ಹಳೆ ಜೈಲು ಆವರಣದ ವಿಶಾಲವಾದ ಮೈದಾನಕ್ಕೆ ಅಲ್ಲಮಪ್ರಭು ಹೆಸರು ಸಚಿವ ಸಂಪುಟ ಅಸ್ತು : ಸಚಿವ ಮಧು ಬಂಗಾರಪ್ಪ

ಹಳೆ ಜೈಲು ಆವರಣದ ವಿಶಾಲವಾದ ಮೈದಾನಕ್ಕೆ ಅಲ್ಲಮಪ್ರಭು ಹೆಸರು ಸಚಿವ ಸಂಪುಟ ಅಸ್ತು : ಸಚಿವ ಮಧು ಬಂಗಾರಪ್ಪ

News.Ashwasurya.in

ಬೆಂಗಳೂರು: ಶಿವಮೊಗ್ಗ ನಗರದ 46.32 ಎಕರೆ ವಿಸ್ತೀರ್ಣದ ಹಳೆ ಜೈಲು ಆವರಣದಲ್ಲಿರುವ ವಿಶಾಲವಾದ ಮೈದಾನಕ್ಕೆ ( ಫ್ರೀಡಮ್ ಪಾರ್ಕ್ ಎಂದು ಈ ಹಿಂದೆ ಕರೆಯುತ್ತಿದ್ದ ಸ್ಥಳ ) ಅಲ್ಲಮಪ್ರಭು ಹೆಸರನ್ನು ನಾಮಕರಣ ಮಾಡುವ ಮೂಲಕ ಜಿಲ್ಲೆಯ ಜನರ ದಶಕಗಳ ಕನಸನ್ನು ಕಾಂಗ್ರೆಸ್ ನೇತೃತ್ವದ ಸರ್ಕಾರ ನನಸು ಮಾಡಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ಮಾಧ್ಯಮದವರ ಮುಂದೆ ಹೇಳಿಕೊಂಡು ಸಂತಸ ಹಂಚಿಕೊಂಡಿದ್ದಾರೆ.


‘ವಚನ ಸಾಹಿತ್ಯದ ಮೂಲಕ ಸಾಮಾಜಿಕ ನ್ಯಾಯದ ಕಲ್ಪನೆಯನ್ನು ಸಾರಿದ ಶರಣ ಅಲ್ಲಮಪ್ರಭು ಅವರು ಮೂಲತ ಶಿಕಾರಿಪುರ ತಾಲೂಕಿನ ಬಳ್ಳಿಗಾವೆಯವರು. 12ನೇ ಶತಮಾನದಲ್ಲಿ ಅನುಭವ ಮಂಟಪದ ಅಧ್ಯಕ್ಷರಾಗಿ ಪ್ರಜಾಪ್ರಭುತ್ವದ ಪರಿಕಲ್ಪನೆಯನ್ನು ಮೊದಲಿಗೆ ಈ ನೆಲದಲ್ಲಿ ಸ್ಥಾಪಿಸಿದಂತವರು ಇಂತಹ ಶ್ರೇಷ್ಠ ವ್ಯಕ್ತಿಯ ಹೆಸರನ್ನು ಶಿವಮೊಗ್ಗದ ಹಳೆ ಜೈಲು ಅವರಣದಲ್ಲಿದ್ದ ಫ್ರೀಡಮ್ ಪಾರ್ಕ್ ಮೈದಾನಕ್ಕೆ ಇಡಬೇಕೆಂಬುದು ಜಿಲ್ಲೆಯ ಜನರ ಒತ್ತಾಸೆ ಆಗಿತ್ತು. ಜಿಲ್ಲೆಯ ಜನರ ಬಹುದಿನಗಳ ಬೇಡಿಕೆಗೆ ಸ್ಪಂದಿಸಿರುವುದು, ಕೊಟ್ಟ ಮಾತಿನಂತೆ ಸರ್ಕಾರ ನಡೆದುಕೊಂಡಿರುವುದಕ್ಕೆ ನಿದರ್ಶನ’ ಎಂದು ಅವರು ಹೆಮ್ಮೆಯಿಂದ ಹೇಳಿಕೊಂಡಿದ್ದಾರೆ.

ಶಿವಮೊಗ್ಗದಲ್ಲಿ ಇದೇ 12ರಂದು ನಡೆದ 5ನೇ ಗ್ಯಾರಂಟಿ ಯೋಜನೆ ‘ಯುವನಿಧಿ’ ಕಾರ್ಯಕ್ರಮದ ಸಂದರ್ಭದಲ್ಲಿ ವಿಶಾಲವಾದ ಮೈದಾನಕ್ಕೆ ಅಲ್ಲಮಪ್ರಭು ಹೆಸರಿಡುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ಮನವಿ ಮಾಡಲಾಗಿತ್ತು.

ಗುರುವಾರ ನಡೆದ ಸಚಿವ ಸಂಪುಟದ ಸಭೆಯಲ್ಲಿ ಈ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಾಗಿದೆ. ಸರ್ಕಾರದ ಈ ನಿರ್ಧಾರ ಅತ್ಯಂತ ಸಮಯೋಚಿತವಾಗಿದೆ’ ಎಂದೂ ಅವರು ಹೇಳಿದ್ದಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!