ಒಂದು ಕೊಲೆಯ ಹಿಂದಿತ್ತು L01-501′ ಕೋಡ್ ಇದರ ಬೆನ್ನು ಬಿದ್ದ ಮುಂಬೈ ಪೊಲೀಸರಿಗೆ 38 ದಿನಗಳ ಬಳಿಕ ಸಿಕ್ತು ಯುವತಿಯ ಶವ!!
News.Ashwasurya.in
ಇದು ಬೆಚ್ಚಿ ಬಿಳಿಸಿದ ವೈಷ್ಣವಿ ಮರ್ಡರ್ ಪ್ರಕರಣ, ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ತನ್ನ ಮಾಜಿ ಪ್ರೇಯಸಿಯನ್ನು ಕೊಲೆ ಮಾಡಿದ್ದ ವ್ಯಕ್ತಿಯೊಬ್ಬ ಪೊಲೀಸರಿಗೆ ಸುಳಿವು ಎನ್ನುವ ಅರ್ಥದಲ್ಲಿ L01-501 ಎನ್ನುವ ಕೋಡ್ ಅನ್ನು ಸೂಸೈಡ್ ನೋಟ್‌ನಲ್ಲಿ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದ.ಡೆತ್ ನೋಟ್ ನೋಡಿದ ಮುಂಬಯಿ ಪೋಲಿಸರಿಗೆ ತಲೆಕೆಟ್ಟಿ ಹೋಗಿತ್ತು. ಎಲ್ಲಾ ಕೋನದಲ್ಲೂ ತನಿಖೆಗೆ ಮುಂದಾದ ಪೋಲಿಸರ ಟೀಮ್ ಕೊನೆಗೂ 38 ದಿನಗಳ ಬಳಿಕ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಆತ ಬರೆದಿಟ್ಟ ಕೋಡ್‌ಅನ್ನು ಪತ್ತೆ ಮಾಡುವಲ್ಲಿ ಪೊಲೀಸ್ ಯಶಸ್ವಿಯಾಗಿದ್ದಾರೆ.!!
ಹತ್ಯೆಯಾದ ಯುವತಿ ವೈಷ್ಣವಿ
ಮುಂಬೈ 19: ಕೊನೆಗೂ 38 ದಿನಗಳ ಹಿಂದೆ ಅಂದರೆ ಡಿಸೆಂಬರ್ 12 ರಂದು ನಾಪತ್ತೆಯಾಗಿದ್ದ 19 ವರ್ಷದ ಯುವತಿಯ ಶವವನ್ನು ಗುರುವಾರ ಮುಂಬೈ ಪೊಲೀಸರು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ತನ್ನ ಮಾಜಿ ಪ್ರಿಯತಮೆಯನ್ನು ಹತ್ಯೆಮಾಡಿದ್ದ ಹಂತಕ ತಾನು ಆತ್ಮಹತ್ಯೆ ಮಾಡಿಕೊಳ್ಳುವ ನಿರ್ಧಾರಕ್ಕೆ ಬಂದಿದ್ದ, ತಾನು ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಆತ ಬರೆದಿದ್ದ ಸೂಸೈಡ್ ನೋಟ್‌ನಲ್ಲಿ ಈಕೆಯ ಶವವನ್ನು ಎಲ್ಲಿ ಹೂತಿದ್ದೇನೆ ಎನ್ನುವ ಮಾಹಿತಿಯನ್ನು ಕೋಡ್ ರೂಪದಲ್ಲಿ ಬರೆದಿಟ್ಟಿದ್ದ( L01-501) 38 ದಿನಗಳ ಸತತ ಪರಿಶ್ರಮದ ಬಳಿಕ ಮುಂಬಯಿ ಪೊಲೀಸರು ಈ ಕೋಡ್ ವರ್ಡ್ಅನ್ನು ಡಿಕೋಡ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ,ಈ ಮೂಲಕ ನಿಗೂಢವಾಗಿ ಹೂತಿಟ್ಟಿದ್ದ ಯುವತಿಯ ಶವವನ್ನು ಪತ್ತೆ ಹಚ್ಚಿ ಸಾರ್ವಜನಿಕರ ವಲಯದಲ್ಲಿ ಪ್ರಶಂಸೆಗೆ ಪಾತ್ರರಾಗಿದ್ದಾರೆ,
ನವಿ ಮುಂಬೈನ ಖಾರ್ಘರ್ ಬೆಟ್ಟದ ಕಾಡಿನಲ್ಲಿ 19 ವರ್ಷದ ಯುವತಿ ವೈಷ್ಣವಿ ಬಾಬರ್ ಅವರ ಶವ ಕೊಳೆತ ಸ್ಥಿತಿಯಲ್ಲಿ ಪತ್ತೆಯಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ತನ್ನೊಂದಿಗಿನ ಪ್ರೇಮ ಸಂಬಂಧವನ್ನು ಕಡಿದುಕೊಂಡಿದ್ದಕ್ಕಾಗಿ ಕೋಪಗೊಂಡಿದ್ದ ಪ್ರೀಯತಮ 24 ವರ್ಷದ ವೈಭವ್ ಬುರುಂಗಲೆ ಆಕೆಯನ್ನು ಕರೆದೊಯ್ದು ಖಾರ್ಘರ್ ಬೆಟ್ಟದಲ್ಲಿ ವೈಷ್ಣವಿ ಅವರ ಕತ್ತು ಹಿಸುಕಿ ಕೊಲೆ ಮಾಡಿದ್ದ ಎಂದು ಸುದ್ದಿ ಸಂಸ್ಥೆ ವರದಿ ಮಾಡಿದೆ.ಪ್ರೀತಿಸಿದವಳನ್ನು ಕೊಂದ ನಂತರ ವೈಭವ್ ಬುರುಂಗಲೆ ಕೂಡ ಆತ್ಮಹತ್ಯೆಗೆ ಶರಣಾಗಿದ್ದ ಅದಕ್ಕೂ ಮುನ್ನ ಈತ ಬರೆದುಹೋಗಿದ್ದ ಸೂಸೈಡ್ ನೋಟ್‌ನಲ್ಲಿ L01-501ಎನ್ನುವ ಕೋಡ್ ಪತ್ತೆಯಾಗಿತ್ತು. ಈ ಕೋಡ್ ಪತ್ತೆ ಮಾಡಿದ ಬಳಿಕ ವೈಷ್ಣವಿ ಅವರ ಶವವನ್ನು ಹುಡುಕಲು ಮುಂಬಯಿ ಪೋಲಿಸರ ತಂಡ ಎಲ್ಲಾ ಕೋನಗಳಲ್ಲಿ ತನಿಖೆಮಾಡಿ ಕೋಡ್ ವರ್ಡ್ಅನ್ನು ಡಿಕೋಡ್ ಮಾಡಿ ಯುವತಿಯ ಶೋಧ ಕಾರ್ಯಾಚರಣೆ ಮುಂದಾಗಿದ್ದರು. ಕೊನೆಗೆ ಶವ ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಸೂಸೈಡ್ ನೋಟ್‌ನಲ್ಲಿ ಇದ್ದ L01-501 ಕೋಡ್‌ಅನ್ನು ಪೋಲಿಸರು ಪತ್ತೆ ಮಾಡಿದ್ದು ಹೇಗೆ?:
ವೈಷ್ಣವಿ ಬಾಬರ್ ಡಿಸೆಂಬರ್ 12 ರಂದು ಸಿಯೋನ್‌ನಲ್ಲಿರುವ ತನ್ನ ಕಾಲೇಜಿಗೆ ಹೋಗಿದ್ದರು. ಕಾಲೇಜಿಗೆ ಹೋದ ಯುವತಿ ಮನೆಗೆ ಹಿಂತದಿರುಗಲಿಲ್ಲ.! ನಂತರ ಆಕೆಯ ತಾಯಿ ಅದೇ ದಿನ ಕಳಂಬೋಲಿ ಪೊಲೀಸ್ ಠಾಣೆಯಲ್ಲಿ ಮಗಳು ಕಾಣೆಯಾದ ಬಗ್ಗೆ ದೂರು ದಾಖಲಿಸಿದ್ದರು. ಅದೇ ದಿನ ವೈಭವ್ ಬುರುಂಗಲೆ ಎನ್ನುವ ವ್ಯಕ್ತಿಯ ದೇಹವು ರೈಲ್ವೆ ಟ್ರ್ಯಾಕ್‌ನಲ್ಲಿ ಪತ್ತೆಯಾಗಿತ್ತು.! ಜುಯಿನಗರ ನಿಲ್ದಾಣದ ರೈಲ್ವೆ ಹಳಿಯಲ್ಲಿ ಈತನ ಶವ ಪತ್ತೆಯಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ತಕ್ಷಣವೇ ಈತನ ಸಾವಿನ ಕುರಿತು ಪ್ರಕರಣ ದಾಖಲಿಸಿಕೊಂಡ ಪೋಲಿಸರು ತನಿಖೆಗೆ ಮುಂದಾಗಿದ್ದಾರೆ.ಪೋಲಿಸರ ವಿಶೇಷ ಕಾರ್ಯಪಡೆಯನ್ನು ರಚನೆ ಮಾಡಲಾಗಿತ್ತು. ಈ ಹಂತದಲ್ಲಿ ವೈಭವ್‌ನ ಮೊಬೈಲ್‌ನಲ್ಲಿ ತಾನು ಪ್ರೀತಿಸಿದ ಯುವತಿ ವೈಷ್ಣವಿಯನ್ನು ಕೊಲೆ ಮಾಡಿ ಆತ್ಮಹತ್ಯೆ ಮಾಡಿಕೊಳ್ಳಲು ಹೊರಟಿರುವುದಾಗಿ ಬರೆದಿರುವ ಸೂಸೈಡ್ ನೋಟ್‌ಅನ್ನು ಪೊಲೀಸರು ಪತ್ತೆ ಮಾಡಿದ್ದರು.!
ಸೂಸೈಡ್ ನೋಟ್‌ನಲ್ಲಿ ‘L01-501’ ಎಂಬ ಪದಗಳಿದ್ದವು. ಇದರ ಅರ್ಥ ಏನು ಅನ್ನೋದೇ ಪೊಲೀಸರಿಗೆ ದೊಡ್ಡ ತಲೆನೋವಾಗಿತ್ತು,ಯಕ್ಷ ಪ್ರಶ್ನೆಯಾಗಿತ್ತು, ಕೊನೆಗೆ ಇದು ವೈಷ್ಣವಿಯ ಶವವನ್ನು ಎಸೆದಿರುವ ಪ್ರದೇಶದ ಅರಣ್ಯ ಇಲಾಖೆಯ ಮರದ ಮೇಲೆ ಗುರುತು ಹಾಕಿದ್ದ ಸಂಖ್ಯೆ ಎಂದು ಪೊಲೀಸರು ಡಿಕೋಡ್ ಮಾಡಿದ್ದಾರೆ.
