ರಾಜಸ್ಥಾನ ಮೂಲದ ಯುವತಿ! ಬಾಗಲಕೋಟೆಯ ಮೂಲದ ಯುವಕ!ಇಬ್ಬರೂ ಮಾತು ಬಾರದವರು. ಆಗೆ ಹೋಯ್ತು ಪ್ರೀತಿ!! ಮುಂದೆ ನೆಡೆದದ್ದು ಮಾತ್ರ…?

ಪ್ರೇಮಿಗಳ ಮದುವೆಯ ಕ್ಷಣ!?

ರಾಜಸ್ಥಾನ ಮೂಲದ ಯುವತಿ! ಬಾಗಲಕೋಟೆಯ ಮೂಲದ ಯುವಕ! ಆಗೆ ಹೋಯ್ತು ಪ್ರೀತಿ!! ಮುಂದೆ ನೆಡೆದದ್ದು ಮಾತ್ರ…?

news.ashwasurya.in

SUDHIR VIDHATA

ಈ ಇಬ್ಬರು ಪ್ರೇಮಿಗಳಿಗೆ ಮಾತು ಬರುವುದಿಲ್ಲ ಇಬ್ಬರಿಗೂ ಮಾತು ಬಾರದಿದ್ದರೂ Instagram ಮೂಲಕ ಒಬ್ಬರಿಗೊಬ್ಬರು ಪರಿಚಯ ಮಾಡಿಕೊಂಡಿದ್ದರು ನಂತರ ಇಬ್ಬರ ಪರಿಚಯ ಪ್ರೀತಿಗೆ ತಿರುಗಿ ಮದುವೆಯ ಹಂತಕ್ಕೆ ಬಂದು ತಲುಪಿತ್ತು! ನಂತರ ಇಬ್ಬರು ಮದುವೆ ಆಗಿದ್ದರು.
ಹುಡುಗನ ಹೆಸರು ಸಿದ್ದಾರ್ಥ್ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ನಾಗನೂರು ಗ್ರಾಮದವನು. ಹುಡುಗಿಯ ಹೆಸರು ರೊದಿಯಾ ರಾಜಸ್ಥಾನ‌ದ ರಾಜಸಮಂಡ ಜಿಲ್ಲೆಯ ದಾಸಣಾ ಗ್ರಾಮದವಳು
ಆಕೆ ರಾಜಸ್ಥಾನದವಳು. ಈತ ಬಾಗಲಕೋಟೆಯವನು ಇಬ್ಬರಿಗೂ ಮಾತು ಬರುವುದಿಲ್ಲ ಅವರದೆ ಭಾಷೆ ಅವರದೆ ಜಗತ್ತು ಅ ದೇವರು ಕೂಡ ಮಾತುಬಾರದ ಇವರಿಬ್ಬರು ಪ್ರೀತಿಸುವಂತೆ ಮಾಡಿದ್ದ! ಆದರೂ ಇನ್ಸ್ಟಾಗ್ರಾಮ್ ಮೂಲಕ ಪರಿಚಯ, ಲವ್ ಆಗಿದೆ ಇಬ್ಬರು ಮೂಕ ಪ್ರೇಮಿಗಳು ಮನಸಾರೆ ಒಬ್ಬರಿಗೊಬ್ಬರು ಪ್ರೀತಿಸಿದ್ದಾರೆ ನಂತರ ಮದುವೆಯೂ ಆಗಿದ್ದರು. ಇನ್ನೇನು ನಮ್ಮದೆ ಜಗತ್ತು ಎಂದು ಸಂಸಾರ ಹೂಡಿದ್ದ ಮೂಕ ದಂಪತಿಗಳ ಬಾಳಲ್ಲಿ ಬಿರುಗಾಳಿ ಬಿಸಿದೆ. ರಾಜಾಸ್ಥಾನದಿಂದ ಬಂದ ಯುವತಿಯ ಸಹೋದರರು ಸಹೋದರಿಯನ್ನು ಕರೆದೊಯ್ದಿದ್ದಾರೆ! ಮಡದಿಯ ಸಹೋದರರನ್ನು ಎದುರಿಸಲಾಗದ ಗಂಡ ಕೈಕಟ್ಟಿ ಕೂತಿದ್ದಾನೆ‌ ಪಾಪ? ಈಗ ಆಕೆ ರಾಜಸ್ಥಾನದ ತನ್ನ‌ ಮನೆಯಲ್ಲಿದ್ದರೆ ಈಗ ಯುವಕ ತನ್ನ ಮನೆಯ ನಾಲ್ಕುಗೋಡೆಯ ಮಧ್ಯೆ ಮೂಕ ರೋಧನೆ ಅನುಭವಿಸುತ್ತಿದ್ದಾನೆ.

ಇವರಿಗೆ ಮಾತು ಬಾರದೆ ಇತಬಹುದು ಅ ದೇವರು ಇವರ ಸೌಂದರ್ಯಕ್ಕೆ ಕುತ್ತುತಂದಿರಲಿಲ್ಲ ಇಬ್ಬರು ಸುಂದರವಾಗಿದ್ದರು. ಸುಂದರ ಗೆಟಪ್‌ ನಲ್ಲಿ ಕಲರ್ ಫುಲ್ ಫೋಟೋ ತೆಗೆಸಿಕೊಂಡಿದ್ದಾರೆ. ಬೈಕ್‌ನಲ್ಲಿ ಜಾಲಿ ರೈಡಿಂಗ್ ಮಾಡಿದ್ದಾರೆ. ಈ ಪ್ರೇಮಿಗಳನ್ನು ನೋಡಿದರೆ ಯಾರೂ ಕೂಡ ಮೂಕರು ಅನ್ನುವ ಹಾಗಿಲ್ಲ. ಆದರೆ ಈ ಪ್ರೇಮಿಗಳಿಬ್ಬರು ಮೂಕರು ಎನ್ನುವುದೆ ದುರಂತ.ತಾನು ಪ್ರೀತಿಸಿ ಮದುವೆಯಾದ ಮಡದಿಯನ್ನು ಆಕೆಯ ಸಹೋದರರು ದೂರದ ರಾಜಸ್ಥಾನಕ್ಕೆ ಕರೆದೊಯ್ದ ಮೇಲಂತೂ ಯುವಕ ರೋಧನೆ ಮುಗಿಲುಮುಟ್ಟಿದೆ ಈತ ಸನ್ನೆಯ ‌ಮೂಲಕವೇ ಕೈ ಮುಗಿದು ತನ್ನ ಮೂಕ‌ ನಿವೇದನೆ ಜೋತೆಗೆ ಕೈಯಲ್ಲಿ ತನ್ನ ಪತ್ನಿಯ ಫೋಟೋ ಹಿಡಿದು ಮೂಕರೋಧನೆ ಪಡುತ್ತಿದ್ದಾನೆ ತನ್ನ ಗೆಳೆಯನಿಗಾದ ಅನ್ಯಾಯಕ್ಕೆ ನೊಂದ ಮೂಕ ಗೆಳೆಯ ತನ್ನ ಗೆಳೆಯನಿಗಾದ ನೋವನ್ನು ವಿವರಿಸುತ್ತಿದ್ದಾನೆ. ಈ ಮನಕಲಕುವ ದೃಶ್ಯ ಕಂಡುಬಂದಿದ್ದು ಬಾಗಲಕೋಟೆಯ ಎಸ್ ಪಿ ಕಚೇರಿ ಆವರಣದಲ್ಲಿ.

