ಕನ್ನಡದ ಹೆಸರಾಂತ ಹಿರಿಯ ಸಾಹಸ ನಿರ್ದೇಶಕ ಜಾಲೀ ಬಾಸ್ಟಿನ್ ಹೃದಯಾಘಾತಕ್ಕೆ ಬಲಿ.! ಮತ್ತು ತಮಿಳು ಚಿತ್ರರಂಗದ ಹಿರಿಯ ಖ್ಯಾತ ನಟ ವಿಜಯಕಾಂತ್ ಕೋವಿಡ್‌ಗೆ ಬಲಿ.!!

ತಮಿಳು ಚಿತ್ರರಂಗದ ಹಿರಿಯ ಖ್ಯಾತ ನಟ ವಿಜಯಕಾಂತ್ ಕೋವಿಡ್‌ಗೆ ಬಲಿ.!!

ತಮಿಳು ಚಿತ್ರರಂಗದ ಹಿರಿಯ ಖ್ಯಾತ ನಟ ವಿಜಯಕಾಂತ್ ಕೋವಿಡ್‌ಗೆ ಬಲಿ.!!

news.ashwasurya.in

ತಮಿಳು ಚಿತ್ರರಂಗದ ಹಿರಿಯ ಖ್ಯಾತ ನಟ, ಡಿಎಂಡಿಕೆ ಪಕ್ಷದ ನಾಯಕ ವಿಜಯಕಾಂತ್ ಅವರು
ಅನಾರೋಗ್ಯದ ಹಿನ್ನಲೆಯಲ್ಲಿ ನಿಧನರಾಗಿದ್ದಾರೆ. ಕೋವಿಡ್‌ನಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.   ಕೋವಿಡ್ ಇರುವುದು ಖಚಿತವಾದ ಕಾರಣಕ್ಕೆ ಅವರನ್ನು ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು.ಅವರಿಗೆ ಸುಮಾರು 71 ವರ್ಷ ವಯಸ್ಸಾಗಿತ್ತು.

 
ನಟ ವಿಜಯಕಾಂತ್ ನಿಧನಕ್ಕೆ ತಮಿಳು ಚಿತ್ರರಂಗದ ಗಣ್ಯರು, ರಾಜಕೀಯ ನಾಯಕರು, ಅಭಿಮಾನಿಗಳು ಶೋಕ ವ್ಯಕ್ತಪಡಿಸಿದ್ದಾರೆ.
1952ರಲ್ಲಿ ಆಗಸ್ಟ್ 25 ರಂದು ಜನಿಸಿದ ವಿಜಯಕಾಂತ್ ಮೂಲ ಹೆಸರು ನಾರಾಯಣ ವಿಜಯರಾಜ ಅಲಗರಸ್ವಾಮಿ, ಒಬ್ಬ ಸಾಮಾನ್ಯ ಆಟೋ ಚಾಲಕರಾಗಿದ್ದ ವಿಜಯಕಾಂತ್ ಅವರನ್ನು ಒಳ್ಳೆಯ ನಟನಾಗಬಹುದೆಂದು ಗುರುತಿಸಿದ್ದು ಭಾರತ ಚಿತ್ರರಂಗದ ಹೆಸರಾಂತ ನಿರ್ದೇಶಕ ಕೆ ಬಾಲಚಂದರ್ ಅವರು.ಇವರು ತಮ್ಮ ಚಿತ್ರದಲ್ಲಿ ಅವಕಾಶ ಕೊಟ್ಟು ತಮಿಳು ಚಿತ್ರರಂಗದ ದೊಡ್ಡನಟನಾಗಲು ಕಾರಣಕರ್ತರಾದರು. ಮುಂದೆ ವಿಜಯಕಾಂತ್‌ ಹೆಸರಿನಿಂದಲೇ ಬಹುಬೇಡಿಕೆಯ ನಟನಾಗಿ ಅಸಂಖ್ಯಾತ ಅಭಿಮಾನಿ ಬಳಗವನ್ನು ಹೊಂದಿದ್ದರು. 2011ರಿಂದ 2016ರವರೆಗೆ ತಮಿಳುನಾಡು ವಿಧಾನಸಭೆಯಲ್ಲಿ ವಿರೋಧ ಪಕ್ಷದ ನಾಯಕರಾಗಿಯೂ ಕಾರ್ಯನಿರ್ವಹಿಸಿದ್ದರು. ಬರೀ ನಟನೆ ಮಾತ್ರವಲ್ಲದೇ ಸಿನಿಮಾ ನಿರ್ಮಾಣ, ನಿರ್ದೇಶನದಲ್ಲೂ ಕೆಲಸ ಮಾಡಿದ್ದರು.1979ರಲ್ಲಿ ತೆರೆಕಂಡ ಇನಿಕ್ಕುಂ ಇಳಮೈ ಸಿನಿಮಾದಲ್ಲಿ ಕಳನಾಯಕನ ಪಾತ್ರ ಮಾಡುವ ಮೂಲಕ ತಮಿಳು ಸಿನಿಮಾರಂಗಕ್ಕೆ ಕಾಲಿರಿಸಿದ ವಿಜಯಕಾಂತ್ ತಾನೊಬ್ಬ ಮಹಾನ್‌ ನಟ ಎನ್ನುವುದನ್ನು ತಮ್ಮ ನಟನೆಯಿಂದಲೆ ಸಾಭಿತು ಪಡಿಸಿದ್ದರು.ಈಗ ಕೊವಿಡ್ ಗೆ ತುತ್ತಾಗಿ ಭಾರತ ಚಿತ್ರರಂಗದಿಂದ ದೂರಾಗಿದ್ದಾರೆ ವಿಜಯಕಾಂತ್

