ಶಿವಮೊಗ್ಗ ನಗರದಲ್ಲಿ ಕ್ರಿಕೆಟ್ ಹಬ್ಬ : ಅಂತರಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ,ರಾಜ್ಯದ ಯಾವುದೇ ತಂಡಕೂಡ ಭಾಗವಹಿಸಬಹುದು

ಶಿವಮೊಗ್ಗ ನಗರದಲ್ಲಿ ಕ್ರಿಕೆಟ್ ಹಬ್ಬ : ಅಂತರಜಿಲ್ಲಾ ಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ,ರಾಜ್ಯದ ಯಾವುದೇ ತಂಡಕೂಡ ಭಾಗವಹಿಸಬಹುದು

ಶಿವಮೊಗ್ಗ: ಶಿವಮೊಗ್ಗ ನಗರ ಟೀಮ್ ಮಾಧ್ಯಮ ಇವರ ಆಶ್ರಯದಲ್ಲಿ ಜನವರಿ 26,27,28 ರಂದು ನಗರದ ಶ್ರೀ ಶಾರದದೇವಿ ಅಂಧರ ವಿಕಾಸ ಶಾಲಾ ಕ್ರೀಡಾಂಗಣದಲ್ಲಿ ಅಂತರ ಜಿಲ್ಲಾ ಮಟ್ಟದ ಕ್ರಿಕೆಟ್ ( ರಾಜ್ಯದ ಯಾವುದೇ ತಂಡಕೂಡ ಭಾಗವಹಿಸಬಹುದು ) ಪಂದ್ಯಾವಳಿಯನ್ನು ಆಯೋಜಿಸಲಾಗಿದೆ. ಈ ಪಂದ್ಯಾವಳಿಯಲ್ಲಿ ಕೆಲವು ಜಿಲ್ಲೆಯ ಶ್ರೇಷ್ಠ ಕ್ರಿಕೆಟ್ ತಂಡಗಳು ಮತ್ತು ಶ್ರೇಷ್ಠ ಆಟಗಾರರು ಭಾಗವಹಿಸಲಿದ್ದಾರೆ. ಈ ಪಂದ್ಯಾವಳಿಯಲ್ಲಿ ಪ್ರಥಮ ಸ್ಥಾನವನ್ನು ಪಡೆದಂತಹ ತಂಡಕ್ಕೆ 50.000 ಸಾವಿರ ನಗದು ಮತ್ತು ಅತ್ಯಾಕರ್ಷಕ ಟ್ರೋಪಿ,ಎರಡನೇ ಸ್ಥಾನವನ್ನು ಗಳಿಸಿದ ತಂಡಕ್ಕೆ 25.000 ಸಾವಿರ ನಗದು ಮತ್ತು ಅತ್ಯಾಕರ್ಷಕ ಟ್ರೋಫಿ ಹಾಗೂ ಸೆಮಿಫೈನಲ್ಸ್ ಹಂತದಲ್ಲಿ ಸೊತಂತಹ ಎರಡು ತಂಡಗಳಿಗೆ ತಲಾ 7,000 ಸಾವಿರ ನಗದು ಮತ್ತು ಟ್ರೋಫಿಯನ್ನು ನೀಡಲಾಗುತ್ತದೆ.ಪ್ರತಿಯೊಂದು ಪಂದ್ಯಕ್ಕೂ ಪಂದ್ಯದ ಪುರುಷೋತ್ತಮ ಪ್ರಶಸ್ತಿಯನ್ನು ನೀಡಲಾಗುವುದು ಇನ್ನುಳಿದಂತೆ ಈ ಪಂದ್ಯಾವಳಿಯಲ್ಲಿ ಸರಣಿಯ ಶ್ರೇಷ್ಠ ಆಟಗಾರನಿಗೆ 3000 ಸಾವಿರ ನಗದು ಮತ್ತು ಆಕರ್ಷಕ ಟ್ರೋಫಿಯನ್ನು ನೀಡಲಾಗುವುದು ,ಶ್ರೇಷ್ಠ ಬ್ಯಾಟ್ಸ್‌ಮನ್, ಶ್ರೇಷ್ಠ ಬೌಲಿಂಗ್ ಮತ್ತು ಶ್ರೇಷ್ಠ ಕೀಪರ್ ಹಾಗೂ ಉತ್ತಮ ಫೀಲ್ಡರ್ ಪ್ರಶಸ್ತಿಯ ಜೊತೆಗೆ 2000 ಸಾವಿರ ರೂಪಾಯಿ ನಗದಿನ ಜೋತೆಗೆ ಟ್ರೋಫಿಯನ್ನು ನೀಡಲಾಗುವುದು,