ಹೌದು ಪ್ರೀತಿಗೆ ಕಣ್ಣಿಲ್ಲ ಅದಕ್ಕೆ ಭಾಷೆ ಹಂಗಿಲ್ಲ ಗಡಿಯ ಅಂತರವಿಲ್ಲ ಎಲ್ಲಾ ನಿಜವೇ ಅದರಂತೆ ಇಬ್ಬರು ಮಾತು ಬಾರದಿದ್ದರೂ Instagram
ಮೂಲಕ ಪರಿಚಯವಾಗಿದ್ದರು ಇಬ್ಬರ ಪರಿಚಯ ಕೊನೆಗೆ ಪ್ರೀತಿಗೆ ತಿರುಗಿ ನಂತರ ಇಬ್ಬರ ನಡುವೆ ಮದುವೆ ಪ್ರಸ್ತಾಪ ನೆಡೆದು ಮದುವೆಕೂಡ ಆಗಿದ್ದರು. ಯುವಕ ಸಿದ್ದಾರ್ಥ್ ಕಾಂಬಳೆ ಹಾಗೂ ಯುವತಿ ರೊದಿಯಾ ಕಂವರ್. ಸಿದ್ದಾರ್ಥ್ ಬಾಗಲಕೋಟೆ ಜಿಲ್ಲೆ ಜಮಖಂಡಿ ತಾಲ್ಲೂಕಿನ ನಾಗನೂರು ಗ್ರಾಮದವನು. ರೊದಿಯಾ ರಾಜಸ್ಥಾನ‌ದ ರಾಜಸಮಂಡ ಜಿಲ್ಲೆ ದಾಸಣಾ ಗ್ರಾಮದವಳು.
ಏಳು ತಿಂಗಳ ಹಿಂದೆ ಇಬ್ಬರು Instagram
ನಲ್ಲಿ ತಮ್ಮ ಮೂಕ ಭಾಷೆಯ ಮೂಲಕವೇ ಪರಿಚಯವಾಗಿ ಪ್ರೀತಿಸಿ ಮದುವೆಯಾಗುವ ನಿರ್ಧಾರ ಮಾಡಿದ್ದರು.! ಕೊನೆಗೆ ಬಾಗಲಕೋಟೆಯಿಂದ ರಾಜಸ್ಥಾನಕ್ಕೆ ಹೋಗಿದ್ದ ಸಿದ್ದಾರ್ಥ ತನ್ನ ಪ್ರೇಯಸಿಯನ್ನು ಮಿಟ್ ಮಾಡಿ ಆಕೆಯನ್ನು ಊರಿಗೆ ಕರೆತಂದು ಮದುವೆಯಾಗಿದ್ದ. ಆದರೆ ಸಹೋದರಿ ಕಾಣೆಯಾಗಿದ್ದಾಳೆ ಎಂದು ದೂರು ದಾಖಲಿಸಿದ ಯುವತಿಯ ಸಹೋದರರು ರಾಜಸ್ಥಾನ ಪೊಲೀಸರ ಜೊತೆ ಬಂದು ಸಹೋದರಿಯನ್ನು ಗಂಡನಿಂದ ದೂರಮಾಡಿ ಮರಳಿ ರಾಜಸ್ಥಾನಕ್ಕೆ ಕರೆದೊಯ್ದಿದ್ದಾರೆ. ಹುಡುಗ ಎಷ್ಟೇ ಬೇಡಿಕೊಂಡು ಅಂಗಲಾಚಿದರು ಬಿಡದೆ ಕರೆದೊಯ್ದಿದ್ದಾರೆ ಆತನ ಪ್ರೀತಿಸಿ ಮದುವೆಯಾದ ಮಡದಿಯನ್ನು ಈಗ ಸಿದ್ದಾರ್ಥ್ ಮಡದಿಯಿಂದ ದೂರವಾಗಿ ಮೂಕರೋಧನೆ ಅನುಭವಿಸುತ್ತಿದ್ದಾನೆ ನನಗೆ ಆಕೆ ಬೇಕು ಬೇಕೆ ಕಂಡ ಕಂಡ ಅಧಿಕಾರಿಗಳಲ್ಲಿ ಕೈ ಮುಗಿದು ಕೇಳಿಕೊಳ್ಳುತ್ತಿದ್ದಾನೆ. ಆತ ಪಡುತ್ತಿರುವ ಸಂಕಟ ರೋಧನೆ ಎಂತವರ ಕಲ್ಲು ಮನಸ್ಸನ್ನು ಕರಗಿಸುವಂತಿದೆ.

ಈ ಪ್ರಕರಣದಲ್ಲಿ ಯುವಕ ಮತ್ತು ಯುವತಿ ಇಬ್ಬರು ಅದಾಗಲೇ ಪ್ರತ್ಯೇಕವಾಗಿ ಮದುವೆಯಾಗಿದ್ದರು ಎಂಬ ಮಾಹಿತಿ ಇದೆ. ಆದರೆ ಆ ಬಗ್ಗೆ ಸಾಕ್ಷಿ ಇಲ್ಲ. ಆದರೆ ಇಲ್ಲಿ ಸಿದ್ದಾರ್ಥ ಮತ್ತು ರೊದಿಯಾ ಇಬ್ಬರು ಇನ್​​ಸ್ಟಾ ಮೂಲಕ ಒಬ್ಬರನ್ನೊಬ್ಬರು ಪ್ರೀತಿಸಿ 2023ರ ಆಗಸ್ಟ್ 27ರಂದು ಜಮಖಂಡಿ ತಾಲೂಕಿನ ‌ನಾಗನೂರು ಗ್ರಾಮದ ಸಿದ್ದಾರ್ಥನ ಮನೆ ಮುಂದೆ ಊರವರ ಸಮ್ಮುಖದಲ್ಲಿ ಮದುವೆ ಆಗಿದ್ದಾರೆ. ಆದರೆ ಮದುವೆ ನೋಂದಣಿ ಮಾಡಿಸಿಲ್ಲ.ಒಟ್ಟಿನಲ್ಲಿ ಶಾಸ್ತ್ರೋಕ್ತವಾಗಿ ಮದುವೆಯಾಗಿದೆ. ಇನ್ನೊಂದು ಕಡೆ ರೊದಿಯಾ ಕುಟುಂಬಸ್ಥರು ರಾಜಸ್ಥಾನದಲ್ಲಿ ರೊದಿಯಾ ಕಿಡ್ನಾಪ್ ಎಂದು ದೂರು ನೀಡಿದ್ದರು. ಇದರಿಂದ ನಾಗನೂರಿಗೆ ಬಂದ ರಾಜಸ್ಥಾನ ‌ಪೊಲೀಸರು ಹಾಗೂ ಆಕೆಯ ಸಹೋದರರು 2023ರ ಸೆಪ್ಟೆಂಬರ್ 16 ರಂದು ರೊದಿಯಾಳನ್ನು ಕರೆದೊಯ್ದಿದ್ದಾರೆ.

