ಟೀಮ್ ಮಾಧ್ಯಮ ತಂಡದ ಆಶ್ರಯದಲ್ಲಿ ನೆಡೆದ ಕ್ರಿಕೆಟ್ ಹಬ್ಬಕ್ಕೆ ತೆರೆ ಫೈನಲ್ ಪಂದ್ಯದಲ್ಲಿ ಜಯಗಳಿಸಿದ ಜೈ ಹಿಂದ್ ಕ್ರಿಕೆಟರ್ಸ್

ಪ್ರಥಮ ಬಹುಮಾನ 50,000 ಮಾಧ್ಯಮ ಕಪ್ ವಿಜೇತ ಜೈ ಹಿಂದ್ ಕ್ರಿಕೆಟರ್ಸ್

ದ್ವೀತಿಯ ಬಹುಮಾನ 25,000 ರೂಪಾಯಿ ನಗದು ಆಕರ್ಷಕ ಟ್ರೋಫಿ ಗೆದ್ದ ಸಹನಾ ತಂಡ

ಟೀಮ್ ಮಾಧ್ಯಮ ತಂಡದ ಆಶ್ರಯದಲ್ಲಿ ನೆಡೆದ ಕ್ರಿಕೆಟ್ ಹಬ್ಬಕ್ಕೆ ತೆರೆ ಫೈನಲ್ ಪಂದ್ಯದಲ್ಲಿ ಜಯಗಳಿಸಿದ ಜೈ ಹಿಂದ್ ಕ್ರಿಕೆಟರ್ಸ್

ಟೀಮ್ ಮಾಧ್ಯಮ ತಂಡದ ಆಶ್ರಯದಲ್ಲಿ ಮೂರುದಿನಗಳ ಕಾಲ ನೆಡೆದಂತಹ ಅಂತರಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯಾವಳಿಯಲ್ಲಿ ರಾಜ್ಯದ ಹಲವು ತಂಡಗಳು ಭಾಗವಹಿಸಿದ್ದವು.ಈ ಪಂದ್ಯಾವಳಿಯು ಲೀಗ್ ಕಮ್ ನಾಕ್ ಔಟ್ ಮಾದರಿಯಲ್ಲಿ ನಡೆಸಲಾಗಿತ್ತು. ನಾನಾ ಜೆಲ್ಲೆಯ ಪ್ರತಿಷ್ಠಿತ ತಂಡಗಳು ಭಾಗವಹಿಸಿದ್ದವು. ನಾಲ್ಕು ಗುಂಪುಗಳನ್ನಾಗಿ ಮಾಡಲಾಗಿದ್ದು ಒಂದೊಂದು ಗುಂಪಿನಿಂದಲೂ ಒಂದೊಂದು ತಂಡ ನೆರವಾಗಿ ಸೆಮಿಫೈನಲ್ಸ್ ಹಂತವನ್ನು ತಲುಪಿದ್ದವು.ಅಂತಿಮವಾಗಿ ಟೀಮ್ ಮಾಧ್ಯಮ ಕಪ್ ನ ಹಣಾಹಣಿಯಲ್ಲಿ ಅವಿ ಬಾಯ್ಸ್ . ಎಮ್ ಸಿಸಿ ಕ್ರಿಕೆಟರ್ಸ್,ಜಿಸಿಎಸ್ ಸಹನಾ ಕ್ರಿಕೆಟರ್ಸ್ ಮತ್ತು ಜೈ ಹಿಂದ್ ಕ್ರಿಕೆಟರ್ಸ್ ಈ ನಾಲ್ಕು ತಂಡಗಳು ಸೆಮಿಫೈನಲ್ಸ್ ಹಂತಕ್ಕೆ ಬಂದಿದ್ದವು, ರೋಚಕವಾಗಿ ನೆಡೆದ ಎರಡು ಸೆಮಿಫೈನಲ್ಸ್ ಪಂದ್ಯದಲ್ಲಿ ಗೆಲುವು ಸಾಧಿಸಿದ ಜೈ ಹಿಂದ್ ಮತ್ತು ಜಿಸಿಎಸ್ ಸಹನಾ ತಂಡಗಳು ಅಂತಿಮ ಹಣಾಹಣಿಯ ಫೈನಲ್ ಪಂದ್ಯಕ್ಕೆ ಟಿಕೆಟ್ ಪಡೆದಿದ್ದವು ಆಕರ್ಷಕ ಟ್ರೋಫಿ ಮತ್ತು ಪ್ರಥಮ ನಗದು ಬಹುಮಾನ 50,000 ಸಾವಿರಕ್ಕಾಗಿ ರೋಚಕವಾಗಿ ನೆಡಯಬೇಕಾಗಿದ್ದ ಪಂದ್ಯ ನಿರಾಯಾಸವಾಗಿ ನೆಡೆದು ಪ್ರಬಲ ಜೈ ಹಿಂದ್ ತಂಡ ಎದುರಾಳಿ ಜಿಸಿಎಸ್ ಸಹನಾ ತಂಡವನ್ನು ಸೋಲಿಸಿ ಟೀಮ್ ಮಾಧ್ಯಮ ಕಪ್ ಅನ್ನು ತನ್ನದಾಗಿಸಿಕೊಂಡಿತು. ಸೆಮಿಫೈನಲ್ಸ್ ಹಂತದಲ್ಲಿ ಸೋಲಿನ ಕಹಿ ಅನುಭವಿಸಿದ ಜಿಸಿಎಸ್ ಸಹನಾ ತಂಡ ದ್ವೀತಿಯ ಬಹುಮಾನವಾಗಿ ಆಕರ್ಷಕ ಟ್ರೋಫಿಯ ಜೋತೆಗೆ 25,000 ಸಾವಿರ ನಗದನ್ನು ತನ್ನದಾಗಿಸಿಕೊಂಡಿತು

