಯಾಳ ದುರಂತ ಸಾವಿನ ಕಥೆ ಈ ಸಿನಿಮಾದಲ್ಲಿ ಇಬಹುದಾ ಎನ್ನುವುದು ಮುಂದಿನ ದಿನಗಳಲ್ಲಿ ಗೊತ್ತಾಗಬೇಕಿದೆ.