ಪ್ರೀತಿಸಿ ಮದುವೆಯಾಗಿ ಕೇವಲ 20 ದಿನದಲ್ಲಿ ಹುಡುಗಿಯ ಸಹೋದರರ ಕಾಟಕ್ಕೆ ಇಬ್ಬರು ದೂರ ಆಗಿದ್ದಾರೆ. ಸಹೋದರರ ಜೋತೆಗೆ ರಾಜಸ್ಥಾನಕ್ಕೆ ಮರಳಿದ ರೊದಿಯಾ ವಿಡಿಯೋ ಕಾಲ್ ಮಾಡಿ ಪ್ರೀತಿಯ ಗಂಡನಿಗೆ ನನ್ನನ್ನು ಕರೆದುಕೊಂಡು ಹೋಗು ಇಲ್ಲದಿದ್ದರೆ ನನ್ನನ್ನು ಸಾಯಿಸುತ್ತಾರೆ ಎಂದು ಸನ್ನೆ ಮೂಲಕವೇ ಸಿದ್ದಾರ್ಥನಿಗೆ ನಿತ್ಯ ಹೇಳುತ್ತಿದ್ದಾಳೆ. ಇದರಿಂದ ಸಿದ್ದಾರ್ಥ ಮತ್ತಷ್ಟು ಆತಂಕಕ್ಕೆ ಈಡಾಗಿದ್ದಾನೆ ಜೋತೆಗೆ ಪ್ರೀತಿಸಿದವಳು ದೂರ ಇರುವ ಕಾರಣಕ್ಕೆ ಕುಗ್ಗಿ ಹೋಗಿದ್ದಾನೆ ಹೇಗಾದರೂ‌ ಮಾಡಿ‌ ರೊದಿಯಾಳನ್ನು ವಾಪಸ್ ಕರೆತನ್ನಿ ಅಂತಿದ್ದಾನೆ. ಇದಕ್ಕಾಗಿ ತಂದೆ ಹಾಗೂ ವಕೀಲರ ಮೂಲಕ ಬಾಗಲಕೋಟೆ ಎಸ್ ಪಿ ಅವರ ಮೊರೆ ಹೋಗಿದ್ದಾನೆ. ಸಮಸ್ಯೆ ಆಲಿಸಿದ ಎಸ್ ಪಿ ಅವರು ಇದಕ್ಕೆ ಕಾನೂನಾತ್ಮಕ ರೀತಿಯಲ್ಲಿ ಏನಾದರೂ ಮಾಡಲು ಸಾಧ್ಯವಿರಬಹುದ ಎಂದು ಯೋಚಿಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ್ದಾರೆ.

Instagram ಮೂಲಕ ಅರಳಿದ ಮೂಕ ಪ್ರೇಮ, ಮದುವೆಯು ಆಗಿ ಕೇವಲ ಇಪ್ಪತ್ತು ದಿನಗಳಲ್ಲಿ ಮೂಕರೋಧನೆಯಾಗಿದೆ. ಪ್ರೀತಿಸಿ ಮದುವೆಯಾದ ಇಬ್ಬರು ದೂರ ದೂರ ಬದುಕುದೂಡುವಂತಾಗಿದೆ. ಪೋಲಿಸ್ ಅಧಿಕಾರಿಗಳ ಸಹಕಾರದಿಂದಿ ಕಾನೂನಾತ್ಮಕ ಹಾದಿಯಲ್ಲಿ ಈ ಪ್ರಕರಣ ಯಾವ ತಿರುವು ಪಡೆದುಕೊಳ್ಳಲಿದೆ ಎನ್ನುವುದನ್ನು ಕಾದು ನೋಡಬೇಕಿದೆ.
ಈ ಪ್ರಕರಣದ ಹಿನ್ನಲೆ ತಿಳಿದಿರುವ ಪ್ರತಿಯೊಬ್ಬರೂ ಈ ಮೂಕ ಪ್ರೇಮಿಗಳು ಮತ್ತೆ ಒಂದಾಗಲಿ ಎಂದು ಹಾರೈಸುತ್ತಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!