ನಂತರ ಪೊಲೀಸರು ಸಾಕಷ್ಟು ಸಿಸಿಟಿವಿ ದೃಶ್ಯಗಳ ಪರಿಶೀಲನೆಗೆ ಮುಂದಾಗಿದ್ದಾರೆ, ವೈಷ್ಣವಿ ನಾಪತ್ತೆಯಾದ ದಿನ ಇಬ್ಬರೂ ಖಾರ್ಘರ್ ಬೆಟ್ಟದಲ್ಲಿ ಒಟ್ಟಿಗೆ ಕಾಣಿಸಿಕೊಂಡಿದ್ದರು ಎನ್ನುವುದು ಗೊತ್ತಾಗಿದೆ. ನಂತರ ಪೊಲೀಸರು ಅರಣ್ಯ ಇಲಾಖೆ ಅಧಿಕಾರಿಗಳು, ಅಗ್ನಿಶಾಮಕ ದಳ ಮತ್ತು ಸಿಡ್ಕೋ ತಂಡ ವೈಷ್ಣವಿ ಮೃತದೇಹಕ್ಕಾಗಿ ಶೋಧ ಕಾರ್ಯ ಆರಂಭಿಸಿತು.ತಂಡಗಳಾಗಿ ಕಾರ್ಯಚರಣೆಗೆ ಇಳಿದ ಪೋಲಿಸರು ಹತ್ತು ದಿನಗಳ ಕಾಲ ತೀವ್ರ ಶೋಧ ಕಾರ್ಯಾಚರಣೆಗೆ ಮುಂದಾಗಿ ಜೋತೆಗೆ ಡ್ರೋನ್‌ಗಳನ್ನು ಸಹ ಬಳಸಿಕೊಂಡು ಕಾರ್ಯಚರಣೆಗೆ ಇಳಿದಿದ್ದರಂತೆ. L01-501 ಕೋಡ್ ನಂಬರ್‌ಅನ್ನು ಹುಡುಕಿಕೊಂಡು ಹೋದ ಪೊಲೀಸರಿಗೆ L01-501 ಎಂದು ಮರದ ಮೇಲೆ ನಂಬರ್ ಕೇತ್ತಿದ ಮರದ ಹತ್ತಿರ ಕೊಳೆತ ಸ್ಥಿತಿಯಲ್ಲಿ ವೈಷ್ಣವಿಯ ಶವ ಪತ್ತೆಯಾಗಿದೆ.
ಖಾರ್ಘರ್‌ನ ಓವ್ ಕ್ಯಾಂಪ್ ಪ್ರದೇಶದಲ್ಲಿನ ಡಂಪಿಂಗ್ ಗ್ರೌಂಡ್‌ನಲ್ಲಿರುವ ಪೊದೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಬಿದ್ದಿರುವ ವೈಷ್ಣವಿ ಮೃತದೇಹವನ್ನು ಪತ್ತೆ ಮಾಡಲಾಗಿತ್ತು.! ಕಾಲೇಜಿಗೆ ತೆರಳುವಾಗ ಧರಿಸಿದ್ದ ಉಡುಗೆ, ಕೈ ಗಡಿಯಾರ, ಗುರುತಿನ ಚೀಟಿ ಆಧರಿಸಿ ಆಕೆಯ ದೇಹವನ್ನು ಗುರುತಿಸಲಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದಲ್ಲಿ L01-501 ಕೋಡ್ ವರ್ಡ್ ನಂಬರ್ ಅನ್ನು ಬೇದಿಸುವುದು ಕಷ್ಟವಾಗಿದ್ದರು,ರಾತ್ರಿ ಹಗಲು ಕಾರ್ಯಚರಣೆಗೆ ಇಳಿದ ಮುಂಬಯಿ ಪೋಲಿಸರು ಒಂದು ಹತ್ಯೆ ಪ್ರಕರಣವನ್ನು ಕಂಡುಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇಂತಹ ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾದ ಪೋಲಿಸರ ತಂಡಕ್ಕೆ ಪ್ರಶಂಸೆಯ ಮಾತುಗಳು ಹರಿದು ಬರುತ್ತಿದೆ.
