ಶಿವಮೊಗ್ಗ:ದುರ್ಘಟನೆಯಲ್ಲಿ ಮೃತಳಾದ 6 ವರ್ಷದ ಮಗಳ ಕಣ್ಣುಗಳನ್ನು ದಾನ ಮಾಡಿ ತಂದೆ!

ಶಿವಮೊಗ್ಗ:ದುರ್ಘಟನೆಯಲ್ಲಿ ಮೃತಳಾದ 6 ವರ್ಷದ ಮಗಳ ಕಣ್ಣುಗಳನ್ನು ದಾನ ಮಾಡಿ ತಂದೆ!

ದುರ್ಘಟನೆಯಲ್ಲಿ ಮೃತಳಾದ 6 ವರ್ಷದ ಮಗಳ ಕಣ್ಣುಗಳನ್ನು ದಾನ ಮಾಡಿ ಶಿವಮೊಗ್ಗದ ಗಾಂಧಿ ಬಜಾರ್ ನಿವಾಸಿಯಾದ ಹರೀಶ್ ಸಾರ್ಥಕತೆ ಮೆರೆದಿದ್ದಾರೆ. ಈ ಮೂಲಕ ಇನ್ನೊಂದು ಜೀವಕ್ಕೆ ಬೆಳಕಾಗಿದ್ದಾರೆ

