ಆತನಿಗೆ ಬಸ್ಸಿನಲ್ಲಿ ಪರಿಚಯಾವಾದ್ಲು ಲಾಡ್ಜಿಗೆ ಕರೆದೊಯ್ದು,ಕೊನೆಗೆ ಎಲ್ಲವನ್ನೂ ಬಾಚಿಕೊಂಡು ಎಸ್ಕೇಪ್! ಅದ ಮಹಿಳೆಯ ಬಂಧನ

ಆತನಿಗೆ ಬಸ್ಸಿನಲ್ಲಿ ಪರಿಚಯಾವಾದ್ಲು ಲಾಡ್ಜಿಗೆ ಕರೆದೊಯ್ದು,ಕೊನೆಗೆ ಎಲ್ಲವನ್ನೂ ಬಾಚಿಕೊಂಡು ಎಸ್ಕೇಪ್! ಅದ ಮಹಿಳೆಯ ಬಂಧನ.

ಶಿವಮೊಗ್ಗ ನಗರದ ವ್ಯಕ್ತಿಯೊಬ್ಬರು ಕಳೆದ ಡಿಸೆಂಬರ್ 15 ರಂದು ಮದ್ಯಾಹ್ನದ ವೇಳೆಗೆ ಶಿವಮೊಗ್ಗಕ್ಕೆ ಹಿಂತಿರುಗಲು ಹೊನ್ನಾವರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣಕ್ಕೆ ಬಂದಿದ್ದಾರೆ.ಶಿವಮೊಗ್ಗಕ್ಕೆ ಹೊರಡಲು ಬಸ್ ಕೂಡ ರೆಡಿಯಾಗಿತ್ತು ಹತ್ತಿ ಕುಳಿತಿದ್ದಾರೆ.ಅದೆ ಸಮಯಕ್ಕೆ ಇವರಪಕ್ಕಕ್ಕೆ ಸುಮಾರು 30 ರಿಂದ 35 ವರ್ಷ ವಯಸ್ಸಿನ ಮಹಿಳೆಯೊಬ್ಬರು ಕುಳಿತುಕೊಂಡಿದ್ದಾರೆ.ಗಂಡು ಎನ್ನುವ ಪ್ರಾಣಿ ಹಸಿದಿದ್ದರೆ ಪಕ್ಕದಲ್ಲಿ ಇದ್ದ ಹೆಂಗಸು ಸ್ಕೆಚ್ ಹಾಕಿಕುಳಿತಿದ್ದಳು. ಸರಿಯಾದ ಮಿಕ ಸಿಕ್ಕಿದೆ ಎಂದು.ಕೆಲವೇ ಕ್ಷಣದಲ್ಲಿ ಇಬ್ಬರಿಗೂ ಪರಸ್ಪರ ಪರಿಚಯವಾಗಿದೆ. ನಂತರ ಇಬ್ಬರೂ ಹಳೆ ಪರಿಚಯಸ್ತರೆನ್ನುವ ಮಟ್ಟಕ್ಕೆ ಹತ್ತಿರವಾಗಿದ್ದಾರೆ!? ಇಬ್ಬರು ಮಾತನಾಡಿಕೊಂಡು ಶಿವಮೊಗ್ಗದ ಕಡೆ ಪ್ರಯಾಣ ಬೆಳೆಸಿದ್ದಾರೆ.ಮಿಕ ಬೀಳೊದೊ ಪಕ್ಕಾ ಅಂತ ಅನಿಸಿದಾಗ ಮಹಿಳೆಯು ಪಕ್ಕದಲ್ಲಿ ಕುಳಿತ ಪರಿಚಯವಾದ ವ್ಯಕ್ತಿಗೆ ಇಬ್ಬರು ಲಾಡ್ಜಿಗೆ ಹೋಗೋಣ ಅಂತ ಕೆಳಿದ್ದಾರಂತೆ!! ಅದೇನು ಹಸಿದಿದ್ದನೊ ಅ ವ್ಯಕ್ತಿ ಗ್ರೀನ್ ಸಿಗ್ನಲ್ ಕೊಟ್ಟಿದ್ದಾನೆ! ಇಬ್ಬರೂ ದಂಪತಿಗಳ ರೀತಿಯಲ್ಲಿ ಶಿವಮೊಗ್ಗ ನಗರದ ಎನ್.