ಬೆಚ್ಚಗೆ ಮಲಗಿದ್ದ ರೌಡಿಶೀಟರ್ ನ ನೆತ್ತರು ಹರಿಯಿತು: ಹತ್ಯೆಯಾದ ಕೆಲವೆ ದಿನಳಲ್ಲಿ ಹಂತಕರನ್ನು ಬಂಧಿಸಿದ ವಿವೇಕನಗರ ಪೋಲಿಸರು
ತನ್ನ ಪಾತಕಲೋಕದ ಎಲ್ಲಾ ಕ್ರಿಯೆಯನ್ನು ಮರೆತು ಮನೆಯ ಹೊರಗೆ ತನ್ನ ಮಗುವಿನೊಂದಿಗೆ
ನೆಮ್ಮದಿಯಾಗಿ ಮಲಗಿದ್ದ.ರಾತ್ರಿ ಎಣ್ಣೆಹಾಕಿ ಮಲಗಿದ್ದವನು ಮುಂಜಾನೆಯ ಮತ್ತಿನ ನಿದ್ದೆಯಲ್ಲಿದ್ದ ಮಿಲ್ಟ್ರಿ ಸತೀಶ! ಅದೊಂದು ಗ್ಯಾಂಗ್ ತನ್ನನ್ನು ಕೊಲ್ಲೋಕೆ ಸ್ಕೆಚ್ ಹಾಕಿದೆ ಅನ್ನೋದ ಪರಿಯೆ ಇಲ್ಲದೆ ಬೆಚ್ಚಗೆ ಹೊದ್ದು ಮಲಗಿದ್ದ ರೌಡಿಶೀಟರ್ ಮಿಲ್ಟ್ರಿ ಸತೀಶನಿಗೆ ಬೆಳಗ್ಗೆ ಎದ್ದು ಕೆಲಸಕ್ಕೆ ಹೋಗಬೇಕು ಅನ್ಕೋಂಡು ಮಲಗಿದವನು ಹೋಗಿದ್ದು ಮಾತ್ರ ಮಸಣಕ್ಕೆ.ಆತ ಮಲಗಿದ್ದ ಜಾಗದಲ್ಲೆ ಬರ್ಬರವಾಗಿ ಹತ್ಯೆಯಾಗಿ ಹೋಗಿದ್ದ,!
ಅವನೊಬ್ಬ ತುಕಾಲಿ ರೌಡಿಶೀಟರ್
ನಾನು ಏರಿಯಾ ಡಾನ್ ಅಂತ ಮೆರೆಯುತ್ತಿದ್ದ ಸಾಲದಕ್ಕೇ ಪಾತಕಲೋಕದಲ್ಲಿ ತನ್ನದೆ ಆದ ಹವಾ ತೋರಿಸೊಕೆ ಅಂತ ಒಂದಲ್ಲ ಎರಡಲ್ಲ ಬರೋಬ್ಬರಿ 7 ಪ್ರಕರಣದಲ್ಲಿ ಭಾಗಿಯಾಗಿದ್ದನಂತೆ!? ಇತನ ಮೇಲೆ ವಿವೇಕನಗರ ಪೋಲಿಸ್ ಠಾಣೆಯಲ್ಲಿ ರೌಡಿಶೀಟ್ ತೆಗಿಯಾಲಾಗಿತ್ತು. ಸಣ್ಣದೊಂದು ಹವಾ ಮೈಂಟೆನ್ ಮಾಡಿಕೊಂಡು ತಿರುಗುತ್ತಿದ್ದ ಈತ ನಿನ್ನೆ ರಾತ್ರಿ ಎಂದಿನಂತೆ ಎಣ್ಣೆ ಹಾಕಿ ಊಟ ಮಾಡಿ ಮಲಗಿದ್ದ. ಮಧ್ಯರಾತ್ರಿ 2.30 ಅಜುಬಾಜಿಗೆ ಅದೊಂದು ಗ್ಯಾಂಗ್ ಮಿಲ್ಟ್ರಿ ಸತೀಶ್ ನ ನೆತ್ತರು ಹರಿಸಲು ಹತಾರದೊಂದಿಗೆ ಸ್ಕೆಚ್ ಹಾಕಿತ್ತು!! ಈ ರಾತ್ರಿ ನನ್ನ ಸಾವಿಗೆ ಮೊಹರ್ತ ಫಿಕ್ಸ್ ಆಗಿದೆ ಎನ್ನುವ ಅರಿವಿಲ್ಲದೆ ಮಡದಿ ಜೋತೆಗೆ ನೆಮ್ಮದಿಯಾಗಿ ಮಲಗಿದ್ದ ಸತೀಶ್ ನ ಮೇಲೆ ಹೊಂಚು ಹಾಕಿ ಕುಳಿತಿದ್ದ ಹಂತಕರು ಮಲಗಿದ್ದ ಆತನ ಮೇಲೆ ಹೇಡಿಗಳ ರೀತಿ ಅಟ್ಯಾಕ್ ಮಾಡಿ ಮನಬಂದಂತೆ ಮಚ್ಚು ಲಾಂಗಿನಿಂದ ಕೊಚ್ಚಿ ಹತ್ಯೆಗೈದಿದ್ದಾರೆ. ಮಚ್ಚಿನೆಟಿಗೆ ಮಲಗಿದಲ್ಲೆ ನೆತ್ತರ ಕೊಡಿ ಹರಿದು ಹೆಣವಾಗಿದ್ದಾನೆ ರೌಡಿಶೀಟರ್!?
