ಸೂಪರ್ ಸ್ಟಾರ್ ರಜನಿಕಾಂತ್ ಅವರ ಪತ್ನಿ ಬೆಂಗಳೂರಿನ ಕೋರ್ಟಿಗೆ ಹಾಜರ್ : ಜಾಮೀನು ಮಂಜೂರು ಮಾಡಿದ ನ್ಯಾಯಲಯ

ಸೂಪರ್ ಸ್ಟಾರ್ ರಜನಿಕಾಂತ್ ಅವರ ಪತ್ನಿ ಬೆಂಗಳೂರಿನ ಕೋರ್ಟಿಗೆ ಹಾಜರ್ : ಜಾಮೀನು ಮಂಜೂರು ಮಾಡಿದ ನ್ಯಾಯಲಯ

news.ashwasurya.in

ಭಾರತೀಯ ಚಿತ್ರರಂಗದ ಹೆಸರಾಂತ ನಟ ಸೂಪರ್ ಸ್ಟಾರ್ ರಜನಿಕಾಂತ್ ಅವರ ಧರ್ಮಪತ್ನಿ ಲತಾ ಅವರಿಗೆ 2024 ಜನವರಿ 6ರ ಒಳಗೆ ಖುದ್ದಾಗಿ ಕೋರ್ಟಿಗೆ ಹಾಜರಾಗಬೇಕೆಂದು ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯ ತಿಳಿಸಿತ್ತು. ಅದರಂತೆ‌ ನ್ಯಾಯಾಲಯದ ಆದೇಶವನ್ನು ಪಾಲಿಸಿದ ಲತಾ ಅವರು ಖುದ್ದಾಗಿ ಬೆಂಗಳೂರಿನ ಕೋರ್ಟಿಗೆ ಇಂದು ಹಾಜರಾಗಿ ಜಾಮೀನು ಪಡೆದುಕೊಂಡಿದ್ದಾರೆ.

ಲತಾ ಅವರ ಮೇಲೆ ದಾಖಲಾಗಿರುವುದು ಜಾಮೀನು ರಹಿತ ಪ್ರಕರಣ ಆಗಿದ್ದರಿಂದ ಖುದ್ದಾಗಿ ಹಾಜರಾಗಬೇಕೆಂದು ವಕೀಲರು ಮನವಿ ಮಾಡಿಕೊಂಡಿದ್ದರು. ತಮ್ಮ ವಕೀಲರ ಮನವಿಯಂತೆ ಲತಾ ರಜನಿಕಾಂತ್ ಅವರು ಇಂದು ನ್ಯಾಯಾಲಯಕ್ಕೆ ಹಾಜರಾದರು. ಜೊತೆಗೆ ಜಾಮೀನು ನೀಡುವಂತೆ ಲತಾ ಪರ ವಕೀಲರು ನ್ಯಾಯಾಧೀಶರಿಗೆ ಮನವಿ ಮಾಡಿದ್ದರು. ಮನವಿ ಪುರಸ್ಕರಿಸಿದ ಮಾನ್ಯ ನ್ಯಾಯಾಲಯ ಷರತ್ತು ಬದ್ದ ಜಾಮೀನು (Bail) ಮಂಜೂರು ಮಾಡಿದೆ. ಜಾಮೀನಿಗೆ ಸಂಬಂದಿಸಿದಂತೆ ಎರಡು ವೈಯಕ್ತಿಕ ಬಾಂಡ್ ನೀಡುವಂತೆ ಸೂಚನೆ ನೀಡಿದ್ದಾರೆ ನ್ಯಾಯಮೂರ್ತಿಗಳಾದ ಆನಂದ್ ಕರಿಯಮ್ಮನವರ್.

ರಜನಿಕಾಂತ್ ಲತಾ ದಂಪತಿಗಳ ಪುತ್ರಿ ಸೌಂದರ್ಯ ನಿರ್ದೇಶನದ ಕೊಚಾಡಿಯನ್ ಚಲನಚಿತ್ರಕ್ಕೆ ಸಂಬಂಧಿಸಿದ ಪ್ರಕರಣ ಇದಾಗಿದ್ದು, ಲತಾ ಅವರು ಮೇಲೆ ಐಪಿಸಿ 463 ಅಡಿ ಕೇಸ್ ದಾಖಲಾಗಿತ್ತು. ಕೊಚಾಡಿಯನ್ ಬಿಡುಗಡೆಗೆ ಸಂಬಂಧಿಸಿದಂತೆ ಎರಡು ಕಂಪೆನಿಗಳ ಜೊತೆ ಒಪ್ಪಂದವಾಗಿತ್ತು. ಮೀಡಿಯಾ ಒನ್ ಕಂಪನಿ ಪರವಾಗಿ ಲತಾ ಶ್ಯೂರಿಟಿ ನೀಡಿದ್ದರು. ಸಿನಿಮಾ ಲಾಸ್ ಆದ ಹಿನ್ನೆಲೆಯಲ್ಲಿ ನಷ್ಟ ತುಂಬಿ ಕೊಡುವಲ್ಲಿ ಲತಾ ವಿಫಲರಾಗಿದ್ದಾರೆ ಎಂದು ದೂರು ದಾಖಲಾಗಿತ್ತು.
ಚಿತ್ರಕ್ಕೆ ನಷ್ಟವಾದ ಹಿನ್ನೆಲೆಯಲ್ಲಿ ಹಲಸೂರು ಗೇಟ್ ಪೊಲೀಸ್ ಠಾಣೆಯಲ್ಲಿ 2015ರ ಮೇ 30ರಂದು ಎಫ್.ಐ.ಆರ್ ದಾಖಲಾಗಿತ್ತು. ಹಾಗಾಗಿ ಕೋರ್ಟ್ ಖುದ್ದು ಹಾಜರಾಗಲು ಆದೇಶ ನೀಡಿತ್ತು. ಕೋರ್ಟಿಗೆ ಲತಾ ಅವರು ಬರೋದು ಅನಿವಾರ್ಯವಾಗಿತ್ತು. ಹಾಗಾಗಿ ಖುದ್ದಾಗಿಯೇ ಅವರು ಹಾಜರಾಗಿದ್ದರು ಎಂದು ತಿಳಿದುಬಂದಿದೆ.

Leave a Reply

Your email address will not be published. Required fields are marked *

Optimized by Optimole
error: Content is protected !!