ಹಿರಿಯ ಪತ್ರಕರ್ತ ಭದ್ರಾವತಿ ಬ್ರದರ್ ಅವರನ್ನು ಸನ್ಮಾನಿಸಿದ ಕ್ಷಣ

ಸೆಮಿಫೈನಲ್ಸ್ ನಲ್ಲಿ ಸೋತಂತ ಅವಿ ಬಾಯ್ಸ್ ಮತ್ತು ಎಮ್ ಸಿಸಿ ತಂಡಗಳು ತಲಾ 7000 ಸಾವಿರ ನಗದು ಮತ್ತು ಪಾರಿತೋಷಕವನ್ನು ಪಡೆದುಕೊಂಡವು. ಈ ಪಂದ್ಯ ಕೂಟದಲ್ಲಿ ಅತ್ತ್ಯುತ್ತಮ ಪ್ರದರ್ಶನ ನೀಡಿದ ಜೈ ಹಿಂದ್ ತಂಡದ ಉತ್ತಪ್ಪ ಸರಣಿಯ ಶ್ರೇಷ್ಠ ಆಟಗಾರನಾಗಿ ಆಕರ್ಷಕ ಟ್ರೋಫಿಯ ಜೋತೆಗೆ 3,000 ನಗದನ್ನು ತನ್ನದಾಗಿಸಿಕೊಂಡರು.ಉತ್ತಮ ಬೌಲರ್ ಪ್ರಶಸ್ತಿಯನ್ನು ಬಿಜಿಎಸ್ ಸಹನಾ ತಂಡದ‌ ರೋಶನ್ ಮತ್ತು ಇದೆ ತಂಡದ ಪ್ರತಾಪ್ ಉತ್ತಮ ಬ್ಯಾಟ್ಸ್‌ಮನ್ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡರು ಇಬ್ಬರೂ ತಲಾ ಎರಡು ಸಾವಿರ ನಗದು ಮತ್ತು ಪಾರಿತೋಷಕವನ್ನು ನೀಡಲಾಯಿತು.


