SUDHIR VIDHATA
CRIME NEWS: ಮದುವೆಯಾದ ಒಂದೆ ತಿಂಗಳಿಗೆ ಪ್ರಿಯಕರನ ಜೊತೆ ಎಸ್ಕೇಪ್! ಮಾಜಿ ಮಡದಿಯ ಪ್ರಿಯಕರನ ಜೋತೆಗೆ ಮಡದಿಯನ್ನು ಕೊಂದ ಪತಿರಾಯ.!
news.ashwasurya.in
ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಮೃತ ಹೀನಾ ಹಾಗೂ ತೌಫಿಕ್ ಗೆ ಮದುವೆಯಾಗಿತ್ತು. ಆದರೆ ಮದುವೆಯಾಗಿ ಒಂದೇ ತಿಂಗಳಿಗೆ ಮದುವೆಯ ಮುಂಚೆ ಪ್ರೀತಿಸಿದ ಮೃತ ಯಾಸಿನ್ ಜೊತೆ ಹೀನಾ ಎಸ್ಕೇಪ್ ಆಗಿದ್ದಳಂತೆ.!
ಚಿಕ್ಕೋಡಿ: ಮದುವೆಯಾದ ಒಂದೆ ತಿಂಗಳಿಗೆ ಗಂಡನಿಗೆ ಕೈ ಕೊಟ್ಟು ಪ್ರಿಯಕರನೊಂದಿಗೆ ಎಸ್ಕೇಪ್ ಆಗಿ ಆತನನ್ನು ಮದುವೆಯಾಗಿದ್ದ ಮಾಜಿ ಪತ್ನಿ ಹಾಗೂ ಆಕೆಯ ಪ್ರೀತಿಸಿ ಮದುವೆಯಾದ ಹುಡುಗನನ್ನು ಮಾಜಿ ಪತಿಯೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಕೊಕಟನೂರು ಗ್ರಾಮದ ಹೊರವಲಯದಲ್ಲಿ ನಡೆದಿದೆ.ತಾಯಿ,ಮಾವನ ಮೇಲೂ ಮಾರಣಾಂತಿಕ ಹಲ್ಲೆಯಾಗಿದೆ
ಯಾಸಿನ ಬಾಗೊಡೆ (21), ಹೀನಾ ಕೌಸರ್ ಸುದಾರಾಣೆ (19) ಕೊಲೆಯಾದ ಪ್ರೇಮಿಗಳಾಗಿದ್ದಾರೆ. ಹೀನಾ ಕೌಸರ್ ಮಾಜಿ ಪತಿ ತೌಫಿಕ್ ಕ್ಯಾಡಿ ಕೊಲೆ ಮಾಡಿ ಪರಾರಿಯಾದ ಆರೋಪಿಯಾಗಿದ್ದಾನೆ. ಹಲ್ಲೆ ವೇಳೆ ಯುವತಿ ರಕ್ಷಣೆಗೆ ಬಂದಿದ್ದ ತಾಯಿ ಹಾಗೂ ಮಾವನ ಮೇಲು ಆರೋಪಿ ತೌಫಿಕ್ ಮಾರಣಾಂತಿಕವಾಗಿ ಹಲ್ಲೆ ಮಾಡಿ ಎಸ್ಕೇಪ್ ಆಗಿದ್ದಾನೆ. ಘಟನೆಯಲ್ಲಿ ಗಾಯಗೊಂಡಿರುವ ತಾಯಿ ಅಮಿನಾಬಾಯಿ ಬಾಗೂಡ ಹಾಗೂ ಮಾವ ಮುಸ್ತಫಾ ಮುಲ್ಲಾ ಅವರನ್ನು ಮಿರಜ್ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಪ್ರಕರಣದ ಹಿನ್ನಲೆ?
ಕಳೆದ ನಾಲ್ಕು ತಿಂಗಳ ಹಿಂದಷ್ಟೇ ಮೃತ ಹೀನಾ ಕೌಸರ್ ಹಾಗೂ ಆರೋಪಿ ತೌಫಿಕ್ ಜೋತೆಯಲ್ಲಿ ಮದುವೆಯಾಗಿತ್ತು. ಆದರೆ ಮದುವೆಯಾಗಿ ಒಂದೇ ತಿಂಗಳಿಗೆ ಮೃತ ಯಾಸಿನ್ ನನ್ನು ಪ್ರೀತಿಸುತ್ತಿದ್ದ ಹೀನಾ ಆತನ ಜೋತೆಗೆ ಎಸ್ಕೇಪ್ ಆಗಿದ್ದಳಂತೆ.! ಆ ಬಳಿಕ ಒಂದೂವರೆ ತಿಂಗಳ ಬಳಿಕ ಸಮಾಜದವರ ಸಮ್ಮುಖದಲ್ಲಿ ರಾಜಿ ಪಂಚಾಯ್ತಿ ನಡೆಸಿ ಸಮಸ್ಯೆ ಬಗೆಹರಿಸಿದ್ದರಂತೆ.
ರಾಜಿ ಪಂಚಾಯ್ತಿ ವೇಳೆ ಮಾಜಿ ಪತಿ ತೌಫಿಕ್ ಜೊತೆ ವಿವಾಹ ಮುರಿದು ಯಾಸಿನ್ ಜೊತೆ ಹೀನಾಗೆ ಹಿರಿಯರು ಮದುವೆ ಮಾಡಿಕೊಟ್ಟಿದ್ದರಂತೆ. ಇದರಿಂದ ಕೋಪಗೊಂಡಿದ್ದ ತೌಫಿಕ್, ಕಳೆದ ಮಂಗಳವಾರ ಸಂಜೆ ಕೊಪದಲ್ಲಿ ಪ್ರಿಯತಮ ಯಾಸಿನ್ ಹಾಗೂ ಹೀನಾ ಕೌಸರ್ ನ ಮನೆಗೆ ತೆರಳಿ ಮನಬಂದಂತೆ ಕೊಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಹತ್ಯೆಮಾಡಿದ ಬಳಿಕ ಪೊಲೀಸ್ ಠಾಣೆಗೆ ಹೋಗಿ ಶರಣಾಗುವುದಾಗಿ ಹೇಳಿದ ತೌಫಿಕ್ ಪರಾರಿಯಾಗಿದ್ದ. ಈ ಘಟನೆಯ ನಂತರ ಸ್ಥಳಕ್ಕೆ ಐಗಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೋಲಿಸ್ ಹಿರಿಯ ಅಧಿಕಾರಿಗಳು ಹಂತಕನನ್ನು ಬಂಧಿಸಲು ಪೋಲಿಸರ ಎರಡು ವಿಷೇಶ ತಂಡಗಳನ್ನು ರಚನೆ ಮಾಡಿದ್ದಾರೆ.ಈ ತಂಡಗಳು ತನಿಖೆ ಚುರುಕುಗೊಳಿಸಿದ್ದು ಆರೋಪಿ ತೌಫಿಕ್ ಬಂಧನಕ್ಕಾಗಿ ಭಲೇ ಬಿಸಿದ್ದಾರೆ.