ಈ ಪಂದ್ಯಾವಳಿಯಲ್ಲಿ ಮೊದಲು ಹೆಸರು ನೊಂದಯಿಸಿಕೊಳ್ಳುವ ತಂಡಕ್ಕೆ ಮೊದಲ ಆದ್ಯತೆ. ಇನ್ನೂ ಈ ಟೂರ್ನಿಯಲ್ಲಿ ಭಾಗವಹಿಸುವ ಪ್ರತಿತಂಡಕ್ಕೂ 5,000 ಸಾವಿರ ರೂಪಾಯಿ ಪ್ರವೇಶ ಶುಲ್ಕವಿರುತ್ತದೆ.ಯಾವುದೇ ತಂಡಕ್ಕೂ ಊಟ ವಸತಿ ಸೌಕರ್ಯ ಇರುವುದಿಲ್ಲ. ಭಾಗವಹಿಸುವ ತಂಡಗಳು ನಿಗದಿತ ಸಮಯಕ್ಕಿಂತ ಹದಿನೈದು ನಿಮಿಷ ಮುಂಚಿತವಾಗಿ ಮೈದಾನದಲ್ಲಿ ಇರತಕ್ಕದ್ದು. ನಿಗದಿತ ಸಮಯಕ್ಕಿಂತ ತಡವಾಗಿ ಬಂದಂತಹ ತಂಡವನ್ನು ಆಡಿಸಲಾಗುವುದಿಲ್ಲ. ಸರಿಯಾದ ಸಮಯಕ್ಕೆ ಬಂದು ನೊಂದಾಯಿಸಿಕೊಂಡ ತಂಡಕ್ಕೆ ವಾಕ್ಓವರ್ ನೀಡಲಾಗುವುದು. ಉಳಿದಂತೆ ಪ್ರತಿಯೊಂದು ಪಂದ್ಯದಲ್ಲಿ ಪ್ರತಿ ತಂಡಕ್ಕೆ ಆರು ಓವರ್ ಸೀಮಿತವಾಗಿರುತ್ತದೆ, ಅಂಪೈರ್ ತೀರ್ಮಾನವೆ ಅಂತಿಮವಾಗಿರುತ್ತದೆ.
ಈ ಟೂರ್ನಮೆಂಟ್ ಈ ಪಂದ್ಯಾವಳಿಯಲ್ಲಿ ಶ್ರೇಷ್ಠ ಮಟ್ಟದ ತೀರ್ಪುಗಾರರು ಮತ್ತು ವೀಕ್ಷಕ ವಿವರಣೆ ಗಾರರು ಕಾರ್ಯನಿರ್ವಹಿಸಲಿದ್ದಾರೆ, ಈ ಪಂದ್ಯಾವಳಿಯನ್ನು ಅದ್ದೂರಿಯಾಗಿ ನೆಡೆಸಲು ಟೀಮ್ ಮಾಧ್ಯಮದ ಸದಸ್ಯರು ರೂಪುರೇಷೆಗಳನ್ನು ಸಿದ್ಧಪಡಿಸಿಕೊಂಡಿದ್ದು. ಈ ಒಂದು ಪಂದ್ಯಾವಳಿಯು ಬರಲಿರುವ ಏಪ್ರಿಲ್ ತಿಂಗಳಲ್ಲಿ ಅದ್ದೂರಿಯಾಗಿ ‌ನೆಡೆಸಲಿರುವ ರಾಷ್ಟ್ರಮಟ್ಟದ ಟೆನ್ನಿಸ್ ಬಾಲ್ ಕ್ರಿಕೆಟ್ ಟೂರ್ನಮೆಂಟಿನ ಪ್ರಾಯೋಗಿಕ ಪಂದ್ಯಾವಳಿ ಆಗಿರುತ್ತದೆ.ಈ ಟೂರ್ನಿಯಲ್ಲಿ ಅಂತಿಮ ಘಟ್ಟ ತಲುಪಿದಂತಹ ನಾಲ್ಕು ತಂಡಗಳಿಗೆ ರಾಷ್ಟ್ರಮಟ್ಟದ ಟೂರ್ನಿಗೆ ಆಡುವ ಅವಕಾಶ ಇರುತ್ತದೆ ( ಪ್ರವೇಶ ಶುಲ್ಕವಿರಿತ್ತದೆ ) ಮೂರು ದಿನಗಳ ಕಾಲ ಅದ್ದೂರಿಯಾಗಿ ನೆಡೆಯುವ ಈ ಅಂತರ ಜಿಲ್ಲಾ ಮಟ್ಟದ ಪಂದ್ಯಾವಳಿಯ ಕ್ರೀಡಾಂಗಣದ ಬೌಂಡರಿಯ ಸೀಮಾ ರೇಖೆಯ ಸುತ್ತ ಜಾಹೀರಾತು ಬ್ಯಾನರ್ ಗಳನ್ನು ಅಳವಡಿಸಲಾಗುದು ಒಂದು ಬ್ಯಾನರ್ ಅಳವಡಿಸಲು 2000 ಸಾವಿರ ರೂಪಾಯಿ ಶುಲ್ಕವಿರುತ್ತದೆ ಬ್ಯಾನರ್ ಗಳನ್ನು ಸಂಭಂದಪಟ್ಟವರೆ ನೀಡಬೇಕಾಗುತ್ತದೆ.
ಟೆನ್ನಿಸ್ ಬಾಲ್ ಕ್ರಿಕೆಟ್ ಪ್ರೇಮಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಒಂದು ಪಂದ್ಯಾವಳಿಯನ್ನು ಯಶಸ್ವಿಯಾಗಿ ನೆರವೇರಿಸಲು ಸಹಕರಿಸ ಬೇಕಾಗಿ ತಮ್ಮಲ್ಲಿ ಟೀಮ್ ಮಾಧ್ಯಮದ ಸರ್ವ ಸದಸ್ಯರು ವಿನಂತಿಸಿದ್ದಾರೆ.