ಅಂತಿಮ ಹಂತದ ಬಹುಮಾನ ವಿತರಣಾ ಕಾರ್ಯಕ್ರಮಕ್ಕೆ ಶಿವಮೊಗ್ಗ ನಗರ ಜನಪ್ರಿಯ ಶಾಸಕರಾದ ಎಸ್ ಎನ್ ಚನ್ನಬಸಪ್ಪ ( ಚನ್ನಿ ) ಅವರು ಮತ್ತು ಮಾಜಿ ಸಂಸದರಾದ ಆಯನೂರು ಮಂಜುನಾಥ್ ಹಾಗೂ ಸುರೇಶ್ ಎಂ ಪೋಲಿಸ್ ಉಪಾಧೀಕ್ಷರು ಅವರು ಕಾಂಗ್ರೆಸ್ ಮುಖಂಡರಾದ ವೈ ಹೆಚ್ ನಾಗರಾಜ್, ಮಾಜಿ ಕಾರ್ಪೊರೇಟರ್ ಐಡಿಯಲ್ ಗೋಪಿ,ಜೆಡಿಎಸ್ ಪಕ್ಷದ ನಗರಾಧ್ಯಕ್ಷ ದೀಪಕ್ ಸಿಂಗ್, ಜೆಡಿಎಸ್ ಪಕ್ಷದ ವಕ್ತಾರರಾದ ಗಂಧದಮನೆ ನರಸಿಂಹ, ನಿಕಟ ಪೂರ್ವ ಕಾರ್ಪೊರೇಟರ್ ಮಂಜುನಾಥ್ ಮಲೆನಾಡು ಕೋ ಆಪರೇಟಿವ್ ಸೊಸೈಟಿಯ ಸದಸ್ಯ ಈಶ್ವರ್ ಅವರು ವೇದಿಕೆಯಲ್ಲಿ ಹಾಜರಿದ್ದು ಈ ಪಂದ್ಯಾವಳಿಯ ಬಗ್ಗೆ ಮಾತಾನಾಡಿ ವಿಜೇತರಿಗೆ ಆಭಿನಂದಿಸಿ ಬಹುಮಾನ ವಿತರಿಸಿದರು.


ಒಟ್ಟಿನಲ್ಲಿ ಈ ಒಂದು ಅಂತರಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಹಬ್ಬ ಮೂರುದಿನಗಳ ಕಾಲ ಯಶಸ್ವಿಯಾಗಿ ನೆಡೆದು ಎಲ್ಲರ ಮೆಚ್ಚುಗೆಗೆ ಕಾರಣವಾಯ್ತು ಈ ಒಂದು ಪಂದ್ಯಾವಳಿಯನ್ನು ಆಯೋಜಿಸಿದ್ದ ಟೀಮ್ ಮಾಧ್ಯಮದ ಸುಧೀರ್ ಕುಮಾರ್ ಎಸ್ ವೈ (ವಿಧಾತ ಸುಧೀರ್) ಚಂದ್ರಶೇಖರ್ ಜಿ, ಶಿ ಜು ಪಾಶ, ಮತ್ತು ಎಸ್ ಕೆ ಗಜೇಂದ್ರ ಸ್ವಾಮಿ ಹಾಗೂ ಜಿ ಪದ್ಮನಾಭ್ ಈ ಐವರ ತಂಡಕ್ಕೆ ಈ ಟೂರ್ನಿಯಲ್ಲಿ ಭಾಗವಹಿಸಿದ ತಂಡದ ಆಟಗಾರರು ಮತ್ತು ಬಹುಮಾನ ವಿತರಿಸಲು ಆಗಮಿಸಿದ್ದ ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.

ಸಧ್ಯಕ್ಕೆ ಈ ಕ್ರಿಕೆಟ್ ಹಬ್ಬಕ್ಕೆ ತೆರೆಬಿದ್ದಿದೆ ಮುಂಬರುವ ದಿನಗಳಲ್ಲಿ ಟೀಮ್ ಮಾಧ್ಯಮದ ಆಶ್ರಯದಲ್ಲಿ ಇನ್ನಷ್ಟು ಕಾರ್ಯಕ್ರಮಗಳು ಮೂಡಿಬರಲಿದೆ. ಈ ಪಂದ್ಯಾವಳಿಯ ಯಶಸ್ಸಿಗೆ ಕಾರಣರಾದ ಆಟಗಾರರಿಗೂ ಪ್ರೇಕ್ಷಕರಿಗೂ ಮತ್ತು ನಗರದ ನಾಗರಿಕರಿಗೂ ಹಾಗೂ ಸಲಹೆ ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಟೀಮ್ ಮಾಧ್ಯಮ ತಂಡದ ಸದಸ್ಯರು ಕೃತಜ್ಞತೆ ಸಲ್ಲಿಸಿದ್ದಾರೆ

Leave a Reply

Your email address will not be published. Required fields are marked *

Optimized by Optimole
error: Content is protected !!