ಶಿವಮೊಗ್ಗದ ಫ್ರೀಡಮ್ ಪಾರ್ಕ್ ನಲ್ಲಿ ರೌಡಿಗಳಿಂದ ಹಾಡುಹಗಲೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ; ಅಟ್ಯಾಕ್ ಮಾಡಿದ ಆರೋಪಿಗಳು ಎಸ್ಕೇಪ್!! ಸಾವು ಬದುಕಿನೊಡನೆ ಹೊರಾಡುತ್ತಿದ್ದಾನೆ ಹಲ್ಲೆಯಾದ ಶಶಿ.
ಶಿವಮೊಗ್ಗದ ಫ್ರೀಡಮ್ ಪಾರ್ಕ್ ನಲ್ಲಿ ರೌಡಿಗಳಿಂದ ಹಾಡುಹಗಲೆ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ; ಅಟ್ಯಾಕ್ ಮಾಡಿದ ಆರೋಪಿಗಳು ಎಸ್ಕೇಪ್!! ಸಾವು ಬದುಕಿನೊಡನೆ ಹೊರಾಡುತ್ತಿದ್ದಾನೆ ಹಲ್ಲೆಯಾದ ಶಶಿ.?
ಶಿವಮೊಗ್ಗ ನಗರದಲ್ಲಿ ಅಂಡರ್ ವರ್ಲ್ಡ್ ಮತ್ತೆ ಆಕ್ಟಿವ್ ಆಗಿದೆ.ಜಯನಗರ ಪೋಲಿಸ್ ಠಾಣೆಯ ಸರಹದ್ದಿನ ಫ್ರೀಡಮ್ ಪಾರ್ಕ್ ಬಳಿ ಮತ್ತೆ ರಕ್ತ ಚಲ್ಲಾಡಿದೆ.ಮಟ ಮಟ ಮಧ್ಯಾಹ್ನ ಹನ್ನೆರಡು ಗಂಟೆ ಸುಮಾರಿಗೆ ಶಶಿಕುಮಾರ್ ಅಲಿಯಾಸ್ ಸಿಸ್ಯ ಶಶಿ ( Sisya Shashi )ಯನ್ನು ಶಿವಮೊಗ್ಗದ ಹಳೆ ನಟೋರಿಯಸ್ ರೌಡಿಗಳು ಲಾಂಗಿನಿಂದ ಕತ್ತರಿಸಿದ್ದಾರೆ ಇನ್ನೇನು ಸಿಸ್ಯ ಶಶಿಯ ಪ್ರಾಣ ಹೋಗಿದೆ ಎಂದು ಅರಿತ ಹಂತಕರು ಸ್ಥಳದಿಂದ ಎಸ್ಕೇಪ್ ಆಗಿದ್ದಾರೆ.ತಲೆಗೆ ಹೊಟ್ಟೆಗೆ ಬಲವಾದ ಹೊಡೆತ ಬಿದ್ದ ಕಾರಣಕ್ಕೆ ಶಶಿ ರಕ್ತದ ಮಡುವಿನಲ್ಲಿ ಅಲ್ಲೆ ಕುಸಿದು ಬಿದ್ದಿದ್ದಾನೆ.! ಫ್ರೀಡಮ್ ಪಾರ್ಕಿನಲ್ಲಿ ಹರಿದ ರಕ್ತ ಕಮಟು ವಾಸನೆಗೆ ಜಟ್ ಪಟ್ ನಗರದ ಸುತ್ತಮುತ್ತಲಿನ ಪ್ರದೇಶದಲ್ಲಿ ಸೂತಕದ ಛಾಯೆ ಆವರಿಸಿದೆ. ರಾತ್ರಿಯೆಲ್ಲ ತನ್ನ ಏರಿಯಾದ ಹುಡುಗರ ಜೋತೆಗೆ ಶ್ರೀ ಮಾತೃಭೂಮಿ ಕನ್ನಡ ಗೆಳೆಯರ ಬಳಗದ ಕನ್ನಡ ರಾಜ್ಯೋತ್ಸವದ ಅಚರಣೆಯ ಕಾರ್ಯಕ್ರಮದಲ್ಲಿ ಬ್ಯೂಸಿಯಾಗಿದ್ದ ಸಿಸ್ಯ ಶಶಿ( Sisya Shashi)
ಬೆಳಗಾಗುತ್ತಿದ್ದಂತೆ ಮೆಗ್ಗಾನ್ ಆಸ್ಪತ್ರೆಯ ತೀವ್ರ ನಿಗಾ ಘಟಕದ ಬೆಡ್ಡಿನ ಮೇಲೆ ಮಲಗಿ ಸಾವು ಬದುಕಿನ ಲೆಕ್ಕಾಚಾರ ಹಾಕುತ್ತಿದ್ದಾನೆ? ಇಲ್ಲೂ ಕೂಡ ಹಳೆ ವೈಷಮ್ಯದ ನಂಜು ಕಾರಿದೆ.. ಶಶಿ ಮೇಲೆ ಅಟ್ಯಾಕ್ ಆಗಿದೆ…!
ಪುಂಡರ ಏರಿಯಾ..!
ಅಸಲಿಗೆ ಶಿವಮೊಗ್ಗ ನಗರದ ಕುಖ್ಯಾತ ಏರಿಯಾಗಳಲ್ಲಿ ಜಟ್ ಪಟ್ ನಗರ ಮತ್ತು ಹೊಸಮನೆ ಡೆಂಜರಸ್ ಏರಿಯಾಗಳು! ಬಹುತೇಕ ಪಾತಕಿಗಳ ಜನ್ಮಭೂಮಿ. ಈಗಾಗಲೇ ಶಿವಮೊಗ್ಗ ಪಾತಕಲೋಕದಲ್ಲಿ ತಮ್ಮದೆ ಖತರ್ನಾಕ್ ಕ್ರಿಮಿನಲ್ ಹಿನ್ನೆಲೆಯಿಂದ ಕುಖ್ಯಾತರಾಗಿ ಹೋಗಿದ್ದ ನಾಗರಾಜ ಅಲಿಯಾಸ್ ಸ್ಫಾಟ್ ನಾಗ, ಅಣ್ಣಪ್ಪ ಅಲಿಯಾಸ್ ಹಂದಿ ಅಣ್ಣಿ ಮಂಜುನಾಥ ಅಲಿಯಾಸ್ ಒಲಂಗ ,ವೆಂಕಟೇಶ್ ಅಲಿಯಾಸ್ ಮೊಟಿ ವೆಂಕಟೇಶ್, ಇನ್ನೂ ಸರಿಯಾಗಿ ಮೀಸೆ ಮೂಡದ ಹತ್ತಾರು ಹುಡುಗರು ಈ ಏರಿಯಾಗಳಿಂದಲೆ ಪಾತಕಲೋಕ ಕತ್ತಲ ಸಾಮ್ರಾಜ್ಯದಲ್ಲಿ ತಮಗೆ ಅರಿವಿಲ್ಲದೆ ಹೆಜ್ಜೆಹಾಕಿ ಹೋಗಿದ್ದಾರೆ..