ಪ್ರೀತಿಸಿ ಮದುವೆಯಾದ ನವ ವಿವಾಹಿತೆ ನೇಣಿಗೆ ಶರಣು,ಇದು ಆತ್ಮಹತ್ಯೆಯೊ? ಕೊಲೆಯೊ? ಇನ್ನೂ ನಿಗೂಢ?

ನವವಿವಾಹಿತೆಯೊಬ್ಬರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ತೀರ್ಥಹಳ್ಳಿಯ ನಾಲೂರು ಗ್ರಾಮ ಪಂಚಾಯಿತಿ ಸಮೀಪದ ದಾಸನಕೋಡಿ ಎಂಬಲ್ಲಿ ಬುಧವಾರ ನಡೆದಿದೆ.


ಬಿಜ್ಜಳ ಗ್ರಾಮದ ನಿವಾಸಿ ಶಮಿತಾ ಬಿ.ಯು (24) ಮೃತ ನವವಿವಾಹಿತೆ ಎಂದು ಗುರುತಿಸಲಾಗಿದೆ. ಶರ್ಮಿತಾ ಅವರು 2023ರ ಮಾರ್ಚ್ ನಲ್ಲಿ ದಾಸನಕೊಡಿ ಗ್ರಾಮದ ಯುವಕ ವಿದ್ಯಾರ್ಥ್ ನನ್ನು ಪ್ರೀತಿಸಿ ಮದುವೆಯಾಗಿದ್ದರು. ಶಮಿತಾ ಅವರ ಪತಿ ವಿದ್ಯಾರ್ಥ್ ಸೋಮೇಶ್ವರ ವನ್ಯಜೀವಿ ಅಭಯಾರಣ್ಯದ ಅಮಾವಾಸ್ಯೆ ಬೈಲ್ ನಲ್ಲಿ ರಾತ್ರಿ ಪಾಳಿಯ ಕೆಲಸಕ್ಕೆ ಹೋಗಿದ್ದರು. ಮನೆಯಲ್ಲಿ ಅತ್ತೆ ಮಾವ ಇದ್ದರು. ಶಮಿತಾ ರಾತ್ರಿ ಮಲಗಲು ಎಂದಿನಂತೆ ಮನೆಯ ಉಪ್ಪರಿಗೆ ಕೊಠಡಿಗೆ ತೆರಳಿದ್ದರು. ಆದರೆ ಬೆಳಗ್ಗೆ ಆಕೆ ಬಾಗಿಲು ತೆರೆದಿರಲಿಲ್ಲ. ಹಾಗಾಗಿ ಅನುಮಾನಗೊಂಡ ಮನೆಯ ಕೆಲಸದವರು ಕಿಟಕಿಯಿಂದ ನೋಡಿದಾಗ ನೇಣು ಬಿಗಿದ ಸ್ಥಿತಿಯಲ್ಲಿ ಶಮಿತ ಕಾಣಿಸಿಕೊಂಡಿದ್ದಾರೆ ತಕ್ಷಣ ಯುವತಿಯ ಹೆತ್ತವರಿಗೆ ವಿಷಯ ತಿಳಿಸಿದ್ದಾರೆ. ಬಳಿಕ ಶಮಿತಾ ಅವರ ಪಾಲಕರು ಬಂದು ಕೊಠಡಿಯ ಬಾಗಿಲು ಒಡೆದಿದ್ದಾರೆ. ಆಕೆಯ ಮೃತದೇಹದ ಬಳಿ ಡೆತ್ ನೋಟ್ ಇಟ್ಟಿತ್ತು. ಅದರಲ್ಲಿ ‘ಅನಾರೋಗ್ಯದ ಹಿನ್ನೆಲೆಯಲ್ಲಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ’ ಎಂದು ಬರೆಯಲಾಗಿದೆ ಎನ್ನಲಾಗಿದೆ. ಆಗುಂಬೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜೆಸಿ ಆಸ್ಪತ್ರೆಯಲ್ಲಿ ಶವ ಪರೀಕ್ಷೆ ನಡೆಯಿತು

ಪ್ರೀತಿಸಿ ಮದುವೆಯಾದ ನವ ವಿವಾಹಿತೆ ನೇಣಿಗೆ ಶರಣು,ಇದು ಆತ್ಮಹತ್ಯೆಯೊ? ಕೊಲೆಯೊ? ಇನ್ನೂ ನಿಗೂಢ?

