ಬೆಂಗಳೂರಿನಲ್ಲಿ ಸಿನಿಮಾ ಸ್ಟೈಲ್‌ನಲ್ಲಿ ಬಿಲ್ಡರ್ ಸುಲಿಗೆಗೆ ನಿಂತ ರೌಡಿಶೀಟರ್ ಅಂದರ್.!
News.ashwasurya.in
Sudhir Vidhata
ರಾಜಧಾನಿಯಲ್ಲಿ ನಿತ್ಯ ಉದ್ಯಮಿಗಳಿಗೆ ಧಮ್ಕಿ ಹಾಕೋದು, ಸುಲಿಗೆ ಮಾಡೋದು ಕಾಮನ್ ಆಗಿ ಬಿಟ್ಟಿದೆ.,! ಇಂತಹ ಅನೇಕ ಪ್ರಕರಣಗಳು ಪ್ರತಿದಿನ ನಡಿಯೋತ್ತೆ. ಆದರೆ ಅದರಲ್ಲಿ ಬಯಲಿಗೆ ಬರೋದು ಒಂದೆರಡು ಮಾತ್ರ. ಸಧ್ಯಕ್ಕೆ ಇಂತದ್ದೆ ಒಂದು ಪ್ರಕರಣದಲ್ಲಿ ನಕಲಿ ಆರ್‌ಟಿಐ ಕಾರ್ಯಕರ್ತನ ಗೆಟಪ್ ಧರಿಸಿದ್ದ ರೌಡಿಶೀಟರ್ ನನ್ನು ಬಂಧಿಸಲಾಗಿದೆ. ʼಕೆಂಪೇಗೌಡʼ ಸಿನಿಮಾದಲ್ಲಿ ನಟ ರವಿಶಂಕರ್ ಆರುಮುಗಂ ಆಗಿ ಖಳನಾಯಕನ ಪಾತ್ರದಲ್ಲಿ ಉದ್ಯಮಿಗಳನ್ನು ಹೆದರಿಸಿ ಬೆದರಿಸಿ ಹಣ ವಸೂಲಿ ಮಾಡುತ್ತಿರುತ್ತಾರೆ. ಇದೀಗ ಇಂತದ್ದೆ ಒಂದು ರಿಯಲ್ ಪ್ರಕರಣ ಬೆಂಗಳೂರಿನಲ್ಲಿ ನಡೆದಿದೆ.
ಹೌದು.. ಜೈ ಹಿಂದ್ ಎಂಬ ಸಂಘಟನೆ ಲೀಡರ್ ಆಗಿರುವ ದೀಪಕ್ ಗೌಡ ಒಂದಷ್ಟು ರೌಡಿಶೀಟರ್ ಗಳ ಗುಂಪು ಕಟ್ಟಿಕೊಂಡಿದ್ದು ಅಲ್ಲದೆ ಸಿಟಿಯಲ್ಲಿ ಹೊಸ ಬಿಲ್ಡಿಂಗ್ ನೋಡಿದ್ರೆ ಸಾಕು ತಾನೊಬ್ಬ RTI ಕಾರ್ಯಕರ್ತ ಅಂತ ಬಿಲ್ಡಪ್ ಕೊಟ್ಕೊಂಡು ಒಂದಿಬ್ಬರು ರೌಡಿಗಳ ಜೊತೆ ಬಿಲ್ಡರ್‌ಗಳ ಹತ್ರ ಹೋಗುತ್ತಿದ್ದ. ಅಲ್ಲಿ ನಿಮ್ಮ ಬಿಲ್ಡಿಂಗ್ ಸರಿ ಇಲ್ಲ, ರೂಲ್ಸ್ ಪ್ರಕಾರ ಕಟ್ಟಿಲ್ಲ, ಇದನ್ನೆಲ್ಲ ಬಹಿರಂಗ ಮಾಡ್ತೀವಿ ಅಂತ ಬೆದರಿಸಿ ಹಣ ವಸೂಲಿ ಮಾಡ್ತಿದ್ದ. ಇದೇ ರೀತಿ ಮಾಗಡಿ ರಸ್ತೆ ಠಾಣಾ ವ್ಯಾಪ್ತಿಯಲ್ಲಿರೋ ಬಿಲ್ಡರ್ ಒಬ್ಬರ ಬಳಿ ಹೋಗಿ 85 ಲಕ್ಷ ಕೊಡಿ ಅಂತ ಧಮ್ಕಿ ಹಾಕಿದ್ದ. ಆದ್ರೆ ಆ ಬಿಲ್ಡರ್ ಇವನಂತ ಆದೇಷ್ಟೊ ಜನರನ್ನು ನೋಡಿರೊ ಕಾರಣ ನೇರವಾಗಿ ಸಿಸಿಬಿ ಅಧಿಕಾರಿಗಳಲ್ಲಿ ದೂರು ನೀಡಿದ್ದಾರೆ. ತಕ್ಷಣವೇ ಬಿಲ್ಡರ್ ಕೊಟ್ಟ ದೂರಿನ ಮೇಲೆ ತಕ್ಷಣವೇ ಅಲರ್ಟ್ ಅದ ಸಿಸಿಬಿ ಟೀಂ ದೀಪಕ್ ಗೌಡ ಮತ್ತು ತಾವರೆಕೆರೆ ರೌಡಿಶೀಟರ್ ರಕ್ಷಿತ್ ನನ್ನ ಹೆಡೆಮುರಿ ಕಟ್ಟಿದ್ದಾರೆ. ಅಲ್ಲದೆ ಇತನಿಗೆ ಸಾಥ್ ನೀಡಿದ್ದ ಶ್ರೀರಾಂಪುರ ರೌಡಿಶೀಟರ್ ಅಜಯ್ ಕುಮಾರನಿಗೆ ಬಲೆ ಬೀಸಿದ್ದಾರೆ.
ಒಟ್ಟಿನಲ್ಲಿ ಬೆಂಗಳೂರಿನಲ್ಲಿ ರೌಡಿಶೀಟರ್ ಗಳ ಹಾವಳಿಗೆ ಬಿಲ್ಡರ್ ಗಳು ನಲುಗಿ ಹೋಗಿದ್ದಾರೆ, ಅವರ ಆಟ್ಟಹಾಸಕ್ಕೆ ಉದ್ಯಮಿಗಳು ಬಂಡವಾಳ ಹೂಡಲು ಯೋಚಿಸುವಂತಾಗಿದೆ. ಬಂಡವಾಳ ಹಾಕಿದವರನ್ನು ಅದರಲ್ಲೂ ಬಿಲ್ಡರ್ ಗಳನ್ನು ಯಾವುದಾದರೂ ತಪ್ಪನ್ನು ಹುಡುಕಿಕೊಂಡು ಇನ್ನಿಲ್ಲದಂತೆ ತೊಂದರೆ ಕೊಡಲು ಮುಂದಾಗಿದ್ದಾರೆ. ಇಂತಹ ಫಂಟರ್ ಗಳನ್ನು ಹೆಡೆಮುರಿಕಟ್ಟಲು ಸಿಸಿಬಿ ಅಧಿಕಾರಿಗಳು ಮುಂದಾಗಿದ್ದರು ಅಲ್ಲಿಯ ವರೆಗೆ ದೂರು ದಾಖಲಿಸಲು ಕೇಲವು ಬಿಲ್ಡರ್ ಗಳು ಹಿಂದೇಟು ಹಾಕಿ ರೌಡಿಶೀಟರ್ ಗಳ ಕೈಗೆ ಹಣ ನೀಡುತ್ತಿದ್ದಾರೆ.ಇವರಲ್ಲಿ ಕೇಲವು ಮಂದಿ ಬಿಲ್ಡರ್ ಗಳು ಮಾತ್ರ ಸಿಸಿಬಿ ಪೋಲಿಸರ ಮೊರೆ ಹೋಗಿ ರೌಡಿಗಳ ಹುಟ್ಟಡಿಗಿಸಲು ಮುಂದಾಗಿದ್ದಾರೆ…