ಕಳೆದ ಮೂರುದಿನಗಳ ಹಿಂದೆ ನೆಡೆದ ಶಶಿಕುಮಾರ್ ಅಲಿಯಾಸ್ ಶಶಿ ಎಂಬಾತನ ಮೇಲೆ ನಗರದ ಹಳೆಯ ಜೈಲ್ ಅವರಣದ ( ಫ್ರೀಡಮ್ ಪಾರ್ಕ್ ) ವಾಕಿಂಗ್ ಪಾತ್ ನಲ್ಲಿ ಹೋಗುತ್ತಿದ್ದವನ ಮೇಲೆ ಐವರು ಆರೋಪಿಗಳ ತಂಡ ಏಕಾಏಕಿ ಲಾಂಗ್ ಇತರೆ ಆಯುಧದಿಂದ ಮಾರಣಾಂತಿಕ ಹಲ್ಲೆ ನೆಡೆಸಿ ಶಶಿ ಸತ್ತಿರ ಬಹುದೆಂದು ತಿಳಿದು ಸ್ಥಳದಿಂದ ಪರಾರಿಯಾಗಿದ್ದರು.ಹೇಗೂ ಆಟೋ ಚಾಲಕನೊಬ್ಬನ ಸಹಾಯದಿಂದ ಆಸ್ಪತ್ರೆಗೆ ದಾಖಲಾಗಿದ್ದ ಶಶಿ ಬದುಕುಳಿದಿದ್ದಾನೆ.ಎಸ್ಕೇಪ್ ಆಗಿದ್ದ ಆರೋಪಿಗಳ ಪೈಕಿ ಮಂಜುನಾಥ್ ಅಲಿಯಾಸ್ ಓಲಂಗನನ್ನು ನಿನ್ನೆ ಬಂಧಿಸಲಾಗಿತ್ತು ಇತನ ಬಂಧನದ ನಂತರದಲ್ಲಿ ದಕ್ಷ ಅಧಿಕಾರಿ ಇನ್ಸ್‌ಪೆಕ್ಟರ್ ಸಿದ್ಧನಗೌಡ ಮತ್ತು ಪೋಲಿಸರ ತಂಡ ಆರೋಪಿ ಓಲಂಗನನ್ನು ಕರೆದುಕೊಂಡು ಹಲ್ಲೆಗೆ ಬಳಸಿದಂತಹ ಆಯುಧಗಳನ್ನು ವಶಪಡಿಸಿಕೊಳ್ಳಲು ಇಂದು ಬೆಳಿಗ್ಗೆ ಆತನನ್ನು ಕರೆದುಕೊಂಡು ಹೋಗಿದ್ದಾರೆ. ಅ ಸಂದರ್ಭದಲ್ಲಿ ಆರೋಪಿ ಓಲಂಗ ಅಲ್ಲಿದ್ದ ಅಯುಧದಿಂದ ಪೋಲಿಸರ ಮೇಲೆ ದಾಳಿಮಾಡಿದ್ದಾನೆ ಈ ದಾಳಿಯ ಸಮಯದಲ್ಲಿ ಪೋಲಿಸ್ ಸಿಬ್ಬಂದಿಗಳಾದ ರವಿ ಮತ್ತು ಇನ್ನೊಬ್ಬರಿಗೆ ಗಾಯ ವಾಗಿದೆ ಕೂಡಲೇ ಎಚ್ಚೇತ್ತುಗೊಂಡ ಇನ್ಸ್‌ಪೆಕ್ಟರ್ ಸಿದ್ಧನಗೌಡ ಅವರು ತಮ್ಮ ಸರ್ವಿಸ್ ರಿವಲ್ವಾರ್ ನಿಂದ ಗಾಳಿಯಲ್ಲಿ ಗುಂಡುಹಾರಿಸಿ ಆರೋಪಿ ಓಲಂಗನಿಗೆ ಎಚ್ಚರಿಕೆ ನೀಡಿದ್ದಾರಂತೆ, ಎಷ್ಟೇ ಹೇಳಿದರು ಕೇಳದ ಆರೋಪಿ ಮತ್ತೆ ಪೋಲಿಸರ ಮೇಲೆ ಹಲ್ಲೆಗೆ ಮುಂದಾಗಿದ್ದನಂತೆ ತಕ್ಷಣವೇ ತಮ್ಮ ಸಿಬ್ಬಂದಿಗಳ ಆತ್ಮ ರಕ್ಷಣೆಗೊಸ್ಕರ ಸಿದ್ಧನಗೌಡ ಅವರು ಆರೋಪಿಯ ಕಾಲಿಗೆ ಗುಂಡು ತೂರಿಸಿದ್ದಾರೆ ಎಂದು ತಿಳಿದು ಬಂದಿದೆ.
ಗಾಯಗೊಂಡ ಆರೋಪಿ ಓಲಂಗನನ್ನು ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ.
ಈ ಒಂದು ಪ್ರಕರಣದಿಂದ ಪಾತಕಲೋಕ ನಟೋರಿಯಸ್ ರೌಡಿಗಳು ನಡುಗಿಹೋಗಿದ್ದಾರೆ.
ಇನ್ನಷ್ಟು ವರದು ನಿರೀಕ್ಷಿಸಿ….