ಟಿ ರಸ್ತೆಯಲ್ಲಿ ಇರುವ ಸವಿನೆನಪು ಲಾಡ್ಜಿಗೆ ಹೋಗಿದ್ದಾರೆ, ಅಲ್ಲಿ ನೆಡೆದದ್ದು ಮಾತ್ರ? ಅ ದೇವರಿಗೆ ಗೊತ್ತು? ಅಷ್ಟೋತ್ತಿಗಾಗಲೆ ಸ್ಕೆಚ್ ಹಾಕಿದ್ದ ಮಹಿಳೆ ತನ್ನ ಜೋತೆಗೆ ಬಂದ ವ್ಯಕ್ತಿಗೆ ಮೈಮೇಲಿರುವ ಬಂಗಾರದ ಒಡವೆಗಳನ್ನು ತೆಗೆದು ಬ್ಯಾಗಿನಲ್ಲಿ ಇಡುವಂತೆ ಹೇಳಿದ್ದಾಳೆ.ಆತ ಕೂಡ ಆಕೆಯ ಆದೇಶವನ್ನು ಪಾಲಿಸಿದ್ದಾನೆ.ಎಲ್ಲವನ್ನೂ ತೆಗೆದು ಬ್ಯಾಗಿನಲ್ಲಿಟ್ಟಿದ್ದಾನೆ! ಸ್ವಲ್ಪ ಸಮಯದನಂತರ ಆಕೆ ನನಗೆ ಬಾಯಾರಿಕೆ ಆಗಿದೆ ಕುಡಿಯಲು ನೀರು ಮತ್ತು ಊಟ ತನ್ನಿ ಎಂದು ಹೇಳಿದ್ದಳಂತೆ.ತಕ್ಷಣ ಆತ ಲಾಡ್ಜ್ ನಿಂದ ಹೊರಗಡೆ ಊಟ ತರಲು ಹೊಗಿದ್ದಾನೆ.ಊಟ ತೆಗೆದುಕೊಂಡು ವಾಪಸ್ ಬಂದಾಗ ಜೊತೆಗೆ ಬಂದಾಕೆ ಎಸ್ಕೇಪ್! ಆಕೆ ಅಷ್ಟೋತ್ತಿಗಾಗಲೆ ಬ್ಯಾಗಿನಲ್ಲಿಟ್ಟಿದ್ದ ಬಂಗಾರದ ಒಡವೆಗಳು ಮತ್ತು ನಗದು ಹಣವನ್ನು ಕಳ್ಳತನ ಮಾಡಿಕೊಂಡು ಲಾಡ್ಜಿನಿಂದ ಎಸ್ಕೇಪ್ ಆಗಿರುತ್ತಾಳೆ. ಎಲ್ಲವನ್ನೂ ಕಳೆದುಕೊಂಡು ಮೋಸ ಹೊದದ್ದು ತಿಳಿದಾಗ ಆಕೆ ಎಲ್ಲವೂ ನಿಟಾಗಿ ತನ್ನ ಪ್ಲಾನ್ ನಂತೆ ಬರಗಿಕೊಂಡು ಹೋಗಿದ್ದಳು.!ನಂತರ ಆತ ದೊಡ್ಡಪೇಟೆ ಠಾಣೆಗೆ ಹೋಗಿ ನೀಡಿದ ದೂರಿನ ಮೇರೆಗೆ ಗುನ್ನೆ ಸಂಖ್ಯೆ 0444/2023 ಕಲಂ 380, 420 ಐಪಿಸಿ ರೀತ್ಯಾ ಪ್ರಕರಣ ದಾಖಲಿಸಿಕೊಳ್ಳಲಾಗಿರತ್ತು.

