ಜಟ್ ಪಟ್ ನಗರದ ನಿವಾಸಿ ಸಿಸ್ಯ ಶಶಿ ಮೇಲಿನ ಅಟ್ಯಾಕ್ ಪ್ರಕರಣದ ಆರೋಪಿ ಮಂಜುನಾಥ ಅಲಿಯಾಸ್ ಓಲಂಗ ಪೋಲಿಸರಿಗೆ ಶರಣಾದನ!?

Continuing news……

ಜಟ್ ಪಟ್ ನಗರದ ನಿವಾಸಿ ಸಿಸ್ಯ ಶಶಿ ಮೇಲಿನ ಅಟ್ಯಾಕ್ ಪ್ರಕರಣದ ಆರೋಪಿ ಮಂಜುನಾಥ ಅಲಿಯಾಸ್ ಓಲಂಗ ಜಯನಗರ ಠಾಣೆ ಪೋಲಿಸರಿಗೆ ಶರಣಾದನ!?

ಕಳೆದೆರಡು ದಿನದ ಹಿಂದೆ ಜಟ್ ಪಟ್ ನಗರದ ನಿವಾಸಿ ಶಶಿ‌ಕುಮಾರ್ ಅಲಿಯಾಸ್ ಸಿಸ್ಯಾ ಶಶಿ ಎಂಬ ಯುವಕನ ಮೇಲೆ ರೌಡಿಶೀಟರ್ ಗಳಾದ ಮಂಜುನಾಥ ಅಲಿಯಾಸ್ ಓಲಂಗ, ಮಂಜುನಾಥ ಅಲಿಯಾಸ್ ನೆಪಾಳಿ ಮಂಜ ಹಾಗೂ ನವೀನ್,ಗ್ಯಾಸ್ ಅನೀಲ ಮತ್ತು ವಿನಯ್ ಎನ್ನುವವರ ಐವರ ತಂಡ ಶಿವಮೊಗ್ಗ ನಗರದ ಜನನಿಬಿಡ ಪ್ರದೇಶದವಾದ ಹಳೆಯ ಜೈಲ್ ಅವರಣ ( ಫ್ರೀಡಮ್ ಪಾರ್ಕ್ )ದಲ್ಲಿ ವಾಕಿಂಗ್ ಪಾತ್ ನಲ್ಲಿ ನಿಂತಿದ್ದ ಶಶಿಯ ಮೇಲೆ ಮಾರಣಾಂತಿಕ ಹಲ್ಲೆ ನೆಡೆಸಿದ್ದಾರೆ ಲಾಂಗಿನೇಟಿಗೆ ನಿಂತ ಸ್ಥಳದಲ್ಲಿಯೇ ರಕ್ತದ ಕೊಡಿಹರಿದು ಕುಸಿದು ಬಿದ್ದಿದ್ದಾನೆ ಶಶಿ.! ಇನ್ನೇನು ನಮ್ಮ ಅಟ್ಯಾಕ್ ಗೆ ಶಶಿ ಸತ್ತಿದ್ದಾನೆ ಎಂದು ಎಸ್ಕೇಪ್ ಆಗಿದ್ದರೆ ಓಲಂಗ & ಗ್ಯಾಂಗ್ ಅಲ್ಲಿ ತಕ್ಷಣವೇ ಜನ ಸೇರಿದ್ದಾರೆ ಹೊರತು ಸಾವು ಬದುಕಿನೋಡನೆ ಹೋರಾಡುತ್ತಿದ್ದ ಶಶಿಯನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನ ಯಾರು ಮಾಡಲಿಲ್ಲ. ಅಲ್ಲಿ ಸೇರಿದ್ದವರಲ್ಲಿ ಮಾನವಿಯತೆ ಮರೆತ ಕೆಲವು ಮಂದಿ ರಕ್ತದ ಮಡುವಿನಲ್ಲಿ ಒದ್ದಾಡುತ್ತಿದ್ದ ಶಶಿಯ ವಿಡಿಯೋ ತೆಗೆದು ಸಾಮಾಜಿಕ ಜಾಲತಾಣದಲ್ಲಿ ಆಫ್ ಲೋಡ್ ಮಾಡಿ ಮತ್ತದೆ ವಿಕೃತಿ ಮೇರೆದಿದ್ದಾರೆ ಅದೇನೊ ಶಶಿ ಮಾಡಿದ ಪುಣ್ಯವೋ ಆಟೋ ಡ್ರೈವರ್ ಒಬ್ಬರು ಅಲ್ಲಿಗೆ ನೋಡಲು ಹೋಗಿದ್ದಾರೆ.ತಕ್ಷಣವೇ ಎಚ್ಚುತ್ತು ಕೊಂಡ ಆತ ಒಂದಿಬ್ಬರ ಸಹಾಯದಿಂದ ಶಶಿಯನ್ನು ಆಟೋದಲ್ಲಿ ಹಾಕಿಕೊಂಡು ಹೋಗಿ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಮಾನವೀಯತೆ ಮೇರೆದಿದ್ದಾರೆ. ಆಸ್ಪತ್ರೆ ವೈದ್ಯರುಗಳು ಕೂಡ ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿ ತಕ್ಷಣವೇ ಆತನನ್ನು ಆಪರೇಷನ್ ಥೀಯೆಟರಿಗೆ ಕರೆದುಕೊಂಡು ಹೋಗಿ ಚಿಕಿತ್ಸೆ ನೀಡಿದ್ದಾರೆ, ಮೈಯಲ್ಲಿದ್ದ ರಕ್ತವೆಲ್ಲಾ ಬಸಿದು ಇನ್ನೇನು ಉಸಿರು ಚಲ್ಲಬೇಕಿತ್ತು ಆತನ ದೇಹದಲ್ಲಿ ಕೇವಲ ಎರಡು ಲೀಟರ್ ಬ್ಲಡ್ ಇತ್ತು ತಕ್ಷಣವೇ ಆತನ ಸ್ನೇಹಿತರು ಮತ್ತು ಬಂಧು ಬಳಗದವರ ಸಹಕಾರದಿಂದ ಒಂಬತ್ತು ಬಾಟಲ್ ರಕ್ತವನ್ನು ನೀಡಿ ಸಾವಿನಮನೆ ಕದ ತಟ್ಟುತ್ತಿದ್ದವನನ್ನು ಬದುಕುಳಿಸಿದ್ದಾರೆ.!! ಎನ್ನುವ ವಿಷಯ ಆಸ್ಪತ್ರೆಯ ಮೂಲಗಳಿಂದ ತಿಳಿದು ಬಂದಿದೆ. ಈಗ ಶಶಿ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ out of Danger ಇನ್ನಷ್ಟು ಸುಧಾರಿಸ ಬೇಕಿದೆ. ಮಾತಿಲ್ಲ ಎನ್ನುವುದನ್ನು ಬಿಟ್ಟರೆ ಕೈ ಸನ್ನೆಯಲ್ಲಿ ಹೇಳುವ ಪ್ರಯತ್ನ ಮಾಡುತ್ತಾನೆ.ಇತನಿಗೆ ಡಬ್ಬಲ್ ಗುಂಡಿಗೆ ಇದ್ದಕಾರಣಕ್ಕೆ ಬದುಕುಳಿದಿದ್ದಾನೆ ಎನ್ನಬಹುದು!! ಆ ಮಟ್ಟದ ಅಟ್ಯಾಕ್ ಓಲಂಗ ಟೀಮ್ ಮಾಡಿತ್ತು.
ಈ ಪ್ರಕರಣಕ್ಕೆ ಸಂಬಂದಿಸಿದಂತೆ ಪೋಲಿಸರ ತಂಡ ಅಂದೆ ಈ ಪ್ರಕರಣದಲ್ಲಿದ್ದ ಗ್ಯಾಸ್ ಅನಿಲನನ್ನು ಕೆಡವಿಕೊಂಡಿದ್ದರು.ಇನ್ನೂಳಿದವರ ಬಂಧನಕ್ಕಾಗಿ ಭಲೇ ಬಿಸಿದ್ದರು. ಬಲ್ಲ ಮೂಲಗಳ ಪ್ರಕರ ಇಂದು ಮಧ್ಯಾಹ್ನದ ವೇಳೆಗೆ ಮಂಜುನಾಥ ಅಲಿಯಾಸ್ ಓಲಂಗ ಜಯನಗರ ಪೋಲಿಸರಿಗೆ ಶರಣಾಗಿದ್ದಾನಂತೆ!? ಇನ್ನೂಳಿದವರ ಬೇಟೆಗೆ ಪೋಲಿಸರ ತಂಡ ಮುಂದಾಗಿದೆ. ಇತ್ತೀಚೆಗೆ ಜಿಲ್ಲೆಯಲ್ಲಿ ರೌಡಿಗಳ ಹಾವಳಿ ಹೆಚ್ಚಾಗಿದ್ದು ನಿತ್ಯ ಅಕ್ರಮ ಚಟುವಟಿಕೆಗಳಲ್ಲಿ ಭಾಗಿಯಾಗಿದ್ದರೆ.ಪೋಲಿಸರು ಕೂಡ ಮಾರಣಾಂತಿಕ ಹಲ್ಲೆ ಮತ್ತು ಭದ್ರಾವತಿಯ ಹತ್ಯೆ ಪ್ರಕರಣಕ್ಕೆ ಸಂಭಂದಪಟ್ಟಂತೆ ದುಷ್ಕರ್ಮಿಗಳನ್ನು ಠಾಣೆಗೆ ಕರೆತಂದು ಪ್ರಕರಣ ದಾಖಲಿಸಿಕೊಂಡು ಜೈಲಿಗೆ ಬಿಟ್ಟು ಬರುವ ಬದಲು

ಸೊಂಟದಲ್ಲಿರುವ ರಿವಲ್ವಾರಿಗೆ ಕೆಲಸಕೊಡಿ ಒಂದೆರೆಡು ಬುಲೆಟ್ ಗಳನ್ನು ನಟೋರಿಯಸ್ ಗಳ ಕಾಲಿಗೆ ತೂರಿಸಿ ಆಗ ಮಾತ್ರ ಆಕ್ಟಿವ್ ಆಗಿರುವ ರೌಡಿಸಂ ಗೆ ಬ್ರೇಕ್ ಹಾಕಬಹುದಾಗಿದೆ.ಇಲ್ಲವಾದರೆ ಮತ್ತದೆ ರಾಜ ಮರ್ಯಾದೆ, ಜೈಲು ಬೆಲು ಮತ್ತು ಜಾಮೀನು ಇಷ್ಟೇ ಆಗುತ್ತದೆ ನಟೋರಿಯಸ್ ರೌಡಿಗಳ ಬದುಕು.

Leave a Reply

Your email address will not be published. Required fields are marked *

Optimized by Optimole
error: Content is protected !!