ಹೋದವರಲ್ಲಿ ಅದೇಷ್ಟೋ ಹುಡುಗರು ಸರಿಯಾಗಿ ಲೋಕವನ್ನು ನೋಡುವ ಮುನ್ನವೆ ಪಾತಕಲೋಕದ ನೆತ್ತರ ಲಾಂಗಿನೇಟಿಗೆ ಸುಡುಗಾಡು ಸೇರಿದ್ದಾರೆ. ಇಲ್ಲಿ ಹೆಸರು,ರಿವೆಂಜ್, ಹಣಕ್ಕಾಗಿ ನೆತ್ತರ ಕೊಡಿಯೆ ಹರಿದಿದೆ. ಈ ಏರಿಯಾಗಳೆ ಒಂದರ್ಥದಲ್ಲಿ ಪ್ರಾಣವಾಯು! ಇಲ್ಲಿ ಮೀಸೆ ಮೂಡದ ಹುಡುಗರ ಕೈಗೂ ಸಲಿಸಾಗಿ ರಕ್ತ ಅಂಟಿ ಕೊಳ್ಳುವುದರಿಂದ ಈ ಏರಿಯಾಗಳಲ್ಲಿ ಸಭ್ಯರ ಜೀವನ ನರಕಯಾತನೆ ಆಗಿದೆ.ಸಮಸ್ತ ಅಡ್ಡ ಕಸುಬುಗಳಿಗೆ ಅಖಾಡವಾಗಿರುವ ಈ ಎರಡು ಏರಿಯಾಗಳು ಕುಖ್ಯಾತಿ ಪಡೆದಿವೆ..!! ಇಲ್ಲಿ ಬದುಕು ದೂಡುವ ಅಮಾಯಕ ನಾಗರಿಕರಿಗೆ ನರಕವೆ ಹೌದು,
ಇಂದು ಇಂತಹ ಏರಿಯಾದ ಒಳ್ಳೆಯ ಹುಡುಗನೊಬ್ಬನ ಮೇಲೆ ಮಾರಣಾಂತಿಕ ಹಲ್ಲೆ ನೆಡೆದಿದೆ,ರಕ್ತ ಹರಿದಿದೆ ಸಹಜವಾಗಿಯೇ ಶಿವಮೊಗ್ಗ ಜನರ ಕಣ್ಣು ಅಂಡರ್ ವರ್ಲ್ಡ್ ನ ಮೇಲೆ ನಾಟಿದೆ. ನಿಜ ಹೇಳಬೇಕೆಂದರೆ ಈ ಏರಿಯಾಗಳಲ್ಲಿ ಸತ್ತು ಮಲಗುವ ಮತ್ತು ಮಾರಣಾಂತಿಕ ಹಲ್ಲೆಗೆ ಒಳಗಾಗುವ ಬಹುತೇಕ ಪ್ರಕರಣಗಳಿಗೆ ಒಂದಿಲ್ಲೊಂದು ರೀತಿಯಲ್ಲಿ ಅಂಡರ್ ವರ್ಲ್ಡ್ ನ ಟಚ್ ಇರುತ್ತದೆ!! ಯಾವುದೇ ಹಬ್ಬ ,ಕಾರ್ಯಕ್ರಮ ನೆಡೆದರು ಶಾಂತಿಯುತವಾಗಿ ನೆಡೆಯುವುದೇ ಕಷ್ಟ, ಪುಂಡಾಟಿಕೆ ಗಲಭೆ ಭುಗಿಲೇಳದಿದ್ದರೆ ಅದು ಈ ಎರಡು ಏರಿಯಾಗಳ ಕುಖ್ಯಾತಿಗೆ ಅವಮಾನ?ಈ ಒಂದು ಕಾರಣದ ಹಿನ್ನೆಲೆಯಲ್ಲೆ ಶಶಿಯ ಮೇಲೆ ಅಟ್ಯಾಕ್ ಆಗಿದೆ ನಿನ್ನೆ ರಾತ್ರಿ ಜಟ್ ಪಟ್ ನಗರದಲ್ಲಿ ಶ್ರೀ ಮಾತೃ ಭೂಮಿ ಕನ್ನಡ ಗೆಳೆಯರ ಬಳಗದವರಿಂದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮ ನಡೆಯುತ್ತಿತ್ತು. ಇನ್ನೇನು