   ಈ ಪ್ರಕರಣದಲ್ಲಿ ಕಳ್ಳತನವಾದ ಮಾಲು ಹಾಗೂ ಆರೋಪಿತಳ ಪತ್ತೆಗಾಗಿ ಶ್ರೀ ಮಿಥುನ್ ಕುಮಾರ್ ಜಿ. ಕೆ, ಐಪಿಎಸ್, ಮಾನ್ಯ ಪೊಲೀಸ್ ಅಧೀಕ್ಷಕರು ಶಿವಮೊಗ್ಗ ಜಿಲ್ಲೆ, ಶ್ರೀ ಅನಿಲ್ ಕುಮಾರ್ ಭೂಮರಡ್ಡಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-1 ಮತ್ತು ಶ್ರೀ ಕಾರಿಯಪ್ಪ ಎ ಜಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು-2  ರವರ ಮಾರ್ಗದರ್ಶನದಲ್ಲಿ ಶ್ರೀ ಬಾಲರಾಜ್ ಬಿ ಪೊಲೀಸ್ ಉಪಾಧೀಕ್ಷಕರು, ಶಿವಮೊಗ್ಗ ಎ ಉಪ ವಿಭಾಗ ರವರ ಮೇಲ್ವಿಚಾರಣೆಯಲ್ಲಿ, ಶ್ರೀ ರವಿ ಪಾಟೀಲ್, ಪಿಐ ದೊಡ್ಡಪೇಟೆ ರವರ ನೇತೃತ್ವದ  ಶ್ರೀನಿವಾಸ್ ಪಿಎಸ್ಐ  ಮತ್ತು ಸಿಬ್ಬಂಧಿಗಲಾದ ಹೆಚ್ ಸಿ - ಪಾಲಾಕ್ಷ ನಾಯ್ಕ, ಲಚ್ಚಾನಾಯ್ಕ, ಸಿಪಿಸಿ -  ಚಂದ್ರಾನಾಯ್ಕ, ನಿತಿನ್, ಪುನಿತ್,  ಹೇಮಂತ್ ಮತ್ತು ಸುಮಿತಾ ಬಾಯಿ ರವರನ್ನು ಒಳಗೊಂಡ ತನಿಖಾ ತಂಡವನ್ನು ರಚಿಸಲಾಗಿರುತ್ತದೆ.

   ಸದರಿ ತನಿಖಾ ತಂಡವು ದಿಃ 06-01-2024  ರಂದು ಪ್ರಕರಣದ ಆರೋಪಿ ರೂಪಾಶ್ರೀ ಪಿ.ಎಸ್, 33 ವರ್ಷ, ಆಯನೂರು ಶಿವಮೊಗ್ಗ ಈಕೆಯನ್ನು ಬಂಧಿಸಿ ಆರೋಪಿತಳಿಂದ ಮೇಲ್ಕಂಡ ಪ್ರಕರಣ ಮತ್ತು ಶಿವಮೊಗ್ಗ ನಗರದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣನಲ್ಲಿ  ಕಳ್ಳತನವಾದ ಬಗ್ಗೆ   ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ದಾಖಲಾದ 03 ಕಳ್ಳತನ ಪ್ರಕರಣ ಸೇರಿ ಒಟ್ಟು 04 ಪ್ರಕರಣಗಳಿಗೆ ಸಂಬಂಧಿಸಿದಂತೆ, ಅಂದಾಜು ಮೌಲ್ಯ 2,25,000/- ರೂಗಳ 41.6 ಗ್ರಾಂ ತೂಕದ ಬಂಗಾರವನ್ನು ಅಮಾನತ್ತು ಪಡಿಸಿಕೊಳ್ಳಲಾಗಿರುತ್ತದೆ. 

ಈ ಒಂದು ಕಾರ್ಯಚರಣೆಯಲ್ಲಿ ತನಿಖಾ ತಂಡದ ಉತ್ತಮವಾದ ಕಾರ್ಯವನ್ನು ಮಾನ್ಯ ಪೊಲೀಸ್ ಅಧೀಕ್ಷಕರಾದ ಮಿಥುನ್ ಕುಮಾರ್ ಜಿ.ಕೆ ಐಪಿಎಸ್  ಶಿವಮೊಗ್ಗ ಜಿಲ್ಲೆ ರವರು ಪ್ರಶಂಸಿಸಿ ಅಭಿನಂದಿಸಿರುತ್ತಾರೆ.

Leave a Reply

Your email address will not be published. Required fields are marked *

Optimized by Optimole
error: Content is protected !!