ಶಿವಮೊಗ್ಗ: ಶಿವಮೊಗ್ಗ ನಗರದಿಂದ ನಾಲ್ಕೈದು ಕಿಲೊಮೀಟರ್ ದೂರದಲ್ಲಿರುವ ಮುದ್ದಿನಕೊಪ್ಪದ ಟ್ರೀಪಾರ್ಕ್ ಗಾಂಧಿಬಜಾರಿನ ಹರೀಶ್ ಮಡದಿ ಮಕ್ಕಳನ್ನು ಕರೆದುಕೊಂಡು ಹೋಗಿದ್ದರು ಆ ಸಮಯದಲ್ಲಿ ಅಲ್ಲೆ ಇದ್ದ ಸಿಮೆಂಟಿನಿಂದ ತಯಾರಿಸಿದ ಜಿಂಕೆಯ ಗೊಂಬೆ ಮೇಲೆ ಮಗು ಹತ್ತಲು ಪ್ರಯತ್ನಿಸಿದೆ ಆಗ ಅದು ಮುರಿದು ಮಗುವಿನ ಮೇಲೆ ಬಿದ್ದ ಕಾರಣಕ್ಕೆ ಮಗು ತೀವ್ರ ರಕ್ತಸ್ರಾವ ದಿಂದ ಬಳಲಿ ಸಾವನಪ್ಪಿದೆ. ಸಾವನ್ನಪ್ಪಿದ ಮಗುವಿನ ಕಣ್ಣುಗಳನ್ನು ದಾನ ಮಾಡುವ ಮೂಲಕ ಮಗಳ ಸಾವಿನ ನೋವಿನಲ್ಲು ತಂದೆ ಹರೀಶ್ ಸಾರ್ಥಕತೆ ಮೆರೆದಿದ್ದಾರೆ. 6 ವರ್ಷದ ಮಗಳ ಕಣ್ಣುಗಳನ್ನು ದಾನ ಮಾಡಿದ ಶಿವಮೊಗ್ಗದ ಗಾಂಧಿ ಬಜಾರ್ ನಿವಾಸಿಯಾದ ಹರೀಶ್ ಈ ಮೂಲಕ ಇನ್ನೋರ್ವರ ಬಾಳಿಗೆ ಬೆಳಕು ತರಲು ಮುಂದಾಗಿ ನೋವಿನಲ್ಲು ದೊಡ್ಡತನ ಮೆರೆದಿದ್ದಾರೆ. ಹೌದು ಮುದ್ದಾದ ಮಗಳನ್ನು ಕಳೆದುಕೊಂಡು
ಭಾವುಕರಾಗಿ ಕಣ್ಣೀರಿಟ್ಟ ಬಾಲಕಿ ತಂದೆ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿದ್ದಾರೆ.ಟ್ರೀ ಪಾರ್ಕ್​​ಗೆ ಹೋದ ಸಮಯದಲ್ಲಿ ಈ ದುರ್ಘಟನೆ ನೆಡೆದಿದೆ.ಇಬ್ಬರು ಮಕ್ಕಳನ್ನು ಸಂತೋಷ ಪಡಿಸಲೆಂದು ಟ್ರೀ ಪಾರ್ಕಿಗೆ ಕರೆದುಕೊಂಡು ಹೋಗಿದ್ದೆ, ಈ ವೇಳೆ ನಾನು ಚಿಕ್ಕ ಮಗುವನ್ನು ನೋಡಿಕೊಳ್ಳುತ್ತಿದ್ದ ವೇಳೆ ದೊಡ್ಡ ಮಗಳು ಕಣ್ತಪ್ಪಿಸಿ ಆಟವಾಡುತ್ತ ಬೊಂಬೆ ಮೇಲೆ ಹತ್ತಲು ಹೋಗಿರಬಹುದು? ಅಲ್ಲಿ ಏನಾಯ್ತೋ ಗೊತ್ತಾಗಿಲ್ಲ. ಕ್ಷಣ ಮಾತ್ರದಲ್ಲಿ ಸಿಮೆಂಟಿನಿಂದ ಮಾಡಿದ್ದ ಜಿಂಕೆಯ ಬೊಂಬೆ ಮಗು ಮೇಲೆ ಬಿದ್ದೆಬಿಟ್ಟಿದೆ ಕೂಡಲೇ ಮಗುವನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸೋ ಪ್ರಯತ್ನವನ್ನು ಮಾಡಿದ್ದೇವು. ಆದರೆ ಆ ವೇಳೆ ನನ್ನ ಮಗಳು ಸಾವನ್ನಪ್ಪಿದ್ದಾಳೆ ಅಂತ ವೈದ್ಯರು ಹೇಳಿದ್ದರು. ನನ್ನ ಮಗಳಂತು ನನ್ನನ್ನು ಬಿಟ್ಟು ಹೋದಳು ಅವಳ ಕಣ್ಣುಗಳನ್ನು ದಾನ ಮಾಡಿ ಬೇರೋಬ್ಬರ ಬಾಳಿಗೆ ಬೆಳಕು ತರಲು ನಿರ್ಧಾರ ಮಾಡಿ ಕಣ್ಣು ದಾನ ಮಾಡಿದ್ದೇವೆ ಎಂದು ಭಾವುಕರಾಗಿ ಹೇಳಿದ್ದಾರೆ.
ಇದೇ ವೇಳೆ ಟ್ರೀ ಪಾರ್ಕ್​ನಲ್ಲಿ ಕಳಪೆ ಕಾಮಗಾರಿ ನಡೆದಿದೆ, ಬೊಂಬೆ ಮಕ್ಕಳು ಮುಟ್ಟಿದರೆ ಮುರಿದು ಬೀಳುತ್ತಿದೆ ಅಂದರೇ ನೀವೇ ಅರ್ಥ ಮಾಡಿಕೊಳ್ಳಿ ಎಂತಹ ಗುಣಮಟ್ಟದ ಕೆಲಸ ನಡೆದಿದೆ ಎಂದು. ಈಗ ನನ್ನ ಮಗು ಸಾವನ್ನಪ್ಪಿದೆ, ಮತ್ತೊಂದು ಮಗುವಿಗೆ ಈ ರೀತಿ ಆಗೋದು ಬೇಡ. ದಯಮಾಡಿ ಟ್ರೀ ಪಾರ್ಕ್ ನಲ್ಲಿರುವ ಗೊಂಬೆ ಇನ್ನಿತರೆ ಕಳಪೆ ವಸ್ತುಗಳನ್ನು ಮೊದಲು ತೆರವು ಗೋಳಿಸಿ.ಕಳಪೆ ಕಾಮಗಾರಿ ಮಾಡಿದವರ ವಿರುದ್ಧ ಸೂಕ್ತ ಕ್ರಮ ತೆಗೆದುಕೊಳ್ಳಿ ಅಂತ ಮನವಿ ಮಾಡಿದ್ದಾರೆ.
.

Leave a Reply

Your email address will not be published. Required fields are marked *

Optimized by Optimole
error: Content is protected !!