News.Ashwasurya.in

Sudhir Vidhata

ಗಂಡನ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾದ ನವವಿವಾಹಿತೆ? ಸಾವಿಗೆ ಕಾರಣವೇನು ಸಿಕ್ಕ ಡೆತ್ ನೋಟ್ ನಲ್ಲಿ ಏನಿದೆ.ಪ್ರೀತಿಸಿ ಮದುವೆಯಾದದ್ದೆ ಉರುಳಾಯಿತಾ!? ಇದು ಆತ್ಮಹತ್ಯೆಯೋ? ಕೊಲೆಯೋ..!?

ಶಿವಮೊಗ್ಗ: ಪರಸ್ಪರ ಪ್ರೀತಿಸಿ ಕಳೆದ ಎಂಟು ತಿಂಗಳ ಹಿಂದೆಯಷ್ಟೇ ಮದುವೆಯಾಗಿದ್ದ ನವವಿವಾಹಿತೆ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ  ತಾಲೂಕಿನ ದಾಸನಕೂಡಿಗೆ ಗ್ರಾಮದಲ್ಲಿ ನಡೆದಿದೆ.


ಮೃತಪಟ್ಟ ನವವಿವಾಹಿತೆಯನ್ನು ಶಮಿತಾ (24) ಎಂದು ಗುರುತಿಸಲಾಗಿದೆ.ಊಟ ಮುಗಿಸಿ ರಾತ್ರಿ ಮಲಗಲು ಮನೆಯ ಉಪ್ಪರಿಗೆಯ ಕೊಠಡಿಗೆ ತೆರಳಿದ್ದ ಶಮಿತಾ ಬೆಳಗ್ಗೆ ಬಹಳ ಹೊತ್ತಾದರೂ ಹೊರ ಬಂದಿರಲಿಲ್ಲ. ಇದರಿಂದ ಅನುಮಾನಗೊಂಡ ಮನೆಯ ಕೆಲಸದವರು ಕಿಟಕಿ ತೆರೆದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.
ನೊಣಬೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಿಜ್ಜಳ ಗ್ರಾಮದ ಶಮಿತಾ 2023ರ ಮಾರ್ಚ್ ನಲ್ಲಿ ದಾಸನಕೊಡಿಗೆಯ ವಿದ್ಯಾರ್ಥ್ ಜೊತೆ ವಿವಾಹವಾಗಿದ್ದರು.

ವಿದ್ಯಾರ್ಥ್ ಸೋಮೇಶ್ವರ ವನ್ಯಜೀವಿ ಅಭಯಾರಣ್ಯ ವಿಭಾಗದ ಅಮಾವಾಸೆಬೈಲು ವಲಯ ಅರಣ್ಯದಲ್ಲಿ ಕಾರ್ಯನಿರ್ವಹಿಸುತ್ತಿದ್ದರುರಾತ್ರಿ ಪಾಳಿ ಕೆಲಸಕ್ಕೆ ಪತಿ ವಿದ್ಯಾರ್ಥ್ ತೆರಳಿದ್ದರು. ಮನೆಯಲ್ಲಿ ಪತಿಯ ತಂದೆ, ತಾಯಿ ಇದ್ದರು. ಕೊಠಡಿಯಲ್ಲಿ ಡೆತ್‌ನೋಟ್ ಪತ್ತೆಯಾಗಿದ್ದು, ಆರೋಗ್ಯ ಸಮಸ್ಯೆಯಿಂದ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಉಲ್ಲೇಖಿಸಲಾಗಿದೆ.
ತೀರ್ಥಹಳ್ಳಿಯ ಜೆ.ಸಿ ಆಸ್ಪತ್ರೆಯಲ್ಲಿ ತಹಶೀಲ್ದಾರ್ ಜಕ್ಕನಗೌಡರ್ ಉಪಸ್ಥಿತಿಯಲ್ಲಿ ಮರಣೋತ್ತರ ಪರೀಕ್ಷೆ ನಡೆಯಿತು. ಆಗುಂಬೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ

Leave a Reply

Your email address will not be published. Required fields are marked *

Optimized by Optimole
error: Content is protected !!