ಹೊತ್ತು ಮಿರುವ ಹೊತ್ತಿಗೇ ಸಣ್ಣದೊಂದು ಕಿರಿಕ್ ಆಗಿದೆ ಕಿರಿಕ್ ಮಾಡಿದವರು ಬೇರೆ ಯಾರು ಅಲ್ಲ ಒಂದು ಕಾಲದ ನಟೋರಿಯಸ್ ರೌಡಿಗಳು,ಹತ್ಯೆ ಆರೋಪಿಗಳಾಗಿದ್ದಂತಹ ಮಂಜುನಾಥ್ ಅಲಿಯಾಸ್ ನೆಪಾಳಿ ಮಂಜ,ಮಂಜುನಾಥ ಅಲಿಯಾಸ್ ಓಲಂಗ ಇಬ್ಬರು ಶಶಿಯ ಜೋತೆಗೆ ಜಗಳ ಮಾಡಿದ್ದಾರೆ ಇನ್ನೇನು ಈ ಕಿರಿಕ್ ತಾರಕಕ್ಕೆ ಹೋಗಬೇಕಿತ್ತು ಅಲ್ಲಿದ್ದಂತಹ ಕೆಲವರಿಂದ ಸಧ್ಯಕ್ಕೆ ತಣ್ಣಗಾಗಿತ್ತು. ಅಲ್ಲಿಂದ ಕಾಲು ಕಿತ್ತ ಓಲಂಗ ಮತ್ತು ನೆಪಾಳಿ ಇಬ್ಬರು ರಾತ್ರಿ ಮಲಗಿಲ್ಲ ರಾತ್ರಿಯಾದ ಗಲಾಟೆಗೆ ಲಾಂಗು ಮಸೆದಿದ್ದಾರೆ. ಬೆಳಿಗ್ಗೆಯಾದರೆ ಶಶಿ ಎಲ್ಲಿರುತ್ತಾನೆ ಎನ್ನುವ ಅರಿವಿದ್ದ ಆರೋಪಿಗಳು ಸ್ಕೆಚ್ ಹಾಕಿದ್ದಾರೆ, ಶಶಿ ಹನ್ನೆರಡು ಗಂಟೆ ಸುಮಾರಿಗೆ ಫ್ರೀಡಮ್ ಪಾರ್ಕ್ ನಲ್ಲಿ ಇರುವುದನ್ನು ಖಾತ್ರಿ ಮಾಡಿಕೊಂಡ ಆರೋಪಿಗಳು ಏಕಾಏಕಿ ನುಗ್ಗಿ ಲಾಂಗಿನಿಂದ ಕತ್ತರಿಸಿ ಓಡಿಹೋಗಿದ್ದಾರೆ. ತಕ್ಷಣವೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಶಶಿಯನ್ನು ಸ್ಥಳೀಯರು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿದ್ದಾರೆ. ತುರ್ತು ಚಿಕಿತ್ಸೆ ನೀಡಲಾಗಿದೆ ಡಾಕ್ಟರ್ ಬದುಕುಳಿಯುವ ಸಾಧ್ಯತೆ ಇದೆ ಎಂದಿದ್ದಾರಂತೆ.!ಶಶಿಯನ್ನು ವಾರ್ಡಿಗೆ ಶಿಫ್ಟ್ ಮಾಡಲಾಗಿದೆ.
ಈ ಮಾರಣಾಂತಿಕ ಹಲ್ಲಗೆ ಕಾರಣವೇನು.?
