ಕೆಲಸಕ್ಕೆ ಹೊರಟ ಯುವತಿ ಮಸಣದ ದಾರಿಗೆ!: ಚಲಿಸುತ್ತಿದ್ದ ರೈಲಿನಿಂದ ಬಿದ್ದು ಯುವತಿ ಸಾವು!

ಪಳ್ಳಿಕೆರೆ ಮಾಸ್ತಿ ಗುಡ್ಡೆಯ ರೈಲ್ವೆ ಹಳಿ ಸಮೀಪ ಮೃತ ದೇಹ ಪತ್ತೆಯಾಗಿದೆ. ರಾತ್ರಿ ಘಟನೆ ನಡೆದಿರಬಹುದು ಎಂದು ಶಂಕಿಸಲಾಗಿದೆ. ಬೆಳಿಗ್ಗೆ ಪರಿಸರ ವಾಸಿಗಳು ಗಮನಿಸಿ ಪೊಲೀಸರಿಗೆ ಮಾಹಿತಿ ನೀಡಿದರು.
ಮೃತದೇಹವನ್ನು ಕಾಸರಗೋಡು ಜನರಲ್ ಆಸ್ಪತ್ರೆಯ ಶವಾಗಾರದಲ್ಲಿರಿಸಲಾಗಿದೆ. ಮೃತ ದೇಹದ ಬಳಿ ಲಭಿಸಿದ ಪರ್ಸ್ ನಲ್ಲಿದ್ದ ಗುರುತು ಚೀಟಿಯಿಂದ ಯುವತಿಯ ಗುರುತು ಪತ್ತೆ ಹಚ್ಚಲಾಯಿತು. ಕೋಜಿಕ್ಕೊಡ್ ನ ಖಾಸಗಿ ಸಂಸ್ಥೆಯಲ್ಲಿ ಉದ್ಯೋಗ ನಿರ್ವಹಿಸುತ್ತಿದ್ದಳು.

ಕೆಲಸಕ್ಕೆ ಹೊರಟ ಯುವತಿ ಮಸಣದ ದಾರಿಗೆ!: ಚಲಿಸುತ್ತಿದ್ದ ರೈಲಿನಿಂದ ಬಿದ್ದು ಯುವತಿ ಸಾವು!