ಅಷ್ಟಕ್ಕೂ ಈ ಒಂದು ಹತ್ಯೆ ನಡೆದಿರೋದು ಬೆಂಗಳೂರಿನ ವಿವೇಕನಗರ ಪೊಲೀಸ್ ಠಾಣಾ ಸರಹದ್ದಿನ ಮಾಯ ಬಜಾರ್ ಸ್ಲಂ ಏರಿಯಾದಲ್ಲಿ ಈ ಒಂದು ಹತ್ಯೆ ಹಳೆ ವೈಷ್ಯಮ್ಯ ಹಿನ್ನೆಲೆಯಲ್ಲಿ ಆಗಿರುವ ಶಂಕೆ ಪೋಲಿಸರ ಪ್ರಾಥಮಿಕ ತನಿಖೆಯಿಂದ ವ್ಯಕ್ತವಾಗಿದೆ.
ಸತೀಶ್ ಅಲಿಯಾಸ್ ಮಿಲ್ಟ್ರಿ ಸತೀಶ್ ಕೂಡ ವಿವೇಕನಗರ ಪೊಲೀಸ್ ಠಾಣೆಯ ರೌಡಿಶೀಟರ್ ಆಗಿದ್ದಾನೆ.ಈತನಿಗೆ ಎಷ್ಟು ಬಾರಿ ಬುದ್ದಿ ಹೇಳಿದ್ರು ಕೇಳದ ಈತ ತನ್ನನ್ನು ಕ್ರೈಮ್ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ. ಸಾಕಷ್ಟು ಪ್ರಕರಣಗಳಲ್ಲಿ ಈತನ ಪಾತ್ರವಿದ್ದ ಕಾರಣಕ್ಕೆ ಪೊಲೀಸರು ಈತನ ಮೇಲೆ ರೌಡಿಶೀಟ್ ತೆರೆದಿದ್ದರು. ಆದರೆ ಹಲವು ಪ್ರಕರಣಗಳ ರೂವಾರಿಯಾಗಿದ್ದ ಏರಿಯಾ ಡಾನ್ ಎನ್ನುವ ಹಣೆಪಟ್ಟಿಯೊಂದಿಗೆ ಅಲೆಯುತ್ತಿದ್ದ ಈತ ಹಂತಕರ ಮಚ್ಚಿನೇಟಿಗೆ ಕೊಲೆಯಾಗಿ ಹೋಗಿದ್ದಾನೆ.
ಇತನ ಹತ್ಯೆಯ ಹಿಂದು ನೋವಿನ ಸಂಗತಿ ಇದೆ.!ಈತ ಕೊಲೆಯಾಗುವ ಸಮಯದಲ್ಲಿ ಪಕ್ಕದಲ್ಲೇ ಪುಟ್ಟ ಮಗು ಕೂಡ ಅಪ್ಪನ ಜೊತೆಯಲ್ಲಿ ಮಲಗಿತ್ತು. ಅಪ್ಪನ ಹೊಟ್ಟೆ ಮೇಲೆ ಕೈ ಹಾಕ್ಕೊಂಡು ನಿದ್ದೆಗೆ ಜಾರಿತ್ತು. ಈ ವೇಳೆ ದಾಳಿ ಮಾಡಿದ್ದ ಹಂತಕರು ಮಗು ಇರೋದನ್ನ ಗಮನಿಸದೆ ಏಕಾಏಕಿ ಮಚ್ಚು ಬೀಸಿದ್ದಾರೆ. ಆದ್ರೆ ಮಗುವಿನ ಕೈಗೆ ಹಾಗೂ ಕಿವಿಗೆ ಗಂಭೀರ ಗಾಯವಾಗಿದೆ. ಪಾಪ ಕೂಡಲೇ ಮಗುವನ್ನ ಅಜ್ಜಿ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದರಿಂದ ಮಗುವಿನ ಪ್ರಾಣ ಉಳಿದಿದೆ. ಸದ್ಯ ಕೊಲೆಯಾದ ಮಿಲ್ಟ್ರಿ ಸತೀಶ್ ನ ಪತ್ನಿ ನೀಡಿದ ದೂರಿನ ಆಧಾರದ ಮೇಲೆ ವಿವೇಕನಗರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ಹಂತಕರ ಪತ್ತೆಗೆ ಬಲೆ ಬೀಸಿದ್ದರು..