ಕಳೆದ ಏಳೆಂಟು ವರ್ಷದ ಹಿಂದೆ ಇದೆ ಮಾರಣಾಂತಿಕ ಹಲ್ಲೆಗೆ ಒಳಗಾದ ಶಶಿಯ ಜೋತೆಗೆ ಓಲಂಗ ಕಿರಿಕ್ ಮಾಡಿಕೊಂಡಿರುತ್ತಾನೆ.ಓಲಂಗ ಆಗತಾನೇ ಮೆಂಟಲ್ ಸೀನನ ಹತ್ಯೆ ಪ್ರಕರಣದಲ್ಲಿ ಜೈಲು ಸೇರಿದವನು ಜಾಮೀನಿನ ಮೇಲೆ ಹೋರ ಬಂದಿದ್ದ. ಆಗ ಶಶಿ ತನ್ನ ಜೋತೆಗೆ ಓಲಂಗ ಕಿರಿಕ್ ಮಾಡಿಕೊಂಡ ವಿಷಯವನ್ನು ತನ್ನ ಗುರು ಯಲ್ಕಾನಿಗೆ ಹೇಳುತ್ತಾನೆ.ಯಲ್ಕಾ ಹತ್ಯೆಯಾದ ನಟೋರಿಯಸ್ ರೌಡಿ ಮೆಂಟಲ್ ಸೀನನ ಪರಮಾಪ್ತ ಶಿಷ್ಯನಾಗಿದ್ದ. ವಿಷಯ ತಿಳಿಯುತ್ತಿದ್ದಂತೆ ಕೆರಳಿ ಕೆಂಡವಾಗಿದ್ದ ಅಂದು.ತಕ್ಷಣವೇ ಯಲ್ಕಾ ಮೂವತ್ತರಿಂದ ನಲವತ್ತು ಜನರ ಟೀಮ್ ರೆಡಿ ಮಾಡಿಕೊಂಡು ತಡ ರಾತ್ರಿ ಓಲಂಗ ಮನೆಗೆ ನುಗ್ಗಿಯೆ ಬಿಟ್ಟಿದ್ದ ಇನ್ನೇನು ಅನಾಹುತ ಆಗುವುದರಲ್ಲಿತ್ತು ಅಲ್ಲಿ ರಕ್ತ ಚಲ್ಲಾಡುವ ಮೊದಲೆ ವಿಷಯ ತಿಳಿದ ಪೋಲಿಸರು ಓಲಂಗನ ಮನೆ ಬಾಗಿಲಲ್ಲಿದ್ದರು.ಸ್ವಲ್ಪದರಲ್ಲಿಯೆ ಎಲ್ಲವು ತಿಳಿಯಾಗಿತ್ತು.ಆದರೆ ರಿವೆಂಜಿನ ನಂಜು ಮಾತ್ರ ಬೂದಿಮುಚ್ಚಿದ ಕೆಂಡದಂತೆ ಹೋಗೆಯಾಡುತ್ತಿತ್ತು? ಇನ್ನೂ ಮಂಜುನಾಥ ಅಲಿಯಾಸ್ ಓಲಂಗ ಕೂಡ ಸಧ್ಯ ಅಂಡರ್ ವರ್ಲ್ಡ್ ನಲ್ಲಿ ತನ್ನದೆ ಖದರ್ ನಿಂದ ಚಾಲ್ತಿಯಲ್ಲಿರುವ ಪಾತಕೀ ಮಾರ್ಕೆಟ್ ಲೋಕಿಯ ಪರಮಾಪ್ತ ಶಿಷ್ಯನಾಗಿದ್ದ. ಈ ಹಿನ್ನೆಲೆಯಲ್ಲೆ ಕಳೆದ ಭಾನುವಾರ ರಾತ್ರಿಯಾದ ಕಿರಿಕ್ಕಿನ ಹಿನ್ನೆಲೆಯನ್ನೆ ನೆಪಮಾಡಿಕೊಂಡ ನೆಪಾಳಿ ಮಂಜ ಮತ್ತು ಓಲಂಗ ಗ್ಯಾಂಗ್ ಯಲ್ಕಾನ ಶಿಷ್ಯ ಶಶಿ ಮೇಲೆ ಮಾರಣಾಂತಿಕವಾಗಿ ಅಟ್ಯಾಕ್ ಮಾಡಿದ್ದಾರೆ. ನಂತರ ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ. ಹಲ್ಲೆಗೆ ಒಳಗಾದ ಶಶಿ ಆಸ್ಪತ್ರೆಯ ಹಾಸಿಗೆಯ ಮೇಲೆ ಎದುಸಿರು ಬಿಡುತ್ತಿದ್ದಾನೆ.