—————————————

ಕನ್ನಡದ ಹೆಸರಾಂತ ಹಿರಿಯ ಸಾಹಸ ನಿರ್ದೇಶಕ ಜಾಲೀ ಬಾಸ್ಟಿನ್ ಹೃದಯಾಘಾತಕ್ಕೆ.!

ಕನ್ನಡದ ಹೆಸರಾಂತ ಹಿರಿಯ ಸಾಹಸ ನಿರ್ದೇಶಕ ಜಾಲೀ ಬಾಸ್ಟಿನ್ ಹೃದಯಾಘಾತಕ್ಕೆ.!

ನಟ ರವಿಚಂದ್ರನ್ ಅವರ ಚಿತ್ರದ ಮೂಲಕ ಚಿತ್ರರಂಗವನ್ನು ಪ್ರವೇಶಿಸಿದ ಕನ್ನಡ ಚಿತ್ರರಂಗದ ಜನಪ್ರಿಯ ಸಾಹಸ ನಿರ್ದೇಶಕರಲ್ಲಿ ಒಬ್ಬರಾಗಿದ್ದ ಜಾಲಿ ಬಾಸ್ಟಿನ್‌ ಹೃದಯಾಘಾತಕ್ಕೆ ಬಲಿಯಾಗಿದ್ದಾರೆ.ಅವರಿಗೆ ಇನ್ನೂ 57 ವರ್ಷ ವಯಸ್ಸಾಗಿತ್ತು. ದಕ್ಷಿಣ ಭಾರತದ ಸಿನಿಮಾಗಳಲ್ಲಿ ಸಾಹಸ ನಿರ್ದೇಶಕರಾಗಿ ಗುರುತಿಸಿಕೊಂಡಿದ್ದ ಇವರು ಭಾರತೀಯ ಚಿತ್ರರಂಗದಲ್ಲಿ ಸಾಕಷ್ಟು ಹೆಸರು ಮಾಡಿದ್ದರು. ಇವರ ಅಕಾಲಿಕ ನಿಧನಕ್ಕೆ ಸಂಪೂರ್ಣ ಕನ್ನಡ ಚಿತ್ರರಂಗ ಸಂತಾಪ ವ್ಯಕ್ತಪಡಿಸಿದೆ. 
ಕನ್ನಡ, ತಮಿಳು, ತೆಲುಗು ಭಾಷೆಗಳಲ್ಲಿ 900ಕ್ಕೂ ಹೆಚ್ಚು ಸಿನಿಮಾಗಳಿಗೆ ಇವರು ಸ್ಟಂಟ್‌ ಮಾಸ್ಟರ್‌ ಆಗಿ ಕಾರ್ಯನಿರ್ವಹಿಸಿ ಜನಪ್ರಿಯತೆ ಗಳಿಸಿದ್ದರು, ಕ್ರಿಸ್‌ಮಸ್‌ ದಿನದಂದು ಸೋಷಿಯಲ್‌ ಮೀಡಿಯಾದಲ್ಲಿ ಮೇರಿ ಕ್ರಿಸ್‌ಮಸ್‌ ಎಂದು ತನ್ನ ಕುಟುಂಬದವರ ಜತೆ ಫೋಟೋ ಒಂದನ್ನು ಹಾಕಿದ್ದರು.ಅಂದು ಎಲ್ಲರೊಂದಿಗೆ ಲವಲವಿಕೆಯಿಂದ ಇದ್ದ ಜಾಲಿ ಬಾಸ್ಟಿನ್‌ ಅವರು ಡಿಸೆಂಬರ್‌ 26ರಂದು ಹಠಾತ್‌ ಹೃದಯಸ್ತಂಭನದಿಂದ ಮೃತಪಟ್ಟಿದ್ದಾರೆ.!! ಹೆಸರಾಂತ ಚಿತ್ರಗಳಾದ
ಪುಟ್ನಂಜ, ಆಪರೇಷನ್‌ ಜಾವಾ, ಒರು ಸಿನೆಮಕ್ಕರನ್‌, ಬೆಂಗಳೂರು ಡೇಸ್‌, ಕ್ರೇಜಿಸ್ಟಾರ್‌, ಸೂಪರ್‌ ರಂಗ, ಸ್ಟೈಲೊ, ಅರಮನೆ, ಗಾಳಿಪಟ, ಸೈಲೆನ್ಸ್‌, ಓವರ್‌ಟೇಕ್‌
ಸಲಗ, ಪಾಪ್‌ಕಾರ್ನ್‌ ಮಂಕಿ ಟೈಗರ್‌, ಅಣ್ಣಯ್ಯ, ನಟ್ಟುಕ್ಕು ಒರು ನಾಲವನ್‌, ಸೇರಿದಂತೆ ಇನ್ನಷ್ಟೂ ಸಿನಿಮಾಗಳಿಗೆ ಇವರು ಸಾಹಸ ನಿರ್ದೇಶಕರಾಗಿ ಕೆಲಸ ಮಾಡಿದ್ದಾರೆ, ಇವರು 24 ಇವೆಂಟ್ಸ್‌ ಎಂಬ ಇವೆಂಟ್‌ ಮ್ಯಾನೇಜ್‌ಮೆಂಟ್‌ ಕಂಪನಿಯನ್ನೂ ಹೊಂದಿದ್ದರು. 