News.Ashwasurya.in

ಕಾಸರಗೋಡು:ರೈಲಿನ ಪ್ರಯಾಣದ ವೇಳೆ ಕಲ್ಲಿಕೋಟೆ ಯಿಂದ ಮಂಗಳೂರಿಗೆ ಸಂಚರಿಸುತ್ತಿದ್ದ ಪ್ಯಾಸೆಂಜರ್ ಜೈಲಿನಿಂದ ಬಿದ್ದು ಯುವತಿ ಸಾವನ್ನಪ್ಪಿದ ಪ್ರಕರಣವೊಂದು ಕಾಸರಗೋಡು ಸಮೀಪದ ಪಳ್ಳಿಕೆರೆಯಲ್ಲಿ ನೆಡೆದಿದೆ.
ಮೃತ ಯುವತಿ ವಯನಾಡ್ ನ ಜೋಸೆಫ್ ಅಲಿಯಾಸ್  ಜೋಯ್-ಮೋಳಿ ಅಲಿಯಾಸ್ ಪ್ರೇಮ ದಂಪತಿ ಪುತ್ರಿ ಐಶ್ವರ್ಯ ಜೋಸೆಫ್ (30) ಎಂದು ಗುರುತಿಸಲಾಗಿದೆ. ಈ ಯುವತಿ ಮಾರ್ಕೆಟಿಂಗ್ ಸಂಸ್ಥೆ ಯೊಂದರಲ್ಲಿ ಹ್ಯೂಮನ್ ರಿಸೋರ್ಸ್ ಮೆನೇಜರ್ ಆಗಿ ಸೇವೆ ಸಲ್ಲಿಸುತ್ತಿದ್ದರು.
  ನಿನ್ನೆ ಕಲ್ಲಿಕೋಟೆಯಿಂದ ಮಂಗಳೂರಿಗೆ ಕೇಲಸಕ್ಕೆಂದು ನೇತ್ರಾವತಿ ಎಕ್ಸ್‌ಪ್ರೆಸ್‌
ರೈಲಿನಲ್ಲಿ ಪ್ರಯಾಣ ಮಾಡುತ್ತಿದ್ದ ರಾತ್ರಿ ವೇಳೆ ಈ ಘಟನೆ ನೆಡೆದಿರಬಹುದು? ಪಳ್ಳಿಕೆರೆಯ ಮಾಸ್ತಿ ಗುಡ್ಡೆಯ ರೈಲ್ವೆ ಹಳಿ ಸಮೀಪ ಮೃತ ದೇಹಪತ್ತೆಯಾಗಿದೆ! ರಾತ್ರಿ ವೇಳೆ ಈ ಘಟನೆ ನೆಡೆದಿರಬಹುದು ಎಂದು ಶಂಕಿಸಲಾಗಿದೆ,ಬೆಳಗ್ಗೆ ಸ್ಥಳೀಯ ನಿವಾಸಿಗಳು ಗಮನಿಸಿ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಕೆಲಸಕ್ಕಾಗಿ ಪ್ರಯಾಣ ಬೆಳೆಸುತ್ತಿದ್ದ ಯುವತಿ ಐಶ್ವರ್ಯ ಮಸಣದ ಹಾದಿ ಹಿಡಿದಿದ್ದಾಳೆ!! ಮೃತದೇಹವನ್ನು ಬಳಿಕ ಕಾಸರಗೋಡು ಜನರಲ್ ಆಸ್ಪತ್ರೆಗೆ ಸಾಗಿಸಲಾಗಿದೆ. ವಿಷಯ ತಿಳಿದ ಮೃತ ಯುವತಿಯ ಮನೆಯವರು ಕಾಸರಗೋ ಡಿನ ಜನರಲ್ ಆಸ್ಪತ್ರೆಗೆ ಆಗಮಿಸಿದ್ದಾರೆ. ಬೇಕಲ ಪೊಲೀಸರು ಈ ಬಗ್ಗೆ ಪ್ರಕರಣ ದಾಖಲಿಸಿ ತನಿಖೆ ಆರಂಭಿಸಿದ್ದಾರೆ.ಚಲಿಸಿತ್ತಿದ್ದ ಜೈಲಿನಿಂದ ಬಿದ್ದಿರುವ ಕಾರಣ ಸಾಕಷ್ಟು ಅನುಮಾನಗಳು ಎದ್ದು ಕಾಣುತ್ತಿವೆ? ಮೃತ ಐಶ್ವರ್ಯ ಅವರೆ ರೈಲಿನಿಂದ ಬಿದ್ದು ಆತ್ಮಹತ್ಯೆಗೆ ಶರಣಾಗಿರ ಬಹುದಾ? ಅಥವಾ ಚಲಿಸುತ್ತಿದ್ದ ರೈಲಿನಲ್ಲಿ ಇವರು ಬಾಗಿಲ‌ ಬಳಿ ನಿಂತಿದ್ದಾಗ ಇವರಿಗೆ ಅರಿವಿಗೆ ಬಾರದಹಾಗೆ ಹಿಂಬದಿಯಿಂದ ಯಾರಾದರೂ ಕೆಳಕ್ಕೆ ತಳ್ಳಿರ ಬಹುದಾ? ಅಥವಾ ಬಾಗಿಲ ಬಳಿ ನಿಂತಿರುವ ಸಮಯದಲ್ಲಿ ಅಯಾ ತಪ್ಪಿ ಕೆಳಕ್ಕೆ ಬಿದ್ದಿರಬಹುದಾ? ಈ ಪ್ರಕರಣ ಪೋಲಿಸರಿಗೆ ಕಗ್ಗಂಟಾಗಿದ್ದು ಸಾಕಷ್ಟು ಅನುಮಾನವನ್ನು ಹುಟ್ಟು ಹಾಕಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೋಲಿಸರು ತನಿಖೆ ಮುಂದುವರೆಸಿದ್ದು ಇನ್ನಷ್ಟೆ ಈ ಸಾವಿನ ಸತ್ಯಾಸತ್ಯತೆ ಹೊರ ಬಿಳಬೇಕಿದೆ..

Leave a Reply

Your email address will not be published. Required fields are marked *

Optimized by Optimole
error: Content is protected !!