ಪೊಲೀಸರು ಕಾರ್ಯಾಚರಣೆ…
ನವಿ ಮುಂಬೈ ಪೊಲೀಸ್ ಇಲಾಖೆಯ ಮಾನವ ಕಳ್ಳಸಾಗಣೆ ತಡೆ ಘಟಕದ ಹಿರಿಯ ಇನ್ಸ್‌ಪೆಕ್ಟರ್ ಅತುಲ್ ಅಹೆರ್ ನೇತೃತ್ವದ ತಂಡವು ಯುವತಿಯ ಶವಕ್ಕಾಗಿ ವ್ಯಾಪಕವಾದ ಶೋಧಕಾರ್ಯವನ್ನು ಗಂಟೆಗಳ ಕಾಲ ನಡೆಸಿತು. ಪೊಲೀಸರು ಲೋನಾವಾಲಾದಿಂದ ಸ್ವಯಂಪ್ರೇರಿತ ರಕ್ಷಕರು ಮತ್ತು ಅಗ್ನಿಶಾಮಕ ದಳ, ಸಿಡ್ಕೋ ಮತ್ತು ಅರಣ್ಯ ಇಲಾಖೆಯೊಂದಿಗಿನ ಸಹಯೋಗದೊಂದಿಗೆ ಶೋಧಕಾರ್ಯದಲ್ಲಿ ಡ್ರೋನ್‌ಗಳನ್ನೂ ಬಳಸಿಕೊಳ್ಳಲಾಗಿತ್ತು.
ಆತ್ಮಹತ್ಯೆ ಪತ್ರದಲ್ಲಿ L01 – 501 ಎಂಬ ಕೋಡ್‌ವರ್ಡ್ ಇದೆ ಎಂದು ಹಿರಿಯ ಇನ್ಸ್‌ಪೆಕ್ಟರ್ ಅಹೆರ್ ಉಲ್ಲೇಖಿಸಿದ್ದರು ಮತ್ತು ಶವವನ್ನು ಎಸೆದ ಸ್ಥಳ ಎಂದು ನಮೂದಿಸಿದ್ದರು. ಕೋಡ್ ಅನ್ನು ಅರ್ಥಮಾಡಿಕೊಳ್ಳಲು ಹಲವು ಬಾರಿ ಪ್ರಯತ್ನಿಸಿದರೂ ಪೊಲೀಸರು ಯಶಸ್ವಿಯಾಗಿರಲಿಲ್ಲ. ಅಹೆರ್ ವಿವಿಧ ಸಂಯೋಜನೆಗಳಿಗಾಗಿ ಕೋಡ್‌ನ Google ಹುಡುಕಾಟವನ್ನು ಕೂಡ ಮಾಡಿದ್ದರು. ಆದರೆ ಅದು ವ್ಯರ್ಥವಾಯಿತು.
ಪೋಲಿಸ್ ಅಧಿಕಾರಿಗಳು ಅರಣ್ಯ ಇಲಾಖೆಯನ್ನು ಸಂಪರ್ಕಿಸಿದಾಗ ಒಂದು ಪ್ರಗತಿ ಸಂಭವಿಸಿದೆ, ಅದು ಅತ ಬರೆದಿಟ್ಟ ಡೆತ್ ನೋಟ್ ನಲ್ಲಿ ಇದ್ದ L01-501ಕೊಡ್ ಮರದ ಗಣತಿ ಸಂಖ್ಯೆ ಎಂದು ತಿಳಿದುಬಂದಿದೆ. ಈ ಮಾಹಿತಿಯು ಖಾರ್ಘರ್‌ನಿಂದ ಸುಮಾರು 6 ಕಿಮೀ ದೂರದಲ್ಲಿರುವ ಕಲಾಂಬೋಲಿ ಪ್ರದೇಶದ ಅರಣ್ಯದ ಡಂಪಿಂಗ್ ಗ್ರೌಂಡ್‌ನ ಪೊದೆಯೊಂದರಲ್ಲಿ ಯುವತಿಯ ಶವ ಪತ್ತೆಯಾಗಿದೆ.! ಯುವತಿಯ ಗುರುತನ್ನು ಆಕೆಯ ಬಟ್ಟೆ, ಕೈಗಡಿಯಾರ ಮತ್ತು ಗುರುತಿನ ಚೀಟಿಯ ಆಧಾರದ ಮೇಲೆ ಕಾಣೆಯಾದ ಯುವತಿ ವೈಷ್ಣವಿಯ ಮೃತ ದೇಹ ಎಂದು ದೃಢಪಡಿಸಲಾಯಿತು,