ಇವರು ಹಾಡುಗಾರ ಕೂಡ. ತನ್ನದೇ ಆರ್ಕೆಸ್ಟ್‌ ಗ್ರೂಪ್‌ ಹೊಂದಿದ್ದ ಇವರು ತಾವೇ ಲೀಡ್‌ ಸಿಂಗರ್‌ ಆಗಿ ಹಾಡುತ್ತಿದ್ದರು. ಅಲೆಪ್ಪಿಯಲ್ಲಿ 1966ರ ಸೆಪ್ಟೆಂಬರ್‌ 24ರಂದು ಜನಿಸಿದರು. ಇವರು ಬೆಳೆದದ್ದು ಬೆಂಗಳೂರಿನಲ್ಲಿ. ಬೆಂಗಳೂರಿನ ಸೇಂಟ್‌ ಪ್ಯಾಟ್ರಿಕ್‌ನಲ್ಲಿ ವಿದ್ಯಾಭ್ಯಾಸ ಮಾಡಿದ್ದಾರೆ. ಇವರ ತಂದೆ ಮತ್ತು ತಾತಾ ಮೆಕ್ಯಾನಿಕ್‌ ಆಗಿದ್ದರು. ಇವರು ಕೂಡ ಮೆಕ್ಯಾನಿಕ್‌ ಆಗಿಯೇ ವೃತ್ತಿ ಜೀವನ ಆರಂಭಿಸಿದವರು ನಂತರ ಸಾಹಸ ನಿರ್ದೇಶಕರಾದರು, 

ಬೈಕ್‌ ಮೆಕ್ಯಾನಿಕ್‌ ಆಗಿದ್ದ ಇವರಿಗೆ ಬೈಕ್‌ ವೀಲಿಂಗ್‌ ಪ್ಯಾಷನ್‌ ಇತ್ತು. ಇವರ ಪ್ರತಿಭೆ, ಸಾಹಸವನ್ನು ಸಿನಿಮಾ ರಂಗದವರು ಗುರುತಿಸಿದರು. ಸ್ಟಂಟ್‌ಮ್ಯಾನ್‌ ಆಗಿ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ನೀಡಿದ್ದರು. ಇವರು ಕನ್ನಡದ ಸೂಪರ್ ಹಿಟ್ ಪ್ರೇಮಲೋಕ ಸಿನಿಮಾದಲ್ಲಿ ರವಿಚಂದ್ರನ್‌ ಡ್ಯೂಪ್‌ ಆಗಿ ತನ್ನ ಸಿನಿಮಾ ಸ್ಟಂಟ್‌ ವೃತ್ತಿ ಬದುಕನ್ನು ಆರಂಭಿಸಿದ್ದರು. ಇನ್ನು ಇವರ ಸಾವಿಗೆ ದಕ್ಷಿಣ ಭಾರತದ ಚಿತ್ರರಂಗವೆ ಕಂಬನಿ ಮಿಡಿದಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!