ಹತ್ಯೆಯಾದ ಒಂದೆರಡು ದಿನದಲ್ಲಿ ನಾಲ್ವರು ಹಂತಕರನ್ನು ಬಂಧಿಸಿದ ಪೋಲಿಸರು
ರೌಡಿ ಶೀಟರ್ ಮಿಲ್ಟ್ರಿ ಸತೀಶ್‌ನನ್ನು ಜನವರಿ 24 ರಂದು ವಿವೇಕನಗರದ ಮಾಯಾಬಜಾರ್ ಸ್ಲಂನಲ್ಲಿರುವ ಆತನ ಮನೆಯಲ್ಲಿ ಕೊಲೆ ಮಾಡಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಕೈಗೊಂಡಿದ್ದ ಪೊಲೀಸರ ತಂಡ ನಾಲ್ವರನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವೈಯಕ್ತಿಕ ದ್ವೇಷದಿಂದ ಸತೀಶ್‌ನನ್ನು ಕೊಲೆ ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಬೆಂಗಳೂರು: ರೌಡಿಶೀಟರ್ ಮಿಲ್ಟ್ರಿ ಸತೀಶ್ ಹತ್ಯೆ (Murder) ಪ್ರಕರಣದ ಬೆನ್ನುಬಿದ್ದ ವಿವೇಕನಗರ ಠಾಣಾ ಪೊಲೀಸರು ನಾಲ್ವರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ವಿವೇಕನಗರದ ನಿವಾಸಿಗಳಾದ ಪ್ರಶಾಂತ್, ದನುಷ್, ಕಾಮ್ಲೆಟ್ ಮತ್ತು ಸುನೀಲ್ ಬಂಧಿತ ಆರೋಪಿಗಳಾಗಿದ್ದು ಆರೋಪಿಗಳೆಲ್ಲರೂ 18 ರಿಂದ 20 ವರ್ಷ ವಯಸ್ಸಿನವರಾಗಿದ್ದು ವೈಯಕ್ತಿಕ ದ್ವೇಷದ ಹಿನ್ನೆಲೆಯಲ್ಲಿ ಸತೀಶ್‌ನನ್ನು ಹತ್ಯೆ ಮಾಡಿದ್ದಾರೆ ಎಂದು ತನಿಖೆಯಿಂದ ತಿಳಿದುಬಂದಿದೆ.
ಸತೀಶ್ ಹತ್ಯೆಯಾಗುವ ಒಂದು ದಿನದ ಮೊದಲು ಬಾರ್ ಒಂದರಲ್ಲಿ ರೌಡಿಶೀಟರ್ ಆರೋಪಿತರನ್ನು ನಿಂದಿಸಿದ್ದನಂತೆ. ಇದರಿಂದ ಕೋಪಗೊಂಡಿದ್ದ ಆರೋಪಿಗಳು ಮಿಲ್ಟ್ರಿ ಸತೀಶ್ನ ಕೊಲೆ ಮಾಡಲು ಸ್ಕೆಚ್ ಹಾಕಿದ್ದರು. ಅದರಂತೆ ಬೆಂಗಳೂರಿನ ವಿವೇಕನಗರದ ಮಾಯಾಬಜಾರ್ ಸ್ಲಂನಲ್ಲಿರುವ ತನ್ನ ಮನೆಯ ಹೊರಗೆ ಮಲಗಿದ್ದ ಮಿಲ್ಟ್ರಿ ಸತೀಶನನ್ನು ಬುಧವಾರ ಬೆಳಗಿನ ಜಾವ 2:30ರ ಸುಮಾರಿಗೆ ಮಾರಕಾಸ್ತ್ರಗಳಿಂದ ಮನಬಂದಂತೆ ಕೊಚ್ಚಿ ಹತ್ಯೆ ಮಾಡಿದ್ದರು.
ಬೆಂಗಳೂರು ಕೇಂದ್ರ ವಿಭಾಗದ ಉಪ ಪೊಲೀಸ್ ಆಯುಕ್ತ ಶೇಖರ್ ಹೆಚ್ ತೆಕ್ಕನವರ್ ಹೇಳುವ ಪ್ರಕಾರ, ಸತೀಶ್ ಒಬ್ಬ ರೌಡಿ ಶೀಟರ್ ಆಗಿದ್ದು, ಆತನ ವಿರುದ್ಧ ಹಲವು ಪ್ರಕರಣಗಳು ದಾಖಲಾಗಿವೆ. ಸತೀಶ್‌ನನ್ನು ಕೊಲೆ ಮಾಡಿರುವ ಆರೋಪಿಗಳು ಸಹ ಇತರ ಅಪರಾಧಗಳಲ್ಲಿ ಭಾಗಿಯಾಗಿದ್ದವರೆ ಎಂದು ತಿಳಿದುಬಂದಿದೆ.