ವಿಶೇಷ ಸೂಚನೆ : ಪಂದ್ಯಾವಳಿಯಲ್ಲಿ “ತ್ರೊ ಬೌಲರ್ ,ಅಂಡರ್ ಅರ್ಮ್ ಬೌಲರ್ ಗಳಿಗೆ ಆವಕಾಶ ಇರುವುದಿಲ್ಲ, ರೌಂಡ್ ಅರ್ಮ್ ಬೌಲರ್ ಗಳಿಗಷ್ಟೆ ಆವಕಾಶ ಅಂಪೈರ್ ತೀರ್ಮಾನವೆ ಅಂತಿಮವಾಗಿರುತ್ತದೆ

ಹೆಚ್ಚಿನ ಮಾಹಿತಿ ಮತ್ತು ತಂಡದ ನೊಂದಣಿಗಾಗಿ ಈ ಕೆಳಗಿನ ವಿಳಾಸ ಮತ್ತು ಪೋನ್ ನಂಬರ್ ಗಳಿಗೆ ಕರೆಮಾಡಿ.

ಸುಧೀರ್ ಕುಮಾರ್ ಎಸ್ ವೈ, – 94831659999,

ಚಂದ್ರಶೇಖರ್ ಜಿ 9845484824 ,

ಶಿ ಜು‌ ಪಾಶ – 8050112067 ,

ಎಸ್ ಕೆ ಗಜೇಂದ್ರ ಸ್ವಾಮಿ – 9448256183

ಜಿ ಪದ್ಮನಾಭ್ – 9448628131

ಕಛೇರಿ ವಿಳಾಸ:

ಸತ್ಯಂ ಕಾಂಪ್ಲೆಕ್ಸ್ , ಶಾಪ್ ನಂಬರ್ – 03, NU ಆಸ್ಪತ್ರೆ ಹತ್ತಿರ, ಕುವೆಂಪು ರಸ್ತೆ , ಶಿವಮೊಗ್ಗ – 577201
ಫೋನ್ – 7760532474

Leave a Reply

Your email address will not be published. Required fields are marked *

Optimized by Optimole
error: Content is protected !!