ಇನ್ನೂ ಪ್ರಕರಣ ದಾಖಲಿಸಿಕೊಂಡ ಜಯನಗರ
ಪೋಲಿಸರ ತಂಡ ಆರೋಪಿಗಳ ಪತ್ತೆಗೆ ಭಲೇ ಬಿಸಿದ್ದಾರೆ.
ಇಲ್ಲಿ ಇನ್ನೊಂದು ಸತ್ಯವನ್ನು ಹೇಳಲೆ ಬೇಕು ಶಶಿ ತುಂಬಾ ಓಳ್ಳೆಯ ಹುಡುಗ, ಇನ್ನೂ ಓಲಂಗ, ನೆಪಾಳಿ ಮಂಜ ಇಬ್ಬರು ರೌಡಿಸಂ ನಿಂದ ಕಳೆದ ಆರೇಳು ವರ್ಷದಿಂದ ದೂರವಿದ್ದರು. ಎಲ್ಲಾ ಬಿಟ್ಟು ನೆಮ್ಮದಿಯಾಗಿ ಬದುಕುತ್ತಿದ್ದರು. ಯಾವುದೋ ವಿಷಯಕ್ಕೆ ಕಿರಿಕ್ ಮಾಡಿಕೊಂಡು ಶಶಿಯ ಮೇಲೆ ಹಲ್ಲೆಮಾಡಿ ಮತ್ತೆ ರಕ್ತದ ಕಲೆ ಅಂಟಿಸಿಕೊಂಡಿದ್ದಾರೆ.
ಇನ್ನೂ ಯಲ್ಕಾ ಕೂಡ ಎಲ್ಲಾ ಅಕ್ರಮ ಚಟುವಟಿಕೆಗಳಿಂದ ದೂರವಿದ್ದು ತಾನಾಯಿತು ತನ್ನ ಪಾಡಯಿತು ಎನ್ನುವಂತೆ ಬದುಕುತ್ತಿದ್ದಾನೆ. ಇನ್ನಷ್ಟೂ ಸತ್ಯಗಳು ಆರೋಪಿಗಳ ಬಂಧನದ ನಂತರವಷ್ಟೇ ಬಯಲಾಗಬೇಕಿದೆ…….
ಶಿವಮೊಗ್ಗ ಜಿಲ್ಲಾ ದಕ್ಷ ಪೋಲಿಸ್ ಅಧೀಕ್ಷಕರಾದ ಮಿಥುನ್ ಕುಮಾರ್ ಜಿ ಕೆ IPS ಮತ್ತು ಅನಿಲ್ ಕುಮಾರ್ ಭುಮರೆಡ್ಡಿ ಹೆಚ್ಚುವರಿ ಪೊಲೀಸ್ ಅಧೀಕ್ಷಕರ ಮಾರ್ಗದರ್ಶನದಲ್ಲಿ ಜಯನಗರ ಠಾಣೆಯ ವೃತ್ತ ನಿರೀಕ್ಷಕರಾದ ಸಿದ್ಧೆಗೌಡ ಅವರ ನೆತ್ರುತ್ವದ ಪೊಲೀಸರ ತಂಡ ಆರೋಪಿಗಳ ಹೆಡೆಮುರಿ ಕಟ್ಟಲು ಫೀಲ್ಡಿಗಿಳಿದಿದ್ದಾರೆ.. ಆರೋಪಿಗಳ ಬಂಧನದ ನಂತರದ ವಿಚಾರಣೆ ವೇಳೆ ಇನ್ನಷ್ಟು ಮಾಹಿತಿ ಹೊರಬಿಳಲಿದೆ….